ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕಿಪಿ ಕೀರ್ತಿ, ಪ್ರೀತಿಯಲ್ಲಿ ಬಿದ್ದು ಬ್ರೇಕಪ್ ಮಾಡಿಕೊಂಡಿದ್ದಾರೆ. ಬ್ರೇಕಪ್ ನೋವಿನಿಂದ ಕಣ್ಣೀರಿಡುತ್ತಿರುವ ಆಕೆಯನ್ನು ಹಲವು ವಾಹಿನಿಗಳು ಸಂದರ್ಶನ ಮಾಡುತ್ತಿವೆ. ಕಿಪಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಿ ಬರಲು ಇಷ್ಟಪಡುತ್ತಾರೆ. ಗೆಳೆಯನ ಅನುಮಾನದಿಂದಾಗಿ ಅವರ ಫೋನ್ ಕಾಲ್ ರೆಕಾರ್ಡ್ ಆಗಿ ಲೀಕ್ ಆಗಿದೆ. ಪ್ರೀತಿಯ ಹೆಸರಿನಲ್ಲಿ ಮೋಸವಾಗಿದೆ ಎಂದು ಕಿಪಿ ಕೀರ್ತಿ ಹೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ವೈರಲ್ ಆದ ಹುಡುಗಿ ಕಿಪಿ ಕೀರ್ತಿ. ಮೂಲತಃ ಕೊಡಗಿನ ಹುಡುಗಿ,ಹಾಯ್ ಜನರೇ ಯಾಕೆ ಜನರೇ ಅಂತ ಹೇಳ್ಕೊಂಡು ಜನಪ್ರಿಯತೆ ಪಡೆದು ಈಗ ಅದೇ ಮೀಡಿಯಾಗಳಿಂದ ಸಂಪಾದನೆ ಮಾಡುತ್ತಿದ್ದಾರೆ.ಕಿಪಿ ವಿಡಿಯೋ ಮಾಡಿದರೆ ಸಾಕು ನೋಡುವ ಜನರಿಗೆ ದೊಡ್ಡ ಮನೋರಂಜನೆ. ಆದರೆ ಕೆಲವು ತಿಂಗಳ ಹಿಂದೆ ಕಿಪಿ ಕೀರ್ತಿ ಪ್ರೀತಿಯಲ್ಲಿ ಬಿದ್ದಿರುವ ವಿಚಾರ ದೊಡ್ಡ ಸುದ್ದಿಯಾಗಿತ್ತು. ಅಯ್ಯೋ ಈ ಹುಡುಗಿಗೆ ಬಾಯ್‌ಫ್ರೆಂಡ ಇದ್ದಾನಾ? ಇವಳನ್ನು ಲವ್ ಮಾಡೋ ಹುಡುಗ ಇದ್ದಾನಾ? ಅನ್ನೋ ಪ್ರಶ್ನೆಗಳು ಹುಟ್ಟುಕೊಂಡಿತ್ತು. ಜನರು ಕ್ಲಾರಿಟಿ ಡಿಮ್ಯಾಂಡ್ ಮಾಡಿದರು ಅಂತ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟರು. ಫ್ಯಾಮಿಲಿ ಸಪೋರ್ಟ್ ಮಾಡಿಲ್ಲ ಅಂದ್ರು ನಾವು ಒಬ್ಬರನೊಬ್ಬರು ಬಿಟ್ಟು ಕೊಡುವುದಿಲ್ಲ ಅಂತಿದ್ರು. ಆದರೆ ಈಗ ಬ್ರೇಕಪ್ ಮಾಡ್ಕೊಂಡು ಕಣ್ಣೀರಿಡುತ್ತಿದ್ದಾರೆ. 

