ಗಿಲ್ಲಿಗೆ ಶಿಕ್ಷೆ ಕೊಟ್ಟಾಗ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಂಡು ಮೇಜನ್ನ ಒರಸು ಅಂತ ಅಶ್ವಿನಿ ಆರ್ಡರ್ ಮಾಡಿದ್ರು. ಆದರೆ, ಅಶ್ವಿನಿ ಕ್ಷಮೆ ಕೇಳೋದಕ್ಕೆ ಬಂದಾಗ ತಾನು ಕಾಲ ಮೇಲೆ ಕಾಲು ಹಾಕಿ ‘ಕೇಳಿ ಈಗ ಕ್ಷಮೆ’ ಅಂತ ಸವಾಲು ಹಾಕಿದ. ಆದ್ರೆ ಗಿಲ್ಲಿ ಕಾಲಿಳಿಸೋತನಕ ಅಶ್ವಿನಿ ಗೌಡ ಕ್ಷಮೆ ಕೇಳಲಿಲ್ಲ.
ಇದು ದೊಡ್ಮನೆಯ ಕಣ್ಣೀರ ಕಥೆ
ಬಿಗ್ ಬಾಸ್ ಕನ್ನಡ 12 ಮನೆ ಈ ಸಾರಿ ವಾರದ ಆರಂಭದಲ್ಲೇ ರಣರಂಗವಾಗಿಬಿಟ್ಟಿದೆ. ಅದ್ರಲ್ಲೂ ವಾರದ ಆರಂಭದಲ್ಲೇ ಗಿಲ್ಲಿ ಅಂಡ್ ಅಶ್ವಿನಿ ನಡುವೆ ವಾರ್ ನಡೀತಾನೆ ಇದೆ. ಒಂದು ಹಂತದಲ್ಲಿ ನಾನು ಮನೆಯಿಂದ ಹೊರಹೊಗ್ತಿನಿ ಅಂತ ಅಶ್ವಿನಿ ಕಣ್ಣೀರು ಹಾಕಿದ್ದಾರೆ. ಇಬ್ಬರ ಜಿದ್ದಾಜಿದ್ದಿ ನೋಡಿ ವೀಕ್ಷಕರು ಏನ್ ಅಂತಿದ್ದಾರೆ..? ನೋಡೋಣ ಬನ್ನಿ..
ವಾರದ ಆರಂಭದಲ್ಲೇ ರಣರಂಗವಾದ ದೊಡ್ಮನೆ
ಯೆಸ್ ಬಿಗ್ಬಾಸ್ ಸೀಸನ್ 12ನಲ್ಲಿ 50 ದಿನಗಳು ಕಂಪ್ಲೀಟ್ ಆಗಿದ್ದು, ದ್ವಿತಿಯಾರ್ಧ ಬಲುಜೋರಾಗಿ ಆರಂಭಗೊಂಡಿದೆ. ಈ ವಾರ ಶುರುವಾಗ್ತಾನೇ ದೊಡ್ಡ ವಾರ್ ನಡೆದಿದೆ. ಅಸಲಿಗೆ ದೊಡ್ಮನೆಯಲ್ಲಿ ಪದೇ ಪದೇ ನಿಯಮ ಉಲ್ಲಂಘಿಸೋ ಅಶ್ವಿನಿಗೆ ಬಿಗ್ಬಾಸ್ ಒಂದು ಶಿಕ್ಷೆ ಕೊಟ್ರೆ, ಕೆಲಸಗಳ್ಳ ಗಿಲ್ಲಿಗೂ ಒಂದು ಶಿಕ್ಷೆ ಕೊಟ್ಟಿದ್ದಾರೆ.
ಕಾಲು ಮೇಲೆ ಕಾಲು.. ಗಿಲ್ಲಿ-ಅಶ್ವಿನಿ ವಾರ್..!
