Asianet Suvarna News Asianet Suvarna News

ನಾನು ಹುಟ್ಟಿದ್ದೇ ಪರಮಾಶ್ಚರ್ಯ, ತಮ್ಮ ಬರ್ತ್ ಸೀಕ್ರೆಟ್ ರಿವೀಲ್ ಮಾಡಿದ ಕ್ರೇಜಿ ಸ್ಟಾರ್!

ಸ್ಯಾಂಡಲ್‌ವುಡ್‌ಗೆ ಪ್ರೇಮಲೋಕದ ದರ್ಶನ ಮಾಡಿಸಿದವರು ರವಿಚಂದ್ರನ್‌. ಅವರ ಅಮ್ಮನಿಗೆ ಅವರು ಹುಟ್ಟೋದೆ ಬೇಕಾಗಿರಲಿಲ್ಲವಂತೆ ಗೊತ್ತಾ? ಏನಿದರ ಹಿಂದಿನ ಕಥೆ?

 

crazy star Ravichandran reveals secret about his birth bni
Author
First Published Nov 11, 2023, 12:30 PM IST

ವೀರಾಸ್ವಾಮಿ ರವಿಚಂದ್ರನ್ (Ravi Chandran) ಅಂದರೆ ಗೊತ್ತಾಗುತ್ತೋ ಇಲ್ವೋ ಗೊತ್ತಿಲ್ಲ, ಅದೇ ಕ್ರೇಜಿಸ್ಟಾರ್ ರವಿಚಂದ್ರನ್‌ (Crazy star) ಅನ್ನಿ, ಗೊತ್ತಿಲ್ಲ ಅನ್ನೋ ಕನ್ನಡಿಗರಿಲ್ಲ. ಆ ಮಟ್ಟಿಗೆ ಕರುನಾಡಿನಲ್ಲಿ ಸೌಂಡ್ ಮಾಡಿರೋ ನಾಯಕ ನಟ ರವಿಚಂದ್ರನ್‌.

ರವಿಚಂದ್ರನ್ ಒಬ್ಬ ಬಹುಮುಖ ಪ್ರತಿಭೆಯ ನಟ. ಚಿತ್ರ ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ, ಸಂಭಾಷಣೆ ಮುಂತಾದ ಚಿತ್ರರಂಗದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹೊಂದಿರುವ ಹಾಗೂ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗ ಇವರ ನಿರ್ದೇಶನದ ಚಿತ್ರಗಳಲ್ಲಿ ಕಾಣಬಹುದು. ಇವರ ಚಿತ್ರಗಳಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಮನಸೂರೆ ಮಾಡುವ ಸಂಗೀತ, ರಂಗುರಂಗಿನ ಸೆಟ್ಟುಗಳು, ಪ್ರತಿಯೊಂದು ಫ಼್ರೇಮಿನಲ್ಲೂ ಹೊಸತನ. ಆಯಾ ಕಾಲಗಟ್ಟಕ್ಕೆ ಅಧುನಿಕ ತಂತ್ರಜ್ಞಾನವನ್ನು ಕನ್ನಡಕ್ಕೆ ತಂದ ಹಿರಿಮೆ ರವಿಚಂದ್ರನ್ ಅವರದು.

