ಇತ್ತೀಚಿಗೆ ಸಿಸಿಎಲ್ ಪಂದ್ಯ ಆಡೋವಾಗ ಕಿಚ್ಚ ಬೌಲರ್ಗೆ ಕೆಟ್ಟ ಭಾಷೆಯಲ್ಲಿ ಬೈದು ಬುದ್ದಿ ಹೇಳಿದ್ರು. ಸುದೀಪ್ ಬೈದಿದ್ದ ಆ ವಿಡಿಯೋ ಸಖತ್ ವೈರಲ್ ಆಗಿತ್ತು. ರಕ್ಕಸಪುರದೋಳ್ ವೇದಿಕೆ ಮೇಲೆ ಆ ಬೈಗುಳದ ಹಿಂದಿನ ಸೀಕ್ರೆಟ್ ಹೇಳಿದ್ರು ಕಿಚ್ಚ ಸುದೀಪ್..
ಸುದೀಪ್ ಬೈಗುಳದ ರಹಸ್ಯ ಬಯಲು!
ಸದ್ಯಕ್ಕೆ ನಟ ಕಿಚ್ಚ ಸುದೀಪ್ ಅವರು ತಮ್ಮದೊಂದು ಬೈಗುಳದ ಮೂಲಕ ಸುದ್ದಿಯಾಗುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಅದೆಷ್ಟು ವೈರಲ್ ಆಗಿದೆ ಎಂದರೆ, ಅದೀಗ ಚರ್ಚೆಯ ಮಟ್ಟಕ್ಕೆ ಹೋಗಿದೆ. ಹಾಗಿದ್ದರೆ ಅದೆಲ್ಲಿ ಹೇಳಿದ್ದು? ಕಿಚ್ಚ ಸುದೀಪ್ (Kichcha Sudeep) ಅವರ ಬಾಯಿಂದ ಯಾಕೆ ಮತ್ತು ಹೇಗೆ ಅಂತಹ ಬೈಗುಳ ಹೊರಗೆ ಬಂದಿದ್ದು? ಈ ರಹಸ್ಯ ಹೊತ್ತಿರೀ ಸ್ಟೋರಿ ಇಲ್ಲಿದೆ ನೋಡಿ..
ಸದ್ಯ ರಾಜ್ ಬಿ. ಶೆಟ್ಟಿ ನೆಗೆಟಿವ್ ಪಾತ್ರದಲ್ಲಿ ನಟಿಸಿರೋ 'ಲ್ಯಾಂಡ್ ಲಾರ್ಡ್' ಥಿಯೇಟರ್ ಅಂಗಳದಲ್ಲಿದೆ. ಅಷ್ಟರಲ್ಲೇ ಶೆಟ್ರು ಪೊಲೀಸ್ ಪಾತ್ರದಲ್ಲಿ ನಟಿರೋ ರಕ್ಕಸಪುರದೋಳ್ ಸಿನಿಮಾ ಮುಂದಿನ ವಾರ ಥಿಯೇಟರ್ ಅಂಗಳಕ್ಕೆ ಬರ್ತಾ ಇದೆ. ಸದ್ಯ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಟ್ರೈಲರ್ ಬಿಡುಗಡೆ ಮಾಡಿದ ಕಿಚ್ಚ ತಮ್ಮ ರಕ್ಕಸ ರೂಪದ ಕಥೆ ಕೂಡ ಹೇಳಿದ್ದಾರೆ. ಅಲ್ಲಿಯೇ ಈ ಬೈಗುಳದ ಬಗ್ಗೆ ಕಿಚ್ಚ ಸುದೀಪ್ ಮಾತನ್ನಾಡಿದ್ದಾರೆ.
ರಕ್ಕಸಪುರದೋಳ್ ಖಾಕಿ ತೊಟ್ಟ ರಾಜ್ ಶೆಟ್ಟಿ..!
ಯೆಸ್ ರಾಜ್ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಹೊಸ ಚಿತ್ರಗಳ ಮೂಲಕ, ಹೊಸ ಹೊಸ ಪಾತ್ರಗಳ ಮೂಲಕ ಪ್ರೇಕ್ಷಕರ ಎದುರು ಬರ್ತಾ ಇದ್ದಾರೆ. 45, ಲ್ಯಾಂಡ್ ಲಾರ್ಡ್ ನಂತರ ಸದ್ಯ ರಾಜ್ ಶೆಟ್ಟಿ ಪೊಲೀಸ್ ಪಾತ್ರದಲ್ಲಿ ನಟಿಸಿರೋ ರಕ್ಕಸಪುರದೋಳ್ ಮೂವಿ ರಿಲೀಸ್ಗೆ ಸಜ್ಜಾಗಿದೆ.
