ಚಿತ್ರ ವಿಮರ್ಶೆ: ಶಿವಾಜಿ ಸುರತ್ಕಲ್

ಸ್ಯಾಂಡಲ್‌ವುಡ್ ಎವರ್‌ಗ್ರೀನ್ ಹ್ಯಾಂಡ್ಸಮ್ ನಟ ರಮೇಶ್ ಅರವಿಂದ್ 101 ನೇ ಸಿನಿಮಾ 'ಶಿವಾಜಿ ಸೂರತ್ಕಲ್' ರಿಲೀಸ್ ಆಗಿದೆ. ಈ ಚಿತ್ರದ ವಿಶೇಷತೆಗಳೇನು? ಚಿತ್ರ ನೋಡಿದ ಪ್ರೇಕ್ಷಕ ಹೇಳುವುದೇನು? ಇಲ್ಲಿದೆ ನೋಡಿ ವಿಮರ್ಶೆ. 

Kannada movie Ramesh Aravind Shivaji Surathkal film review

-ಆರ್‌ ಕೇಶ​ವ​ಮೂ​ರ್ತಿ

ದೆವ್ವ, ಪ್ರೇತ, ಆತ್ಮ​ಗಳು ಇದ್ದಾವೋ, ಇಲ್ಲ​ವೋ ಗೊತ್ತಿಲ್ಲ. ಆದ​ರೆ, ಅವು​ಗ​ಳೆಂದರೆ ಮನು​ಷ್ಯ​ರಿಗೆ ಭಯ. ಆದರೂ ಈ ದೆವ್ವದ ಚಿತ್ರ​ಗ​ಳನ್ನು ಕಣ್ಣು ಮಿಟು​ಕಿ​ಸದೆ ನೋಡು​ತ್ತೇ​ವೆ. ಹಾಗೆ ಸಾವು, ಕೊಲೆ, ಕ್ರೈಮು ಬಗ್ಗೆಯೂ ನಮಗೆ ನಡುಕ. ಆದರೆ, ನ್ಯಾಷ​ನಲ್‌ ಜಿಯೋ​ಗ್ರ​ಫಿ​ಯಲ್ಲಿ ಹುಲಿ​ಯೊಂದು ಜಿಂಕೆ ಮರಿ​ಯನ್ನು ಅಟ್ಟಿ​ಸಿ​ಕೊಂಡು ಹೋಗು​ತ್ತಿ​ರು​ವ ದೃಶ್ಯ​ಗ​ಳನ್ನು ತದೇ​ಕ​ಚಿ​ತ್ತ​ರಾಗಿ ನೋಡು​ತ್ತೇವೆ.

ಕ್ರೈಮ್‌ ಧಾರಾ​ವಾ​ಹಿ​ಗ​ಳನ್ನು, ಕಾರ್ಯ​ಕ್ರ​ಮ​ಗ​ಳನ್ನು ಇನ್ನಿ​ಲ್ಲದ ಆಸ​ಕ್ತಿ​ಯಿಂದ ನೋಡು​ತ್ತೇವೆ. ರಮೇಶ್‌ ಅರ​ವಿಂದ್‌ ಅವರ ಈ ‘ಶಿವಾಜಿ ಸುರ​ತ್ಕ​ಲ್‌’ ಚಿತ್ರವೂ ಹಾಗೆ ಕುತೂ​ಹ​ಲ​ಭ​ರಿತ ನೋಡಿ​ಸಿ​ಕೊ​ಳ್ಳುವ ಗುಣ ಇದೆ ಎಂದರೆ ಅದಕ್ಕೆ ಕಾರಣ ರಮೇಶ್‌ ಅರ​ವಿಂದ್‌ ಅವರ ಸ್ಕ್ರೀನ್‌ ಅಪಿಯರೆನ್ಸ್‌. ಪತ್ತೆ​ದಾರಿ ಕತೆ, ಸಿನಿ​ಮಾ​ಗ​ಳನ್ನು ಇಷ್ಟ​ಪ​ಡು​ವ​ವ​ರಿಗೆ ‘ಶಿವಾಜಿ ಸುರ​ತ್ಕ​ಲ್‌’ನ ರಣ​ಗಿರಿ ಸಸ್ಪೆನ್ಸ್‌ ಕ್ರೈಮ್‌ ಕತೆಯೂ ಇಷ್ಟ​ವಾ​ಗ​ಬ​ಹುದು.

