Asianet Suvarna News Asianet Suvarna News

ವಿಷ್ಣು ಸಮಾಧಿ ಉಳಿಸಿಕೊಳ್ಳಲು ಒಂದಾದ ಸ್ಯಾಂಡಲ್ ವುಡ್; ನಟ ಕಿಚ್ಚ ಸುದೀಪ್ ಬೆಂಬಲ

ನಟ ವಿಷ್ಣುವರ್ಧನ್ ಅಂತ್ಯ ಸಂಸ್ಕಾರ ಮಾಡಿದ ಜಾಗವು ವಿವಾದಕ್ಕೆ ಒಳಗಾಗಿದೆ. ಕೋರ್ಟು, ಕಾನೂನು ಹೋರಾಟ ಅದೂ ಇದೂ ಬೆಳವಣಿಗೆ ಮಧ್ಯೆ ದಿವಂಗತ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಹತ್ತುಹಲವು ವಿಘ್ನಗಳು ತಲೆದೋರಿವೆ. 

Kichcha Sudeep supports dr Vishnuvardhan memorial near Abhiman Studio at bengaluru srb
Author
First Published Dec 17, 2023, 1:07 PM IST

ವಿಷ್ಣು ಸಂಸ್ಕಾರ ಮಾಡಿದ ಜಾಗವನ್ನ ಪುಣ್ಯಭೂಮಿ ಮಾಡಬೇಕೆಂದು ವಿಷ್ಣು ಅಭಿಮಾನಿಗಳು ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಸಂಬಂಧ ಸ್ಯಾಂಡಲ್‌ವುಡ್ ಸ್ಟಾರ್ ನಟ, ವಿಷ್ಣುವರ್ಧನ್ ಅಭಿಮಾನಿ ಕಿಚ್ಚ ಸುದೀಪ್ ರಿಂದ ವಿಷ್ಣು ಸಮಾಧಿ ಉಳಿಸಿಕೊಳ್ಳಲು ಟ್ವೀಟ್ ಮಾಡಿದ್ದಾರೆ. ಜತೆಗೆ, ವಿಷ್ಣು ಸಮಾಧಿ ಉಳಿಸಿಕೊಳ್ಳಲು ಇಡೀ ಸ್ಯಾಂಡಲ್ ವುಡ್ ಒಂದಾಗಿದೆ. ನಟ ಡಾಲಿ ಧನಂಜಯ್ ಸೇರಿದಂತೆ ಹಲವು ಹಿರಿಕಿರಿಯ ನಟನಟಿಯರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಇದೀಗ, ನಟ ಇದಕ್ಕೆ ನಟ ಕಿಚ್ಚು ಸುದೀಪ್ ಕೂಡ ಬೆಂಬಲ ಕೊಟ್ಟು ಟ್ವೀಟ್   ಮಾಡಿದ್ದಾರೆ.

'ಡಾ.ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು -ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ' ಎಂದು ನಟ ಸುದೀಪ್ ಟ್ವೀಟ್ ಮಾಡಿದ್ದಾರೆ.

ಸದ್ಯ ನಟ ವಿಷ್ಣುವರ್ಧನ್ ಸ್ಮಾರಕ ಅವರ ಹುಟ್ಟೂರಾದ ಮೈಸೂರಿನಲ್ಲಿ ಇದೆ. ಅದು ಒಳ್ಳೆಯದೇ. ಆದರೆ ವಿಷ್ಣುವರ್ಧನ್ ಅವರು ಅಂತ್ಯ ಸಂಸ್ಕಾರಗೊಂಡ ಜಾಗ ಪುಣ್ಯಭೂಮಿ ಆಗಬೇಕು ಎಂದು ಸುದೀಪ್, ಧನಂಜಯ್ ಸೇರಿದಂತೆ ಹಲವರು ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅಂತ್ಯಕ್ರಿಯೆ ಮಾಡಲಾಗಿತ್ತು. 30 ಡಿಸೆಂಬರ್ 2009ರಲ್ಲಿ ನಟ ವಿಷ್ಣುವರ್ಧನ್ ಮೈಸೂರಿನಲ್ಲಿ ನಿಧನರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಂದು ಅಭಿಮಾನಿ ಸ್ಟೂಡಿಯೋ ಪಕ್ಕ ಅವರ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಅಲ್ಲಿಯೇ ಸ್ಮಾರಕ ನಿರ್ಮಾಣಕ್ಕೆ ನಾಂದಿ ಹಾಡಲಾಗಿತ್ತು. 

