ಕಿಚ್ಚ ಸುದೀಪ್ ಅಭಿಮಾನಿಗಳು ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದ ಹಾಗೂ ವಿದೇಶದ್ಲಲೂ ಇದ್ದಾರೆ. ಸುದೀಪ್ ಬಹುಮುಖ ಪ್ರತಿಭೆಯ ನಟ. ತೆರೆ ಮೇಲೆ ಕಿಚ್ಚ ಸುದೀಪ್ ಅಬ್ಬರವಾದರೆ ತೆರೆ ಹಿಂದೆ ಸುದೀಪ್ ಹೃದಯವಂತ. ಹತ್ತಿರದಿಂದ ಬಲ್ಲವರಿಗೆ ಕಿಚ್ಚ ಸುದೀಪ್ ಮಾತೃ ಹೃದಯಿ ಗುಣದ ಅರಿವಾಗಿರುತ್ತದೆ. ಹಾಗಾದರೆ ಸುದೀಪ್ ಜನರಿಗೆ ಅಪ್ತವಾಗಲು ಅವರಲ್ಲಿರುವ ವಿಶೇಷ ಗುಣ ಯಾವುದು?
ಕಿಚ್ಚ ಸುದೀಪ್ ಪ್ರತಿಭಾವಂತ ನಟ, ನಿರ್ದೇಶಕ ಮಾತ್ರ ಅಲ್ಲ. ಒಳ್ಳೆಯ ಹಾಡುಗಾರ. ಉತ್ತಮ ಶೆಫ್. ಬೈಕುಗಳನ್ನು ಪ್ರೀತಿಸುವ ರೈಡರ್. ಅವರು ತೆರೆಯ ಮೇಲೆ ಹೇಗೆ ಮಿಂಚುತ್ತಾ ಇರುತ್ತಾರೋ ತೆರೆಯ ಹಿಂದೆ ಕೂಡ ಅವರು ಮಿಂಚುತ್ತಲೇ ಇರುತ್ತಾರೆ. ಜೆಪಿ ನಗರದಲ್ಲಿರುವ ಅವರ ಮನೆಯಲ್ಲಿ ಅವರ ಆಪ್ತರು ಯಾರಾದರೂ ಇದ್ದೇ ಇರುತ್ತಾರೆ. ಅದಕ್ಕೆ ಕಾರಣ ಅವರ ಮಾತೃ ಹೃದಯಿ ಗುಣ. ಅವರೊಬ್ಬ ಹೃದಯವಂತ ಗೆಳೆಯ. ಅವರಲ್ಲಿರುವ ಹಲವಾರು ಅತ್ಯುತ್ತಮ ಗುಣಗಳಿವೆ. ಆ ಗುಣಗಳಿಂದಲೇ ಅವರು ಹೆಚ್ಚು ಜನರಿಗೆ ಆಪ್ತರಾಗುತ್ತಾ ಹೋಗುತ್ತಾರೆ.
1. ಕಿಚ್ಚ ಸುದೀಪ್ ಕುಟುಂಬದ ವ್ಯಕ್ತಿ
ಕಿಚ್ಚ ಸುದೀಪ್ ಎಷ್ಟೇ ಬ್ಯುಸಿ ಇದ್ದರೂ ಕುಟುಂಬಕ್ಕೆ ಸಾಧ್ಯವಾದಷ್ಟು ಪ್ರೀತಿ ಕೊಡುತ್ತಾರೆ. ಸಣ್ಣ ಪುಟ್ಟ ಮಿಸ್ ಅಂಡರ್ ಸ್ಟಾಂಡಿಂಗ್ ಗಳನ್ನು ಸರಿ ಮಾಡುವುದಕ್ಕೆ ಸಮಯ ಕೊಡುತ್ತಾರೆ. ತಂದೆ, ತಾಯಿ ಜೊತೆ ಗೌರವದಿಂದ ನಡೆದುಕೊಳ್ಳುತ್ತಾರೆ. ಯಾರು ತನ್ನ ಕುಟುಂಬಕ್ಕೆ ಸಮಯ ಕೊಡುತ್ತಾರೋ ಅವರು ನಿಜಕ್ಕೂ ಖುಷಿಯಿಂದ ಇರುತ್ತಾರೆ. ಅಂಥಾ ವ್ಯಕ್ತಿಗಳಲ್ಲಿ ಸುದೀಪ್ ಒಬ್ಬರು.
27 ವರ್ಷಗಳ ಸಿನಿ ಜರ್ನಿ ಪೂರೈಸಿದ ಸುದೀಪ್: ಕಿಚ್ಚನ ಮೊದಲ ಸಿನಿಮಾ ಬಗ್ಗೆ ನಿಮಗೆ ಗೊತ್ತಾ?