ವಿಷಯ ಇಷ್ಟೆ. ರೆಸಾರ್ಟ್‌ವೊಂದ​ರಲ್ಲಿ ಒಂದು ಕೊಲೆ ಆಗಿದೆ. ಕೊಲೆ ಆದ​ವನು ಮಂತ್ರಿ​ಯೊ​ಬ್ಬನ ಮಗ. ಹೀಗಾಗಿ ಆ ಪ್ರಕ​ರ​ಣ​ಕ್ಕೆ ಮಹತ್ವ ಬಂದಿದೆ. ಕೊಲೆಯ ತನಿ​ಖೆಗೆ ಬರು​ವ ಪೊಲೀಸ್‌ ಅಧಿ​ಕಾರಿ ಶಿವಾಜಿ ಸುರ​ತ್ಕಲ್‌ ಅವರ ವೈಯ​ಕ್ತಿಕ ಜೀವನದಲ್ಲೂ ಒಂದು ದುರಂತ ಆಗಿದೆ. ಈ ಅಧಿ​ಕಾರಿ ಮನೆ​ಯಲ್ಲಿ ಸಂಭ​ವಿ​ಸಿದ ನಿಗೂ​ಢ ಸಾವು, ರೆಸಾ​ರ್ಟ್‌​ನಲ್ಲಿ ಆದ ಕೊಲೆಗೂ ಏನಾ​ದರೂ ನಂಟು ಇದಿಯೇ ಎನ್ನುವ ಗುಮಾನಿ ಹುಟ್ಟು ಹಾಕು​ತ್ತಲೇ ಕತೆ ಸಾಗು​ತ್ತದೆ. ಈ ಒಂದು ಕೊಲೆಯ ಸುತ್ತ ಹನ್ನೊಂದು ಜನ ಅನು​ಮಾ​ನಿ​ತರು ಇದ್ದಾರೆ.

ಚಿತ್ರ ವಿಮರ್ಶೆ: ಗಿಫ್ಟ್‌ಬಾಕ್ಸ್‌

ಅವ​ರಲ್ಲಿ ಮೊಗ್ಗಿನ ಜಡೆ ರಂಗ​ನಾ​ಯಕಿ ಕೂಡ. ಪ್ರತಿ ಹುಣ್ಣಿ​ಮೆ​ಯಂದು ಮೊಗ್ಗಿನ ಜಡೆ ರಂಗ​ನಾ​ಯಕಿ, ಹದಿ​ಹ​ರೆ​ಯದ ಹುಡು​ಗ​ರನ್ನು ಬಲಿ ತೆಗೆ​ದು​ಕೊ​ಳ್ಳು​ತ್ತದೆ ಎಂಬುದು ಇಲ್ಲಿ ಬರುವ ಮತ್ತೊಂದು ‘ರಂಗಿ​ತ​ರಂಗ’ ನೆರ​ಳಿನ ಕತೆ. ಒಂದು ಕೊಲೆ​ಯನ್ನು ಕಂಡು ಹಿಡಿಯಲು ಹೋಗಿ ನಾಲ್ಕು ಸಾವು​ಗ​ಳನ್ನು ಪತ್ತೆ ಮಾಡುವ ಹೊತ್ತಿಗೆ ಸಿನಿಮಾ ಮುಕ್ತಾ​ಯ​ವಾ​ಗು​ತ್ತದೆ. ಆದರೆ, ಆ ಮೂರನೇ ಕೊಲೆ ಯಾರದ್ದು ಎಂಬುದು ಚಿತ್ರದ ಅಸಲಿ ಕತೆ.

ಒಂದು ರೆಸಾರ್ಟ್‌, ಮೂರು ಪ್ಲಸ್‌ ಒಂದು ಕೊಲೆ, ಹನ್ನೊಂದು ಮಂದಿ ಆರೋ​ಪಿ​ತ​ರು, ಇಬ್ಬರು ತನಿ​ಖಾ ಅಧಿ​ಕಾ​ರಿ​ಗಳು, ಒಬ್ಬ ಮಂತ್ರಿ ಇವಿಷ್ಟುಅಂಶ​ಗ​ಳಿಗೆ ಇಂಗ್ಲಿಷ್‌ನ ಕ್ರೈಮ್‌ ಕಾದಂಬ​ರಿ​ಯ ಸರ​ಕು ಬೆಂಬ​ಲ​ವಾಗಿ ನಿಂತು, ಶಿವಾ​ಜಿ​ಯನ್ನು ಮುನ್ನ​ಡೆ​ಸು​ತ್ತದೆ. ಇಂಥ ಸಿನಿ​ಮಾ​ಗ​ಳಲ್ಲಿ ಸಸ್ಪೆನ್ಸ್‌, ಕನ್‌​ಫä್ಯ​ಸ್‌​ಗಳು ಇರ​ಬೇಕು. ಆದರೆ, ಕತೆ ಹೇಳುವ ಸೂತ್ರ​ಧಾ​ರಿಯೇ ಗೊಂದ​ಲಕ್ಕೆ ಒಳ​ಗಾ​ಗ​ಬಾ​ರದು.

