ಚಿತ್ರದ ನಾಯಕ ನಟ ರಮೇಶ್‌ ಅರವಿಂದ್‌ ಹಾಗೂ ನಿರ್ದೇಶಕ ಆಕಾಶ್‌ ಶ್ರೀವತ್ಸ ಇಬ್ಬರು ಲಂಡನ್‌ಗೆ ಹೊರಟಿದ್ದು, ಕನ್ನಡದ ಜತೆಗೆ ವಿದೇಶದಲ್ಲೂ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

‘ಸಿನಿಮಾಕ್ಕೆ ಕನ್ನಡಿಗರಿಂದ ಈ ಮಟ್ಟದ ರೆಸ್ಪಾನ್ಸ್‌ ಸಿಗುತ್ತೆ ಎನ್ನುವ ನಿರೀಕ್ಷೆ ಇತ್ತು. ಆದರೆ ವಿದೇಶದಲ್ಲೂ ಅದು ಈ ಮಟ್ಟದ ಸದ್ದು ಮಾಡುತ್ತಿದೆ ಅಂತ ಗೊತ್ತಿರಲಿಲ್ಲ. ಚಿತ್ರ ತೆರೆ ಕಂಡ ಮೊದಲ ವಾರವೇ ಅಮೆರಿಕ, ಆಸ್ಪ್ರೇಲಿಯಾ ಹಾಗೂ ಕೆನಡಾದಲ್ಲೂ ತೆರೆ ಕಂಡಿತ್ತು. ಮೊದಲ ದಿನದಲ್ಲಿ ಇಲ್ಲಿನಂತೆಯೇ ಅಲ್ಲಿಯೂ ರೆಸ್ಪಾನ್ಸ್‌ ಸಾಧಾರಣವೇ ಇತ್ತು. ಎರಡು ದಿನ ಕಳೆದ ನಂತರ ಜನರಿಗೆ ಸಿನಿಮಾ ಹಿಡಿಸಿ, ಚಿತ್ರಮಂದಿರಗಳ ಹೌಸ್‌ ಫುಲ್‌ ಆದವು. ಅಮೆರಿಕದಲ್ಲಿ ಆರಂಭದಲ್ಲಿ ನಾಲ್ಕು ಕೇಂದ್ರಗಳಲ್ಲಿ ಸಿನಿಮಾ ತೆರೆ ಕಂಡಿತ್ತು. ಈಗ ಆ ಸಂಖ್ಯೆ 8ಕ್ಕೆ ಏರಿಕೆ ಆಗಿದೆ. ಆಸ್ಪ್ರೇಲಿಯಾದಲ್ಲೂ ಇದೇ ಬೆಳವಣಿಗೆ ಆಗಿದೆ. ಇದು ನಮಗೂ ಖುಷಿ ತಂದಿದೆ’ ಎನ್ನುತ್ತಾರೆ ನಿರ್ದೇಶಕ ಆಕಾಶ್‌ ಶ್ರೀವತ್ಸ.

ಚಿತ್ರ ವಿಮರ್ಶೆ: ಶಿವಾಜಿ ಸುರತ್ಕಲ್

ರಮೇಶ್‌ ಅರವಿಂದ್‌ ಸಿನಿ ಜರ್ನಿಯಲ್ಲಿ ಶಿವಾಜಿ ಸುರತ್ಕಲ್‌ ಒಂದು ವಿಶೇಷ ಸಿನಿಮಾ ಆಗಿದ್ದೇ ಅವರ ಪಾತ್ರದ ಕಾರಣಕ್ಕೆ. ಪತ್ತೇದಾರಿ ಕತೆಯಲ್ಲಿ ಅವರು ಒಬ್ಬ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೂ ಇಷ್ಟವಾಗಿದೆ. ‘ಶಿವಾಜಿ ಸುರತ್ಕಲ್‌ ಭಾಗ 2’ ಬಂದರೆ ಚೆನ್ನಾಗಿರುತ್ತೆ ಅಂತ ಪ್ರೇಕ್ಷಕರೇ ಡಿಮ್ಯಾಂಡ್‌ ಮಾಡುತ್ತಿದ್ದಾರಂತೆ. ಈ ಮಟ್ಟದ ಪ್ರತಿಕ್ರಿಯೆಗೆ ನಿರ್ದೇಶಕ ಆಕಾಶ್‌ ಶ್ರೀವತ್ಸ ಕೂಡ ಥ್ರಿಲ್‌ ಆಗಿದ್ದಾರೆ.

ವಿದೇಶದಲ್ಲೂ ಪತ್ತೇದಾರಿಕೆ ಶುರು ಮಾಡಲಿದ್ದಾರೆ 'ಶಿವಾಜಿ ಸುರತ್ಕಲ್'!

‘ಇದು ಪ್ರೇಕ್ಷಕರ ಡಿಮ್ಯಾಂಡ್‌. ನಾವು ಚಿತ್ರಮಂದಿರಗಳಿಗೆ ಭೇಟಿ ಕೊಟ್ಟಸಂದರ್ಭದಲ್ಲಿ ರಮೇಶ್‌ ಅರವಿಂದ್‌ ಪಾತ್ರ, ಚಿತ್ರದ ಕತೆ ಗೆ ಮೆಚ್ಚುಗೆ ಹೇಳುತ್ತಿರುವುದು ಮಾತ್ರವಲ್ಲ, ಭಾಗ 2 ಬರುವುದಾಗಿ ಯಾವಾಗ ಅಂತ ಕೇಳುತ್ತಿದ್ದಾರೆ. ಒಂದು ರೀತಿ ಇದು ನನ್ನ ಜವಾಬ್ದಾರಿ ಹೆಚ್ಚಿಸಿದೆ. ಆದರೆ ಅದಕ್ಕೆ ನಿರ್ಮಾಪಕರು ಹಾಗೂ ರಮೇಶ್‌ ಅರವಿಂದ್‌ ಅವರ ಸಹಕಾರ, ಬೆಂಬಲ ಬೇಕಿದೆ. ಅದು ಸಿಕ್ಕರೆ ಭಾಗ 2 ಮಾಡುವುದಕ್ಕೆ ನಾನು ಕೂಡ ಉತ್ಸುಕನಾಗಿದ್ದೇನೆ ಎನ್ನುವುದು ಆಕಾಶ್‌ ಅವರ ಸಂತಸದ ಮಾತು.