ಲವ್‌ ಮಾಕ್ಟೇಲ್‌ ಹಿಟ್‌ ಕಪಲ್‌ ಮಿಲನ್ ನಾಗರಾಜ್‌ ಹಾಗೂ ಡಾರ್ಲಿಂಗ್‌ ಕೃಷ್ಣ ರಿಲೀಸ್‌ಗೂ ಮುನ್ನ ಹೋದ ಡಿನ್ನರ್ ಡೇಟ್‌ ಹಾಗೂ ಮಿಸ್ಸಿಂಗ್‌ ಪೋಟೋ ಶೇರ್ ಮಾಡಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ಚಿತ್ರರಂಗದಲ್ಲೇ ಮೊದಲ ಬಾರಿಗೆ ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿರುವ ಹಿಟ್‌ ಸಿನಿಮಾ ಅಂದರೆ ಲವ್‌ ಮಾಕ್ಟೇಲ್‌. ಚಿತ್ರಮಂದಿರದಲ್ಲೂ ಸಿಗದ ಪ್ರೀತಿಯನ್ನು ಓಟಿಟಿ ಪ್ಲ್ಯಾಟ್‌ಫಾರ್ಮ್‌ ಗಿಟ್ಟಿಸಿಕೊಟ್ಟಿದೆ ಈ ಕನ್ನಡ ಚಿತ್ರ.

ಹುಡುಗರ ಕ್ರಶ್‌ 'ನಿಧಿಮಾ'; ರಿಯಲ್‌ ಲೈಫಲ್ಲೂ ಮಿಲನಾ ಹೀಗೆನಾ?

ಹೌದು! ಮಿಲನಾ ಹಾಗೂ ಡಾರ್ಲಿಂಗ್‌ ಕೃಷ್ಣ ನಿಜ ಜೀನವದಲ್ಲಿ ಪ್ರೇಮಿಗಳಾದರೂ ಅವರ ಕನಸು ಹಾಗೂ ಏಕಾಗ್ರತೆಯಲ್ಲವೂ ಸಿನಿಮಾ ಕಡೆಯೇ ಇತ್ತು. ಕಾರಿನಲ್ಲಿ ಪಯಣ ಮಾಡುವಾಗ ಶುರುವಾದ ಒನ್‌ ಲೈನ್‌ ಸ್ಟೋರಿ ಈಗ ಸಿನಿ ರಸಿಕರ ಫೇವರೆಟ್ ಸ್ಟೋರಿ ಆಗಿದೆ. ಚಿತ್ರರಂಗದಲ್ಲಿ ಏನಾದರೊ ಸಾಧನೆ ಮಾಡಬೇಕೆಂದು ಹಗಲು ರಾತ್ರಿ ಎನ್ನದೆ ಕೆಲಸ ಮಾಡುವ ಈ ಜೋಡಿ, ರಿಲೀಸ್‌ಗೂ ಮುನ್ನ ಡಿನ್ನರ್ ಡೇಟ್‌ ಹೋಗಿದ್ದರು. 'ಚಿತ್ರ ತೆರೆ ಕಾಣುವ ಹಿಂದಿನ ದಿನ ನಾವು ಡಿನ್ನರ್‌ ಹೋಗಿದ್ವಿ. ಒಂದು ವರ್ಷದ ಶರ್ಮದ ಕೆಲಸ ಏನಾಗುತ್ತದೆ ಎಂದು ಗೊತ್ತಿಲ್ಲ. ಥ್ಯಾಂಕ್ಸ್ ಮಿಲನಾ. ಆದ ನೀವು ನನ್ನ ಬೆನ್ನೆಲುಬಾಗಿ ನಿಂತಿದ್ದಕ್ಕೆ' ಎಂದು ಡಾರ್ಲಿಂಗ್ ಕೃಷ್ಣ ಬರೆದುಕೊಂಡಿದ್ದಾರೆ.

View post on Instagram

ಇನ್ನು ಕೊರೋನಾ ವೈರಸ್‌ ಲಾಕ್‌ಡೌನ್‌ ಶುರುವಾಗುವ ಮುನ್ನ ಹುಟ್ಟೂರಿಗೆ ಹೋಗಿದ್ದ ಮಿಲನಾ ಅಲ್ಲೇ ಉಳಿದುಕೊಳ್ಳುವ ಪರಿಸ್ಥತಿ ಎದುರಾಯಿತು. ಕೃಷ್ಣ ಅವರನ್ನು ಭೇಟಿ ಮಾಡಲು ಸಾಧ್ಯವಾಗದ ಕಾರಣ ಇನ್‌ಸ್ಟಾಗ್ರಾಂನಲ್ಲಿ 'ಮಿಸ್ಸಿಂಗ್ ಮೈ ಲವ್ ಇನ್‌ ಕ್ವಾರಂಟೈನ್‌' ಎಂದು ಬರೆದುಕೊಂಡಿದ್ದಾರೆ.

View post on Instagram