Asianet Suvarna News Asianet Suvarna News

11.45ಕ್ಕೆ ನನಗೆ ಊಟ ಬಡಿಸಿಲ್ಲ ಅಂದರೆ ಕೊಲೆನೂ ಆಗ್ಬಹುದು; ಊಟದ ಸೀಕ್ರೆಟ್ ರಿವೀಲ್ ಮಾಡಿದ ಸುದೀಪ್

ಸುದೀಪ್ ಹಿಂದಿ ಸಂದರ್ಶನದಲ್ಲಿ ಅವರ ಊಟದ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಸುದೀಪ್‌ಗೆ ತುಂಬಾ ಇಷ್ಟವಾದ ಊಟ, ಅವರ ಊಟದ ಸಮಯ ಸೇರಿದಂತೆ ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. 

Kiccha Sudeep reveals interesting things of his food system sgk
Author
Bengaluru, First Published Aug 17, 2022, 3:55 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾದ ಸಕ್ಸಸ್ ನಲ್ಲಿ ತೇಲುತ್ತಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಕನ್ನಡ ಸೇರಿದಂತೆ ಸೌತ್ ಇಂಡಿಯಾದ ಎಲ್ಲಾ ಭಾಷೆ ಹಾಗೂ ಹಿಂದಿಯಲ್ಲೂ ರಿಲೀಸ್ ಆಗಿತ್ತು. ಪ್ಯಾನ್ ಮಟ್ಟದಲ್ಲಿ ತೆರೆಗೆ ಬಂದ ವಿಕ್ರಾಂತ್ ರೋಣ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಅಭಿಮಾನಿಗಳು ಸಹ ವಿಕ್ರಾಂತ್ ರೋಣನನ್ನು ಮೆಚ್ಚಿಕೊಂಡಿದ್ದರು. ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ಗಾಗಿ ಕಿಚ್ಚ ಇಡೀ ಇಂಡಿಯಾ ಓಡಾಡಿದ್ದರು. ಭಾರತದಾದ್ಯಂತ ಸಂಚಾರ ಮಾಡಿ ವಿಕ್ರಾಂತ್ ರೋಣನ ಪ್ರಮೋಷನ್ ಮಾಡಿದ್ದರು. ಉತ್ತರ ಭಾರದಲ್ಲೂ ಕಿಚ್ಚ ಪ್ರಮೋಷನ್ ಮಾಡಿ ಅನೇಕ ಮಾಧ್ಯಮಗಳಿಗೆ ಸಂದರ್ಶನ ಕೂಡ ನೀಡಿದ್ದರು. ಕಿಚ್ಚನ ಅನೇಕ ಸಂದರ್ಶನಗಳಲ್ಲಿ ಅಭಿಮಾನಿಗಳ ಗಮನ ಸೆಳೆದ ಸಂದರ್ಶನ ಕರ್ಲಿ ಟೇಲ್ ಯೂಟ್ಯೂಬ್‌ಗೆ ನೀಡಿದ ಸಂದರ್ಶನ. 

ಸುದೀಪ್ ಈ ಸಂದರ್ಶನದಲ್ಲಿ ಅನೇಕ ಇಂಟ್ರಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಅವರ ಊಟದ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಸುದೀಪ್‌ಗೆ ತುಂಬಾ ಇಷ್ಟವಾದ ಊಟ, ಅವರ ಊಟದ ಸಮಯ ಸೇರಿದಂತೆ ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಅಂದಹಾಗೆ ಊಟ ಮಾಡುತ್ತಲೆ ಸುದೀಪ್ ಸಂದರ್ಶನ ನೀಡಿದರು. ಈ ವೇಳೆ ನಿರೂಪಕಿ ಅನೇಕ ಪ್ರಶ್ನೆ ಕೇಳಿದರು. ಕಿಚ್ಚನ ಇಷ್ಟದ ಫುಡ್‌ನಿಂದನ ಪ್ರಾರಂಭವಾದ ಸಂದರ್ಶನ ಎಲ್ಲರ ಗಮನ ಸೆಳೆಯುತ್ತಿದೆ. 