ಬ್ರೇಕಪ್ ಆದ ನೋವಿನಲ್ಲಿ ಕಣ್ಣೀರಿಡುತ್ತಿರುವ ಕಿಪಿ ಕೀರ್ತಿಯನ್ನು ಹಲವು ವಾಹಿನಿಗಳು ಸಂದರ್ಶನ ಮಾಡುತ್ತಿದ್ದಾರೆ. ಇಷ್ಟೊಂದು ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವುದಕ್ಕೆ ಈ ವರ್ಷ ಬಿಗ್ ಆಫರ್‌ ಬರಬಹುದು ಅಂತ ಪ್ರಶ್ನಿಸಿದಾಗ. ನಾನು ಬಿಗ್ ಬಾಸ್ ಮನೆಯಲ್ಲಿ ಪರ್ಮನೆಂಟ್ ಆಗಿ ಇರುವುದಕ್ಕೆ ಆಗಲ್ಲ ಸುಮ್ಮನೆ ಹೋಗಿ ಬರುತ್ತೀನಿ. ಕಿಚ್ಚ ಸುದೀಪ್ ಅವರ ದೊಡ್ಡ ಅಭಿಮಾನಿ ನಾನು. ಪುನೀತ್ ರಾಜ್‌ಕುಮಾರ್ ಸರ್ ನಂತರ ನಾನು ಇಷ್ಟ ಪಡುವ ಏಕೈಕ ನಟ ಅಂದ್ರೆ ಕಿಚ್ಚ. ಅವರೊಟ್ಟಿಗೆ ಒಂದು ಫೋಟೋ ಹಾಗೂ ಹ್ಯಾಂಡ್‌ಶೇಖ್ ಮಾಡಿದರೆ ಸಾಕು ನನಗೆ ಖುಷಿಯಾಗುತ್ತದೆ ಆದರೆ ಪರ್ಮನೆಂಟ್ ಆಗಿ ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಮಾತಾಡುವಾಗ ಕಿಪಿ ಕೀರ್ತಿ ಹೇಳಿದ್ದಾರೆ. 

ಡಬಲ್ ಹಣ ಮಾಡ್ಬೇಕು ಅನ್ನೋ ಯೋಚನೆ ಇಲ್ಲ, ಯಾರ ಮುಂದೆನೂ ಕೈ ಚಾಚಲ್ಲ: ಅಜಯ್ ರಾವ್

ಕಿಪಿ ಕೀರ್ತಿ ಮತ್ತು ಮುತ್ತು ಎಂಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಒಂದು ದಿನ ಕಿಪಿ ಫೋನ್ ಬ್ಯುಸಿ ಬರುತ್ತದೆ ಆದ ಅನುಮಾನದಲ್ಲಿ ಮುತ್ತು ಮತ್ತೊಬ್ಬ ಸ್ನೇಹಿತನಾದ ದರ್ಶನ್ ಸಹಾಯ ಪಡೆದು ಫೋನ್ ಮಾಡುತ್ತಾರೆ. ಗೆಳೆಯ ದರ್ಶನ್ ಕಪಿ ಕೀರ್ತಿ ಯಾರೊಟ್ಟಿಗೆ ಮಾತನಾಡುತ್ತಿದ್ದಳು ಎಂದು ತಿಳಿದುಕೊಂಡು ಆತನಿಗೆ (ಸುನೀಲ್) ಫೋನ್ ಮಾಡುತ್ತಾನೆ. ದರ್ಶನ್, ಕಿಪಿ ಕೀರ್ತಿ ಮತ್ತು ಸುನೀಲ್‌ ಕಾಲ್‌ನಲ್ಲಿ ಮಾತನಾಡುವಾಗ ಬಾಯ್‌ಫ್ರೆಂಡ್ ಮುತ್ತು ಕೂಡ ಕೇಳಿಸಿಕೊಳ್ಳುತ್ತಾನೆ. ಈ ಕಾಲ್‌ನ ರೆಕಾರ್ಡ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಬ್ರೇಕಪ್ ಅನೌನ್ಸ್ ಮಾಡುತ್ತಾನೆ. ಅನುಮಾನದಲ್ಲಿ ಈ ರೀತಿ ಆಯ್ತು ಅಂತ ಬೇಸರ ಮಾಡಿಕೊಂಡು ಕಿಪಿ ಕಣ್ಣೀರಿಡುತ್ತಾಳೆ ಆದರೆ ಮುತ್ತು ಇಷ್ಟು ದಿನ ಪ್ರೀತಿ ಹೆಸರಿನಲ್ಲಿ ಹಣ ಪಡೆದು ಮಾಡಿದ್ದು ಮೋಸ ಎಂದು ಹಣ ಕೇಳಲು ಮುಂದಾಗುತ್ತಾಳೆ. ಹಣ ಕೊಡಲು ಹಣವಿಲ್ಲದ ಕಾರಣ ಆಕೆಯ ನಂಬರ್‌ನ ಎಲ್ಲೆಡೆ ಲೀಕ್ ಮಾಡುತ್ತಾರೆ. ಸದ್ಯ ಇವರ ಕಹಾನಿ ಇಲ್ಲಿಗೆ ಬಂದು ನಿಂತಿದೆ. ಮುಂದೆ ಏನಾಗುತ್ತದೆ ಕಾದು ನೋಡಬೇಕಿದೆ. 

ನಾನು ಹಾಕೋ ಬಟ್ಟೆಗೂ ಕಾಮೆಂಟ್ ಮಾಡ್ತಾರೆ, ದುಡ್ಡಿಗೆ ಆ ಕೆಲಸ ಮಾಡಲ್ಲ: ನಮ್ರತಾ ಗೌಡ