ಹರಿವು, ನಾತಿಚರಾಮಿ ಚಿತ್ರದ ಮೂಲಕ ಚಿತ್ರಪ್ರೇಮಿಗಳ ಗಮನ ಸೆಳೆದಿರೋ ಮಂಸೋರೆ ಈ ಚಿತ್ರದಲ್ಲಿಯೂ ಹೊಸ ವಿಚಾರವೊಂದನ್ನು ತಿಳಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಚಿತ್ರದ ಟೈಟಲ್, ಪೋಸ್ಟರ್ ಸೋಶಿಯಲ್ ಮೀಡಿಯಾ ಅಂಗಳದಲ್ಲಿ ಭಾರೀ ಸದ್ದು ಮಾಡಿತ್ತಿದ್ದು ಚಿತ್ರದಲ್ಲೇನಿರಬಹುದೆಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಅದರಲ್ಲಿಯೂ ಕೊರೋನಾ ಸಂಕಟದ ನಂತರ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರವಿದಾಗಿದ್ದು, ಕನ್ನಡ ಸಿನಿ ಪ್ರೇಮಿಗಳಲ್ಲಿ ಸಹಜವಾಗಿಯೋ ಕುತೂಹಲ ಹೆಚ್ಚಿಸಿದೆ.

Act 1978 ಸಿನಿಮಾ ತಂಡದಿಂದ ವಿಭಿನ್ನ ಪ್ರಚಾರ! 

ಟ್ರೇಲರ್ ರಿಲೀಸ್ ಆದ ಮೇಲಂತೂ ‘ಆ್ಯಕ್ಟ್ 1978’ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.ಚಿತ್ರರಂಗದ ಸ್ಟಾರ್ ನಟರು ಕೂಡ ಆ್ಯಕ್ಟ್ 1978 ಚಿತ್ರದ ಟ್ರೈಲರ್ ಮೆಚ್ಚಿಕೊಂಡಿದ್ದಾರೆ. ಯಜ್ಞಾ ಶೆಟ್ಟಿ (Yagna Shetty) ಮುಖ್ಯ ಭೂಮಿಕೆಯಲ್ಲಿ (Star Cast) ನಟಿಸಿರೋ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಪ್ರಮೋದ್ ಶೆಟ್ಟಿ, ಕೃಷ್ಣ ಹೆಬ್ಬಾಳೆ, ರವಿ ಭಟ್, ಶ್ರುತಿ , ಸಂಚಾರಿವಿಜಯ್ ಸೇರಿದಂತೆ ದೊಡ್ಡ ಕಲಾವಿದರ ದಂಡು ‘ಆ್ಯಕ್ಟ್ 1978’ (Act 1978) ಚಿತ್ರ ತಂಡದಲ್ಲಿದೆ. ಸೆನ್ಸಾರ್ ಅಂಗಳದಲ್ಲಿ ‘ಯು’ ಸರ್ಟಿಫಿಕೇಟ್ ಪಡೆದುಕೊಂಡಿರೋ ಈ ಚಿತ್ರಕ್ಕೆ ದೇವರಾಜ್.ಆರ್ ಬಂಡವಾಳ ಹೂಡಿದ್ದಾರೆ.

ಸತ್ಯ ಹೆಗ್ಡೆ ಕ್ಯಾಮೆರಾ ನಿರ್ದೇಶನ, ರೋನಡ ಬಕ್ಕೇಶ್, ರಾಹುಲ್ ಶಿವಕುಮಾರ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ. ಇದೇ ತಿಂಗಳ 20ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.