ಲಿಖಿತ್ ಶೆಟ್ಟಿ 'ಫುಲ್ ಮೀಲ್ಸ್' ಸಿನಿಮಾ ಇದೇ ಶುಕ್ರವಾರ, ಅಂದರೆ 21 ನವೆಂಬರ್ 2025ರಂದು ಬಿಡುಗಡೆ ಆಗುತ್ತಿದೆ. ಇದೀಗ, ಅಸಂಬದ್ಧ ಪದ ಬಳಕೆ ವಿಚಾರವಾಗಿ ಇಂದು ಸಂಜೆ 4 ಗಂಟೆಗೆ ಚಿತ್ರ ತಂಡದ ವಿರುದ್ದ ಹೈ ಗ್ರೂಡ್ಸ್ ಪೊಲೀಸ್ ಠಾಣೆಯಲ್ಲಿ ಛಾಯಾಗ್ರಾಹಕರ ಸಂಘ ಕಂಪ್ಲೇಂಟ್ ದಾಖಲಿಸಲು ನಿರ್ಧರಿಸಿದೆ.
ಫುಲ್ ಮೀಲ್ಸ್ ವಿರುದ್ಧ ಛಾಯಾಗ್ರಾಹಕರ ಸಂಘ ಕೆಂಗಣ್ಣು
ಲಿಖಿತ್ ಶೆಟ್ಟಿ (Likhith Shetty) ನಿರ್ಮಾಣ ಹಾಗೂ ನಿರ್ದೇಶನ ಮಾಡಿರೋ ಸಿನಿಮಾ 'ಫುಲ್ ಮಿಲ್ಸ್' ಚಿತ್ರ (Full Meals) ತಂಡದ ವಿರುದ್ದ ಛಾಯಾಗ್ರಾಹಕಾರ ಸಂಘ ತಿರುಗಿ ಬಿದ್ದಿದೆ. ಈ ಸಿನಿಮಾದಲ್ಲಿ 'ಛಾಯಾಗ್ರಾಹಕರೆಲ್ಲ ಫ್ಲರ್ಟ್‌ಗಳು' ಎನ್ನುವ ಸಂಭಾಷಣೆ ಇದೆ ಎನ್ನಲಾಗಿದ್ದು, ಅದರ ವಿರುದ್ಧ ಕ್ಯಾಮೆರಾಮನ್‌ಗಳ ಸಂಘ (Photographers Association) ಕೋಪಗೊಂಡು ಇದೀಗ ಈ ಚಿತ್ರರತಂಡದ ವಿರುದ್ಧ ತಿರುಗಿ ಬಿದ್ದಿದೆ.
ಅಸಂಭದ್ದ ಪದ ಬಳಕೆ?
ಈ ಸಿನಿಮಾದಲ್ಲಿ ಎಲ್ಲಾ ಛಾಯಾಗ್ರಾಹಕರ ಮೇಲೆ ಅಸಂಭದ್ದ ಪದ ಬಳಕೆ ಮಾಡಿದ್ದಾರೆ. ಛಾಯಾಗ್ರಾಹಕರು ಫ್ಲರ್ಟ್‌ಗಳು ಎಂದರೆ ಏನು?'ಈ ಪದವನ್ನು ತಕ್ಷಣ ಸಿನಿಮಾದಿಂದ ತೆಗೆದು ಹಾಕಬೇಕು' ಎಂದು ಛಾಯಾಗ್ರಾಹಕರ ಸಂಘ 'ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ'ಗೆ (Karnataka Film Chamber Of Commerce) ಪತ್ರ ಬರೆದಿದೆ. ಛಾಯಾಗ್ರಾಹಕರ ಸಂಘದ ಈ ನಡೆಗೆ ಫುಲ್ ಮೀಲ್ಸ್' ಚಿತ್ರತಂಡ ಬೆಚ್ಚಿಬಿದ್ದಿದೆ ಎನ್ನಲಾಗುತ್ತಿದೆ. ಎಲ್ಲಾ ಫೋಟೋಗ್ರಾಫರ್ಸ್‌ಗಳೂ ಫ್ಲರ್ಟ್‌ಗಳು ಎಂಬ ಡೈಲಾಗ್ ಸಿನಿಮಾದಲ್ಲಿದೆ ಎಂಬ ಆರೋಪ ಕೇಳಿಬಂದಿದೆ.


