Asianet Suvarna News Asianet Suvarna News

ಹೊಸ ಸರ್​ಪ್ರೈಸ್​ ಹೊತ್ತು ಬಂದ ಬಾದ್​ ಷಾ ಸುದೀಪ್: ಕಿಚ್ಚನ ಸರ್​ಪ್ರೈಸ್​ಗಾಗಿ ಸ್ನೇಹಿತ ಬಳಗ ಫುಲ್ ಅಲರ್ಟ್!

ಸುದೀಪ್ ಹುಟ್ಟುಹಬ್ಬದ ದಿನ ಆ ವಿಚಾರ ಗೊತ್ತಾಗುತ್ತಂತೆ. ಹಾಗಾದ್ರೆ ಏನದು..? ಇಲ್ಲಿದೆ ನೋಡಿ ಫುಲ್ ಡಿಟೈಲ್ಸ್. ಸ್ಯಾಂಡಲ್​ವುಡ್​ ಫುಲ್ ಆ್ಯಕ್ಟೀವ್ ಆಗಿದೆ. ಭೀಮ, ಕೃಷ್ಣಂ ಪ್ರಣಯ ಸಖಿ  ಗೆದ್ದಾಗಿದೆ. ಧ್ರುವ ಸರ್ಜಾ ಮಾರ್ಟಿನ್ ಅಬ್ಬರ ಇಡುತ್ತಿದ್ದಾರೆ. 

Kichcha Sudeep MAX movie is scheduled for a nationwide release across India on September 27 gvd
Author
First Published Aug 23, 2024, 4:24 PM IST | Last Updated Aug 23, 2024, 4:24 PM IST

ಬಾದ್​ ಷಾ ಸುದೀಪ್​​ ಸರ್​ಪ್ರೈಸ್ ಕೊಟ್ಟು ಬಹಳಾ ದಿನಗಳಾಯ್ತು. ಕಿಚ್ಚನ ಬಗ್ಗೆ ಹೊಸ ಅಪ್ಡೇಟ್​ ಅಂದ್ರೆ ಬಿಗ್​ಬಾಸ್​​​ ಸೀಸರ್​ 11ರ ಪ್ರೋಮೋ ಶೂಟ್ ಮಾಡಿದ್ದಾರೆ ಅನ್ನೋದು. ಆದ್ರೆ ಅದಕ್ಕೂ ಮಿಗಿಲಾದ ಸೂಪರ್​ ಎಕ್ಸ್​​ಕ್ಲ್ಯೂಸೀವ್ ಸುದ್ದಿಯೊಂದು ಈಗ ರಿವಿಲ್ ಆಗಿದೆ. ಸುದೀಪ್ ಹುಟ್ಟುಹಬ್ಬದ ದಿನ ಆ ವಿಚಾರ ಗೊತ್ತಾಗುತ್ತಂತೆ. ಹಾಗಾದ್ರೆ ಏನದು..? ಇಲ್ಲಿದೆ ನೋಡಿ ಫುಲ್ ಡಿಟೈಲ್ಸ್. ಸ್ಯಾಂಡಲ್​ವುಡ್​ ಫುಲ್ ಆ್ಯಕ್ಟೀವ್ ಆಗಿದೆ. ಭೀಮ, ಕೃಷ್ಣಂ ಪ್ರಣಯ ಸಖಿ  ಗೆದ್ದಾಗಿದೆ. ಧ್ರುವ ಸರ್ಜಾ ಮಾರ್ಟಿನ್ ಅಬ್ಬರ ಇಡುತ್ತಿದ್ದಾರೆ. 

