ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೊಮ್ಮಗನ ನಾಮಕರಣಕ್ಕೆ ಕಲಘಟಗಿಯ ವಿಶೇಷ ತೊಟ್ಟಿಲು ಸಿದ್ಧವಾಗಿದೆ. ಈ ಹಿಂದೆ ಯಶ್ ಮಗಳಿಗೂ ಇದೇ ರೀತಿಯ ತೊಟ್ಟಿಲನ್ನು ಅಂಬರೀಶ್ ಉಡುಗೊರೆಯಾಗಿ ನೀಡಿದ್ದರು. ತೇಗದ ಕಟ್ಟಿಗೆಯಿಂದ ತಯಾರಾದ ಈ ತೊಟ್ಟಿಲಿನಲ್ಲಿ ರಾಮಾಯಣ, ದಶಾವತಾರದ ಚಿತ್ರಗಳಿವೆ. ಅಂಬಿ ಆಸೆಯಂತೆ ಮೊಮ್ಮಗನಿಗೂ ಇದೇ ತೊಟ್ಟಿಲು ಬಳಕೆಯಾಗುತ್ತಿದೆ. ಇದನ್ನು ದೇಶ ವಿದೇಶಗಳಿಗೂ ಕಳುಹಿಸಲಾಗುತ್ತದೆ.
ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ರೆಬೆಲ್ ಸ್ಟಾರ್ ಅಂದ್ರೆ ಅಂಬರೀಶ್. ಅಂಬರೀಶ್ ಅಗಲಿ 6-7 ವರ್ಷ ಕಳೆಯುತ್ತಿದೆ. ಈಗಲೂ ಕನ್ವರ್‌ಲಾಲ್‌ನನ್ನು ನೆನೆಯದೆ ಯಾವುದೇ ಸಿನಿಮಾ ಕಾರ್ಯಕ್ರಮಗಳು ಮುಂದುವರೆಯುವುದಿಲ್ಲ. ಹಾಗೆಯೇ ಅಂಬಿ ಕಂಡ ಕನಸುಗಳನ್ನು ಈಗ ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಈಡೇರಿಸುತ್ತಿದ್ದಾರೆ. ಅಂಬಿ ಈ ಹಿಂದೆ ಯಶ್ ಮಗಳಿಗೆ ಗಿಫ್ಟ್ ಆಗಿ ನೀಡಿದ್ದ ತೊಟ್ಟಿಲು ಸಖತ್ ವೈರಲ್ ಆಗಿತ್ತು. ತಮ್ಮ ಮೊಮ್ಮಕ್ಕಳಿಗೂ ಅದೇ ತೊಟ್ಟಿಲು ಬಳಸಬೇಕು ಎಂದು ಆಸೆ ಪಟ್ಟಿದ್ದರಂತೆ ಹೀಗಾಗಿ ಅಂಬಿ ಮೊಮ್ಮಗನಿಗೂ ಕಲಘಟಗಿ ತೊಟ್ಟಿಲು ರೆಡಿಯಾಗಿ ಬಂದಿದೆ.
ಹೌದು! ರೆಬಲ್ ಸ್ಟಾರ್ ಅಂಬರೀಶ್ ಹಾಗೂ ನಟಿ ಸುಮಲತಾ ಅವರ ಮೊಮ್ಮಗ, ಅಭಿಷೇಕ ಅಂಬರೀಶ್ ಅವರ ಮಗನ ನಾಮಕರಣ ಸಮಾರಂಭ ಮಾ.14ರಂದು ನಿಗದಿಯಾಗಿದ್ದು, ಇದಕ್ಕಾಗಿ ಕಲಘಟಗಿಯಲ್ಲಿ ವಿಶೇಷ ತೊಟ್ಟಿಲೊಂದು ಸಿದ್ಧವಾಗಿದೆ. ಸಾವಕಾರ ಅವರ ಮನೆಯಲ್ಲಿ ಪುಟ್ಟ ಅಲಂಕೃತ ತೊಟ್ಟಿಲು ಸಿದ್ಧವಾಗಿದ್ದು, ಸದ್ಯದಲ್ಲೇ ಅಂಬರೀಶ ಅವರ ಮನೆ ಸೇರಲಿದೆ. ಈ ಮೊದಲು ಡಾ. ರಾಜಕುಮಾರ್, ಯಶ್ ಅವರ ಮನೆಗೆ ಕಲಘಟಗಿ ತೊಟ್ಟಿಲು ಹೋಗಿದ್ದವು. ಆರಗು ಮತ್ತು ನೈಸರ್ಗಿಕ ಬಣ್ಣ ಮಿಶ್ರಣ ಮಾಡಿ ತೊಟ್ಟಲಿನ ಮೇಲೆ ಚಿತ್ರಗಳನ್ನು ಬರೆದಿರುವುದು ಮತ್ತು ತೊಟ್ಟಿಲಿನ ಮೇಲೆ ಕೃಷ್ಣಾವತಾರ, ದಶಾವತಾರ, ರಾಮಾಯಣ, ತೊಟ್ಟಿಲಿನಲ್ಲಿ ಮಲಗಿದ ಮಗು ದೇವರ ಸನ್ನಿಧಾನದಲ್ಲಿ ಇರುವ ಚಿತ್ರವಿರುವುದು ವಿಶೇಷವಾಗಿದೆ.
