ಲವ್ ಮಾಕ್ಟೇಲ್ ಸಿನಿಮಾದಲ್ಲಿ ರೇಣು ತಮಾಷೆ ರೇಣು ಆಕ್ಟಿಂಗ್ ಇಷ್ಟ ಪಟ್ಟ ಜನರು ಈಗ ಅವರನ್ನು ಹೇಗೆ ಗುರುತಿಸುತ್ತಿದ್ದಾರೆ ಗೊತ್ತಾ? 

ಲವ್ ಮಾಕ್ಟೇಲ್ 2 (Love Mocktail 2) ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವೂ ವೀಕ್ಷಕರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ಡಾರ್ಲಿಂಗ್ ಕೃಷ್ಣ (Darling Krishna) ತಮ್ಮ ಸಿನಿಮಾದಲ್ಲಿ ಮಿಲನಾ ನಾಗರಾಜ್‌ರನ್ನು (Milana Nagaraj) ಮಾತ್ರ ಹೈಲೈಟ್ ಮಾಡುತ್ತಾರೆ ಎಂದು ಕೇಳಿ ಬರುತ್ತಿರುವ ಆರೋಪಕ್ಕೆ ಹೊಸ ಕಲಾವಿದರ ಉತ್ತರ ಮತ್ತು ಅವರ ಬೆಳವಣಿಗೆಯೇ ಸಾಕ್ಷಿಯಾಗುತ್ತದೆ. ಲವ್ ಮಾಕ್ಟೇಲ್ 2 ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿರುವ ರೇಣು ಅಲಿಯಾಸ್ ಶ್ವೇತಾ (Shwetha) ಈ ಸಿನಿಮಾಗೆ ಆಯ್ಕೆ ಆಗಿರುವ ಕಥೆ ಸಖತ್ ಡಿಫರೆಂಟ್ ಆಗಿದೆ. 

ಶ್ವೇತಾ ಮೂಲತಃ ಡಾರ್ಜಲಿಂಗ್‌ನವರು (Darjaling) ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಕೆಫೆಗೆ ಮಿಲನಾ ಮತ್ತು ಕೃಷ್ಣ ಆಗಾಗ ಭೇಟಿ ನೀಡುತ್ತಿದ್ದರು. ಅಲ್ಲಿ ಶ್ವೇತಾ ಕೆಲಸ ಮಾಡುತ್ತಿದ್ದು, ಮೊದಲ ಭೇಟಿಯಲ್ಲಿ ಕನ್ನಡದಲ್ಲಿ ಮಾತನಾಡಿದ ಕಾರಣ ಕೃಷ್ಣ ಅವರ ಗಮನ ಸೆಳೆದಿದ್ದಾರೆ. ಕನ್ನಡ ಬರುತ್ತಾ ಹಾಡು ಹಾಡುತ್ತೀರಾ ಎಂದು ಪ್ರಶ್ನೆ ಮಾಡಿದ ಕೃಷ್ಣ ಸಿನಿಮಾ ಆಫರ್ ಮಾಡಿದ್ದಾರೆ.

'ನನಗೆ ಬೆಂಗಳೂರು (Bengaluru) ತುಂಬಾನೇ ಇಷ್ಟ ಇಲ್ಲಿನ ಜನರು ಕೂಡ ತುಂಬಾನೇ ಇಷ್ಟ ಸಿನಿಮಾ ನೋಡಿದ ಮೇಲೆ ನನಗೆ ತುಂಬಾನೇ ಪ್ರೀತಿ ಕೊಡುತ್ತಿದ್ದಾರೆ. ಇದು ನನ್ನ ತವರು ಮನೆ ಅನ್ನೋ ಫೀಲ್ ಅಗುತ್ತಿದೆ. ನಾನು ಬೆಂಗಳೂರಿಗೆ ಬಂದು 10 ವರ್ಷ ಆಗಿದೆ ದುಡ್ಡಿಗೋಸ್ಕರ ಬಂದಿರುವುದು, ನನಗೆ ಚಿಕ್ಕ ಮಗ ಇದ್ದಾನೆ. ಆರಂಭದಲ್ಲಿ ನನಗೆ ಕೆಲಸ ಸಿಗುತ್ತಿರಲಿಲ್ಲ ತುಂಬಾ ಕಷ್ಟ ಪಟ್ಟಿದ್ದೀನಿ. ನನಗೆ 30 ವರ್ಷ, ನನ್ನ ಮಗ ಈಗ 9ನೇ ಕ್ಲಾಸ್ ಓದುತ್ತಿದ್ದಾನೆ' ಎಂದು ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಬ್ಲಾಕ್‌ನಲ್ಲಿ ಟಿಕೆಟ್‌ ತಗೊಂಡು 'ಲವ್ ಮಾಕ್ಟೇಲ್ 2' ನೋಡಿದೆ: Darling Krishna