2. ಕಿಚ್ಚ ಸುದೀಪ್ ಒಳ್ಳೆಯ ತಂದೆ
ನೀವು ಯಾವುದಾದರೂ ಕಾರ್ಯಕ್ರಮದಲ್ಲಿ ಅವರ ಮಗಳು ಸಾನ್ವಿ ಇರುವುದನ್ನು ನೋಡಿರಬಹುದು. ಕಿಚ್ಚ ಸುದೀಪ್ ಮಗಳ ಕೈ ಹಿಡಿದುಕೊಂಡು ಅಥವಾ ಮಗಳ ಜೊತೆ ಮಾತನಾಡಿಕೊಂಡೇ ಇರುತ್ತಾರೆ. ಮಗಳು ಏನಾದರೂ ಸಾಧನೆ ಮಾಡಿದಾಗ ಅದನ್ನು ಗೆಳೆಯರ ಜೊತೆ ಹೇಳಿಕೊಂಡು ಸಂಭ್ರಮಿಸುತ್ತಾರೆ. ಸದಾ ಮಗಳನ್ನು ಪೊರೆಯುತ್ತಾರೆ.
3. ಕಿಚ್ಚ ಸುದೀಪ್ ಉತ್ತಮ ಆತಿಥೇಯ
ಕಿಚ್ಚ ಸುದೀಪ್ ತುಂಬಾ ಒಳ್ಳೆಯ ಆತಿಥೇಯ. ಅವರ ಬಳಿಗೆ ಯಾರಾದರೂ ಹೋದರೆ ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ. ಒಳ್ಳೆಯ ಮೂಡ್ ನಲ್ಲಿದ್ದಾರೆ ಬೇಕರ್ ಐಟಮ್ ಗಳನ್ನು ಮಾಡಿದರೂ ಅಚ್ಚರಿಯಿಲ್ಲ. ಇನ್ನು ಹೊರರಾಜ್ಯಗಳಿಂದ ಬರುವ ಸ್ನೇಹಿತರನ್ನಂತೂ ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎಂದರೆ ಅತಿಥಿಗಳು ಅವರನ್ನು ಮರೆಯಲು ಸಾಧ್ಯವಿಲ್ಲ. ಆದ್ದರಿಂದಲೇ ಕಿಚ್ಚ ಸುದೀಪ್ ಗೆ ಎಲ್ಲಾ ರಾಜ್ಯಗಳಲ್ಲೂ ಸ್ನೇಹಿತರಿದ್ದಾರೆ.
4. ಕಿಚ್ಚ ಸುದೀಪ್ ಎಂದರೆ ಕಿರಿಯರಿಗೆ ಬೆಂಬಲ
ಕಿಚ್ಚ ಸುದೀಪ್ ಟ್ವೀಟರ್ ನಲ್ಲಿ ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿರುತ್ತಾರೆ. ಟ್ವೀಟರ್ ಅನ್ನು ಅವರು ಸಕರಾತ್ಮಕವಾಗಿ ಬಳಸುತ್ತಾರೆ. ಯಾರಾದರೂ ಕಿರಿಯರು ಹೋಗಿ ನಮ್ಮ ಸಿನಿಮಾದ ಟ್ರೇಲರ್, ಹಾಡು ಬಿಡುಗಡೆ ಮಾಡಿ ಎಂದರೆ ಅವರು ಆಗಲ್ಲ ಅನ್ನುವುದು ತುಂಬಾ ಕಡಿಮೆ. ಅದಕ್ಕೆ ಸಾಕ್ಷಿ ನೀವು ಟ್ವೀಟರಲ್ಲಿ ನೋಡಬಹುದು. ಹಲವಾರು ಕಿರಿಯರ ಸಿನಿಮಾಗಳಿಗೆ ಅವರು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಅಲ್ಲದೇ ಅವರೊಂದಿಗೆ ಕಿರಿಯರ ದೊಡ್ಡದೊಂದು ಪಡೆಯೇ ಇದೆ. ಅವರನ್ನೆಲ್ಲಾ ಇವರು ಬೆಂಬಲಿಸಿಕೊಂಡು ಪ್ರೀತಿ ತೋರಿಸಿಕೊಂಡೇ ಬಂದಿದ್ದಾರೆ.
