2019ರಲ್ಲಿ ಕಿಚ್ಚ ಸುದೀಪ್‌ ಅವರಿಗೆ ರಾಜ್ಯ ಸರ್ಕಾರ ಅತ್ಯುತ್ತಮ ನಟ ಪ್ರಶಸ್ತಿ ಘೋಷಿಸಿತ್ತು, ಆದರೆ ಸುದೀಪ್ ಅದನ್ನು ನಿರಾಕರಿಸಿದರು. ಈ ಕಾರಣದಿಂದಾಗಿ ಡಿ.ಕೆ.ಶಿವಕುಮಾರ್ ಮತ್ತು ಮಂಡ್ಯ ಶಾಸಕ ರವಿ ಗಣಿಗ ಸುದೀಪ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದೀಪ್ ರಾಜ್ಯ ಪ್ರಶಸ್ತಿ ಬೇಡವೆಂದಿದ್ದಕ್ಕೆ ಮತ್ತು ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸದಿದ್ದಕ್ಕೆ ರವಿ ಗಣಿಗ ಟೀಕಿಸಿದ್ದಾರೆ. ಇದು ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ.

ವರದಿ: ಅಮಿತ್ ದೇಸಾಯಿ, ಏಷ್ಯಾನೆಟ್‌ ಸುವರ್ಣನ್ಯೂಸ್‌

2019ನೇ ಸಾಲಿನ ಅತ್ಯುತ್ತಮ ನಟ ರಾಜ್ಯಪ್ರಶಸ್ತಿಯನ್ನ ರಾಜ್ಯಸರ್ಕಾರ ಕಿಚ್ಚ ಸುದೀಪ್‌ಗೆ ಘೋಷಣೆ ಮಾಡಿತ್ತು. ಆದ್ರೆ ಸುದೀಪ್ ಈ ಪ್ರಶಸ್ತಿಯನ್ನ ನಿರಾಕರಿಸಿದ್ರು. ಇದೇ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಸಿನಿಮಾದವರ ಮೇಲೆ ಸಿಟ್ಟಾಗಿದ್ದಾರಾ ಕಿಚ್ಚನ ಕಾರಣಕ್ಕೆ ಚಿತ್ರರಂಗದ ವಿರುದ್ದ ಕಿಚ್ಚು ಹತ್ತಿಕೊಳ್ತಾ? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.

ಸ್ಟೇಟ್ ಅವಾರ್ಡ್ ಬೇಡ ಅಂದಿದ್ದಕ್ಕೆ ಹೊತ್ತಿಕೊಳ್ತಾ ಕಿಚ್ಚು?
ಬೆಂಗಳೂರರು ಫಿಲ್ಮ್ ಫೆಸ್ಟಿವಲ್ ವೇದಿಕೆಯಿಂದ ಶುರುವಾದ ನಟ್ಟು ಬೋಲ್ಟು ವಿವಾದ ದೊಡ್ಡದಾಗುತ್ತಲೇ ಇದೆ. ಮಂಡ್ಯ ಶಾಸಕ ರವಿ ಗಣಿಗ ಡಿಕೆ ಶಿವಕುಮಾರ್‌ ಆಡಿದ ಮಾತುಗಳನ್ನ ಸಮರ್ಥನೆ ಮಾಡಿಕೊಳ್ಳುವುದರ ಜೊತೆಗೆ ಈ ವಿಚಾರದಲ್ಲಿ ಕಿಚ್ಚ ಸುದೀಪ್‌ ಅವರನ್ನೂ ಎಳೆದು ತಂದಿದ್ದಾರೆ. ಅವರಿಗೆ ನಾವ್ ಕೊಡೋ ಅವಾರ್ಡ್ ಬೇಡ. ಮುಂಬೈ ನವರು ಅವಾರ್ಡ್ ಕೊಟ್ರೆ ಖುಷಿ ಖುಷಿಯಾಗಿ ಹೋಗ್ತಾರೆ ಅಂತ ಕಿಚ್ಚನ ಮೇಲೆ ಹರಿಹಾಯ್ದಿದ್ದಾರೆ.

