Asianet Suvarna News Asianet Suvarna News

2024ರಲ್ಲಿ ರಿಲೀಸ್ ಆಗಿ ಕನ್ನಡ ಚಿತ್ರರಂಗದ ಮರ್ಯಾದೆ ಉಳಿಸಲಿವೆಯೇ ಈ ಪ್ಯಾನ್‌ ಇಂಡಿಯಾ ಸಿನಿಮಾಗಳು?

2024ರ 6 ತಿಂಗಳು ಕೇವಲ ವಿವಾದಗಳಿಗೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿರುವ 'ಕನ್ನಡ ಚಿತ್ರರಂಗ'ದ ಮರ್ಯಾದೆಯನ್ನು  ವರ್ಷಾಂತ್ಯದಲ್ಲಾದರೂ ಈ ಪ್ಯಾನ್ ಇಂಡಿಯಾ ಸಿನಿಮಾಗಳು ಉಳಿಸಲಿವೆಯೇ? 

Martin max and UI movies are going to save the dignity of Kannada film industry sat
Author
First Published Jul 23, 2024, 7:56 PM IST | Last Updated Jul 23, 2024, 7:56 PM IST

ಬೆಂಗಳೂರು (ಜು.23): ಭಾರತೀಯ ಸಿನಿ ಕ್ಷೇತ್ರದಲ್ಲಿ ಕನ್ನಡ ಚಿತ್ರರಂಗದ ಕೀರ್ತಿ ಉತ್ತುಂಗಕ್ಕೆ ತಲುಪಿದೆ. ಕೆಜಿಎಫ್ ಹಾಗೂ ಕಾಂತಾರ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಖ್ಯಾತಿ ಮೆರೆಯಲಾಗಿದ್ದರೂ, 2024ರ ಜುಲೈವರೆಗೆ ಒಂದೇ ಒಂದು ಕನ್ನಡದ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿಲ್ಲ. ಇನ್ನು ಮುಂದಿನ 5 ತಿಂಗಳಲ್ಲಾದರೂ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗಿ ಕನ್ನಡ ಸಿನಿಮಾ ಕ್ಷೇತ್ರದ ಮರ್ಯಾದೆ ಉಳಿಸುತ್ತವೆಯೇ ಎಂಬ ನಿರೀಕ್ಷೆಯಲ್ಲಿ ಕನ್ನಡದ ಅಭಿಮಾನಿಗಳು ಕಾಯುತ್ತಿದ್ದಾರೆ.

ಭಾರತೀಯ ಸಿನಿಮಾ ಕ್ಷೇತ್ರವು ಈಗ ಯಾವುದೇ ಭಾಷೆ ಗಡಿಗೆ ಸೀಮಿತವಾಗದೇ ಎಲ್ಲವೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೆಳೆಯುತ್ತಿದೆ. ಯಾವುದೇ ಭಾಷೆಯ ಮೂಲ ಸಿನಿಮಾಗಳು, ತಮ್ಮ ಗಡಿ ಹಾಗೂ ಭಾಷೆಯನ್ನು ಮೀರಿ ಐದಾರು ಭಾಷೆಗಳಿಗೆ ಡಬ್ಬಿಂಗ್ ಆಗುವ ಮೂಲಕ ಎಲ್ಲ ರಾಜ್ಯಗಳಲ್ಲಿಯೂ ಯಶಸ್ವಿ ಪ್ರದರ್ಶನಗೊಂಡು ದೊಡ್ಡ ಮಟ್ಟದ ಆದಾಯ ಗಳಿಸುತ್ತಿವೆ. ಇನ್ನು ತೆಲುಗು, ಮಲೆಯಾಳಂ ಕೆಲವು ಸಣ್ಣ ಬಜೆಟ್‌ನ ಸಿನಿಮಾಗಳು ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಯಶಸ್ಸು ಗಳಿಸಿವೆ. ಆದರೆ, ಈವರೆಗೆ ಕನ್ನಡ ಚಿತ್ರರಂಗದಲ್ಲಿ ವಿವಾದಗಳು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿವೆಯೇ ಹೊರತು ಸಿನಿಮಾಗಳು ಮಾತ್ರ ಸದ್ದು ಮಾಡಲೇ ಇಲ್ಲ. ಈಗ ಕಲೆವು ಸ್ಟಾರ್ ನಟ ಸಿನಿಮಾಗಳು ವರ್ಷಾಂತ್ಯದೊಳಗೆ ಬಿಡುಗಡೆ ಆಗಲಿದ್ದು, ಅವುಗಳು ದೊಡ್ಡ ಮಟ್ಟದ ಸಕ್ಸಸ್ ಕಾಣಬಹುದೇ ಎಂಬ ನಿರೀಕ್ಷೆಯಲ್ಲಿ ಕನ್ನಡ ಸಿನಿಮಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಫೈಟ್‌ ಮಾಸ್ಟರ್ಸ್‌ಗೆಲ್ಲ ಸುದೀಪ್‌ ಮೇಕಪ್‌ ಮಾಡುತ್ತಿದ್ದರು, ಅವರನ್ನು ಬಹಳ ಗೋಳು ಹೊಯ್ಕೊಳ್ತಿದ್ದೆ: ಸಂಯುಕ್ತಾ ಹೊರನಾಡು

