ದರ್ಶನ್ ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ರಾಜ್ ಫ್ಯಾಮಿಲಿ ಜೊತೆಗೆ ಚೆನ್ನಾಗೇ ಇದ್ರು. ಶಿವಣ್ಣನ ದೇವರ ಮಗ ಚಿತ್ರದಲ್ಲಿ ಖಳನಟನ ಪಾತ್ರ ಮಾಡಿದ್ರು. ಮುಂದೆ ನಾಯಕನಟನಾಗಿ ಯಶಸ್ಸು ಕಂಡ ಮೇಲೆ ಕೂಡ ದೊಡ್ಮನೆ ಜೊತೆಗೆ ಒಳ್ಳೆ ನಂಟು ಹೊಂದಿದ್ರು.  ಮುಂದೆ ಈ ಸ್ಟೋರಿ ನೋಡಿ.. 

ವಿನೀಶ್-ಶಿವಣ್ಣ ಭೇಟಿ

ದರ್ಶನ್ ಪುತ್ರ ವಿನೀಶ್ ತೂಗುದೀಪ (Vineesh Thoogudeepa) ಶಿವರಾಜ್​ಕುಮಾರ್​(Shivarajkumar) ಅವರನ್ನು ಭೇಟಿ ಮಾಡಿದ್ದಾನೆ. ದರ್ಶನ್‌ ಮಗನನ್ನ ಪ್ರೀತಿಯಿಂದ ಮಾತನಾಡಿಸಿರೋ ಶಿವಣ್ಣ, ವಿನೀಶ್​ಗೆ ಧೈರ್ಯ ತುಂಬಿದ್ದಾರೆ. ವಿನೀಶ್ ಶಿವಣ್ಣ ಭೇಟಿಯಲ್ಲಿ ಏನೆಲ್ಲಾ ನಡೀತು..? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಶಿವಣ್ಣನ ದರ್ಶನ ಪಡೆದ ದರ್ಶನ್ ಪುತ್ರ..!

ಹೌದು, ಅದೊಂದು ಅಪರೂಪದ ಸಮ್ಮಿಲಿನ. ದರ್ಶನ್ ಪುತ್ರ ವಿನೀಶ್, ದೊಡ್ಮನೆ ದೊರೆ ಶಿವರಾಜ್​ಕುಮಾರ್​ನ ಭೇಟಿ ಮಾಡಿದ್ದಾನೆ. ವಿನೀಶ್ ಕಂಡು ಶಿವಣ್ಣ ಕೂಡ ಕಾಳಜಿಯಿಂದ ಮಾತನಾಡಿಸಿದ್ದಾರೆ., ಸದ್ಯ ಈ ವಿಡಿಯೋ ದೊಡ್ಮನೆ, ಌಂಡ್ ಡಿ ಕಂಪನಿ ಅಭಿಮಾನಿಗಳ ಬಳಗದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

ಶಿವರಾಜ್​ಕುಮಾರ್ ಬೆಂಗಳೂರಿನ ಕುಂಬಳಗೂಡು ಬಳಿ ಇರೋ ಬಿಜಿಎಸ್ ಗ್ರೌಂಡ್​​ನಲ್ಲಿ ಡ್ಯಾಡ್ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿಯಾಗಿದ್ರು. ಅದೇ ಗ್ರೌಂಡ್​​ನಲ್ಲಿದ್ದ ವಿನೀಶ್, ಶಿವಣ್ಣ ಅಲ್ಲಿರೋದು ಗೊತ್ತಾಗಿ ತಾನೇ ಹೋಗಿ ಮಾತನಾಡಿಸಿದ್ದಾನೆ.

ವಿನೀಶ್ ದರ್ಶನ್​ಗೆ ಶಿವಣ್ಣ ಹೇಳಿದ್ದೇನು..?