ಇವರಿಗೆ ಬುದ್ದಿ ಕಲಿಸಬೇಕಲ್ವಾ? ರಶ್ಮಿಕಾ ಮಂದಣ್ಣ ವಿರುದ್ಧ ಕಾಂಗ್ರೆಸ್ ಶಾಸಕ ಆಕ್ರೋಶ 

ಅಸಲಿಗೆ 2019ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಿಸಿದ್ದ ಸರ್ಕಾರ, ಪೈಲ್ವಾನ್ ಚಿತ್ರದ ನಟನೆಗೆ ಸುದೀಪ್‌ಗೆ ಬೆಸ್ಟ್ ಆಕ್ಟರ್ ಅವಾರ್ಡ್ ಕೊಟ್ಟಿತ್ತು. ಆದ್ರೆ ಪ್ರಶಸ್ತಿ ಘೋಷಣೆ ಆದ ಬೆನ್ನಲ್ಲೇ ಸುದೀಪ್ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿ ತನಗೆ ಪ್ರಶಸ್ತಿ ಬೇಡ ಅಂತ ಘೋಷಿಸಿದ್ರು.

ಸುದೀಪ್ ನಡೆ ಒಂದು ರೀತಿ ಸರ್ಕಾರಕ್ಕೆ ಅವಮಾನ ಮಾಡಿದಂತೆ ಆಗಿತ್ತು. ಈ ನಡುವೆ ಸಿಸಿಎಲ್ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದಾಗ , ಅದೇನು ಸಿಸಿಎಲ್ ಕಪ್ ಅಲ್ಲವಲ್ಲಾ ಅಂದಿದ್ದ ಸುದೀಪ್ ಮಾತು ರಾಜ್ಯ ಪ್ರಶಸ್ತಿಯ ಗೌರವವನ್ನೇ ಕಡಿಮೆ ಮಾಡಿದಂತೆ ಇತ್ತು.

'ಸಾಹೇಬ್ರು ಹೇಳಿದ್ರಲ್ಲಿ ತಪ್ಪೇನಿಲ್ಲ' ಕಲಾವಿದರಿಗೆ ಡಿಕೆ ಶಿವಕುಮಾರ ವಾರ್ನಿಂಗ್ ಸಮರ್ಥಿಸಿಕೊಂಡ ನಟಿ ರಮ್ಯಾ!

ಫಿಲ್ಮ್ ಫೆಸ್ಟ್ Vs ಸಿಸಿಎಲ್ ಸುದೀಪ್​ ಮೇಲೆ MLA ಗರಂ:
ಇತ್ತ ಫಿಲ್ಮ್ ಫೆಸ್ಟಿವಲ್ ನಡೀತಾ ಇದ್ದ ವೇಳೆಯೇ ಅತ್ತ ಸುದೀಪ್ ತಮ್ಮ ತಂಡ ಕಟ್ಟಿಕೊಂಡು ಸಿಸಿಎಲ್ ಆಡ್ತಾ ಇದ್ರು. ಇದೇ ವಿಚಾರ ಇಟ್ಕೊಂಡು ಎಂಎಲ್​ಎ ರವಿ ಗಣಿಗ ಮತ್ತೊಮ್ಮೆ ಕಿಚ್ಚನ ಮೇಲೆ ಹರಿಹಾಯ್ದಿದ್ದಾರೆ. ಸಿಸಿಎಲ್ ಆಡ್ಲಿಕ್ಕೆ ಸಮಯ ಇದೆ ಫಿಲ್ಮ್ ಫೆಸ್ಟಿವಲ್​ನಲ್ಲಿ ಭಾಗಿವಹಿಸೋದಕ್ಕೆ ಇಲ್ವಾ ಅಂತ ಕಿಡಿಕಾರಿದ್ದಾರೆ. ಇನ್ನೂ ಕಳೆದ ಸಾರಿ ಫೆಸ್ಟಿವಲ್​ಗೆ ಆಹ್ವಾನ ಕೊಟ್ಟಾಗ ಸ್ಪಂದಿಸದ ರಶ್ಮಿಕಾ ಮಂದಣ್ಣ ಬಗ್ಗೆಯೂ ರವಿ ಗಣಿಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅಲ್ಲಿಗೆ ಫಿಲ್ಮ್ ಫೆಸ್ಟಿವಲ್ ನಲ್ಲಿ ಹುಟ್ಟುಕೊಂಡ ಕಿಡಿ ಯಾರ್ಯಾರಿಗೋ ಬಿಸಿ ಮುಟ್ಟಿಸ್ತಾ ಇದೆ. ಈ ವಿಚಾರದಲ್ಲಿ ಕಲಾವಿದರು ಕೂಡ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿತ್ತು. ಇಲ್ಲದೇ ಹೋದ್ರೆ ಹೀಗೆ ಸಿಕ್ಕ ಸಿಕ್ಕವರಿಂದ ಪಾಠ ಕೇಳೋ ಪರಿಸ್ಥಿತಿ ನಮಗ್ಯಾಕೆ ಬರ್ತಾ ಇತ್ತು ಅಂತಿದ್ದಾರೆ ಚಿತ್ರರಂಗದ ಹಿರಿಯರು.