ಡಾ. ರಾಜ್‌ಕುಮಾರ್ ರಾಮಕೃಷ್ಣ ಪರಮಹಂಸರ ಏಳನೇ ಶಿಷ್ಯರ ಪುನರ್ಜನ್ಮ ಎಂದು ಮಾಸ್ಟರ್ ಆನಂದ್ ಹೇಳಿದ್ದಾರೆ. ಕಲಾಭಿಮಾನದಿಂದ ಪರಮಹಂಸರನ್ನು ಬೇಡಿಕೊಂಡು ಪುನರ್ಜನ್ಮ ಪಡೆದ ರಾಜ್, ಅಪಾರ ಅಭಿಮಾನಿ ಬಳಗ, ಉತ್ತಮ ಕಥೆ, ನಿರ್ದೇಶಕರನ್ನು ಪಡೆದರು. ವಿಷ್ಣುವರ್ಧನ್ ಕೂಡ ಋಷಿ ಪುನರ್ಜನ್ಮ ಎಂದಿದ್ದಾರೆ. ಆಸೆಗಳು ಪುನರ್ಜನ್ಮಕ್ಕೆ ಕಾರಣ ಎಂದು ಆನಂದ್ ಹೇಳಿದ್ದಾರೆ.
ದೇಶ ಕಂಡ ಅದ್ಭುತ ನಟ, ಮಾನವೀಯತೆ ಇರೋ ವ್ಯಕ್ತಿ ಅಂದ್ರೆ ಅದು ಡಾ ರಾಜ್‌ಕುಮಾರ್ ಎನ್ನುತ್ತಾರೆ. ಇನ್ನು ಅಭಿಮಾನಿಗಳ ಪಾಲಿಗೆ ಅವರು ಆರಾಧ್ಯ ದೈವ. ರಾಜ್‌ಕುಮಾರ್ ಅವರು ಈ ಹಿಂದಿನ ಜನ್ಮದಲ್ಲಿ ರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದರು ಎಂದು ಮಾಸ್ಟರ್ ಆನಂದ್ ಅವರು ರ್ಯಾಪಿಡ್ ರಶ್ಮಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಡಾ ರಾಜ್‌ಕುಮಾರ್ ಕಳೆದ ಜನ್ಮದ ಕಥೆ ಇದು!
“ಡಾ ರಾಜ್‌ಕುಮಾರ್ ಅವರು ಎಷ್ಟು ಚೆನ್ನಾಗಿ ಬದುಕಿದ್ರು. ಯಾವುದೋ ಶಕ್ತಿ ಇವರ ಹಿಂದೆ ಇದೆ ಅಂತ ಅನಿಸ್ತಿತ್ತು. ಆಗ ವಿನಯ್ ಗುರೂಜಿ ಬಳಿ ಕೇಳಿದಾಗ ಎಲ್ಲ ವಿಷಯ ಹೇಳಿದರು. ಅಣ್ಣಾವ್ರಿಗೆ ಈ ರೀತಿ ಜ್ಞಾನ ಹೇಗೆ ಬಂತು ನಾನು ಪ್ರಶ್ನೆ ಮಾಡಿದೆ. ನಮಗೆ ಡಾ ರಾಜ್‌ಕುಮಾರ್ ಅವರು ಮನುಷ್ಯನಾಗಿ ಕಾಣುತ್ತಾರೆ, ಆದರೆ ಅವರು ಹೋದ ಜನ್ಮದಲ್ಲಿ ರಾಮಕೃಷ್ಣ ಪರಮಹಂಸರ ಏಳನೇ ಶಿಷ್ಯರು ಅಂತ ಅಂದರು” ಎಂದು ಆನಂದ್ ಹೇಳಿದ್ದಾರೆ.
“ಈ ಬಗ್ಗೆ ಸುಮಾರು ಜನ ಬೇರೆ ಇಂಟರ್ವ್ಯೂ ಹೇಳಿದ್ದಾರೆ. ಅಣ್ಣಾವ್ರು ರಾಮಕೃಷ್ಣ ಪರಮಹಂಸರ ಶಿಷ್ಯರು ಅಂತ ಇನ್ನೊಬ್ಬರು ಹೇಳಿದ್ದಾರೆ. ಒಂದು ದಿನ ಹಿಂಗೆ ಕೂತಿದ್ದಾಗ ಕಳೆದ ಜನ್ಮದಲ್ಲಿ ಅಣ್ಣಾವ್ರ ಮನಸ್ಸನ್ನು ಅರಿತ ರಾಮಕೃಷ್ಣ ಪರಮಹಂಸರು ಏನ್ ಬೇಕು ನಿನಗೆ ಅಂತ ಕೇಳಿದ್ದಾರೆ. ಆಗ ಅಣ್ಣಾವ್ರು ನಾನು ಕಲೆಯಲ್ಲಿ ಮುಂದೆ ಬರಬೇಕು ಅಂತ ಆಸೆ ಎಂದಿದ್ದಾರೆ. ಪರಮಹಂಸರು ಆಗ್ತೀಯಾ ಹೋಗು ಎಂದಿದ್ದರು. ಇಷ್ಟೇ ಆಗಿದ್ದು. ಡಾ ರಾಜ್‌ಕುಮಾರ್ ಅವರಿಗೆ ಒಂದು ರಂಗಮಂಚ ರೆಡಿಯಾಗಿತ್ತು. ಅವರಿಗೆ ಎಷ್ಟು ಒಳ್ಳೆಯ ಕಥೆಗಳು, ಎಂಥಹ ಡೈರೆಕ್ಟರ್ಸ್ ಬದ್ರು ನೋಡಿ. ಇನ್ನು ಆ ಅಭಿಮಾನಿಗಳ ಬಗ್ಗೆ ಹೇಳಬೇಕೆ?” ಎಂದು ಹೇಳಿದ್ದಾರೆ.