ಅಸಲಿಗೆ ಗಿಲ್ಲಿಗೆ ಶಿಕ್ಷೆ ಕೊಟ್ಟಾಗ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಂಡು ಮೇಜನ್ನ ಒರಸು ಅಂತ ಅಶ್ವಿನಿ ಆರ್ಡರ್ ಮಾಡಿ ಮಾಡಿಸಿಕೊಂಡ್ರು. ಅದಕ್ಕೆ ಟಾಂಗ್ ಕೊಟ್ಟ ಗಿಲ್ಲಿ ಅಶ್ವಿನಿ ಕ್ಷಮೆ ಕೇಳೋದಕ್ಕೆ ಬಂದಾಗ ತಾನು ಕಾಲ ಮೇಲೆ ಕಾಲು ಹಾಕಿ ‘ಕೇಳಿ ಈಗ ಕ್ಷಮೆ’ ಅಂತ ಸವಾಲು ಹಾಕಿದ. ಆದ್ರೆ ಗಿಲ್ಲಿ ಕಾಲಿಳಿಸೋತನಕ ಅಶ್ವಿನಿ ಗೌಡ ಕ್ಷಮೆ ಕೇಳಲಿಲ್ಲ.
ಅಶ್ವಿನಿ ಸಾಕಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿರೋ ನಟಿ, ಹುಟ್ಟಾ ಸಿರಿವಂತೆ ಕೂಡ. ಅಶ್ವಿನಿಗೆ ತಾನು ದೊಡ್ಮನೆಯಲ್ಲಿರೋ ಏಕೈಕ ದೊಡ್ಡ ಮನುಷ್ಯೆ ಅನ್ನೋ ಜಂಬ ತುಸು ಹೆಚ್ಚೇ ಇದೆ.
ಅಶ್ವಿನಿಯ ಅಹಂಕಾರಕ್ಕೆ ಕೊಡಲಿ ಪೆಟ್ಟು
ಆದ್ರೆ ಅಶ್ವಿನಿಯ ಈ ಅಹಂಕಾರಕ್ಕೆ ಮೊದಲಿಂದಲೂ ಕೊಡಲಿ ಪೆಟ್ಟು ಕೊಟ್ಟುಕೊಂಡು ಬಂದಿರೋ ಹಳ್ಳಿ ಹೈದ , ಚಿನಕುರಳಿ ಗಿಲ್ಲಿ. ಇಬ್ಬರ ನಡುವೆ ಅದೆಷ್ಟೋ ಬಾರಿ ಮಾರಾಮಾರಿ ನಡೆದು ಹೋಗಿದೆ. ಅಶ್ವಿನಿಗೆ ಕೌಂಟರ್ ಕೊಡೋದ್ರಲ್ಲಿ ಗಿಲ್ಲಿ ಪಂಟರ್.
ಈ ವಾರ ಇವರ ಜಟಾಪಟಿ ಜೋರಾಗಿದ್ದು ಟಾಸ್ಕ್ ವೊಂದರಲ್ಲಿ ಇಬ್ಬರೂ ಉಸ್ತುವಾರಿ ಆಗಿದ್ದಾರೆ. ಆದ್ರೆ ಉಸ್ತುವಾರಿ ಮಾಡೋದನ್ನ ಬಿಟ್ಟು ಇಬ್ಬರೂ ಹಿಗ್ಗಾಮುಗ್ಗಾ ಜಗಳ ಆಡಿದ್ದಾರೆ. ಈ ನಡುವೆ ಅಶ್ವಿನಿ ಕಣ್ಣೀರು ಹಾಕಿಕೊಂಡು, ನನ್ನ ಮರ್ಯಾದೆಗೆ ಧಕ್ಕೆ ಬರ್ತಾ ಇದೆ ಅಂತ ಗೋಳಾಡಿದ್ದಾರೆ. ಕಣ್ಣೀರು ಹಾಕಿದ್ದಾರೆ.
ಒಟ್ಟಾರೆ ಬಿಗ್ಬಾಸ್ ನಲ್ಲಿ 50 ದಿನ ಕಳೆದು ದ್ವಿತಿಯಾರ್ಧ ಶುರುವಾಗಿದ್ದು, ಸೆಕೆಂಡ್ ಹಾಫ್ ಡಬಲ್ ರೋಚಕವಾಗಿರುತ್ತೆ ಅನ್ನೋದಂತೂ ಫಿಕ್ಸ್ ಆಗಿದೆ. ಜೊತೆಗೆ ಗಿಲ್ಲಿ-ಅಶ್ವಿನಿ ಕಾಳಗದಲ್ಲಿ ಅಂತಿಮ ಜಯ ಯಾರಿಗೆ ಅನ್ನೋದು ಕೂಡ ವೀಕ್ಷಕರಲ್ಲಿ ನಿರೀಕ್ಷೆ ಮೂಡಿಸಿದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...