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕಾಟೇರ' ಟ್ರೈಲರ್ ಹುಬ್ಬಳ್ಳಿಯಲ್ಲಿ ಬಿಡುಗಡೆ

ಆದರೆ, ನಟ ವಿಷ್ಣುವರ್ಧನ್ ಅಂತ್ಯ ಸಂಸ್ಕಾರ ಮಾಡಿದ ಜಾಗವು ವಿವಾದಕ್ಕೆ ಒಳಗಾಗಿದೆ. ಕೋರ್ಟು, ಕಾನೂನು ಹೋರಾಟ ಅದೂ ಇದೂ ಬೆಳವಣಿಗೆ ಮಧ್ಯೆ ದಿವಂಗತ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಹತ್ತುಹಲವು ವಿಘ್ನಗಳು ತಲೆದೋರಿವೆ. ಬರೋಬ್ಬರಿ 14 ವರ್ಷಗಳ ನಂತರ ಕೂಡ ವಿಷ್ಣುವರ್ಧನ್ ಸ್ಮಾರಕ ಅವರ ಅಂತ್ಯಕ್ರಿಯೆ ನಡೆದಿರುವ ಜಾಗದಲ್ಲಿ ಇನ್ನೂ ಆಗಿಲ್ಲ ಎಂಬುದೇ ತುಂಬಾ ಅಚ್ಚರಿಗೆ ಕಾರಣವಾಗಿರುವ ಅಂಶ. ಇಂಥ ಅಡೆತಡೆಯ ಹಿಂದೆ ಯಾರಿದ್ದಾರೆ, ಯಾವ ಶಕ್ತಿ ವಿಷ್ಣುವರ್ಧನ್ ಸ್ಮಾರಕ ತಡೆಗೋಡೆಯಾಗಿ ಕೆಲಸ ಮಾಡುತ್ತಿದೆ ಎಂಬುದು ವಿಷ್ಣು ಅಭಿಮಾನಿಗಳ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರ ದೊರಕುತ್ತಾ ಎಂಬುದು ಯಕ್ಷಪ್ರಶ್ನೆ ಎನ್ನಬಹುದು. 

ರಾಮಮಂದಿರ ಉದ್ಘಾಟನೆಗೆ 'ಕಾಂತಾರ' ರಿಷಬ್ ಶೆಟ್ಟಿಗೆ ಆಹ್ವಾನ

ಸದ್ಯ ಮತ್ತೆ ನಟ ವಿಷ್ಣುವರ್ಧನ್ ಸ್ಮಾರಕದ ಬಗ್ಗೆ ಧ್ವನಿ ಎದ್ದಿದೆ. ವಿಷ್ಣು ಸಂಸ್ಕಾರ ಮಾಡಿದ ಜಾಗವನ್ನ ಪುಣ್ಯಭೂಮಿ ಮಾಡಬೇಕೆಂದು ವಿಷ್ಣು ಅಭಿಮಾನಿಗಳು ಇಂದು, 17 ಡಿಸೆಂಬರ್ 2023 ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಅದಕ್ಕೆ ಬಹುತೇಕ ಸ್ಯಾಂಡಲ್‌ವುಡ್ ತಾರೆಯರು ಬೆಂಬಲ ಸೂಚಿಸುತ್ತಿದ್ದಾರೆ. ಇನ್ನಾದರೂ ಸ್ಮಾರಕ ನಿರ್ಮಾಣ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ಅಗಲಿದ ಕಲಾವಿದರೊಬ್ಬರಿಗೆ ಗೌರವ ಕೊಡುವ ವಿಷಯದಲ್ಲೂ ಇಷ್ಟೊಂದು ತಡ ಯಾಕೆ ಆಗುತ್ತಿದೆ ಎಂಬ ಪ್ರಶ್ನೆ ವಿಷ್ಣುವರ್ಧನ್ ಅಭಿಮಾನಿಗಳನ್ನು ಕಾಡುತ್ತಲೇ ಇದೆ ಎನ್ನಬಹುದು. 

Follow Us:
Download App:
  • android
  • ios