ಅಂದಹಾಗೆ ಕಿಚ್ಚ ರೆಡ್ ಮತ್ತು ಬ್ರೌನ್ ರೈಸ್ ಅನ್ನು ಮಾತ್ರ ತಿನ್ನುವುದು, ವೈಟ್ ರೈಸ್ ತಿನ್ನಲ್ಲ ಎಂದು ಹೇಳಿದರು.  ಅಭಿನಯ ಚಕ್ರವರ್ತಿಯ ಇಷ್ಟದ ಊಟ ಅಂದರೆ ರೈಸ್ ಮತ್ತು ಪಾಲಕ್ ಪನ್ನೀರ್. 'ಬ್ರೌನ್ ರೈಸ್ ಮತ್ತು ರೆಡ್ ರೈಸ್ ಮಾತ್ರ ತಿನ್ನುವುದು. ವೈಟ್ ರೈಸ್ ತಿನ್ನಲ್ಲ. ಜೊತೆಗೆ ಪಾಲಕ್ ಪನ್ನೀರ್ ಇದ್ದರೆ ಸಾಕು. ನಾನು ಜಾಸ್ತಿ ಸ್ವೀಟ್ ತಿನ್ನಲ್ಲ. ಆದರೆ ಬೆಕರಿ ತಿನಿಸು ತಿನ್ನುತ್ತೇನೆ. ನನಗೆ ಟೈಮಂಗೆ ಸರಿಯಾಗಿ ಊಟ ಬೇಕು. ಅದು ಯಾವುದೇ ಶೂಟಿಂಗ್ ಆಗಿದ್ದರೂ ಸರಿ. 11.45ಕ್ಕೆ ಊಟ ಬಡಿಸಿಲ್ಲ ಅಂದರೆ ನಾನು ಯಾರನ್ನಾದರು ಕೊಲೆನೂ ಮಾಡಿಬಿಡಬಹುದು. ಯಾಕೆಂದರೆ ನನಗೆ ಅಷ್ಟು ಹಸಿವು ಆಗಿರುತ್ತೆ. ವರ್ಕೌಟ್, ಸ್ವಿಮ್ಮಿಂಗ್ ಎಲ್ಲಾ ಮುಗಿಸಿ ರಾತ್ರಿ ಊಟ 6.45ಕ್ಕೆ ಮಾಡುತ್ತೇನೆ. ನಾನು ತುಂಬಾ ಆಹಾರ ಪ್ರೀಯ ಅಲ್ಲ. ಆದರೆ ನನಗೆ ಅಡುಗೆ ಮಾಡಿ ಬಡಿಸುವುದು ತುಂಬಾ ಇಷ್ಟ. ನಾನು ದಿನ ಅಡುಗೆ ಮಾಡುತ್ತೇನೆ. ಅಡುಗೆ ಮಾಡಿ ಸುಂದರವಾಗಿ ಡಿಸೈನ್ ಮಾಡಿ, ಪ್ರೆಸೆಂಟ್ ಮಾಡುವುದು ತುಂಬಾ ಇಷ್ಟ' ಎಂದು ಹೇಳಿದರು.

ಹಾರುವ ವಿಮಾನದ ಬಾಗಿಲು ತೆಗೆಯಲು ಹೋಗಿದ್ರಾ ಸುದೀಪ್?