ತರುಣ್ ಸುಧೀರ್ ಜೊತೆ ದೇವಸ್ಥಾನ ಸುತ್ತುತ್ತಿರುವ ಸೋನಲ್; ಕತ್ತಲಿರುವ ತಾಳಿ ನೋಡಿ ಎಲ್ಲರೂ ಶಾಕ್
ರಾಧಿಕಾ ಪಂಡಿತ್ ಗರ್ಭಿಣಿ ಆಗಿದ್ದಾಗ ಯಾರಿಗೂ ಹೇಳದೆ ಕಲಘಟಗಿ ತೊಟ್ಟಿಲು ಮಾಡಲು ಅಂಬಿ ಆರ್ಡರ್ ಕೊಟ್ಟಿದ್ದರು. ಅಂಬಿ ಅಗಲಿ ಅದೆಷ್ಟೋ ದಿನ ಕಳೆದ ಮೇಲೆ ತೊಟ್ಟಿಲು ರೆಡಿಯಾಗಿದೆ ಎಂದು ಮೆಸೇಜ್ ಬರುತ್ತದೆ ಹಾಗೂ ಅದನ್ನು ಯಶ್ ಮನೆಗೆ ಪಾರ್ಸಲ್ ಮಾಡಲಾಗುತ್ತದೆ. ಇದನ್ನು ಸ್ವತಃ ಸುಲಮಲತಾ ಅವರಿಗೆ ಶಾಕಿಂಗ್.ತೊಟ್ಟಿಲು ವಿಶೇಷತೆಗಳನ್ನು ತಿಳಿದು ಯಶ್ ಫ್ಯಾಮಿಲಿ ಶಾಕ್ ಆಗಿದ್ದಾರೆ. ಎಂಥಾ ಅರ್ಥಪೂರ್ಣ ಉಡುಗೊರೆ ನೀಡಿದ್ದಾರೆ ಎಂದು. ನನ್ನ ಮೊಮ್ಮಗ ಕೂಡ ಅದೇ ರೀತಿ ತೊಟ್ಟಿನಲ್ಲಿ ಬೆಳೆಯಬೇಕು ಎಂದು ಆಪ್ತರ ಬಳಿ ಅಂಬಿ ಹೇಳಿಕೊಂಡಿದ್ದರಂತೆ. ಹೀಗಾಗಿ ಸುಮಲತಾ ಮತ್ತು ಅಭಿ ಆಸೆ ಈಡೇರಿಸುತ್ತಿದ್ದಾರೆ.
ಮನೆಯಲ್ಲಿ ತಂದೆಯ ಆತ್ಮ ಓಡಾಟಕ್ಕೆ ಭಯಪಟ್ಟ ನಟಿ ಅದ್ವಿತಿ-ಅಶ್ವಿತಿ; ನಾಯಿ ಬಳಿ ಪೌಡರ್ ವಾಸನೆ ಬಂದಿದ್ದು ಯಾಕೆ?
ವಿಶೇಷತೆಗಳು:
ಈ ತೊಟ್ಟಿಲು ವಿಶೇಷತೆ ಏನೆಂದರೆ ಕಲಘಟಗಿ ಅರಣ್ಯ ಹಾಗೂ ಪಶ್ಚಿಮ ಘಟ್ಟದಲ್ಲಿ ಮಾತ್ರ ಸಿಗುವ ತೇಗಿನ ಕಟ್ಟಿಗೆಯಿಂದ ಈ ತೊಟ್ಟಿಲು ತಯಾರಾಗುತ್ತದೆ. ಈ ಕಟ್ಟಿಗೆಯಿಂದ ಮಾಡಿದರೆ ಬಾಳಿಕೆ ಹೆಚ್ಚು ಎನ್ನಲಾಗಿದೆ. ಆರಗು ಮತ್ತು ನೈಸರ್ಗಿಕ ಬಣ್ಣ ಮಿಶ್ರಣ ಮಾಡಿ ತೊಟ್ಟಲಿನ ಮೇಲೆ ಚಿತ್ರಗಳನ್ನು ಬರೆದಿರುವುದು ಮತ್ತು ತೊಟ್ಟಿಲಿನ ಮೇಲೆ ಕೃಷ್ಣಾವತಾರ, ದಶಾವತಾರ, ರಾಮಾಯಣ ಬಿಡಿಸಲಾಗುವುದು. ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅಷ್ಟೇ ಅಲ್ಲ ಇನ್ನಿತರ ಧರ್ಮದವರು ತಮ್ಮಗೆ ಇಷ್ಟದಂತೆ ತೊಟ್ಟಿಲು ಮಾಡಿಸಿಕೊಳ್ಳುತ್ತಾರೆ. ಈ ತೊಟ್ಟಿಲನ್ನು ಬೆಂಗಳೂರು, ಗೋವಾ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ದುಬೈ, ಫ್ರಾನ್ಸ್ ದೇಶಗಳಿಗೂ ಕಳುಹಿಸಲಾಗಿದೆ.
ಅಂದು ಮಗಳು ನೆಟ್ಟ ತೆಂಗಿನ ಸಸಿ ಹಿಂದೆಯೇ ಪುನೀತ್ ರಾಜ್‌ಕುಮಾರ್ ನೆಟ್ಟ ಗಿಡವಿದೆ: ಅನುಪ್ರಭಾಕರ್ ಹೆಮ್ಮೆಯ ಕ್ಷಣವಿದು
