ತಂಗಾಳಿ ತಡ್ಕೊಂಡು, ಬೆಳದಿಂಗಳಲ್ ಮಲಕೊಂಡು, ಉತ್ತೋ ಬಿತ್ತೋ ಆಡೋಣ..! ನಾದ ಬ್ರಹ್ಮ ಹಂಸಲೇಖ ಬರೆದ ಈ ಹಾಡು ಕೇಳಿದರೆ ಸುಖದಿಂದ ನರಳುವಂತೆ ಮಾಡುತ್ತೆ. ಅಷ್ಟಕ್ಕೂ ಈ ಹಾಡು ನಿಮನ್ನು ಯಾವ ಮೂಡ್‌ಗೆ ಕರೆದೊಯ್ತುತ್ತೆ, ಒಂದು ಸಲ ಕೇಳಿ ನೋಡಿ.
ಕಚ್ಚಿ ಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ.. ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ..ಹಂಸಲೇಖ ರಸಿಕತೆಗೆ, ಶೃಂಗಾರಕ್ಕೆ ಕನ್ನಡಿ ಹಿಡಿದ ಮತ್ತೊಂದು ಹಾಡು.. ದೇವರಾಜ್- ನಿರೋಷಾ ಅಭಿನಯದ ‘ಲಾಕಪ್ಡೆತ್’ ಫಿಲ್ಮ್ ಹಾಡು ಕೇಳದವರೇ ಇಲ್ಲ. ಆದ್ರೆ, ಇದೊಂದು ಹಾಡು ಈಗ ಮತ್ತೆ ರಸಿಕರ ಹೃದಯಕ್ಕೆ ಕಚಗುಳಿ ಇಡ್ತಿದೆ. ಇದರ ಸಾಹಿತ್ಯ ಹಲವರ ನಿದ್ದೆಗೆಡಿಸಿದೆ. ಎಂದಿನಂತೆ ಹಂಸಲೇಖ ಪದ ಒಡೆದು, ಕಡೆದು ಬರೆದ ಹಾಡು ಪಡ್ಡೆ ಹುಡುಗರಿಗೆ ಥ್ರಿಲ್ ಕೊಟ್ಟಿದೆ..
ಕಚ್ಚಿಕೊಂಡು, ಮುಚ್ಚಿಕೊಂಡು ಓಡಾಡೋಣ ಬಾರೋ ಎಂದು ಮಾದಕವಾಗಿ ಕರೆಯುವ ನಾಯಕಿ, ಹಾಡಿನಲ್ಲೇ ರೊಮ್ಯಾನ್ಸ್ ಮಾಡುವುದನ್ನು ಹೇಳಿಕೊಡುವ ರೀತಿ ಅಬ್ಬಬ್ಬಾ..!
ಕಿಚ್ಚೆಬ್ಬಿಸಿದ ನಮ್ಮೂರ ಹಮ್ಮೀರ ಚಿತ್ರದ ಪೋಲಿ ಹಾಡು, ಅಶ್ಲೀಲದ ಸೋಂಕಿಲ್ಲ, ಶೃಂಗಾರಕ್ಕೆ ಕೊರತೆ ಇಲ್ಲ!
ಸಿಹಿಯೆಲ್ಲಾ ಇಟ್ಟುಕೊಂಡು..
ಹುಳಿಯೆಲ್ಲ ಬಿಟ್ಟುಕೊಂಡು...
ಮಾವಿನ ತೋಪಿನ ತುಂಬಾ ಉರುಳು ಉರುಳಾಡೋಣ..
ಎದುರು- ಬದುರು ಗಲ್ಲ, ನಡುವೆ ಗಾಳಿ ಇಲ್ಲ..
ಆಲೆಮನೆಯ ಬೆಲ್ಲ, ತುಟಿಯ ಮೇಲೆ ನಲ್ಲ..
ಘಮ ಘಮ ಗಂಧ ಚಿಲಿಪಿಲಿ ರಾಗ ಕಚ್ಚಿಕೊಂಡಿರುವಾಗ..
ಥಕ ಥಕ ಆಸೆ, ಮಿಕ ಮಿಕ ಕಣ್ಣು ಬಿಚ್ಚಿಕೊಂಡಿರುವಾಗ...
ಸಿಹಿ ಇಟ್ಕೊಂಡಿದ್ದೀನಿ, ಹುಳಿಯನ್ನೂ ಬಿಟ್ಕೊಂಡಿದ್ದೀನಿ, ಮಾವಿನ ತೋಪಿನಲ್ಲಿ ಉರುಳಾಡೋಣ ಎಂದು ಕಣ್ಣಲ್ಲೇ ಕರೆಯುವ ನಾಯಕಿ, ಅವಳನ್ನೇ ಆಸೆಗಣ್ಣಿನಿಂದ ನೋಡುವ ಹೀರೋ.. ಹಾಡು ಕೇಳುತ್ತಿರುವವರ ಪಾಡೋ ಹೇಳತೀರದು. ಹಾಡು ಕೇಳುತ್ತಲೇ ಮೈಯಲ್ಲಿ ಕಿಚ್ಚು ಹಚ್ಚಿ ಬಿಡುತ್ತಾರೆ ಹಂಸಲೇಖ.
