Asianet Suvarna News Asianet Suvarna News

Act 1978 ಸಿನಿಮಾ ತಂಡದಿಂದ ವಿಭಿನ್ನ ಪ್ರಚಾರ!

ಸಾಮಾಜಿಕ ಜಾಲತಾಣಗಳಲ್ಲಿ ಈಗ ಹಳೆಯ 100 ರುಪಾಯಿ ನೋಟಿನದ್ದೇ ಸದ್ದು. ಇದ್ದಕ್ಕಿದ್ದಂತೆ ನೂರರ ನೋಟು ಈಗ್ಯಾಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ, ಹಳೆಯ ನೂರರ ನೋಟು ಕೂಡ ಬ್ಯಾನ್‌ ಆಗಲಿದೆಯೇ ಎಂದು ಕೇಳಬೇಡಿ. ಇದು ಮಂಸೋರೆ ನಿರ್ದೇಶನದ ‘ಆಕ್ಟ್-1978’ ಚಿತ್ರದ ಪ್ರಚಾರ ತಂತ್ರ. ಡಿ ಕ್ರಿಯೇಷನ್‌ ಬ್ಯಾನರ್‌ನಲ್ಲಿ ದೇವರಾಜ್‌ ಆರ್‌ ನಿರ್ಮಿಸುತ್ತಿರುವ ಈ ಚಿತ್ರವಿದು.

Kannada act 1978 movie unique promotion photo viral vcs
Author
Bangalore, First Published Nov 9, 2020, 9:16 AM IST

ನೋಟಿನಲ್ಲಿ ಏನೆಲ್ಲ ಇದೆ ಅಂದರೆ..ಹದಿನಾಲ್ಕು ಭಾಷೆಯಲ್ಲಿ ಚಿತ್ರದ ಹೆಸರು, ಒಂದೊಂದು ನೋಟಿನಲ್ಲಿ ಚಿತ್ರದ ಕ್ಯಾರೆಕ್ಟರ್‌ ಲುಕ್‌ ಹಾಗೂ ಪಾತ್ರದ ಹೆಸರು, ನಿರ್ಮಾಣ, ತಾಂತ್ರಿಕ ತಂಡದ ಹೆಸರುಗಳು, ಜತೆಗೆ ಮೈಗೆ ಬಾಂಬ್‌ ಕಟ್ಟಿಕೊಂಡಿರುವ ಯಜ್ಞಾ ಶೆಟ್ಟಿಫೋಟೋ. ಜತೆಗೆ ‘ಬರ್ಬರತೆಯ ಭಾಗವಾಗಿರುವ ದೊಡ್ಡ ಸಮೂಹವೊಂದರ ಎದೆಯೊಳಗೆ ಪಾಪ ಪ್ರಜ್ಞೆಯ ಬೀಜಗಳನ್ನು ಬಿತ್ತುವ ಪ್ರಮಾಣ ಮಾಡುತ್ತೇವೆ’ ಎನ್ನುವ ಘೋಷವಾಕ್ಯ.

Act 1978 ಟ್ರೈಲರ್ ಬಿಡುಗಡೆ ಮಾಡಿದ ಅಪ್ಪು, ಇಲ್ಲಿ ನೋಡಿ ವಿಡಿಯೋ

ನೂರು ರುಪಾಯಿ ನೋಟನ್ನು ನಿಜವಾದ ನೋಟಿನಂತೆ ರೂಪಿಸಿ ಇಷ್ಟುಕ್ರಿಯಾಶೀಲವಾಗಿ ಚಿತ್ರದ ಪ್ರಚಾರಕ್ಕೆ ಬಳಸುತ್ತಿರುವುದು ಕನ್ನಡದ ಮಟ್ಟಿಗೆ ವಿಶೇಷ ಅನ್ನಬಹುದು. ಹಾಗೆ ಇಂಥಾ ಪ್ರಚಾರ ತಂತ್ರಗಳನ್ನು ರೂಪಿಸುವುದರಲ್ಲಿ ಕತೆಗಾರ ಟಿ ಕೆ ದಯಾನಂದ ಅವರ ಪ್ರತಿಭೆ ದೊಡ್ಡದು ಎನ್ನುವುದಕ್ಕೆ ಈ ಹಿಂದೆ ರಿಷಬ್‌ ಶೆಟ್ಟಿಹಾಗೂ ಹರಿಪ್ರಿಯಾ ನಟನೆಯ ‘ಬೆಲ್‌ಬಾಟಂ’ ಚಿತ್ರಕ್ಕೆ ಇವರು ರೂಪಿಸಿದ ಪೋಸ್ಟರ್‌ಗಳು, ಅದಕ್ಕೆ ಬಳಸಿದ ಸಾಲುಗಳೇ ಸಾಕ್ಷಿ. ಗೋಪಾಲ್‌ ಹಲ್ಲು ಪುಡಿ, ಅಟ್ಲಾಸ್‌ ಹಾಗೂ ಹೀರೋ ಸೈಕಲ್‌, ನಿರ್ಮಾ ವಾಷಿಂಗ್‌ ಪೌಡರ್‌ ಹೀಗೆ 80 ಮತ್ತು 90 ದಶಕದ ಬ್ರಾಂಡ್‌ಗಳೆಲ್ಲ ‘ಬೆಲ್‌ ಬಾಟಮ್‌’ ಚಿತ್ರದ ಪ್ರಚಾರದ ರಾಯಭಾರಿಗಳಾಗಿ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಯಿತು.

