ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ನಟಿ ರಮ್ಯಾ ಸಮರ್ಥಿಸಿಕೊಂಡಿದ್ದಾರೆ. ನೆಲ, ಜಲ, ಭಾಷೆ ವಿಚಾರದಲ್ಲಿ ಕಲಾವಿದರು ಒಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಜಯನಗರ (ಮಾ.2): ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಕನ್ನಡ ಚಿತ್ರರಂಗದ ಕಲಾವಿದರ ಬಗ್ಗೆ ಆಡಿದ ಮಾತು ರಾಜ್ಯ ರಾಜಕೀಯದಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿದೆ. ಕನ್ನಡ ಚಿತ್ರರಂಗದ ಕಲಾವಿದರು, ವಿಪಕ್ಷ ನಾಯಕರು ಸೇರಿದಂತೆ ಹಲವರು ಡಿಕೆ ಶಿವಕುಮಾರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ನಟಿ ರಮ್ಯಾ ಡಿಕೆ ಶಿವಕುಮಾರ ಹೇಳಿಕೆ ಸಮರ್ಥಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಸಾಹೇಬ್ರು(ಡಿಕೆಶಿ) ಹೇಳಿದ್ರಲ್ಲಿ ತಪ್ಪೇನಿಲ್ಲ:

ಕನ್ನಡ ಚಿತ್ರರಂಗದ ಕಲಾವಿದರಿಗೆ ಡಿಕೆ ಶಿವಕುಮಾರ ವಾರ್ನ್ ಮಾಡಿರುವ ವಿಚಾರ ಸಮರ್ಥಿಸಿಕೊಂಡ ನಟಿ ರಮ್ಯ, ನೆಲ, ಜಲ, ಭಾಷೆ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು. ಸಾಹೇಬ್ರು ಹೇಳೋದ್ರಲ್ಲಿ ತಪ್ಪೇನಿಲ್ಲ ಎಂದರು.

ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮೆ ಎಚ್ಚರಿಕೆ! ಬಿಜೆಪಿಗೆ ಸವಾಲು, ಡಿಕೆ ಶಿವಕುಮಾರ ಹೇಳಿದ್ದೇನು?

ನೀರಿನ ವಿಚಾರ ಬಂದಾಗ ಕಲಾವಿದರೆಲ್ಲರೂ ಒಂದಾಗಿ ಬೆಂಬಲಿಸಬೇಕು. ಡಿಸಿಎಂ ಡಿಕೆ ಶಿವಕುಮಾರ ಸಾಹೇಬ್ರು ಅದನ್ನೇ ಹೇಳಿದ್ದಾರೆ. ಅವರ ಹೇಳಿಕೆಗೆ ನನ್ನ ಸಹಮತವಿದೆ ಎಂದರು. ಇದೇ ವೇಳೆ ಮುಂದಿನ ಚಲನಚಿತ್ರದಲ್ಲಿ ನಟಿಸುತ್ತೀರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ನಟಿ ರಮ್ಯಾ, ಸದ್ಯಕ್ಕೆ ಯಾವುದೇ ಹೊಸ ಚಲನಚಿತ್ರದಲ್ಲಿ ನಟಿಸುವ ಬಗ್ಗೆ ಯೋಜನೆಗಳಿಲ್ಲ ಎಂದರು.

ಇದನ್ನೂ ಓದಿ: ಕನ್ನಡಚಿತ್ರರಂಗ, ಕಲಾವಿದರು ಡಿಕೆಶಿ ಜೀತದಾಳ? ಪಕ್ಷದ ಬಾವುಟ ಹಿಡಿದು ಮೇಕೆದಾಟು ಪಾದಯಾತ್ರೆ ಮಾಡಿದ್ರೆ ಯಾಕೆ ಬರಬೇಕು?

ಹಂಪಿ ಉತ್ಸವ ನೋಡಿ ಖುಷಿಯಾಗಿದೆ: 

ಬಹಳ ದಿನದ ಬಳಿಕ ಹಂಪಿಗೆ ಬಂದಿದ್ದೇನೆ ಖುಷಿಯಾಗಿದೆ. ಹಂಪಿ ವೈಭವ ನೋಡಿ ಸಂತೋಷವಾಗಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ವಿಜಯನಗರ ಜಿಲ್ಲಾಡಳಿತ ಆಹ್ವಾನ ನೀಡಿತ್ತು. ಹಾಗಾಗಿ ಬಂದಿದ್ದೇನೆ. ಕೇವಲ ಕಾವೇರಿ ಮಾತ್ರವಲ್ಲದೇ ಕಲಾವಿದರು ಉತ್ತರ ಕರ್ನಾಟಕದ ನದಿಗಳು, ಜಲಾಶಯಗಳ ಬಗ್ಗೆಯೂ ಮಾತನಾಡಬೇಕು ಎಂದರು. 

ನೀನೆ ನೀನೆ ನನಗೆಲ್ಲ ನೀನೆ, ಅಪ್ಪು ನೆನೆದು ಹಾಡಿದ ರಮ್ಯಾ:

ಹಂಪಿ ಎಂ.ಪಿ ಪ್ರಕಾಶ ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾದ ರಮ್ಯಾ, ಫುಲ್ ಜೋಷ್ ನಿಂದ ವೇದಿಕೆ ಮೇಲೆ ಬರುತ್ತಿದ್ದಂತೆ ನಟಿ ರಮ್ಯಾ ನೆನೆದು 'ನೀನೇ ನೀನೆ ನನಗೆಲ್ಲಾ ನೀನೆ..' ಎಂದು ಹಾಡು ಹಾಡಿಸಿ ರಂಜನಿಸಿದರು. ಇದೇ ವೇಳೆ ಕಾರ್ಯಕ್ರಮ ನೋಡಲು ಬಂದಿದ್ದ ಅಂಗವಿಕಲರನ್ನು ಕಂಡು, 'ನನ್ನ ಜೊತೆ ಫೋಟೋ ಬೇಕಾ?' ಬನ್ನಿ ಎಂದು ಕರೆದರು. ವಿಕಲಚೇತನ ರಾಜು ಎಂಬ ಪೆಂಟಿಂಗ್ ಟೀಚರ್ ಗೆ ತಮ್ಮ ಫೋನ್ ನಲ್ಲಿ ಸೆಲ್ಪೀ ಕೊಟ್ಟರು. ಈ ವೇಳೆ ರಾಜು ಭಾವುಕರಾದ ಘಟನೆ ನಡೆಯಿತು. ಮೈಕ್ ಹಿಡಿದು ರಮ್ಯಾ ಹಾಡು ಹಾಡಿಸಿದರು. ಬಳಿಕ ಕನ್ನಡದ ಕಲಾವಿದರನ್ನ ಹಂಪಿ ಉತ್ಸವಕ್ಕೆ ಕರೆದ ಸಚಿವರಿಗೂ ಹಂಪಿ ಆಡಳಿತ ಮಂಡಳಿಗೂ ಧನ್ಯವಾದ ತಿಳಿಸಿ ಮುಂದಿನ ವರ್ಷ ಸಿಗೋಣ ಎಂದ ರಮ್ಯಾ.