ಮಂತ್ರಾಲಯದ ಗರ್ಭಗುಡಿಯಲ್ಲಿ ಮಲಗಿದ್ರು ಡಾ ರಾಜ್‌ಕುಮಾರ್?.. ಆ ಬಳಿಕ ಏನಾಯ್ತು?
ಋಷಿಯಾಗಿದ್ದ ವಿಷ್ಣುವರ್ಧನ್!
“ಡಾ ರಾಜ್‌ಕುಮಾರ್ ಅವರನ್ನು ಅಷ್ಟು ಎತ್ತರಕ್ಕೆ ಅಭಿಮಾನಿಗಳು ಕರ್ಕೊಂಡು ಹೋದರು. ಅಣ್ಣಾವ್ರೇ ತುಂಬ ಸಲ ಎಷ್ಟೋ ಕಡೆ ಯಾವುದೋ ಶಕ್ತಿ, ಏನು ಅಂತ ಗೊತ್ತಿಲ್ಲ ಕರ್ಕೊಂಡು ಹೋಯ್ತು ಅಂತ ಹೇಳ್ತಾರೆ. ಡಾ ವಿಷ್ಣುವರ್ಧನ್ ಕೂಡ ಋಷಿಯಾಗಿದ್ದರು ಅಂತ ಭಾರತಿಯವರಿಗೆ ವಿನಯ್ ಗುರೂಜಿ ಹೇಳಿದ್ದಾರೆ. ಆಶ್ರಮಕ್ಕೆ ಬಂದಾಗ ವಿನಯ್ ಗುರೂಜಿ ಅವರು, “ನಿಮ್ಮ ಗಂಡ ಹೋದ ಜನ್ಮದಲ್ಲಿ ಋಷಿಯಾಗಿದ್ದರು” ಎಂದು ಅವರು ಹೇಳಿದ್ದರು. ಆದರೆ ಯಾವ ಋಷಿ ಅಂತ ಗೊತ್ತಿಲ್ಲ” ಎಂದು ಹೇಳಿದ್ದಾರೆ.
“ಒಂದು ಸಣ್ಣದ ಆಸೆ ಇದ್ರೂ ಕೂಡ ಮುಗಿಸ್ಕೊಂಡು ಬಾ ಅಂತ ಆತ್ಮ ಕಳಿಸುತ್ತದೆ. ಹೀಗಾಗಿ ಎಲ್ಲ ಆಸೆ ಮುಗಿಸಿಕೊಳ್ಳಬೇಕು, ಬ್ಯಾಲೆನ್ಸ್ ಇಟ್ಟುಕೊಳ್ಳಬಾರದು. ಆಸೆಗಳು ಇದ್ದರೆ ಪುನರ್ಜನ್ಮಕ್ಕೆ ಕಾರಣ ಆಗುತ್ತದೆ. ನಾನು ಕುತೂಹಲದಿಂದ ಗೂಗಲ್ ಮಾಡಿದೆ. ಆಗ ರಾಮಕೃಷ್ಣ ಪರಮಹಂಸರ ಶಿಷ್ಯರು ಯಾರು ಅಂತ ಹುಡುಕಿದೆ. ಆಗ ಒಂದಷ್ಟು ಹೆಸರು ಬಂತು. ಯಾರು ಅಣ್ಣಾವ್ರು ಅಂತ ಗೊತ್ತಿಲ್ಲದಿದ್ದರೂ ಕೂಡ ಅವರಲ್ಲಿ ಒಬ್ಬರು ಅಣ್ಣಾವ್ರು ಎನ್ನೋದು ಪಕ್ಕಾ” ಎಂದಿದ್ದಾರೆ ಆನಂದ್.
ಸಿನಿಮಾವನ್ನೇ ನೋಡದ ಆಂಧ್ರದ ಅಭಿಮಾನಿಯೊಬ್ಬ ಪುನೀತ್ ಹೆಸರಲ್ಲಿ ಮಾಡ್ತಿರೋದೇನು?
“ನಾನು ತುಂಬ ಸಲ ಡಾ ರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದೇನೆ, ತೊಡೆ ಮೇಲೆ ಕೂತಿದ್ದೇನೆ. ಡ್ರಾಮಾ ಜ್ಯೂನಿಯರ್ಸ್ ಶೋಗೆ ಬಂದಾಗ ರಾಘವೇಂದ್ರ ರಾಜ್‌ಕುಮಾರ್ ಅವರು, “ಚೆನ್ನಾಗಿ ಜೀರ್ಣಕ್ರಿಯೆ ಆಗಲಿ ಅಂತ ಅಣ್ಣಾವ್ರು ಊಟ ಆದಮೇಲೆ ವಜ್ರಾಸನದಲ್ಲಿ ಕೂರುತ್ತಿದ್ದರು. ಆಗ ಅವರು ಗೌರಿ ಗಣೇಶ ಸಿನಿಮಾ ಹಾಕು ಅಂತ ಹೇಳುತ್ತಿದ್ದರು” ಎಂದು ಹೇಳಿದ್ದರು. ಇದಕ್ಕಿಂತ ಪುಣ್ಯ ಬೇಕಾ ನಮಗೆ?” ಎಂದು ಆನಂದ್ ಹೇಳಿದ್ದಾರೆ.