11.45ಕ್ಕೆ ನನಗೆ ಊಟ ಬಡಿಸಿಲ್ಲ ಅಂದರೆ ಕೊಲೆನೂ ಆಗ್ಬಹುದು; ಊಟದ ಸೀಕ್ರೆಟ್ ರಿವೀಲ್ ಮಾಡಿದ ಸುದೀಪ್
5. ಕಿಚ್ಚ ಸುದೀಪ್ ಆಪತ್ಬಾಂಧವ
ಯಾರಿಗಾದರೂ ಕಷ್ಟ ಇದೆ ಎಂದು ತಿಳಿದರೆ ಕಿಚ್ಚ ಸುದೀಪ್ ತಕ್ಷಣ ಅದಕ್ಕೆ ತಾನೇನು ಮಾಡಬಹುದು ಎಂದು ಆಲೋಚಿಸುತ್ತಾರೆ. ಕೆಲವರಿಗೆ ತನ್ನ ಕೈಯಿಂದಲೇ ನೆರವು ನೀಡುತ್ತಾರೆ. ಹಲವರಿಗೆ ಬೇರೆ ಯಾವ ರೀತಿ ಸಹಾಯ ಮಾಡಬಹುದೋ ಆ ದಾರಿಯಲ್ಲಿ ಸಹಾಯ ನೀಡುತ್ತಾರೆ. ಎಲ್ಲರೂ ಚೆನ್ನಾಗಿದ್ದರೆ ಅವರಿಗೂ ಖುಷಿ.
6. ಕಿಚ್ಚ ಸುದೀಪ್ ಎಂದರೆ ಅಚ್ಚರಿ
ಕಿಚ್ಚ ಸುದೀಪ್ ಅಚ್ಚರಿಗಳನ್ನು ಇಷ್ಟಪಡುವ ವ್ಯಕ್ತಿ. ಜೊತೆಗೆ ಆಪ್ತರಿಗೆ ಅಚ್ಚರಿ ನೀಡುವುದನ್ನೂ ಇಷ್ಟ ಪಡುತ್ತಾರೆ. ಅವರ ಆಪ್ತ ವಲಯದಲ್ಲಿ ಯಾರದಾದರೂ ಬರ್ತ್ ಡೇ ಇದ್ದರೆ ಸುದೀಪ್ ಕಡೆಯಿಂದ ಉಡುಗೊರೆ ಹೋಗಿರುತ್ತದೆ. ಉಡುಗೊರೆ ಪಡೆದವರು ಆ ಪ್ರೀತಿಯನ್ನು ನಿರೀಕ್ಷೆ ಮಾಡಿರುವುದಿಲ್ಲ. ಅವರ ಮತ್ತು ಅವರ ಕುಟುಂಬ ಒಂದು ವಿಶೇಷ ಅಚ್ಚರಿಯಿಂದ ಖುಷಿ ಪಡುತ್ತದೆ. ಆ ಥರ ಖುಷಿ ಒದಗಿಸುವವರು ಸಿಗುವುದು ತುಂಬಾ ಅಪರೂಪ.
7. ಕಿಚ್ಚ ಸುದೀಪ್ ಎಂದರೆ ಹಿರಿಯರಿಗೆ ಗೌರವ
ಕಿಚ್ಚ ಸುದೀಪ್ ಎಲ್ಲೇ ಇದ್ದರೂ ಹಿರಿಯರಿಗೆ ಅಪಾರ ಗೌರವ ತೋರಿಸುತ್ತಾರೆ. ಅವರಿಗೆ ಪರಂಪರೆಯ ಕುರಿತು ಬಹಳ ಗೌರವ ಇದೆ. ಅದಕ್ಕಾಗಿ ಚಿತ್ರರಂಗ ಅನೇಕ ಹಿರಿಯರ ಫೋಟೋಗಳನ್ನು ತನ್ನ ಮನೆಯಲ್ಲಿ ಹಾಕಿಕೊಂಡಿದ್ದಾರೆ. ಅಲ್ಲದೇ ಎಲ್ಲೇ ಕಾರ್ಯಕ್ರಮದಲ್ಲಿ ಯಾರೇ ಚಿತ್ರರಂಗದ ಹಿರಿಯರು ಸಿಕ್ಕರೂ ನಮಸ್ಕಾರ ಮಾಡುತ್ತಾರೆ. ಹಿರಿಯರಿಗೆ ಅಕ್ಕರೆ ತೋರಿಸುತ್ತಾರೆ. ಹಿರಿಯ ಜೀವಗಳಿಗೆ ಖುಷಿಯಾಗುತ್ತದೆ. ಹಿರಿಯರಿಗೆ ಸಂತೋಷ ಒದಗಿಸುವ ದೊಡ್ಡ ವ್ಯಕ್ತಿತ್ವ ನಮ್ಮ ಪ್ರೀತಿಯ ಕಿಚ್ಚ ಸುದೀಪ್.
