ಲಾಕ್‌ಡೌನ್‌ ನಂತರ ಚಿತ್ರಮಂದಿರಗಳು ತೆರೆದರೂ ಸಿನಿಮಾ ನಿರ್ಮಾಪಕರು ಮಾತ್ರ ಹೊಸ ಸಿನಿಮಾ ರಿಲೀಸ್‌ ಮಾಡುವ ಧೈರ್ಯ ತೋರಿರಲಿಲ್ಲ. ಅದಕ್ಕೆ ಕಾರಣ ಹಲವಾರು. ಶೇ.50ರಷ್ಟುಪ್ರೇಕ್ಷಕರು ಮಾತ್ರ ಚಿತ್ರಮಂದಿರದಲ್ಲಿ ಇರಬೇಕು ಅನ್ನುವುದರಿಂದ ಹಿಡಿದು ಪ್ರೇಕ್ಷಕರ ಸುರಕ್ಷತೆವರೆಗೆ ಎಲ್ಲಾ ಆತಂಕಗಳು ಇದ್ದುವು. ಆದರೆ ಎಷ್ಟುದಿನ ಅಂತ ಸಿನಿಮಾ ರಿಲೀಸ್‌ ಮಾಡದೇ ಇರಲು ಸಾಧ್ಯ? ಯಾರಾದರೊಬ್ಬರು ಮುಂದೆ ಬರಲೇಬೇಕಿತ್ತು. ಸ್ಟಾರ್‌ ಸಿನಿಮಾ ಬಂದರೆ ಒಳ್ಳೆಯದು ಎಂದು ಚಿತ್ರಮಂದಿರಗಳು ಹೇಳುತ್ತಿರುವ ಹೊತ್ತಿಗೆ ಕತೆ, ಪೋಸ್ಟರ್‌ಗಳಿಂದಲೇ ನಿರೀಕ್ಷೆ ಹುಟ್ಟಿಸಿರುವ ಆಕ್ಟ್ 1978 ಸಿನಿಮಾ ನವೆಂಬರ್‌ 20ರಂದು ಬಿಡುಗಡೆಯಾಗುತ್ತಿದೆ.

Act 1978: ಗಮನ ಸೆಳೆಯುತ್ತಿದೆ ಮಂಸೋರೆ ನಿರ್ದೇಶನದ ಚಿತ್ರ!

ಮನ್ಸೋರೆ ನಿರ್ದೇಶನದ ಈ ಸಿನಿಮಾವನ್ನು ರಿಲೀಸ್‌ ಮಾಡುವ ಮೂಲಕ ಬೇರೆ ಸಿನಿಮಾ ನಿರ್ಮಾಪಕರಿಗೂ ಮಾದರಿಯಾಗುವಂತಹ ಹೆಜ್ಜೆ ಹಾಕಿರುವುದು ನಿರ್ಮಾಪಕ ದೇವರಾಜ್‌ ಆರ್‌. ಬೇರೆಯವರೆಲ್ಲಾ ಏನಾಗುತ್ತದೋ ಎಂಬ ಆತಂಕದಲ್ಲಿ ಇರುವ ಸಂದರ್ಭದಲ್ಲಿ ದೇವರಾಜ್‌ ಧೈರ್ಯದಿಂದ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಈ ಧೈರ್ಯ ಎಲ್ಲಿಂದ ಬಂತು ಎಂದು ಕೇಳಿದ್ದಕ್ಕೆ ದೇವರಾಜ್‌ ಕೊಟ್ಟಉತ್ತರಗಳು ಇಲ್ಲಿದೆ.

- ಆಕ್ಟ್ 1978 ಸಿನಿಮಾ ನಮಗೆ ಕೊಟ್ಟಆತ್ಮವಿಶ್ವಾಸವೇ ಬಿಡುಗಡೆ ನಿರ್ಧಾರಕ್ಕೆ ಕಾರಣ. ಈ ಸಿನಿಮಾ ಒಂದು ಸಲ ಜನ ನೋಡಿದರೆ ಸಾಕು ಆಮೇಲೆ ಅವರೇ ಬೇರೆಯವರನ್ನು ಕರೆತರುತ್ತಾರೆ ಎಂಬ ನಂಬಿಕೆ ನಮಗಿದೆ. ಆ ನಂಬಿಕೆಯಿಂದಲೇ ಮುಂದೆ ಹೆಜ್ಜೆ ಇಟ್ಟಿದ್ದೇವೆ.

- ಪ್ರೇಕ್ಷಕರಿಗೂ ಎಂಟರ್‌ಟೇನ್‌ಮೆಂಟ್‌ ಬೇಕಿದೆ. ಯಾರು ಸಿನಿಮಾ ಇಷ್ಟಪಡುತ್ತಾರೋ ಅವರು ಬಂದೇ ಬರುತ್ತಾರೆ. ನಾನು ಸಿನಿಮಾ ಮಾಡುವಾಗ ಎರಡು ಉದ್ದೇಶಗಳಿತ್ತು. ಒಂದು ಬಿಸಿನೆಸ್‌. ಇನ್ನೊಂದು ಸಾಮಾಜಿಕ ಸಂದೇಶ ನೀಡುವುದು. ಎರಡನೆಯದು ನನಗೆ ಹೆಚ್ಚು ತಾಕಿತು.