'ರವಿಚಂದ್ರನ್ ವಯಸ್ಸು ಎಲ್ಲೋ ನಿಂತು ಬಿಟ್ಟಿದೆ' ಅಂತ ಅವರ ಸ್ನೇಹಿತರು ತಮಾಷೆ ಮಾಡುವುದುಂಟು. ೬೨ ವರ್ಷ ವಯಸ್ಸಾದರೂ ಇನ್ನೂ ಯುವಕರ ಜೋಶ್‌ನಲ್ಲಿ, ಹೊಸತನದ ಹುಡುಕಾಟದಲ್ಲಿ ಇರುವವರು ರವಿಚಂದ್ರನ್‌. ಅವರ ಸಿನಿಮಾಗಳ ಪಟ್ಟಿ ಬಹಳ ದೊಡ್ಡದಿದೆ. ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ, ಯುಗಪುರುಷ, ಯುದ್ದಕಾಂಡ, ರಾಮಾಚಾರಿ, ಅಂಜದ ಗಂಡು, ಸ್ವಾಭಿಮಾನ, ನಾನು ನನ್ನ ಹೆಂಡ್ತಿ, ಮನೆದೇವ್ರು, ಗೋಪಿಕೃಷ್ಣ, ಬಣ್ಣದಗೆಜ್ಜೆ, ಶ್ರೀರಾಮಚಂದ್ರ, ಆಣ್ಣಯ್ಯ, ಗಡಿಬಿಡಿ ಗಂಡ, ಹೀಗೆ ನೂರಾರು ಹಿಟ್‌ ಚಿತ್ರಗಳನ್ನು ಇವರು ಸ್ಯಾಂಡಲ್‌ವುಡ್‌ಗೆ ನೀಡಿದ್ದಾರೆ. 'ರಾಮಾಚಾರಿ' ಚಿತ್ರವು ಆಗಿನ ಕಾಲದಲ್ಲೇ ಕೆನಡಾದ ಓಂಟಾರಿಯೋ ಫಿಲಂ ಫ಼ೆಸ್ಟಿನಲ್ಲಿ ಪ್ರದರ್ಶನಗೊಂಡಿತ್ತು.

ಇಂಥಾ ಮಹಾನ್‌ ಪ್ರತಿಭಾವಂತ ಈ ಭೂಮಿಗೆ ಬಂದಿದ್ದೇ ಹೋರಾಟ ಮಾಡಿ ಅನ್ನೋ ಸತ್ಯ ಹೆಚ್ಚಿನವರಿಗೆ ಗೊತ್ತಿಲ್ಲ. ಅದನ್ನು ರವಿಚಂದ್ರನ್ ಅವರೇ ರಿವೀಲ್ ಮಾಡಿದ್ದಾರೆ. ಅವರು ಅವರ ಅಮ್ಮನ ಹೊಟ್ಟೆಯಲ್ಲಿ ಇರುವಾಗಲೇ ಅವರ ಅಮ್ಮನಿಗೆ ಇನ್ನು ಮಕ್ಕಳು ಬೇಡ ಅನಿಸಿತ್ತಂತೆ. ಹೀಗಾಗಿ ಹೊಟ್ಟೆಯಲ್ಲಿರುವ ಮಗು ಜಗತ್ತಿಗೆ ಬರುವುದು ಬೇಡ ಅಂತ ನಿರ್ಧರಿಸಿ ಅಬಾರ್ಶನ್ ಆಗಲಿ ಅನ್ನುವ ಉದ್ದೇಶದಿಂದ ಪಪ್ಪಾಯಿ ತಿಂದಿದ್ದರಂತೆ. ಆದರೆ ನಮ್ ರವಿಮಾಮ ಜಗತ್ತಿಗೆ ಕಣ್ ಬಿಡುವ ಮೊದಲೇ ಮಹಾ ಹೋರಾಟಗಾರ. ಅಮ್ಮನೇ ನೀನು ಹುಟ್ಟೋದು ಬೇಡ ಅಂದ್ರೂ ಹುಟ್ಟಿ ಬಂದರಂತೆ. ಹಾಗೆ ಹುಟ್ಟಿದ ಈ ವ್ಯಕ್ತಿ ತನ್ನ ಬದುಕನ್ನು ಸಾರ್ಥಕಗೊಳಿಸೋ ಕೆಲಸ ಮಾಡುತ್ತಲೇ ಬಂದಿದ್ದಾರೆ. ಸದಾ ಹೊಸತನಕ್ಕೆ ತುಡಿಯೋ ಈ ಪ್ರತಿಭಾವಂತ ಒಂದು ಕಾಲದಲ್ಲಿ ಸಿನಿಮಾ ರಂಗದಲ್ಲಿ ಮಾಡದ ಪ್ರಯೋಗಗಳಿರಲಿಲ್ಲ.

ಹೇಗಿದ್ದವಳು ಹೇಗಾದ್ಲು! ತಮನ್ನ ಭಾಟಿಯಾ ಸ್ತನಕ್ಕೂ ಬಿದ್ದಿದ್ಯಾ ಕತ್ತರಿ? ಏನಿದು ಗುಸುಗುಸು?