'ನನಗೆ ಮನಸ್ಸಿನಲ್ಲಿ ಒಂದು ದಿನ ನಾನು ಕ್ಯಾಮೆರಾದಲ್ಲಿ (Camera) ಬರಬೇಕು ಎಂಬ ಆಸೆ ಇತ್ತು. ಆದರೆ ಕ್ಯಾಮೆರಾ ಮುಂದೆ ಭಯ ಆಗುತ್ತದೆ. ನಾನು ಸುಮ್ಮನೆ ಇದ್ದಾಗ ಒಬ್ಬಳೆ ವಿಡಿಯೋ ಮಾಡಿ ಮೊಬೈಲ್‌ನಲ್ಲಿ (Mobile) ಇಟ್ಕೊಳ್ಳುತ್ತೇನೆ. ಅದನ್ನು ಮಿಲನಾ ಅವರು ನೋಡಿದ್ದರು. ಸಿನಿಮಾ ಆಫರ್ ಸಿಕ್ಕಾಗ ಮನೆಯವರು ತುಂಬಾನೇ ಸಪೋರ್ಟ್ ಮಾಡಿದ್ದರು. ನಾನು ಕೆಲಸ ಮಾಡುವ ಹೋಟೆಲ್‌ನವರು ಸಪೋರ್ಟ್ ಮಾಡಿದ್ದರು. ಚಿತ್ರೀಕರಣ ಸಂಡೆ ಇರುತ್ತಿತ್ತು. ಆ ಮಗು ತುಂಬಾ ದಪ್ಪ ಇತ್ತು ಎತ್ಕೊಂಡು ಎತ್ಕೊಂಡು ನನಗೆ ಒಂದು ವಾರ ನೋವಿತ್ತು. ಕೃಷ್ಣ ಸರ್‌ಗೆ ತುಂಬಾನೇ ಕೆಲಸ ಕೊಟ್ಟಿದ್ದೀನಿ ನಾನು ಮತ್ತೆ ಮತ್ತೆ ರೀಟೆಕ್‌ ಮಾಡಿಕೊಂಡು ಸರಿ ಮಾಡಿದ್ದೀನಿ' ಎಂದು ಹೇಳಿದ್ದಾರೆ. 

ಲವ್ ಮಾಕ್ಟೇಲ್- 2 ಬಗ್ಗೆಇಷ್ಟು ದಿನ ಸುಳ್ಳು ಹೇಳ್ತಿದ್ದೆ ಈಗ ಸತ್ಯ ಹೊರ ಬಂದಿದೆ: Milana Nagaraj

'ಬೇರೆ ಸಿನಿಮಾಗಳಲ್ಲಿ ನನಗೆ ಅಫರ್ ಕೊಟ್ಟರೆ ನಾನು ಒಪ್ಪಿಕೊಳ್ಳುವೆ. ಈಗ ಧೈರ್ಯ ಬಂದಿದೆ ಅವರ ಜೊತೆ ನಿಂತು ಎಲ್ಲಾ ಕೆಲಸಗಳನ್ನು ನೋಡಿಕೊಂಡಿರುವೆ. ಬಂದರೆ ಖಂಡಿತ ಮಾಡುವೆ. ಕೃಷ್ಣ ಸರ್‌ನ ನಾನು ಮೊದಲು ಭೇಟಿ ಆಗಿದ್ದಾಗ ಏನೋ ಒಂಥರಾ ಅನ್ನೋ ಹಾಡನ್ನು ಹಾಡಿರುವೆ ಆಗ ಅವರಿಗೆ ತುಂಬಾನೇ ಇಷ್ಟ ಆಯ್ತು. ಅದೇ ಹಾಡನ್ನು ನಾನು ಈ ಸಿನಿಮಾದಲ್ಲೂ ಹಾಡಿರುವೆ. ನಟ ಗಣೇಶ್‌ ಬಗ್ಗೆ ನನಗೆ ತುಂಬಾನೇ ಹೆಮ್ಮೆ ಇದೆ ಅವರು ನಮ್ಮ ಜಾಗದವರು ಅಲ್ಲಿಂದ ಬಂದು ಇಲ್ಲಿ ಕೆಲಸ ಮಾಡಿ ತುಂಬಾನೇ ಹೆಸರು ಮಾಡಿದ್ದಾರೆ. ಖುಷಿಯಾಗುತ್ತದೆ' ಎಂದು ರೇಣು ಮಾತು ಮುಗಿಸುತ್ತಾರೆ.