Asianet Suvarna News Asianet Suvarna News

ಲವ್‌ ಮಾಕ್‌ಟೇಲ್‌ ನಿಧಿಮಾ ಒದೆಯುತ್ತಾಳೆ ಆದರೆ ಮಿಲನಾ? ರಿಯಲ್‌ ಲೈಫ್‌ ಗುರು!

ಲವ್‌ ಮಾಕ್‌ಟೇಲ್‌ ನಿಧಿಮಾ ಅಲಿಯಾಸ್‌ ಮಿಲನಾ ನಾಗರಾಜ್‌ ಹುಟ್ಟು ಹಬ್ಬಕ್ಕೆ ಶುಭಕೋರಿದ ಭಾವಿ ಪತಿ ಡಾರ್ಲಿಂಗ್ ಕೃಷ್ಣ.   ಫೋಟೋ ಹಿಂದಿನ ಕಥೆ ನೋಡಿ... 
 

love mocktail fame darling Krishna different birthday wishes to milana nagaraj
Author
Bangalore, First Published Apr 26, 2020, 1:16 PM IST

ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಬಾರೀ ಸದ್ದು ಮಾಡಿದ  ಸೂಪರ್‌ ಹಿಟ್‌ ಸಿನಿಮಾ ಲವ್‌ ಮಾಕ್‌ಟೇಲ್‌ . ಈ ಚಿತ್ರವನ್ನು ನೋಡಿದ ಪ್ರೇಕ್ಷಕರು ತಮ್ಮ  ಲೈಫ್‌ನ ಕಥೆಯೇನೋ ಎಂಬಂತೆ ಭಾವಿಸುತ್ತಿದ್ದರು .  ಆ ಚಿತ್ರದ ಪಾತ್ರಗಳಿಗೆ ಹೆಚ್ಚು ಕನೆಕ್ಟ್ ಆಗಿರುವ  ಸಿನಿ ಪ್ರೇಮಿಗಳು ಅವರನ್ನು ರಿಯಲ್ ಹೆಸರಿನ ಬದಲು ರೀಲ್‌ ಹೆಸರಿನಿಂದಲೇ ಕರೆಯುತ್ತಾರೆ. 

ನಿಧಿಮಾ ಆಂದ್ರೆ ಮಿನಲಾ ನಾಗರಾಜ್‌, ಆದಿ ಅಂದ್ರೆ ಡಾರ್ಲಿಂಗ್‌ ಕೃಷ್ಣ. ವರ್ಷಗಳಿಂದ ಪ್ರೀತಿಸುತ್ತಿರುವ ಈ ಜೋಡಿ ತಮ್ಮ  ನಡುವೆ  ಕುಚ್-ಕುಚ್ ಇದೆ ಎಂದು ಸಿನಿಮಾ ರಿಲೀಸ್‌ಗೂ ಮುನ್ನ ಬಹಿರಂಗ ಪಡಿಸಿದ್ದಾರೆ. ಅಂದಿನಿಂದ ಎಲ್ಲರ ಕಣ್ಣು ಈ ಜೋಡಿಯ ಮೇಲಿದೆ.

ಹುಡುಗರ ಕ್ರಶ್‌ 'ನಿಧಿಮಾ'; ರಿಯಲ್‌ ಲೈಫಲ್ಲೂ ಮಿಲನಾ ಹೀಗೆನಾ?

ಏಪ್ರಿಲ್‌ 25ರಂದು ಮಿಲನಾ ಹುಟ್ಟು ಹಬ್ಬವನ್ನು ಸಿಂಪಲ್‌ ಆಗಿ ಆಚರಿಸಿಕೊಂಡಿದ್ದಾರೆ. ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಎಲ್ಲಿಯೂ ಹೋಗದೆ ಮನೆಯಲ್ಲೇ ಇದ್ದಾರೆ. ಮಿಲನಾ ಹುಟ್ಟು ಹಬ್ಬಕ್ಕೆ ಡಾರ್ಲಿಂಗ್ ಕೃಷ್ಣ ಇನ್‌ಸ್ಟಾಗ್ರಾಂನಲ್ಲಿ ವಿಶೇಷ ಫೋಟೋವೊಂದನ್ನು ರಿವೀವ್‌ ಮಾಡಿ ಶುಭಕೋರಿದ್ದಾರೆ.

