'ಯಾರದೋ ಮಾತು ಕೇಳಿ ರಿಯಾಕ್ಟ್ ಮಾಡೋನು ನಾನು ಅಲ್ಲವೇ ಅಲ್ಲ.. ಯಾರಾದ್ರೂ ಏನಾದ್ರೂ ಅಂದಿದಾರೆ ಅಂದ್ರೆ ಅದು ನಮ್ಮ ಕಣ್ಮುಂದೆ ನಡಿಬೇಕು.. ಇಲ್ಲಾ ಅಂದ್ರೆ ನಾನು ಹೇಳಿದೀನಿ ಹೌದು ಅಂತ ಅವ್ರು ನನ್ ಕಣ್ಮುಂದೆ ಒಪ್ಕೋಬೇಕು.. ಇನ್ನೂ ಏನಂದ್ರು ನಟ ಕಿಚ್ಚ ಸುದೀಪ್ ನೋಡಿ..

ಸುದೀಪ್‌-ದರ್ಶನ್ ಮನಸ್ತಾಪ

ಸ್ಯಾಂಡಲ್‌ವುಡ್ ಸ್ಟಾರ್ ನಟರಲ್ಲಿ ಕಿಚ್ಚ ಸುದೀಪ್ (Kichcha Sudeep) ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ಅವರಿಬ್ಬರೂ ಸದ್ಯ ಸ್ನೇಹಿತರಾಗಿ ಉಳಿದಿಲ್ಲ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರೋ ಸಂಗತಿ. ಒಂದು ದಶಕವೇ ಕಲೆದುಹೋಗಿದೆ ಈ ದರ್ಶನ್-ಸುದೀಪ್ ಮಿತ್ರತ್ವ ಹೊರಟುಹೋಗಿ. ಆದರೆ, ಈಗಲೂ ಕೂಡ ಆ ಬಗ್ಗೆ ಅವರಿಬ್ಬರ ಬಗ್ಗೆ ಪ್ರಶ್ನೆಗಳು ಜನರ ಮನಸ್ಸಿನಿಂದ ಹೊರಟುಹೋಗಿಲ್ಲ ಎನ್ನಬಹುದು. ಸದ್ಯ ನಟ ದಶ್ನ್ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಹೀಗಾಗಿ ಜನರು ಅಥವಾ ಜನರ ಪ್ರತಿನಿಧಿಯಾಗಿ ಪ್ರಶ್ನೆ ಕೇಳುವ ಮಾಧ್ಯಮದವರಿಗೆ ಸಿಗೋದು ಕಿಚ್ಚಸುದೀಪ್.

ನಟ ಸುದೀಪ್ ಅವರಿಗೆ ಇತ್ತೀಚೆಗೆ ಒಬ್ಬ ವ್ಯಕ್ತಿಯ ಪ್ರಶ್ನೆ ಎಂಬಂತೆ, 'ದರ್ಶನ್ ಹಾಗು ನೀವು ಒಂದಾದರೆ ತುಂಬಾ ಖುಷಿಯ ವಿಚಾರ. ನೀವಿಬ್ಬರೂ ಸದ್ಯವೇ ಒಂದಾಗ್ತೀರ ಅಂತ ಸುದ್ದು ಬರ್ತಿದೆ. ಈ ಬಗ್ಗೆ ನೀವು ಏನ್ ಹೇಳ್ತೀರಾ ಅಂತ ಕಿಚ್ಚ ಸುದೀಪ್ ಅವರಿಗೆ ಬೇರೆ ಒಬ್ಬರ ಪ್ರಶ್ನೆ ಉಲ್ಲೇಖಿಸಿ ಕೇಳಲಾಗಿದೆ. ಅದಕ್ಕೆ ಸುದೀಪ್ ಅವರು ಮಾರ್ಮಿಕ ಎನ್ನಬಹುದಾದ ಉತ್ತರ ಹೇಳಿದ್ದಾರೆ. ಹಾಗಿದ್ದರೆ ಕನ್ನಡದ ಕಿಚ್ಚ ಅದೇನು ಹೇಳಿದ್ದಾರೆ ನೋಡಿ..

