ಇಲ್ಲೊಂದು ಘಟನೆ ನಡೆಯುತ್ತಿರುವುದು ಅಚ್ಚರಿ ಎನ್ನಿಸಿದರೂ ಸತ್ಯ. ಅದೇನು ಎಂದರೆ, ಕನ್ನಡಿಗರಲ್ಲದ ಒಬ್ಬರು ವ್ಯಕ್ತಿ, ಅದರಲ್ಲೂ ಪುನೀತ್ ರಾಜ್‌ಕುಮಾರ್ ಸಿನಿಮಾಗಳನ್ನೇ ನೋಡದ ವ್ಯಕ್ತಿಯೊಬ್ಬರು..
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಕರ್ನಾಟಕ ರತ್ನ ಪಟ್ಟ ಪಡೆದು ಹಲವರಿಗೆ ಮಾದರಿ ಆಗಿರುವುದು ಗೊತ್ತೇ ಇದೆ. ಕನ್ನಡ ನೆಲದಲ್ಲಿ ಹಲವರು ಅವರನ್ನು ಆದರ್ಶ ಪುರುಷ ಎಂಬಂತೆ ನೋಡುತ್ತಿರುವುದು ಬಹುತೇಕ ಎಲ್ಲರಿಗೂ ತಿಳಿದ ವಿಷಯ. ಆದರೆ, ಇಲ್ಲೊಂದು ಘಟನೆ ನಡೆಯುತ್ತಿರುವುದು ಅಚ್ಚರಿ ಎನ್ನಿಸಿದರೂ ಸತ್ಯ. ಅದೇನು ಎಂದರೆ, ಕನ್ನಡಿಗರಲ್ಲದ ಒಬ್ಬರು ವ್ಯಕ್ತಿ, ಅದರಲ್ಲೂ ಪುನೀತ್ ರಾಜ್‌ಕುಮಾರ್ ಸಿನಿಮಾಗಳನ್ನೇ ನೋಡದ ವ್ಯಕ್ತಿಯೊಬ್ಬರು ಅವರನ್ನು ಆದರ್ಶವಾಗಿ ಇಟ್ಟುಕೊಂಡು ಅನುಸರಿಸುತ್ತಿದ್ದಾರೆ. ಅವರು ನೆರೆಯ ರಾಜ್ಯದ ಆಂದ್ರದವರು.
ಆಂಧ್ರದ ಶ್ರೀಕಾಕುಳಂ ನಾಗೇಂದ್ರರಿಗೆ (Srikakulam Nagendra) ಸಿನಿಮಾ ನೋಡುವ ಅಭ್ಯಾಸವೇ ಇಲ್ಲ. ಪುನೀತ್ ರಾಜ್‌ಕುಮಾರ್ ಅವರ ಸಿನಿಮಾವನ್ನಂತೂ ಅವರು ನೋಡಿಯೇ ಇಲ್ಲ. ಆದರೆ, ಪುನೀತ್ ರಾಜ್‌ಕುಮಾರ್ ಸಮಾಜ ಸೇವೆಯ ಬಗ್ಗೆ ಕೇಳಿ, ಅದರಿಂದ ಸ್ಫೂರ್ತಿ ಪಡೆದು, ಶ್ರೀಕಾಕುಳಂ ನಾಗೇಂದ್ರ ಅವರು ತಮ್ಮಿಂದ ಸಾಧ್ಯವಾದಷ್ಟು ಸಮಾಜ ಸೇವೆಯಲ್ಲಿ ತೊಡಗಿದ್ದಾರಂತೆ. ಪ್ರತಿ ತಿಂಗಳು ತಮ್ಮ ಆದಾಯದಲ್ಲಿ 3000 ರೂಪಾಯಿ ಹೇಗೋ ಉಳಿಸಿ, ಅದನ್ನು ಬಡಮಕ್ಕಳ ಸ್ಕೂಲ್ ಫೀಸ್, ಪುಸ್ತಕದ ಖರ್ಚು ಹೀಗೆ ಕೊಡುತ್ತಾರಂತೆ. ಅಥವಾ, ಅದನ್ನು ಅಗತ್ಯ ಇದ್ದವರಿಗೆ ದಾನ ಮಾಡುತ್ತಾರಂತೆ.