ಆ ಕಡೆ ರಿಯಲ್ ಸ್ಟಾರ್​ ಯುಐ ಹೊತ್ತುಕೊಂಡು ರಂಗು ಹೆಚ್ಚಿಸೋಕೆ ರೆಡಿ ಎಂದಿದ್ದಾರೆ. ಆದ್ರೆ ಬಾದ್ ಷಾ ಸುದೀಪ್​ ಮಾತ್ರ ಸೈಲೆಂಟ್​ ಆಗೆ ಇದ್ದುಕೊಂಡು ಭರ್ಜರಿಯಾಗಿರೋ ಸರ್​ಪ್ರೈಸ್ ಸುದ್ದಿಯೊಂದನ್ನ ಹೊತ್ತು ಹೊರಟಿದ್ದಾರೆ. ಆ ಸರ್​ಪ್ರೈಸ್​​ಗಾಗಿ ಸುದೀಪ್ ಅಭಿಮಾನಿಗಳ ಬಳಗ ಫೂಲ್ ಅಲರ್ಟ್ ಆಗಿದೆ. ಅದೇ ಮ್ಯಾಕ್ಸ್​ ಸರ್​ಪ್ರೈಸ್​. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮ್ಯಾಕ್ಸ್​ ಸಿನಿಮಾ ಮಾಡ್ತಾ ಎರಡು ವರ್ಷ ಆಗ್ತಾ ಬಂದು. ಸುದೀಪ್​ರನ್ನ ಬೆಳ್ಳಿತೆರೆ ಮೇಲೆ ನೋಡೋಕೆ ಕೋಟಿ ಕಣ್ಣುಗಳು ಕಾಯುತ್ತಿವೆ. 

ಆ ದಿನ ತೀರಾ ಹತ್ತಿರದಲ್ಲೇ ಇದೆ. ಯಾಕಂದ್ರೆ ಮ್ಯಾಕ್ಸ್​ ಸಿನಿಮಾ ರಿಲೀಸ್ ಡೇಟ್​​​ನ ಅನೌನ್ಸ್ ಮಾಡೋ ಸರ್​ಪ್ರೈಸ್​​ ಸುದ್ದಿಯನ್ನ ಬಾದ್​​ಷಾ ರಿವೀಲ್ ಮಾಡುತ್ತಿದ್ದಾರೆ. ಅದು ತನ್ನ ಹುಟ್ಟುಹಬ್ಬದ ದಿನ ಅನ್ನೋದು ವಿಶೇಷ. ಸೆಪ್ಟೆಂಬರ್​ 2 ಕಿಚ್ಚ ಸುದೀಪ್​​ಗೆ ಜನ್ಮದಿನ. ಆ ದಿನದಂದೇ ಮ್ಯಾಕ್ಸ್​ ರಿಲೀಸ್ ಡೇಟ್​ ಅನೌನ್ಸ್ ಮಾಡೋಕೆ ಬಾದ್​ ಷಾ ಡಿಸೈಡ್ ಮಾಡಿದ್ದಾರೆ. ಆದ್ರೆ ಈ ರಿಲೀಸ್ ಡೇಟ್​ ಹಿಂದೆ ಹೋದ ಏಷ್ಯಾನೆಟ್ ಸುವರ್ಣ ನ್ಯೂಸ್​ಗೆ ಸಿಕ್ಕ ಇಂಟರ್​ನಲ್ ಮಾಹಿತಿ ಏನ್ ಗೊತ್ತಾ. 

ಡಿಂಪಲ್ ಕ್ವೀನ್​ ಜತೆ ದಾಸನ ರಹಸ್ಯ ಮಾತುಕತೆ: ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಅಭಿಮಾನಿಯ ಹುಚ್ಚಾಟ!

ಸುದೀಪ್​ರ ಮ್ಯಾಕ್ಸ್ ಸಿನಿಮಾ ಸೆಪ್ಟೆಂಬರ್27ಕ್ಕೆ ರಣೋತ್ಸಾಹದಿಂದ ಕಣಕ್ಕಿಳಿಯಲಿದೆ ಅನ್ನೋದು. ಪ್ರೊಡಕ್ಷನ್ ಕಂಪನಿ ಮತ್ತು ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ಎಲ್ಲ ಮೀಟಿಂಗ್‌ಗಳು ನಡೆದು, ಈಗ ಸೆಪ್ಟೆಂಬರ್27ಕ್ಕೆ ಮ್ಯಾಕ್ಸ್ಗೆ ರಿಲೀಸ್​ ಡೇಟ್ ಫಿಕ್ಸ್ ಮಾಡಲಾಗಿದೆಯಂತೆ. ಅಲ್ಲಿಗೆ ಸುದೀಪ್ ಬೆಳ್ಳಿತೆರೆ ಮೇಲೆ ಬೆಳಗೋದನ್ನ ನೋಡೋಕೆ ಫ್ಯಾನ್ಸ್ ರೆಡಿಯಾಗ್ಬೇಕು ಅಷ್ಟೆ.

Latest Videos
Follow Us:
Download App:
  • android
  • ios