ನಾವಿಬ್ರೂ 16-18 ವರ್ಷದ ಹುಡಗರಲ್ಲ

ನಾವಿಬ್ರೂ 16-18 ವರ್ಷದ ಹುಡಗರಲ್ಲ. ನಮಗೆ ನಮ್ಮದೇ ಅದ ಸ್ವಂತ ಬುದ್ಧಿ ಇದೆ. ಯಾರನ್ನಾದರೂ ಕೇಳಿಕೊಂಡು ನಾವು ದೂರವಾಗೋದೂ ಇಲ್ಲ, ಯಾರನ್ನಾದರೂ ಕೇಳಿಕೊಂಡು ನಾವು ಹತ್ತಿರವಾಗೋದೂ ಇಲ್ಲ.. ನನ್ನ ಸತ್ಯ ಬಿಟ್ಟು ನಾನು ಬೇರೆ ಯಾವುದಕ್ಕೂ ತಲೆ ಹಾಕೋದಕ್ಕ ಹೋಗಲ್ಲ.. ಯಾಕಂದ್ರೆ ಎಲ್ಲಾನೂ ಅವರವರ ದೃಷ್ಟಿಕೊನಕ್ಕೆ ಸಂಬಂಧಪಟ್ಟಿದ್ದು..

'ಯಾರದೋ ಮಾತು ಕೇಳಿ ರಿಯಾಕ್ಟ್ ಮಾಡೋನು ನಾನು ಅಲ್ಲವೇ ಅಲ್ಲ.. ಯಾರಾದ್ರೂ ಏನಾದ್ರೂ ಅಂದಿದಾರೆ ಅಂದ್ರೆ ಅದು ನಮ್ಮ ಕಣ್ಮುಂದೆ ನಡಿಬೇಕು.. ಇಲ್ಲಾ ಅಂದ್ರೆ ನಾನು ಹೇಳಿದೀನಿ ಹೌದು ಅಂತ ಅವ್ರು ನನ್ ಕಣ್ಮುಂದೆ ಒಪ್ಕೋಬೇಕು.. ಆವಾಗಲಷ್ಟೇ ನಾನು ನಂಬೋದು.. ಇಂಥ ಅಂತೆ ಕಂತೆ ಸಂತೆಗೆಲ್ಲಾ ನಾವು ಉತ್ತರ ಕೊಡ್ತಾ ಹೋದ್ರೆ ಈ ಪ್ರಪಂಚ ನಡೆಯೋದೇ ಇಲ್ಲ.

ನಮ್ಮ ಸತ್ಯ ನಮಗೆ ಗೊತ್ತು

ಯಾರೇ ಹೇಳಿದ್ರೂ ಓಕೆ.. ಅದು ತಪ್ಪು ಅಥವಾ ಸರಿ ಅಂತ ನಾನು ಹೇಳೋಕೆ ಹೋಗಲ್ಲ. ಆದ್ರೆ ನಮ್ಮ ಸತ್ಯ ನಮಗೆ ಗೊತ್ತು, ನಾವು ಯಾಕೆ ಹೀಗೆ ಇದೀವಿ ಅಂತ.. ಒಟ್ಟಿಗೆ ಇದ್ದಾಗ ಯಾಕೆ ಒಟ್ಟಿಗೆ ಇದ್ವಿ ಅಂತಾಗ್ಲೀ ಅಥವಾ ದೂರ ಆದಾಗ ಯಾಕೆ ದೂರ ಆದ್ವಿ ಅಂತ ನಮ್ ಸತ್ಯ ನಮ್ಗೆ ಗೊತ್ತು.. ಅದ್ನ ಬಿಟ್ಟು ಬೇರೆಯವ್ರಿಗೆ ಖುಷಿ ಆಗುತ್ತೋ ಬೇಜಾರಾಗುತ್ತೋ ಅಂತ ಅದನ್ನೆಲ್ಲಾ ತಲೆಗೆ ಹಾಕ್ಕೊಂಡು ನಮಗೇನಾಗ್ಬೇಕು?' ಎಂದಿದ್ದಾರೆ ನಟ ಕಿಚ್ಚ ಸುದೀಪ್.