ಬಾಹುಬಲಿ ನಟಿ ಜೊತೆಗೂ ತೆರೆ ಹಂಚಿಕೊಂಡಿದ್ದ ಅಪ್ಪು; ಸರ್‌ಪ್ರೈಸ್ ಆದ್ರೂ ಸತ್ಯ ಕಣ್ರೀ!
ಕನ್ನಡದ ನಟ ಪುನೀತ್ ಅವರ ಹೆಸರಿನಲ್ಲಿ ಅಂದರೆ, 'ಡಾ ಪುನೀತ್ ರಾಜ್‌ಕುಮಾರ್' ಹೆಸರಿನಲ್ಲಿ ಅವರು ಹೀಗೆ ಪ್ರತಿ ತಿಂಗಳೂ ದಾನ ಮಾಡುತ್ತಾರೆ. ಜನಮೆಚ್ಚು ಈ ಕೆಲಸವನ್ನು ಅವರು ಪುನೀತ್ ಹೆಸರಿನಲ್ಲಿ ಮಾಡುತ್ತಿದ್ದು, ಈ ಮೂಲಕ ಪಕ್ಕದ ರಾಜ್ಯ ಆಂಧ್ರ ಪ್ರದೇಶದಲ್ಲೂ ಪುನೀತ್ ಹೆಸರನ್ನು ಮೆರೆಸುತ್ತಿದ್ದಾರೆ. ಕನ್ನಡದ ನಟ ಅಲ್ಲಿಯೂ ಕೂಡ ಖ್ಯಾತಿ ಪಡೆಯುವಂತೆ ನೋಡಿಕೊಂಡಿದ್ದಾರೆ. ಅಪ್ಪು ಕರ್ನಾಟಕವನ್ನು ಮೀರಿ ಪ್ರಖ್ಯಾತಿ ಪಡೆಯುತ್ತಿರುವುದು ಅವರ ಅಭಿಮಾನಿಗಳು ಸೇರಿದಂತೆ, ಎಲ್ಲ ಕನ್ನಡಿಗರಿಗೂ ಖುಷಿಯ ಸಂಗತಿಯೇ ಸರಿ!
ಅಂದಹಾಗೆ, ನಟ ಪುನೀತ್ ರಾಜಕುಮಾರ್ ಅವರಿಂದ ಪ್ರೇರಣೆ ಪಡೆದು ಸಮಾಜ ಸೇವೆ ಮಾಡುತ್ತಿರುವ ಹಲವಾರು ಜನರಿದ್ದಾರೆ. ಮೈಸೂರಿನಲ್ಲಿ ನೊಂದ ಮಹಿಳೆಯರಿಗೆ ಆಶ್ರಯ ಕೊಡುವಂಥ 'ಶಕ್ತಿಧಾಮ' ಸಂಸ್ಥೆಯನ್ನು ನಡೆಸಿಕೊಂಡು ಹೋಗಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ಹುಟ್ಟುಹಾಕಿದ್ದ ಆ ಸಂಸ್ಥೆಯನ್ನು ನಟ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಸ್ವಂತ ಆದಾಯದಿಂದ ಯಶಸ್ವಿಯಾಗಿ ನೋಡಿಕೊಳ್ಳುತ್ತಿದ್ದರು.
ಕಿಚ್ಚ ಸುದೀಪ್ ಪುತ್ರಿ ಸಾನ್ವಿಗೆ ಮಾರುಹೋಗಿದ್ದು ಯಾರು? ಟಾಲಿವುಡ್‌ನಲ್ಲಿ ಕನ್ನಡತಿ ಹವಾ!
ಈಗ ಆ ಕೆಲಸವನ್ನು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅದೊಂದೇ ಅಲ್ಲ, ಇನ್ನೂ ಅನೇಕ ಸಮಾಜಮುಖಿ ಕೆಲಸಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಕೈಜೋಡಿಸಿದ್ದಾರೆ. ಜೊತೆಗೆ, ಪಿಆರ್‌ಕೆ (PRK) ನಿರ್ಮಾಣ ಸಂಸ್ಥೆಯನ್ನೂ ಸಹ ನಡೆಸಿಕೊಂಡು ಹೋಗುತ್ತಿದ್ದಾರೆ.


