ರಾಮಮಂದಿರ ಉದ್ಘಾಟನೆಗೆ 'ಕಾಂತಾರ' ರಿಷಬ್ ಶೆಟ್ಟಿಗೆ ಆಹ್ವಾನ
ಜನವರಿ 22, 2024ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಆಗುತ್ತಿದ್ದು, ಗ್ರಾಮಗ್ರಾಮಗಳಲ್ಲಿ ಪೂಜೆ ಪುನಸ್ಕಾರಗಳು ಆಯೋಜನೆ ಆಗಿವೆ.
ಉತ್ತರ ಪ್ರದೇಶದಲ್ಲಿ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಮುಂಬರುವ ಜನವರಿಯಲ್ಲಿ ಅದ್ದೂರಿಯಾಗಿ ಜರುಗಲಿದೆ. ಈಗಾಗಲೇ ಜಗತ್ತಿನ 50 ದೇಶಗಳಿಗೆ ಈ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ. ರಾಮ್ ಲೀಲಾ ವಿಗ್ರಹದ ಪ್ರತಿಷ್ಠಾಪನೆ ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯಲಿದೆ. ಈ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಆಹ್ವಾನ ನೀಡಲಾಗಿದೆಯಂತೆ. ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ, ರಿಷಬ್ ಶೆಟ್ಟಿ ಬಿಟ್ಟರೆ ಬೇರೆ ಯಾವುದೇ ತಾರೆಗೆ ಆಹ್ವಾನ ಬಂದಿರುವ ಸುದ್ದಿ ಬಹಿರಂಗ ಆಗಿಲ್ಲ.
ಸೂಪರ್ ಸ್ಟಾರ್ ಮಗನಾಗಿದ್ದರೂ ದೇಶದ ದೊಡ್ಡ ಫ್ಲಾಪ್ ನಟ, 12 ವರ್ಷಗಳಲ್ಲಿ 19 ಸೋಲು; ಮತ್ತೆ ಕಂಬ್ಯಾಕ್!
ರಜನಿಕಾಂತ್, ಮೋಹನ್ ಲಾಲ್, ಚಿರಂಜೀವಿ, ಅಮಿತಾಭ್ ಬಚ್ಚನ್ ಸೇರಿದಂತೆ ಹಲವು ಲೆಜೆಂಡ್ ನಟರಿಗೆ ಈಗಾಗಲೇ ಆಹ್ವಾನ ಹೋಗಿದೆಯಂತೆ. ಜತೆಗೆ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಶೃಂಗೇರಿಯ ವಿಭುಶೇಖರ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ, ಸಿದ್ಧಗಂಗಾ, ಪುತ್ತೂರು, ಅದಮಾರು, ಶ್ರವಣ ಬೆಳಗೋಳ, ಬೇಲಿಮಠ, ರಂಭಾ ಪುರಿ ಹೀಗೆ ಹಲವು ಮಠಗಳ ಸ್ವಾಮೀಜಿಗಳಿಗೆ ಆಹ್ವಾನ ಹೋಗಿದೆಯಂತೆ. ಆಧ್ಯಾತ್ಮಿಕ ಗುರುಗಳಾದ ಸದ್ಗುರು ಜಗ್ಗಿ ವಾಸುದೇವ್, ರವಿಶಂಕರ್ ಗುರೂಜಿ ಮೊದಲಾದವರಿಗೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಸೌಂದರ್ಯದ ಬಗ್ಗೆ 'ಬ್ಯೂಟಿ ಕ್ವೀನ್' ಪಾಠ; ಕತ್ರಿನಾ ಕೈಫ್ ಮಾತು ಕೇಳಿದರೆ ಶಾಕ್ ಆಗುವುದು ಗ್ಯಾರಂಟಿ!
ಜನವರಿ 22, 2024ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಆಗುತ್ತಿದ್ದು, ಗ್ರಾಮಗ್ರಾಮಗಳಲ್ಲಿ ಪೂಜೆ ಪುನಸ್ಕಾರಗಳು ಆಯೋಜನೆ ಆಗಿವೆ. ಇದರ ಅಂಗವಾಗಿ ಬನಶಂಕರಿ ಮೊದಲ ಹಂತದಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಘಂಟಾದಾನ ಸಮರ್ಪಣೆ ಮಾಡಲಾಗಿದೆ. ಇನ್ನು ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಪ್ರಯುಕ್ತ, ಉತ್ತರಪ್ರದೇಶದ ಪ್ರತಿ ಹಳ್ಳಿಗಳಲ್ಲಿ ಪೂಜೆ ನಡೆಯಲಿದ್ದು, ಅಯೋಧ್ಯೆ ರಾಮಮಂದಿರಕ್ಕೆ ಬಹಳಷ್ಟು ಕಾಣಿಕೆ ನೀಡಲಾಗುವುದು ಎನ್ನಲಾಗಿದೆ. ದೇಶ ಹಾಗೂ ವಿದೇಶಗಳಿಂದ ಅಯೋಧ್ಯೆಯಲ್ಲಿ ರಾಮ್ ಲೀಲಾ ಪ್ರಾಣ ಪ್ರತಿಷ್ಠೆ ಸಂಬಂಧ, ಹಲವು ಜನರು ದೇಣಿಗೆ ನೀಡಲಿದ್ದಾರೆ ಎನ್ನಲಾಗಿದೆ.