ರಿಲೀಸ್‌ಗೂ ಮುನ್ನ ಡಿನ್ನರ್ ಡೇಟ್‌; ಡಾರ್ಲಿಂಗ್‌ನ ಮಿಸ್‌ ಮಾಡಿಕೊಂಡ ಮಿಲನಾ!

'ನಿನ್ನ ಪ್ರೀತಿ ಪರಿಶುದ್ಧ, ನಿನ್ನ ಹೃದಯ ಪರಿಶುದ್ಧ ನಿನ್ನ ನಗು ಪರಿಶುದ್ಧ. ನಿನ್ನನು ನನ್ನ ಜೀನದಲ್ಲಿ ಪಡೆದಿರುವುದು  ನನ್ನ ಅದೃಷ್ಟ. ಜೀವನದಲ್ಲಿ ನಿಜವಾದ ಸಂತೋಷವೇನೆಂದು ತೋರಿಸಿರುವೆ. ಈ ನಿನ್ನ ಗುಣವೇ ನನಗೆ ನಿಧಿಮಾ ಪಾತ್ರ ಬರೆಯುವುದಕ್ಕೆ ಸ್ಫೂರ್ತಿ. ಹ್ಯಾಪಿ ಬರ್ತಡೇ ಮಿಲನಾ. ನಿಧಿಮಾ ಒದೆಯುತ್ತಾಳೆ ಆದರೆ ಮಿಲನಾ...ನೀವೇ ನೋಡಿ' ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಮಿಲನಾ ಕೃಷ್ಣ ಅವರ  ಬೆನ್ನ  ಮೇಲೆ ನಿಂತಿಕೊಂಡು  ಮಸಾಜ್‌ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಸಕತ್ ವೈರಲ್‌ ಆಗುತ್ತಿದೆ. 

ಈ ಜೋಡಿಯ ಆನ್‌ ಸ್ಕ್ರೀನ್‌ ಕೆಮಿಸ್ಟ್ರಿ ಇಷ್ಟ ಪಟ್ಟ ಜನರು ಆಫ್‌ ಸ್ಕ್ರೀನ್‌ನಲ್ಲೂ ಮೆಚ್ಚಿಕೊಂಡಿದ್ದಾರೆ. ಕೊರೋನಾ ಲಾಕ್‌ಡೌನ್‌ನಲ್ಲಿ ಡಾರ್ಲಿಂಗ್‌ ಕೃಷ್ಣ ಲವ್‌ ಮಾಕ್‌ಟೇಲ್‌ ಚಿತ್ರ ಎರಡನೇ ಭಾಗಕ್ಕೆ ಕಥೆ ಬರೆಯುತ್ತಿದ್ದಾರೆ.  ಅಷ್ಟೇ ಅಲ್ಲದೆ ಸಿನಿಮಾವನ್ನು ಅಮೇಜಾನ್‌ ಪ್ರೈಮ್‌ನಲ್ಲಿ ವೀಕ್ಷಿಸಿದ ಅಭಿಮಾನಿಯೊಬ್ಬ ಕೃಷ್ಣ ಅವರಿಗೆ ಮೆಸೇಜ್‌ ಮಾಡಿ ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ ಆನಂತರ ಚಿತ್ರ ಮಂದಿರದಲ್ಲಿ ವೀಕ್ಷಿಸಲು ಸಾಧ್ಯವಾಗದೆ ಒಟಿಟಿಯಲ್ಲಿ ಸಿನಿಮಾ ನೋಡಿದವರೆಲ್ಲರೂ ಆನ್‌ ಲೈನ್‌ನಲ್ಲಿ ಟಿಕೆಟ್‌ ಹಣ ಟ್ರಾನ್ಸಫರ್ ಮಾಡಿದ್ದಾರೆ.

Follow Us:
Download App:
  • android
  • ios