Asianet Suvarna News Asianet Suvarna News

ಕಿಚ್ಚನ 'ಬಿಲ್ಲ ರಂಗ ಭಾಷಾ' ಸ್ಕ್ರಿಪ್ಟ್ ಪೂಜೆ ಇದು ನಿಜಾನ..? ಇದು 'ಬಿಲ್ಲ ರಂಗ ಭಾಷಾ' ಕತೆಯೋ 'ಅಶ್ವತ್ಥಾಮ ಸ್ಟೋರಿನೋ..?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಮ್ಯಾಕ್ಸ್' ಸಿನಿಮಾ ಶೂಟಿಂಗ್ ಮುಕ್ತಾಯಕ್ಕೆ ಬಂದಿದೆ. ಈ ನಡುವೆ ಕೆಸಿಸಿ ಸೀಸನ್-4 ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಬಿಗ್ಬಾಸ್ ಕೂಡ ಮಾಡುತ್ತಿದ್ದಾರೆ. 
 

Kichcha Sudeep Billa Ranga Baashaa Script Pooja Is this true gvd
Author
First Published Nov 27, 2023, 8:16 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಮ್ಯಾಕ್ಸ್' ಸಿನಿಮಾ ಶೂಟಿಂಗ್ ಮುಕ್ತಾಯಕ್ಕೆ ಬಂದಿದೆ. ಈ ನಡುವೆ ಕೆಸಿಸಿ ಸೀಸನ್-4 ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಬಿಗ್ಬಾಸ್ ಕೂಡ ಮಾಡುತ್ತಿದ್ದಾರೆ. ಅಷ್ಟೆ ಅಲ್ಲ ತನ್ನದೇ ನಿರ್ದೇಶನದಲ್ಲಿ ಸಿನಿಮಾ ಘೋಷಿಸಿದ್ದಾರೆ. ಇನ್ನು ಆರ್‌. ಚಂದ್ರು ನಿರ್ದೇಶನದ ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದ್ರೆ ಈಗ ಕಿಚ್ಚನ ಮತ್ತೊಂದು ಸಿನಿಮಾ ಬಗ್ಗೆ ಭಾರಿ ನ್ಯೂಸ್ ಒಂದು ಲೀಕ್ ಆಗಿದೆ. ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಎರಡ್ಮೂರು ಸಿನಿಮಾಗಳು ಘೋಷಣೆ ಆಗಿತ್ತು. 

ಕೊನೆಗೆ 'ವಿಕ್ರಾಂತ್ ರೋಣ' ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಿತ್ತು. ಅದಕ್ಕೂ ಮುನ್ನ 'ಬಿಲ್ಲ ರಂಗ ಬಾಷ' ಹಾಗೂ 'ಅಶ್ವತ್ಥಾಮ' ಸಿನಿಮಾ ಅನೌನ್ಸ್ ಆಗಿತ್ತು. ಆದ್ರೆ ಆ ಎರಡು ಸಿನಿಮಾಗಳು ಬಜೆಟ್ ಹಾಗು ಶೂಟಿಂಗ್ಗೆ ಹೆಚ್ಚು ಸಮಯ ಬೇಕು ಅನ್ನೋ ಕಾರಣಕ್ಕೆ ಶುರುವಾಗ್ಲಿಲ್ಲ. ಹೀಗಾಗಿ ವಿಕ್ರಾಂತ್ ರೋಣ ಆಯ್ತು. ಈ ಸಿನಿಮಾದ ಬಳಿಕ ಕಿಚ್ಚನಿಗಾಗಿ ಅನೂಪ್ ಭಂಡಾರಿ ಕತೆ ಬರೆಯುತ್ತಲೇ ಇದ್ದಾರೆ. ಆದ್ರೆ ಈಗ ಲೆಟೆಸ್ಟ್ ಏನಪ್ಪ ಅಂದ್ರೆ ಕಿಚ್ಚನ ಮನೆ ಬಳಿ ಇರೋ ಜೆಪಿ ನಗರದ ದೇವಸ್ಥಾನವೊಂದರಲ್ಲಿ ಸದ್ದಿಲ್ಲದೇ ಸ್ಕ್ರಿಪ್ಟ್ ಪೂಜೆ ಆಗಿದೆ. ನಿರ್ದೇಶಕ ಅನೂಪ್ ಭಂಡಾರಿ ಸ್ಕ್ರಿಪ್ಟ್ ಪೂಜೆ ಮಾಡಿರೋದು ಯಾವ್ ಸಿನಿಮಾಗೆ..? 

'ಬಿಲ್ಲ ರಂಗ ಬಾಷ' ಅಥವಾ 'ಅಶ್ವತ್ಥಾಮ' ಸಿನಿಮಾ ಕೈಗೆತ್ತಿಕೊಳ್ಳುತ್ತಾರಾ? ಅನ್ನೋ ಕುತೂಹಲ ಮೂಡಿದೆ. ಸ್ಕ್ರಿಪ್ಟ್‌ ಪೂಜೆ ಬಗ್ಗೆ ಅನೂಪ್ ಭಂಡಾರಿ ಬಾಯ್ ಬಿಟ್ಟಿದ್ದು, ಸರಳವಾಗಿ ಸ್ಕ್ರಿಪ್ಟ್ ಪೂಜೆ ಮಾಡಿದ್ದೇವೆ. ಯಾವ ಸಿನಿಮಾ? ಯಾವಾಗ ಶುರುವಾಗುತ್ತದೆ? ಅನ್ನೋದನ್ನು ಶೀಘ್ರದಲ್ಲೇ ಹೇಳ್ತೀವಿ. ಸುದೀಪ್ ಸರ್‌ಗಾಗಿ ಮಾಡಿರೋ ಸ್ಕ್ರಿಪ್ಟ್ ಇದು. ಮುಂದಿನ ವರ್ಷವೇ ಚಿತ್ರೀಕರಣ ಆರಂಭವಾಗುತ್ತದೆ. ನಾವೇ ಅಧಿಕೃತವಾಗಿ ಸಿನಿಮಾ ಘೋಷಿಸುತ್ತೇವೆ" ಎಂದಿದ್ದಾರೆ. ಹೀಗಾಗಿ ಇದು ಬಿಲ್ಲ ರಂಗ ಭಾಷಾ ಸಿನಿಮಾದ ಕಥೆಯೋ ಅಥವ ಅಶ್ವತ್ಥಾಮ ಸಿನಿಮಾದ ಸ್ಟೋರಿಯೋ ಅನ್ನೋ ಕುತೂಹಲ ಮೂಡಿದೆ.

Follow Us:
Download App:
  • android
  • ios