ಕನ್ನಡ ಚಿತ್ರರಂಗ ಕಾಪಾಡಲು ಪ್ಯಾನ್ ಇಂಡಿಯಾ ಸಿನಿಮಾಗಳೇ ಬರಬೇಕಾ?
ಹೌದು, ಕನ್ನಡ ಚಿತ್ರರಂಗವನ್ನು ಕಾಪಾಡಲು ಪುನಃ ದೊಡ್ಡ ದೊಡ್ಡ ನಟರ ಪ್ಯಾನ್ ಇಂಡಿಯಾ ಸಿನಿಮಾಗಳೇ ಬರಬೇಕು ಎಂಬ ನಿರೀಕ್ಷೆಯಲ್ಲಿದ್ದಂತೆ ಕಾಣುತ್ತಿದೆ. ಈ ಹಿಂದೆ, ಕೆಜಿಎಫ್, ಕೆಜಿಎಫ್‌-2 ಹಾಗೂ ಕಾಂತಾರ ಸಿನಿಮಾದ ಬಳಿಕ ಕನ್ನಡ ಚಿತ್ರರಂಗ ಪ್ಯಾನ್ ಇಂಡಿಯಾ ಮಟ್ಟವಲ್ಲ, ಸ್ಥಳೀಯವಾಗಿ ಕರ್ನಾಟಕದಲ್ಲಿಯೇ ದೊಡ್ಡ ಮಟ್ಟದ ಯಶಸ್ಸು ಸಾಧಿಸುವಲ್ಲಿ ವಿಫಲವಾಗಿವೆ. ಎಷ್ಟು ಬೇಗ ಕನ್ನಡದ ಸಿನಿಮಾಗಳೆರೆಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದವೋ, ಅಷ್ಟೇ ವೇಗವಾಗಿ ಸ್ಯಾಂಡಲ್‌ವುಡ್ ಮಕಾಡೆ ಮಲಗಿಕೊಂಡಿದೆ. ಸದ್ಯಕ್ಕೆ ಕನ್ನಡ ಚಿತ್ರರಂಗವನ್ನು ಬಡಿದೆಬ್ಬಿಸಲು ಪ್ಯಾನ್ ಇಂಡಿಯಾ ಸಿನಿಮಾಗಳೇ ತೆರೆಗೆ ಬರಬೇಕು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹಾಗಾದರೆ, ಕನ್ನಡ ಚಿತ್ರನಟರ ಯಾವ ಪ್ಯಾನ್ ಇಂಡಿಯಾ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ ಗೊತ್ತಾ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ಮಾರ್ಟಿನ್ : 2024ರ ಅಕ್ಟೋಬರ್ 25ರಂದು ರಿಲೀಸ್ ಆಗುತ್ತಿರುವ ಸಿನಿಮಾ ಮಾರ್ಟಿನ್ (Martin Movie) ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಭಾರತೀಯ ಸೇನೆಯ ಮಿಲಿಟರಿ ಫೋರ್ಸ್‌ನಲ್ಲಿ ಕೆಲಸ ಮಾಡುವ ಲೆಫ್ಟಿನೆಂಟ್ ಬ್ರಿಗೇಡಿಯರ್ ಅರ್ಜುನ್ ಸಕ್ಸೇನಾ (Arjun Saksena) ಅವರು ಸೇನೆಯಲ್ಲಿದ್ದ ವೇಳೆ ನಡೆದ ಘಟನೆಯನ್ನು ಆಧರಿಸಿ ಸಿನಿಮಾ ನಿರ್ಮಾಣ ಆಗುತ್ತಿದೆ. ಇದೊಂದು ಆಕ್ಚನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ವಿದೇಶದ ಹಲವು ಬಾಡಿ ಬಿಲ್ಡರ್‌ಗಳು ಕೂಡ ನಟಿಸಿದ್ದಾರೆ. ಇದನ್ನು ಪ್ಯಾನ್‌ ವರ್ಲ್ಡ್‌ ಎಂದೇ ಹೇಳಬಹುದು. ಇನ್ನು ತಾರಾಗಣದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Actor Dhruva Sarja) ನಾಯಕನಾಗಿ ನಟಿಸುತ್ತಿದ್ದಾರೆ. ಉಳಿದಂತೆ ವೈಭವಿ ಶಾಂಡಿಲ್ಯ , ಅನ್ವೇಶಿ ಜೈನ್, ಸುಕೃತಾ ವಾಗ್ಲೆ , ಅಚ್ಯುತ್ ಕುಮಾರ್ ಮತ್ತು ನಿಕಿತಿನ್ ಧೀರ್ ತಾರಾಗಣದಲ್ಲಿದ್ದಾರೆ. ಈ ಸಿನಿಮಾದಲ್ಲಿ ಕನ್ನಡಿಗರಿಗೆ ದೊಡ್ಡ ಮಟ್ಟದ ನಿರೀಕ್ಷೆಯಿದೆ. 

ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ ಭೇಟಿಗೆ ಅವಕಾಶ ಸಿಗದೇ ವಾಪಸ್ ಹೋದ ಹಾಸ್ಯನಟ ಸಾಧು ಕೋಕಿಲ

ಉಪೇಂದ್ರ ಯುಐ : 18 ಸೆಪ್ಟೆಂಬರ್ 2024ರಲ್ಲಿ ರಿಲೀಸ್ ಆಗುತ್ತಿರುವ ಯುಐ ಸಿನಿಮಾ (UI Movie) ಕನ್ನಡಿಗರಿಗೆ ಸಕ್ಸಸ್ ತಂದುಕೊಡಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾವಾಗಿದೆ. ನಟ, ನಿರ್ದೇಶಕ ಉಪೇಂದ್ರ (Upendra) ಅವರು ಯುಐ ಸಿನಿಮಾ ರಿಲೀಸ್‌ಗೆ ಸಿದ್ಧತೆ ಮಾಡಿಕೊಂಡಿದ್ದು, ಸ್ವತಃ ಸಿನಿಮಾ ತಂಡ ಸೇರಿದಂತೆ ಕನ್ನಡ ಸಿನಿಮಾದ ಅಭಿಮಾನಿಗಳು ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ಉಪೇಂದ್ರ ನಿರ್ದೇಶನದ ಸಿನಿಮಾಗಳಿಗೆ ಕರ್ನಾಟಕ ಮಾತ್ರವಲ್ಲದೇ ದಕ್ಷಿಣ ಭಾರತದ ತೆಲುಗು, ತಮಿಳು ಅಭಿಮಾನಿಗಳೂ ಸಾಕಷ್ಟಿದ್ದಾರೆ. ಯುಐ ಸಿನಿಮಾ ಪ್ಯಾನ ಇಂಡಿಯಾ ಮಟ್ಟದಲ್ಲಿ ದಾಖಲೆ ಬರೆಯಲಿದೆ ಎಂಬ ನಿರೀಕ್ಷೆ ಇದ್ದು, ಅಂದುಕೊಂಡಂತೆ ಸಕ್ಸಸ್ ಆದಲ್ಲಿ ಕನ್ನಡ ಚಿತ್ರರಂಗದ ಕೀರ್ತಿ ಮತ್ತೆ ಬೆಳಗಲಿದೆ. ಈ ಸಿನಿಮಾದಲ್ಲಿ ಉಪೇಂದ್ರ ನಾಯಕನಾಗಿದ್ದು, ದಕ್ಷಿಣ ಭಾರತದ ಮತ್ತೊಬ್ಬ ಸ್ಟಾರ್ ನಟ ದಳಪತಿ ವಿಜಯ್ ಕೂಡ ಸಿನಿಮಾದಲ್ಲಿದ್ದಾರೆ. ನಟಿ ರೀಷ್ಮಾ ನಾಣಯ್ಯ, ಸನ್ನಿ ಲಿಯೋನ್, ಜಿಶು ಸೆಂಗುಪ್ತ, ಮುರಳಿ ಶರ್ಮಾ, ಸಾಧುಕೋಕಿಲಾ ಸೇರಿ ಹಲವರು ತಾರಾಗಣದಲ್ಲಿದ್ದಾರೆ. 

