* ವಿಕ್ರಾಂತ್ ರೋಣ ಡಬ್ಬಿಂಗ್ ಮುಗಿಸಿದ ಕಿಚ್ಚ ಸುದೀಪ್* ವಿಶಿಷ್ಟವಾಗಿ ಬರಮಾಡಿಕೊಂಡ ಅಭಿಮಾನಿಗಳು* ಕನ್ನಡದ ಚಿತ್ರಗಳ ಬಗ್ಗೆ ಹೆಚ್ಚಿದ ನಿರೀಕ್ಷೆ* ಕೊರೋನಾ ಲಾಕ್ ಡೌನ್ ನಂತರ ಒಂದೊಂದೆ ಕೆಲಸ 

ಬೆಂಗಳೂರು(ಜೂ. 30) ಬಹು ನಿರೀಕ್ಷೆಯ ‘ವಿಕ್ರಾಂತ್ ರೋಣ’ ಚಿತ್ರಕ್ಕೆ ನಟ ಸುದೀಪ್ ಡಬ್ಬಿಂಗ್ ಮುಗಿಸಿದ್ದಾರೆ. ‘ತುಂಬಾ ದಿನಗಳ ನಂತರ ಸಿನಿಮಾಗೆ ನನ್ನ ಧ್ವನಿ ನೀಡುತ್ತಿದ್ದೇನೆ ಎಂದಿದ್ದ ಸುದೀಪ್ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಭಿಮಾನಿಗಳು ವಿಶಿಷ್ಟ ರೀತಿಯಲ್ಲಿ ಕಿಚ್ಚನ ಕೆಲಸ ಬರಮಾಡಿಕೊಂಡಿದ್ದಾರೆ. ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ಅವರನ್ನು ಒಂದೇ ಬೈಕ್ ನಲ್ಲಿ ಕುಳ್ಳಿರಿಸಿ ಕಾಯುತ್ತಿದ್ದೇವೆ ಎಂದಿದ್ದಾರೆ. ಇದರ ಅರ್ಥ ಕಿಚ್ಚನ ವಿಕ್ರಾಂತ್ ರೋಣ ಮತ್ತು ರಕ್ಷಿತ್ ಶೆಟ್ಟಿಯ ಚಾರ್ಲಿ ಬಿಡುಗಡೆಗೆ ಕಾಯುತ್ತಿದ್ದೇವೆ ಎನ್ನುವುದು.

ಜೋಡಿಯಾದ ರಿಯಲ್ ಸ್ಟಾರ್ ಮತ್ತು ಕಿಚ್ಚ ಸುದೀಪ್

ಅನೂಪ್ ಭಂಡಾರಿ ನಿರ್ದೇಶನದ, ಜಾಕ್ ಮಂಜು ನಿರ್ಮಾಣದ ವಿಕ್ರಾಂತ್ ರೋಣ ಚಿತ್ರದಲ್ಲಿ ರವಿಶಂಕರ್ ಗೌಡ, ನೀತಾ ಅಶೋಕ್ ನಟಿಸಿದ್ದಾರೆ.ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್‌ಗೂ ಮುನ್ನ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ನಟ ರವಿಶಂಕರ್ ಗೌಡ ಸಿನಿಮಾದ ಡಬ್ಬಿಂಗ್ ಮುಗಿಸಿದ್ದರು.

Scroll to load tweet…
Scroll to load tweet…