 

ಈಗ ಅದೇ ರೀತಿ ನೂರು ರುಪಾಯಿ ಖೋಟಾ ನೋಟನ್ನು ಸಿನಿಮಾ ಪ್ರಚಾರದ ವೇದಿಕೆ ಮಾಡಿದ್ದಾರೆ. ಚಿತ್ರದ ಪ್ರತಿ ಪಾತ್ರಕ್ಕೂ ಪ್ರತ್ಯೇಕವಾಗಿ ನೂರರ ನೋಟನ್ನು ರೂಪಿಸಿದ್ದು, ಸದ್ಯ ಗಮನ ಸೆಳೆಯುತ್ತಿದೆ. ‘ಬೆಲ್‌ಬಾಟಂ’ ಚಿತ್ರದ ನಂತರ ದಯಾನಂದ ಕತೆ ಬರೆದಿರುವ ಸಿನಿಮಾ ಈ ‘ಆಕ್ಟ್-1978’. ಈಗಷ್ಟೆಚಿತ್ರದ ಟ್ರೇಲರ್‌ಅನ್ನು ಪಿಆರ್‌ಕೆ ಯೂಟ್ಯೂಬ್‌ ಚಾನಲ್‌ನಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಬಿಡುಗಡೆ ಮಾಡಿದ್ದು, ಟ್ರೇಲರ್‌ನ ಕೊನೆಯಲ್ಲಿ ಬರುವ ‘ಐ ನೀಡ್‌ ರೆಸ್ಪೆಕ್ಟ್’ ಎನ್ನುವ ಡೈಲಾಗ್‌ ಪವರ್‌ಫುಲ್ಲಾಗಿ ಸೌಂಡು ಮಾಡುತ್ತಿದೆ.

ಆಕ್ಟ್ 1978 ಹಾಡು ಬಿಡುಗಡೆ ಮಾಡಿದ ಶಿವಣ್ಣ; ನವೆಂಬರ್‌1ರಂದು ಸಿನಿಮಾ ಬಿಡುಗಡೆ!

ನ.20ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಈ ಮೂಲಕ ಲಾಕ್‌ಡೌನ್‌ ನಂತರ ಚಿತ್ರಮಂದಿರಗಳಿಗೆ ಬರುತ್ತಿರುವ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿರ್ದೇಶಕರಾದ ಬಿ ಸುರೇಶ್‌, ರಾಘು ಶಿವಮೊಗ್ಗ, ಸಂಚಾರಿ ವಿಜಯ್‌, ರಂಗಭೂಮಿ ಕಲಾವಿದ ಪಿ ಡಿ ಸತೀಶ್‌, ಅಶ್ವಿನ್‌, ಶರಣ್ಯಾ ಹೀಗೆ ಸಾಕಷ್ಟುಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ‘ನೋಡಿ ನನಗೂ ನೂರು ರುಪಾಯಿ ನೋಟು ಕೊಟ್ಟಿದ್ದಾರೆ’ ಎನ್ನುವ ಸಾಲುಗಳೊಂದಿಗೆ ಚಿತ್ರದ ಪಾತ್ರದಾರಿಗಳು, ತಾಂತ್ರಿಕ ತಂಡ ತಮ್ಮ ಫೋಟೋ ಇರುವ ಹಳೆಯ ನೂರು ರುಪಾಯಿ ನೋಟನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

Follow Us:
Download App:
  • android
  • ios