ತನಿಖೆಗೆ ಬರುವ ಅಧಿ​ಕಾ​ರಿ ಮಾನ​ಸಿ​ಕ​ವಾಗಿ ತಾಳ ತಪ್ಪಿ​ದ್ದಾ​ರೆಯೇ, ಆ ರೆಸಾ​ರ್ಟ್‌​ನಲ್ಲಿ ಮೊಗ್ಗಿನ ಜಡೆ ರಂಗ​ನಾ​ಯ​ಕಿಯ ಆತ್ಮ ದೆವ್ವದ ರೂದ​ಪಲ್ಲಿ ತಿರು​ಗು​ತ್ತಿದೆ ಎನ್ನುವ ತಿರುವು​ಗ​ಳ ಜತೆ ಭೂತ ಮತ್ತು ವರ್ತ​ಮಾ​ನದ ಈ ಎರಡೂ ದಾರಿ​ಗ​ಳನ್ನು ಒಟ್ಟಿಗೆ ಬಳ​ಸಿ​ಕೊ​ಳ್ಳುವ ಸಾಹಸ ಮಾಡಿ​ದ್ದಾರೆ ನಿರ್ದೇ​ಶ​ಕರು. ಒಂದು ರೀತಿ​ಯಲ್ಲಿ ಇದು ದಾರಿ​ಯಲ್ಲಿ ಹೋಗು​ತ್ತಿದ್ದ ರಿಸ್ಕ್‌ ಅನ್ನು ಮನೆಗೆ ಕರೆದು ಪಕ್ಕ​ದಲ್ಲೇ ಕೂರಿ​ಸಿ​ಕೊಂಡಂತೆ! ಆದರೆ, ಇದನ್ನು ಜಾಣ್ಮೆಯಿಂದ ನಿಭಾಯಿ​ಸು​ವುದು ರಮೇಶ್‌ ಅರ​ವಿಂದ್‌ ವರ ಪಾತ್ರದ ಶೈಲಿ.

ಚಿತ್ರ ವಿಮರ್ಶೆ: ನವರತ್ನ

ಬೆಂಗ​ಳೂ​ರಿನ ತ್ಯಾಗ​ರಾಜ ಕಾಲೋ​ನಿ​ಯಲ್ಲಿ ವಾಸಿ​ಸು​ತ್ತಿ​ದ್ದಾ​ಗಲೇ ತೆರೆ ಮೇಲೂ ತ್ಯಾಗ​ರಾ​ಜನ ಪಟ್ಟ​ಕ್ಕೇ​ರಿದ್ದ ಆ ರಮೇಶ್‌ ಅರ​ವಿಂದ್‌ ಇಲ್ಲಿ ಸಿಗುವುದಿಲ್ಲ. ‘ಕಾಲ್‌ ಮೀ ಶಿವಾಜಿ ಸುರ​ತ್ಕ​ಲ್‌’ ಎಂದು ಧ್ವನಿ ಏರಿಸಿ ಮಾತ​ನಾ​ಡುವ ಆ್ಯಂಗ್ರಿ ರಮೇಶ್‌ ಅರ​ವಿಂದ್‌ ಆಗಾಗ ಬಂದು ಹೋಗು​ತ್ತಾರೆ. ಇದು ಚಿತ್ರದ ಹೊಸ​ತನಕ್ಕೆ ಉದಾ​ಹ​ರಣೆ. ಹಿನ್ನೆಲೆ ಸಂಗೀತ ಹಾಗೂ ಛಾಯಾ​ಗ್ರಾ​ಹಣ ಕತೆಗೆ ಪೂರ​ಕ​ವಾಗಿ ಕೆಲಸ ಮಾಡಿವೆ. ರಮೇಶ್‌ ಅರ​ವಿಂದ್‌ ಜತೆಗೆ ಪಿಡಿ ಸತೀಶ್‌, ರಘು ರಾಮ​ಕೊಪ್ಪ, ಆರೋಹಿ ನಾರಾ​ಯಣ್‌ ಅವ​ರು ಗಮನ ಸೆಳೆಯುವಂತೆ ತಮ್ಮ ಪಾತ್ರ​ಗ​ಳನ್ನು ತೆರೆ ಮೇಲೆ ಸರಿ ತೂಗಿ​ಸಿದ್ದಾರೆ.

-   ತಾರಾ​ಗ​ಣ: ರಮೇಶ್‌ ಅರ​ವಿಂದ್‌, ರಾಧಿಕಾ ನಾರಾ​ಯಣ್‌, ಆರೋಹಿ ನಾರಾ​ಯಣ್‌, ರಘು ರಾಮ​ಕೊಪ್ಪ

ನಿರ್ದೇ​ಶ​ನ: ಆಕಾಶ್‌ ಶ್ರೀವತ್ಸ

ನಿರ್ಮಾ​ಣ: ರೇಖಾ.ಕೆ.ಎನ್‌, ಅನೂಪ್‌ ಗೌಡ

ಸಂಗೀ​ತ: ಜೂಡಾ ಸ್ಯಾಂಡಿ

ಛಾಯಾ​ಗ್ರ​ಹ​ಣ: ಗುರುಪ್ರಸಾದ್‌

ರೇಟಿಂಗ್‌- ***

 

Latest Videos
Follow Us:
Download App:
  • android
  • ios