ಇನ್‌ಸ್ಟಾಗ್ರಾಮ್‌ನಲ್ಲಿ ಹಂಸಲೇಖ ಅವರ ಹಳೆಯ ಹಾಡೊಂದು ವೈರಲ್ ಆಗಿದ್ದು, ಅದರ ಸಾಹಿತ್ಯದ ಬಗ್ಗೆ ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. 'ನಮ್ಮೂರ ಹಮ್ಮೀರ' ಚಿತ್ರದ ಹಾಡಿನ ಸಾಹಿತ್ಯ ಪ್ರೇಮಿಗಳ ಮನಸ್ಸನ್ನು ಗೆದ್ದಿದೆ.
ಇತ್ತೀಚಿಗೆ ಇನ್‌ಸ್ಟಾ ಗ್ರಾಮ್‌ನಲ್ಲಿ ಒಂದಷ್ಟು ಹಾಡುಗಳು ತುಂಬಾ ವೈರಲ್ ಆಗ್ತಿವೆ. ಅದರಲ್ಲೂ ಆ ಹಾಡಿನ ಸಾಹಿತ್ಯದ ಬಗ್ಗೆ ಕೆಲವರು ಆಶ್ಚರ್ಯಪಟ್ಟರೆ, ಕೆಲವರಂತೂ, ಆ ಹಾಡಿನ ಅರ್ಥ ಈವರೆಗೂ ಅರ್ಥವೇ ಆಗಿರಲಿಲ್ಲವೆಂದೂ ಹುಬ್ಬೇರಿಸುತ್ತಿದ್ದಾರೆ. ಅಂಥ ಹಾಡುಗಳ ಸರದಾರ ಮತ್ಯಾರು ಅಲ್ಲ, ನಮ್ಮ ನಾದಬ್ರಹ್ಮ ಹಂಸಲೇಖ.
ಎಷ್ಟೋ ವರ್ಷ ಗಳ ಹಿಂದೆ ಹಂಸಲೇಖ ಬರೆದ ಹಾಡು, ಅದರ ಸಾಹಿತ್ಯ ಇಂದಿನವರನ್ನು, ಹಿಂದಿನವರನ್ನೂ ಅಚ್ಚರಿಗೆ ದೂಡುತ್ತಿದೆ. ಅದರಲ್ಲಿ ಒಂದು ಹಾಡಂತೂ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದರ ಸಾಹಿತ್ಯ ಕೇಳಿ ಹಂಸಲೇಖ ಅಭಿಮಾನಿಗಳೇ ಬೆಚ್ಚಿಬಿದ್ದಿದ್ದಾರೆ. ಅಪ್ಪಟ್ಟ ಪ್ರೇಮ ಗೀತೆ ಅಂದುಕೊಂಡವರು, ಹಾಡಿನ ಸಾಲು ಕೇಳಿ ರೋಮಾಂಚಗೊಳ್ಳುತ್ತಿದ್ದಾರೆ.
ಅಂಬರೀಷ್ ಅಭಿನಯದ ನಮ್ಮೂರ ಹಮ್ಮೀರ ಸಿನಿಮಾದ ಈ ಹಾಡು ಕೇಳಿದವರಿಲ್ಲ. 90 ದಶಕದಲ್ಲಿ ಹಿಟ್ ಕೊಟ್ಟ ಅಂಬಿ ಚಿತ್ರ ನಮ್ಮೂರ ಹಮ್ಮೀರ. ಅದರಲ್ಲಿನ ಕೋಗಿಲೆ ಓ ಕೋಗಿಲೆ ಯಾವೂರ ಸುದ್ದಿಯ ಹೊತ್ತು ತಂದೆ.... ಹಾಡು ಬರೀ ಪ್ರೇಮ ಗೀತೆ. ಪಕ್ಕದ ಊರಿನ ಪ್ರೇಮಿ,ತನ್ನ ಗೆಳತಿಯ ಊರಿನ ಸುದ್ದಿ ಕೇಳುವ ರಮ್ಯ ಗೀತೆ. ಆ ಹಾಡಿನ ಸಾಹಿತ್ಯದ ಸ್ಯಾಂಪಲ್ ಇಲ್ಲಿದೆ.
