Asianet Suvarna News Asianet Suvarna News

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕಾಟೇರ' ಟ್ರೈಲರ್ ಹುಬ್ಬಳ್ಳಿಯಲ್ಲಿ ಬಿಡುಗಡೆ

ದರ್ಶನ ನಾಯಕತ್ವದ ಕಾಟೇರ ಸಿನಿಮಾದಲ್ಲಿ ಮಾಲಾಶ್ರೀ ಮಗಳು ಆರಾಧನಾ ಅವರು ನಾಯಕಿಯಾಗಿ ನಟಿಸಿದ್ದಾರೆ. ಆರಾಧನಾ ಅವರಿಗೆ ಇದು ಮೊದಲ ಚಿತ್ರವಾಗಿದೆ.

Challenging star darshan movie kaatera trailer out at hubli on 16 December 2023 srb
Author
First Published Dec 16, 2023, 7:55 PM IST

ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಕಾಟೇರ; ಸಿನಿಮಾದ ಟ್ರೈಲರ್ ಇಂದು, 16 ಡಿಸೆಂಬರ್ 2023ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ. ಸಾಯಂಕಾಲ 5 ಗಂಟೆ ನಂತರ ಹುಬ್ಬಳ್ಳಿಯಲ್ಲಿ ಟ್ರೈಲರ್ ರಿಲೀಸ್ ಆಗಲಿದ್ದು, ಈ ಕಾರ್ಯಕ್ರಮದಲ್ಲಿ ಕಾಟೇರ ಸಿನಿಮಾದ ನಿರ್ಮಾಪಕ ರಾಕಲೈನ್ ವೆಂಕಟೇಶ್ ಸೇರದಂತೆ ಇಡೀ ಟೀಮ್ ಭಾಗಿಯಾಗಲಿದೆ. ಮುಖ್ಯವಾಗಿ ಕಾಟೇರ ಹೀರೋ ದರ್ಶನ್ ಮುಖ್ಯ ಆಕರ್ಷಣೆ ಆಗಲಿದ್ದಾರೆ. 

ರಾಮಮಂದಿರ ಉದ್ಘಾಟನೆಗೆ 'ಕಾಂತಾರ' ರಿಷಬ್ ಶೆಟ್ಟಿಗೆ ಆಹ್ವಾನ

ಕಾಟೇರ ಸಿನಿಮಾದ ಫೈಟಿಂಗ್​ನಲ್ಲಿ ಭಾರೀ ವಿಶೇಷತೆ ಇದೆಯಂತೆ. ಈ ಚಿತ್ರದ ಫೈಟ್‌ ಸೀನ್‌ನಲ್ಲಿ ದರ್ಶನ್ ಸಖತ್ ಆಗಿಯೇ ಮಿಂಚಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳಿಗೆ ಯಾವತ್ತೂ ಕೊರತೆ ಇರುವುದಿಲ್ಲ. ಆದರೆ ಕಾಟೇರ ಚಿತ್ರದಲ್ಲಿ ಫೈಟ್ ಸೀನ್ ಬೇರೆಯದೇ ಲೆವಲ್‌ನಲ್ಲಿ ಇರಲಿದೆಯಂತೆ. ವಿಶೇಷವೆಂದರೆ, ನಟ ದರ್ಶನ್ ಈ ಚಿತ್ರದಲ್ಲಿ ಕೈ ಕಟ್ಟಿಕೊಂಡೇ ಫೈಟ್ ಮಾಡಿದ್ದಾರಂತೆ. ಡಿಸೆಂಬರ್ 16 ರಂದು ಕಾಟೇರ ಚಿತ್ರದ ಫಸ್ಟ್ ಟ್ರೈಲರ್ ರಿಲೀಸ್ ಆಗಲಿದ್ದು, ದರ್ಶನ್ ಫ್ಯಾನ್ಸ್ ಕುತೂಹಲದಿಂದ ಕಾಯುತ್ತಿದ್ದಾರೆ. 

ಸೂಪರ್ ಸ್ಟಾರ್ ಮಗನಾಗಿದ್ದರೂ ದೇಶದ ದೊಡ್ಡ ಫ್ಲಾಪ್ ನಟ, 12 ವರ್ಷಗಳಲ್ಲಿ 19 ಸೋಲು; ಮತ್ತೆ ಕಂಬ್ಯಾಕ್!

ದರ್ಶನ ನಾಯಕತ್ವದ ಕಾಟೇರ ಸಿನಿಮಾದಲ್ಲಿ ಮಾಲಾಶ್ರೀ ಮಗಳು ಆರಾಧನಾ ಅವರು ನಾಯಕಿಯಾಗಿ ನಟಿಸಿದ್ದಾರೆ. ಆರಾಧನಾ ಅವರಿಗೆ ಇದು ಮೊದಲ ಚಿತ್ರವಾಗಿದೆ. ಕಾಟೇರ ಸಿನಿಮಾಗೆ ರಾಕ್​ ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದು, ಸುಮಾರು 45 ಕೋಟಿ ವೆಚ್ಚದಲ್ಲಿ ಕಾಟೇರ ಸಿನಿಮಾ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ. ಆದರೆ ಈ ಯಾವುದೇ ಕುರಿತು ಅಧಿಕೃತ ಮಾಹಿತಿ ಇಲ್ಲ. ದರ್ಶನ್-ಆರಾಧನಾ ಜೋಡಿಯ ಕಾಟೇರ ಚಿತ್ರದ 2 ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು, ಇಂದು ಟ್ರೇಲರ್ ಬಿಡುಗಡೆ ಆಗಲಿದೆ.  ಡಿಸೆಂಬರ್ 29ರಂದು ಕಾಟೇರ ಸಿನಿಮಾ ಬಿಡುಗಡೆಯಾಗುತ್ತಿದೆ.

ಇಂದು ಬಿಡುಗಡೆ ಆಗಲಿರುವ ದರ್ಶನ್ ನಾಯಕತ್ವದ ಕಾಟೇರ ಚಿತ್ರದ ಟ್ರೈಲರ್‌ಗಾಗಿ ದರ್ಶನ್ ಅಭಿಮಾನಿ ಬಳಗ ಸೇರಿದಂತೆ ಇಡೀ ಸ್ಯಾಂಡಲ್‌ವುಡ್ ಕಾದು ಕುಳಿತಿದೆ. ಮಾಸ್ ಪ್ರಿಯರು ದರ್ಶನ್ ಸಿನಿಮಾ ನೋಡಲು ಯಾವತ್ತೂ ಕಾದು ಕುಳಿತಿರುತ್ತಾರೆ. ಇಂದು ಟ್ರೈಲರ್ ನೋಡಿ, ಇನ್ನು ಸ್ವಲ್ಪ ದಿನಗಳ ಬಳಿಕ ಸಿನಿಮಾ ನೋಡಲು ದರ್ಶನ್ ಸಿನಿಮಾ ಪ್ರಿಯರು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ ಎನ್ನಬಹುದು. 

Follow Us:
Download App:
  • android
  • ios