- ಚಿತ್ರಮಂದಿರ ಶುರುವಾದರೆ ಎಷ್ಟೋ ಮಂದಿಗೆ ಜೀವನ ಸಿಗುತ್ತದೆ. ಅವರು ಇಷ್ಟುತಿಂಗಳು ಕಷ್ಟಪಟ್ಟಿದ್ದಾರೆ. ಇನ್ನಷ್ಟುಕಷ್ಟಪಡುವ ಶಕ್ತಿ ಇಲ್ಲದ ಅವರಿಗೋಸ್ಕರವಾದರೂ ಯಾರಾದರೂ ಸಿನಿಮಾ ರಿಲೀಸ್‌ ಮಾಡಬೇಕಿತ್ತು. ನಾವು ಮುಂದೆ ಬಂದೆವು.

Act 1978 ಸಿನಿಮಾ ತಂಡದಿಂದ ವಿಭಿನ್ನ ಪ್ರಚಾರ! 

- ಯುದ್ಧ ಶುರುವಾದಾಗ ಯಾರಾದರೂ ಮುಂದೆ ನಿಂತು ಎದೆಯೊಡ್ಡಲೇಬೇಕು. ಈಗ ನಾವು ನಿಂತಿದ್ದೇವೆ. ಇನ್ನು ಮುಂದೆ ಬೇರೆಯವರೂ ಬರಬಹುದು. ನಮ್ಮ ಸಿನಿಮಾದ ಮೇಲೆ ನಮಗೆ ಧೈರ್ಯವಿದೆ. ಹಾಗಾಗಿ ಆತಂಕವೇ ಇಲ್ಲ.

- ನಾನು ಮೊದಲು ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ರಿಲೀಸ್‌ ಮಾಡೋಣ ಎಂದುಕೊಂಡೆ. ಈಗ ಸಿಂಗಲ್‌ ಸ್ಕ್ರೀನ್‌ ಮಾಲೀಕರು ಸಿನಿಮಾ ಕೇಳಿದ್ದಾರೆ. ಮಲ್ಟಿಪ್ಲೆಕ್ಸ್‌ ಮತ್ತು ಸಿಂಗಲ್‌ ಸ್ಕ್ರೀನ್‌ ಸೇರಿ ಸುಮಾರು 100 ಸ್ಕ್ರೀನ್‌ಗಳಲ್ಲಿ ನಮ್ಮ ಸಿನಿಮಾ ರಿಲೀಸ್‌ ಆಗುತ್ತಿದೆ.

- ಸಿನಿಮಾ ಮಾಡಿದ ನಿರ್ಮಾಪಕನಿಗೆ ರಿಲೀಸ್‌ ಮಾಡದೇ ಇರುವಷ್ಟುಆತಂಕ ಜಾಸ್ತಿ. ಸಾಲದ ಬಡ್ಡಿ ಹೆಚ್ಚುತ್ತಾ ಹೋಗುತ್ತದೆ. ಒಮ್ಮೆ ರಿಲೀಸ್‌ ಮಾಡಿದರೆ ನೆಮ್ಮದಿ.

- ಒಬ್ಬ ಬಿಸಿನೆಸ್‌ಮನ್‌ ಆಗಿ ಓಟಿಟಿಯಲ್ಲೂ ರಿಲೀಸ್‌ ಮಾಡಿ ಹಾಕಿದ ದುಡ್ಡು ವಾಪಸ್‌ ಪಡೆಯಬಹುದಿತ್ತು. ಆದರೆ ಈ ಸಿನಿಮಾಗಾಗಿ ದುಡಿದ ಕಲಾವಿದರು, ತಂತ್ರಜ್ಞರಿಗೆ ಥಿಯೇಟರಲ್ಲಿ ರಿಲೀಸ್‌ ಮಾಡಿದರಷ್ಟೇ ಅವರ ಕೆಲಸಕ್ಕೆ ಗೌರವ ಕೊಡೋಕೆ ಸಾಧ್ಯ ಅನ್ನಿಸಿತು. ಥೇಟರಲ್ಲಿ ಸಿನಿಮಾ ರಿಲೀಸ್‌ ಮಾಡಲು ಅದೂ ಒಂದು ಕಾರಣ.

Act 1978 ಟ್ರೈಲರ್ ಬಿಡುಗಡೆ ಮಾಡಿದ ಅಪ್ಪು, ಇಲ್ಲಿ ನೋಡಿ ವಿಡಿಯೋ 

- ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳು ಕೂಡ ಮಲ್ಟಿಪ್ಲೆಕ್ಸ್‌ ಲೆಕ್ಕಾಚಾರದಂತೆ ಸಿನಿಮಾ ತೋರಿಸಲು ಮುಂದೆ ಬಂದಿವೆ. ಬಾಡಿಗೆ ಕೊಡುವ ಪದ್ಧತಿ ಈಗ ಇಲ್ಲ. ಪರ್ಸೆಂಟೇಜ್‌ ಲೆಕ್ಕಾಚಾರದಂತೆ ಸಿನಿಮಾ ಬಿಡುಗಡೆ.