ಈ ಹಾಡಿನ ಒಳಗುಟ್ಟು ಸಿನಿ ಪ್ರಿಯರಿಗೆ ಸುಲಭಕ್ಕೆ ಅರ್ಥವಾಗದು. ಏಕೆಂದರೆ, ಅದು ಹಂಸಲೇಖ ಪ್ರೇಮಗೀತೆ. ಎಲ್ಲೂ ಅಶ್ಲೀಲದ ಸೋಂಕಿಲ್ಲ. ಶೃಂಗಾರಕ್ಕೆ ಕೊರತೆ ಇಲ್ಲ. ಹಾಡಿನ ಸಾಹಿತ್ಯ ಅರ್ಥವಾದರೆ ರೋಮಾಂಚನ. ಇಲ್ಲದಿದ್ದರೆ ಬರೀ ಪದ ಚಿಂತನ.
ನಾಯಕಿಯ ದೇಹವನ್ನೇ ಹಾಡಾಗಿಸಿದ ಅದ್ಭುತ ವರ್ಣನೆ. ಕೈಯಲ್ಲಿ ಕೈ ಇಟ್ಟರೆ ಮೈಯಲ್ಲಿ ರೋಮಾಂಚನ, ಸೊಂಟದಲ್ಲಿ ತೋಳಿಟ್ಟರೆ ಕಾಲಲ್ಲಿ ರಂಗೋಲಿ.. ಎನ್ನುತ್ತಾ ಕೇಳುವವರನ್ನು ಬೆಚ್ಚಗಾಗಿಸುತ್ತಾರೆ.
ಅಬ್ಬಾ.. ಎಂಥಾ ರೂಪಕ? ಥಟ್ಟನೆ ಕೇಳಿದರೆ ಬರೀ ಹಾಡು, ಸಾಹಿತ್ಯ ಕೇಳಿದವರಿಗೆ ಮೈಯಲ್ಲಿ ರೋಮಾಂಚನ. ನಿನ್ನಲ್ಲಿ ಏನೇನಿದೆ ಅಂತ ಪೋಲಿತನದಿಂದ ಕೇಳುವ ನಾಯಕನಿಗೆ, ಎಲ್ಲೆಲ್ಲಿ ಏನೇನಿದೆ ಅಂತ ನಾಚಿಕೆಯಿಂದಲೇ ಹೇಳುವ ನಾಯಕಿ. ಹೀಗೆ ಹಾಡು ಕಟ್ಟುತ್ತಾ, ಕಟ್ಟುತ್ತಾ ಹಂಸಲೇಖ, ಪದಗಳ ಲಾಲಿತ್ಯದಿಂದಲೇ ಹಿಡಿದಿಟ್ಟ ಪರಿ ಬೆರಗುಗೊಳಿಸುತ್ತದೆ.
ಹಂಸಲೇಖಾ ಮನೆಯಲ್ಲಿ ಯಾರ ಫೋಟೋ ಇದೆ? ಅವ್ರ ಲೈಫಲ್ಲಿ ಮುಖ್ಯವಾದ ಮೂರು 'ರತ್ನ'ಗಳು ಇವ್ರಂತೆ!
ಯಾವುದನ್ನೂ ಹಂಸಲೇಖ ನೇರವಾಗಿ ಹೇಳಿದವರಲ್ಲ. ಒಂಚೂರು ಪೋಲಿತನವನ್ನೂ ಸಾಹಿತ್ಯವಾಗಿಸಬಲ್ಲ ರಸಿಕಕವಿ. ಇದು ಅಶ್ಲೀಲ ಅನ್ನಿಸುವುದೇ ಇಲ್ಲ. ಏಕೆಂದರೆ, ಹಂಸಲೇಖ ಹಾಡಿನಲ್ಲಿ ಕೇಳುವುದು ಬರೀ ಶೃಂಗಾರ...ಅಶ್ಲೀಲತೆಗೂ ಶೃಂಗಾರ ರೂಪ ಕೊಟ್ಟ ಏಕೈಕ ಗೀತರಚನೆಕಾರ ಹಂಸಲೇಖ..
ನಾದಬ್ರಹ್ಮ ಹಂಸಲೇಖರ ಮಕ್ಕಳು ಏನ್ಮಾಡ್ತಿದ್ದಾರೆ? ಪ್ರೀತಿಯ ಮಗಳ ಸಾಧನೆ ಇದು