ಇದೇ ವೇಳೆ ಯಾವಾಗಲು ಕೈಯಲ್ಲೆ ಊಟ ಮಾಡುವುದು ಸ್ಪೂನ್ ಬಳಸಲ್ಲ ಎಂದು ಹೇಳಿದರು.  'ನಾನು ಯಾವಾಗಲು ಕೈಯಲ್ಲೇ ತಿನ್ನುವುದು' ಎಂದು ಸುದೀಪ್ ಹೇಳಿದರು. ಆಗ ನಿರೂಪಕಿ ಕೂಡ ಕೈಯಲ್ಲಿ ತಿನ್ನಲು ಪ್ರಾರಂಬಿಸಿದರು. 'ನಾನು ಯಾವಾಗಲು ಊಟ ಮಾಡಿದ ಬಳಿಕ ಬೆರಳನ್ನು ನೆಕ್ಕುತ್ತೇನೆ, ಈ ಅಭ್ಯಾಸವಿದೆ. ಊಟದ ತಟ್ಟೆ ಕ್ಲೀನ್ ಆಗಬೇಕು. ಊಟ ಮಾಡಿದ್ದಾರೋ ಇಲ್ವೋ ಎನ್ನುವ ಹಾಗೆ ಇರುತ್ತೆ ತಟ್ಟೆ. ನಾನು ಯಾವುದೇ ಫೈವ್ ಸ್ಟಾರ್, ಸೆವೆನ್ ಸ್ಟಾರ್ ಹೋಟೆಲ್ ಆಗಿದ್ದರೂ ಸರಿ ನೂಡಲ್ಸ್ ಇದ್ರು ನಾನು ಕೈಯಲ್ಲೆ ಊಟ ಮಾಡುವುದು. ನನಗೆ ತುಂಬಾ ಇಷ್ಟ' ಎಂದು ಹೇಳಿದರು. 

ಕನ್ನಡ್ ಅಲ್ಲ.., ಭಾಷೆ ಬಿಡಿ ಭಾಷೆಯ ಹೆಸರನ್ನಾದರೂ ಸರಿಯಾಗಿ ಹೇಳಿ; ಹಿಂದಿ ಮಂದಿಗೆ ಕಿಚ್ಚನ ಕ್ಲಾಸ್

ಸಂದರ್ಶನವನ್ನುುಊಟ ಮಾಡುತ್ತಲೇ ಮುಗಿಸಿದರು. ಊಟದ ವೇಳೆ ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಮಾತನಾಡಿದರು. ಹಾಗೂ ಸೌತ್ ಮತ್ತು ಬಾಲಿವುಡ್ ಸಿನಿಮಾಗಳ ಬಗ್ಗೆಯೂ ಕಿಚ್ಚ ಮಾತನಾಡಿದರು. ಜೊತೆಗೆ ಕ್ರೇಸಿ ಅಭಿಮಾನಿಗಳ ಬಗ್ಗೆ ವಿವರಿಸಿದರು. ಮೈತುಂಬಾ ಟ್ಯಾಟೂ ಹಾಕಿಕೊಂಡಿರುವ ಅಭಿಮಾನಿ, ತನ್ನನ್ನು ಭೇಟಿಯಾಗಲೆಂದು ಅನೇಕ ಕಿ.ಮೀ ನಡೆದುಕೊಂಡೇ ಬಂದಿರುವ ಅಭಿಮಾನಿ.ಯ ಬಗ್ಗೆ ವಿವರಿಸಿದರು. ಇನ್ನು ತುಂಬಾ ಕೋಪ ಬಂದಾಗ ಏನು ಮಾಡುತ್ತೀರಿ ಎಂದಿದ್ದಕ್ಕೆ 'ನಾನು ತುಂಬಾ ಅಪ್ ಸೆಟ್ ಆದಾಗ, ಕೋಪ ಬಂದಾಗ ಸೈಲೆಂಟ್ ಆಗಿರುತ್ತೇನೆ' ಆಗ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಹೇಳಿದರು. ಕಿಚ್ಚನ ಮಾತು, ಊಟದ ಸ್ಟೈಲ್‌ಗೆ ನಿರೂಪಕಿ ಕೂಡ ಇಂಪ್ರೆಸ್ ಆದರು.

Follow Us:
Download App:
  • android
  • ios