ಮ್ಯಾಕ್ಸ್: 2024ರಲ್ಲಿ ಬಿಡುಗಡೆ ನಿರೀಕ್ಷಿತವಾಗಿರುವ ಕನ್ನಡದ ಮತ್ತೊಬ್ಬ ಸ್ಟಾರ್ ನಟ ಕಿಚ್ಚ ಸುದೀಪ್ (Kiccha Sudeep) ಅವರ 'ಮ್ಯಾಕ್ಸ್' (Max Movie) ಸಿನಿಮಾ ಕನ್ನಡ ಚಿತ್ರರಂಗವನ್ನು ಗೆಲ್ಲಿಸಲಿದೆ ಎಂಬ ಭರವಸೆ ಹೆಚ್ಚಾಗಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಇತ್ತೀಚೆಗೆ ಟೀಸರ್ ರಿಲೀಸ್ ಆಗಿತ್ತು. ಕಳೆದ ವರ್ಷ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ತಕ್ಕಮಟ್ಟಿಗೆ ಯಶಸ್ಸು ಗಳಿಸಿತ್ತು. ಇದಾದ ನಂತರ ಮ್ಯಾಕ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದು, ಮಹಾಬಲಿಪುರಂನಲ್ಲಿ ಶೂಟಿಂಗ್ ಮಾಡುವ ವೇಳೆ ಪ್ರವಾಹ ಪರಿಸ್ಥಿತಿ ಉಂಟಾಗಿ ಸಿನಿಮಾ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಪುನಃ ಚಿತ್ರೀಕರಣ ಆರಂಭಿಸಿದ್ದು, ಇದೇ ವರ್ಷದ 2024ರಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡವು ಹೇಳಿದೆ. ಆದರೆ, ಅಂತಿಮ ಕ್ಷಣಗಳಲ್ಲಿ ಮುಂದೂಡಿಕೆಯೂ ಆಗಬಹುದು. ಒಂದು ವೇಳೆ ಮ್ಯಾಕ್ಸ್ ಸಿನಿಮಾ ಇದೇ ವರ್ಷ ರಿಲೀಸ್ ಆದಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಲಿದೆ ಎಂಬ ನೊರೀಕ್ಷೆಯನ್ನು ಇತ್ತೀಚೆಗೆ ರಿಲೀಸ್ ಆಗಿದ್ದ ಟೀಸರ್‌ನಿಂದ ವ್ಯಕ್ತವಾಗಿದೆ.

ಸಾಂಗ್, ಟೀಸರ್, ಟ್ರೈಲರ್‌ಗಾಗಿ ಭರ್ಜರಿ ಓಟಿಂಗ್..! ಪ್ಯಾನ್ ಇಂಡಿಯಾದಲ್ಲಿ 'ಮಾರ್ಟಿನ್' ಮಿಂಚಿಂಗ್..!

Latest Videos
Follow Us:
Download App:
  • android
  • ios