ರೀಮೇಕ್ ಹೇಗೆ ಮಾಡಬೇಕು ಎಂಬುದಕ್ಕೆ ನಮ್ಮ ಹಿಂದಿನವರು ಇವತ್ತಿಗೂ ಎಕ್ಸಾಂಪಲ್ ಕೊಡೋದು ರವಿಚಂದ್ರನ್ ಅವರನ್ನು. ಹಿಂದಿ ಭಾಷೆಯ 'ಹೀರೋ' ಸಿನಿಮಾ ರವಿಚಂದ್ರನ್ ಕೈಯಲ್ಲಿ 'ರಣಧೀರ'ನಾಗಿ ಜಯಭೇರಿ ಬಾರಿಸಿದಾಗ, ಮೂಲ ನಿರ್ದೇಶಕರಾದ ಸುಭಾಷ್ ಘಾಯ್ ಅವರೇ ರವಿಚಂದ್ರನ್ ಅವರ ನಿರ್ದೇಶನವನ್ನು ಹಾಡಿ ಹೊಗಳಿದ್ದರು. ಯಥಾವತ್‌ ರೀಮೇಕ್ ಗಳ ನಡುವೆ ರವಿ ಮಾಮ ಮಾಡುತ್ತಿದ್ದ ರಿಮೇಕ್ ಸಿನಿಮಾಗಳು ವಿಭಿನ್ನವಾಗಿ ಇರುತ್ತವೆ. ಅವರು ಕಥೆ ನಿರೂಪಿಸೋ ರೀತಿಯಲ್ಲೇ ಒಂದು ಜೋಶ್ ಇರುತ್ತೆ.

ಇಷ್ಟೆಲ್ಲ ಸಾಧನೆ ಮಾಡಿದ ಈ ಅಪ್ಪಟ ಪ್ರತಿಭಾವಂತ ತಾಯಿಯ ಹೊಟ್ಟೆಯಿಂದಲೇ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು ಅಂದರೆ ಈಗ ನಂಬೋದು ಕಷ್ಟ. ನಾನು ಜೀವನ ಪೂರ್ತಿ ಹಂಬಲಿಸುವುದು ಯಾರಾದ್ರೂ ನನ್ನ ತಂದೆಯಷ್ಟು ಪ್ರೀತಿ ಕೊಡ್ತಾರಾ ಅಂತ.  ಅಪ್ಪನ ಪ್ರೀತಿಯಂತೆ ನನಗೆ ಕಂಡಿದ್ದು ಪ್ರೇಕ್ಷಕರು ಹೊಡೆಯುವ ಚಪ್ಪಾಳೆ. ಅದು ಅಪ್ಪ ಬೆನ್ನು ತಟ್ಟುವಷ್ಟೇ ನನಗೆ ಹುಮ್ಮಸ್ಸು ಕೊಡುತ್ತೆ ಅಂತ ರವಿಮಾಮ ಹೇಳ್ತಾರೆ.

'ನಾನು ಈಗಲೂ ಹೋರಾಡುತ್ತಿದ್ದೇನೆ. ತಾಯಿ ಗರ್ಭ ಗೆದ್ದು ಬಂದವನಿಗೆ, ಈ ಭೂಮಿಯನ್ನ ಗೆಲ್ಲೋಕೆ ಆಗೋದಿಲ್ವಾ? ಸಿನಿಮಾ ಇಂಡಸ್ಟ್ರಿಗೆ ಬಂದಾಗಲೂ, ನಿನಗೇನು ಗೊತ್ತಾಗಲ್ಲ ಸುಮ್ನಿರು ಎಂದು ಕೆಲವರು ಹೇಳಿದ್ರು. ಆಗಲೇ ಪ್ರೇಮಲೋಕ ಸಿನಿಮಾ ಮಾಡಿದ್ದೆ' ಅನ್ನೋ ಈ ಕ್ರೇಜಿಸ್ಟಾರ್‌ ನೂರು ವರ್ಷ ಹೀಗೇ ಹುಮ್ಮಸ್ಸಲ್ಲಿರಲಿ ಅನ್ನೋದು ಅವರ ಅಭಿಮಾನಿಗಳ ಹಾರೈಕೆ. 

Complexion ಬಗ್ಗೆ ಅಭದ್ರತೆ ಇದ್ದರೂ, ಬಾಲಿವುಡ್ ಆಳಿದ ಸೆಲೆಬ್ಟಿಗಳಿವರು!
 

Follow Us:
Download App:
  • android
  • ios