ಸದ್ಯ ರಕ್ಕಸಪುರದೋಳ್ ಟ್ರೈಲರ್ ಲಾಂಚ್ ಆಗಿದೆ. ರವಿ ಸಾರಂಗ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಒಂದು ಇನ್ಟ್ರೆಸ್ಟಿಂಗ್ ಕಥೆಯನ್ನ ಕುತೂಹಲಭರಿತವಾಗಿ ಹೇಳಲಿಕ್ಕೆ ಹೊರಟಂತಿದೆ.
ರಕ್ಕಸಪುರಕ್ಕೆ ಬಂದ ಅಭಿನಯ ಚಕ್ರವರ್ತಿ
ಯೆಸ್ ರಕ್ಕಸಪುರದೋಳ್ ಟ್ರೈಲರ್ ಲಾಂಚ್ಗೆ ಅತಿಥಿಯಾಗಿ ಬಂದಿದ್ದು ಕಿಚ್ಚ ಸುದೀಪ್. ಜೋಗಿ ಪ್ರೇಮ್ ಮತ್ತು ಸುದೀಪ್ ರಕ್ಕಸಪುರದೋಳ್ ಟ್ರೈಲರ್ ಬಿಡುಗಡೆ ಮಾಡಿ ಶೆಟ್ಟರ ಹೊಸ ಸಾಹಸಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಕಿಚ್ಚನ ಬೈಗುಳದ ಸೀಕ್ರೆಟ್ ವೇದಿಕೆಯಲ್ಲಿ ರಿವೀಲ್
ಇತ್ತೀಚಿಗೆ ಸಿಸಿಎಲ್ ಪಂದ್ಯ ಆಡೋವಾಗ ಕಿಚ್ಚ ಬೌಲರ್ಗೆ ಕೆಟ್ಟ ಭಾಷೆಯಲ್ಲಿ ಬೈದು ಬುದ್ದಿ ಹೇಳಿದ್ರು. ಸುದೀಪ್ ಬೈದಿದ್ದ ಆ ವಿಡಿಯೋ ಸಖತ್ ವೈರಲ್ ಆಗಿತ್ತು. ರಕ್ಕಸಪುರದೋಳ್ ವೇದಿಕೆ ಮೇಲೆ ಆ ಬೈಗುಳದ ಹಿಂದಿನ ಸೀಕ್ರೆಟ್ ಹೇಳಿದ್ರು ಕಿಚ್ಚ ಸುದೀಪ್,
ತಮ್ಮ ರಕ್ಕಸ ರೂಪ ಹೊರಬರಲಿಕ್ಕೆ ನಿರ್ದೇಶಕ ಪ್ರೇಮ್ ಸಹವಾಸ ಕಾರಣ ಅಂತ ಸುದೀಪ್ ತಮಾಷೆ ಮಾಡಿದ್ದಾರೆ. ಇನ್ನೂ ಈ ಇವೆಂಟ್ಗೆ ಬಂದ ವೇಳೆ ಕಿಚ್ಚನ ಹೇರ್ ಸ್ಟೈಲ್ ಕೂಡ ಸಖತ್ ಗಮನ ಸೆಳೆದಿದೆ. ಉದ್ದ ಕೂದಲಿಗೆ ಕ್ಲಿಪ್ ಕಟ್ಟಿಕೊಂಡಿದ್ದ ಸುದೀಪ್ ಬಿಲ್ಲಾ ರಂಗಾ ಬಾದ್ಷಾ ಚಿತ್ರಕ್ಕಾಗಿ ತಯಾರಾಗ್ತಾ ಇದ್ದಾರೆ. ಒಟ್ಟಾರೆ ಶೆಟ್ಟರ ರಕ್ಕಸಪುರದೋಳ್ ನೆಪದಲ್ಲಿ ಕಿಚ್ಚನ ರಕ್ಕಸ ಅವತಾರದ ರಹಸ್ಯ ಬಯಲಾಗಿದೆ.