ತಂಗಾಳಿ ತಡ್ಕೊಂಡು..
ಬೆಳದಿಂಗಳಲ್ ಮಲಕೊಂಡು...
ಅರೆ ಬಟ್ಟೆ ಉಟ್ಟು, ಉತ್ತೋ ಬಿತ್ತೋ ಆಡೋಣ...
ನಾನು ಸೋತ್ರೆ ನೀನು, ನೀನು ಸೋತ್ರೆ ನಾನು.. .
ಆಟ ನಡೆಯಬೇಕು ಯಾರು ಗೆದ್ದರೇನು...
ಮನಸಿಗೆ ಮನಸು ಮಾತಿಗೆ ಮಾತು ನೆಚ್ಚಿಕೊಂಡಿರುವಾಗ ..
ಉಸಿರಿಗೆ ಉಸಿರು ಹೆಸರಿಗೆ ಹೆಸರು ಹಚ್ಚಿಕೊಂಡಿರುವಾಗ..
ಸಿಹಿ ಇದೆ, ಹುಳಿ ಇದೆ, ಮಾವಿನ ತೋಪಿಗೆ ಬಾ ಎಂದು ಆಸೆ ಹುಟ್ಟಿಸಿದ ನಾಯಕಿ, ಮುಂದಿನ ಚರಣದಲ್ಲಿ ತಂಗಾಳಿಯಲ್ಲಿ ತಡ್ಕೊಂಡು, ಬೆಳದಿಂಗಳಲ್ಲಿ ಮಲ್ಕೊಂಡು, ಅರೆಬಟ್ಟೆ ತೊಟ್ಟು, ಉತ್ತೋ, ಬಿತ್ತೋ ಆಡೋಣ.. ಅಂತ ಹಾಡುತ್ತಾ, ಹಾಸಿಗೆಗೆ ಕರೆಯುತ್ತಾರೆ. ನಾನು ಸೋತರೆ ನೀನು, ನೀನು ಸೋತರೆ ನಾನು, ಯಾರೇ ಗೆದ್ದರೂ ಆಟ ನಡೆಯಬೇಕು ಅನ್ನೋ ಮೂಲಕ, ಸುಖದ ಉತ್ತುಂಗಕ್ಕೆ ಕರೆದೊಯ್ಯುತ್ತಾರೆ. ಹಾಡು ಕೇಳುತ್ತಿದ್ದವರನ್ನು ರೊಚ್ಚಿಗೇಳಿಸುತ್ತಾರೆ ಹಂಸಲೇಖ..
ಮನಸಿಗೆ ಮನಸು ಮಾತಿಗೆ ಮಾತು ನೆಚ್ಚಿಕೊಂಡಿರುವಾಗ.. ಉಸಿರಿಗೆ ಉಸಿರು ಹೆಸರಿಗೆ ಹೆಸರು ಹಚ್ಚಿಕೊಂಡಿರುವಾಗ.. ಸೋಲು- ಗೆಲುವು ಇಲ್ಲ ಅನ್ನೋದೇ ಪ್ರೇಮ ಕಾಮದ ಚರಮಗೀತೆ ಅನ್ನೋ ಸಂದೇಶ ಹೇಳಿಬಿಡುತ್ತಾರೆ.
ಈ ಹಾಡಿನಲ್ಲಿ ಡಬ್ಬಲ್ ಮೀನಿಂಗ್ ಇದೆ ಅಂದ್ಕೊಂಡ್ರೆ, ಹೌದು ಡಬ್ಬಲ್ ಮೀನಿಂಗ್ ಇದೆ. ಇಬ್ಬರು ಪ್ರೇಮಿಗಳು ಸುಖಕ್ಕೆ ಹಾತೊರೆಯುತ್ತಿರುವ ಅಪ್ಪಟ ರೊಮ್ಯಾಂಟಿಕ್ ಗೀತೆ ಅಂದುಕೊಂಡ್ರೆ, ಶೃಂಗಾರ ಗೀತೆ. ಪ್ರೇಮಿಗಳ ನಡುವಿನ ಹಸಿಹಸಿ ಮಾತು ಹಾಡಾಗಿ ಹರಿಯುತ್ತದೆ. ಇಂಥ ಹಾಡುಗಳನ್ನು ಕೇಳಿಯೇ ಸುಖದಿಂದ ನರಳುವಂತೆ ಮಾಡಿದ ಪ್ರತಿಭಾವಂತ ಹಂಸಲೇಖ.. ಇದನ್ನು ಓದಿದ ಮೇಲೆ, ಕಿವಿಗೆ ಇಯರ್ ಫೋನ್ ಹಾಕ್ಕೊಂಡು ಈ ಹಾಡು ಕೇಳಿ, ಸುಖದಿಂದ ನೀವು ನರಳದಿದ್ರೆ ಕೇಳಿ..!!
ತಂಗಾಳಿ ತಡ್ಕೊಂಡು, ಬೆಳದಿಂಗಳಲ್ ಮಲಕೊಂಡು, ಹಾಡು ಕೇಳಿಯೇ ಸುಖದಿಂದ ನರಳುವಂತೆ ಮಾಡಿದ ನಾದಬ್ರಹ್ಮ