ವಿನೀಶ್​​ಗೆ ಹೇಗಿದ್ದೀಯಾ..? ಏನ್ ಓದ್ತಾ ಇದ್ದೀಯಾ ಅಂತ ಕೇಳಿರೋ ಶಿವಣ್ಣ, ತಾಯಿ ವಿಜಯಲಕ್ಷ್ಮೀ ಚೆನ್ನಾಗಿದ್ದಾರಾ ಅಂತ ಕೂಡ ಪ್ರಶ್ನೆ ಕೇಳಿ ಕಾಳಜಿ ವ್ಯಕ್ತಪಡಿಸಿದ್ದಾರೆ.

ಶಿವಣ್ಣ-ದರ್ಶನ್ ಕುಟುಂಬಕ್ಕಿತ್ತು ಒಳ್ಳೆ ಬಾಂಧವ್ಯ..!

ಹೌದು ಶಿವಣ್ಣ ಮತ್ತು ದರ್ಶನ್ ಫ್ಯಾಮಿಲಿ ಹಿಂದೆ ತುಂಬಾನೇ ಒಳ್ಳೆ ಬಾಂಧವ್ಯ ಇತ್ತು. ಎಷ್ಟೇ ಅಂದರೂ ದರ್ಶನ್, ತೂಗುದೀಪ ಶ್ರೀನಿವಾಸ್ ಪುತ್ರ. ತೂಗುದೀಪ ಶ್ರೀನಿವಾಸ್ ರಾಜ್​ ಕಂಪನಿಯ ಖಾಯಂ ಸದಸ್ಯರು. ಅಣ್ಣಾವ್ರ ಪಾಲಿಗೆ ಅತ್ಯಾಪ್ತರು.

ದರ್ಶನ್ ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ರಾಜ್ ಫ್ಯಾಮಿಲಿ ಜೊತೆಗೆ ಚೆನ್ನಾಗೇ ಇದ್ರು. ಶಿವಣ್ಣನ ದೇವರ ಮಗ ಚಿತ್ರದಲ್ಲಿ ಖಳನಟನ ಪಾತ್ರ ಮಾಡಿದ್ರು. ಮುಂದೆ ನಾಯಕನಟನಾಗಿ ಯಶಸ್ಸು ಕಂಡ ಮೇಲೆ ಕೂಡ ದೊಡ್ಮನೆ ಜೊತೆಗೆ ಒಳ್ಳೆ ನಂಟು ಹೊಂದಿದ್ರು.

ಆದ್ರೆ ಎಲ್ಲವೂ ಬದಲಾಗಿದ್ದು 2011ರಲ್ಲಿ... ದರ್ಶನ್ ಪತ್ನಿ ವಿಜಯಲಕ್ಷ್ಮೀ ಮೇಲೆ ಹಲ್ಲೆ ಮಾಡಿದಾಗ, ಅವರು ಮೊದಲು ಹೋಗಿದ್ದೇ ಶಿವಣ್ಣನ ಮನೆಗೆ. ಗಂಡನಿಂದ ಏಟು ತಿಂದಿದ್ದ ವಿಜಯಲಕ್ಷ್ಮೀಗೆ ಶಿವರಾಜ್​ಕುಮಾರ್ ದಂಪತಿ ತಮ್ಮ ಮನೆಯಲ್ಲಿ ಆಶ್ರಯ ಕೊಟ್ಟಿದ್ರು.

ಮುಂದೆ ವಿಜಯಲಕ್ಷ್ಮೀ ಕಂಪ್ಲೇಂಟ್ ಕೊಟ್ಟು, ದರ್ಶನ್ ಜೈಲಿಗೆ ಹೋದ್ರು. ತನ್ನ ಪತ್ನಿಗೆ ಕಂಪ್ಲೇಂಟ್ ಕೊಡು ಅಂತ ಇವರೇ ಪ್ರೇರೇಪಿಸಿದ್ರು ಅನ್ನೋ ಸಿಟ್ಟು ದಾಸನಿಗೆ ಹುಟ್ಟಿಕೊಳ್ತಾ ಗೊತ್ತಿಲ್ಲ. ಪತ್ನಿ ಜೊತೆಗೆ ಒಂದಾದರು.. ಆದ್ರೆ ದೊಡ್ಮನೆಯಿಂದ ದರ್ಶನ್ ದೂರಾದರು.

ಶಿವಣ್ಣ ಎದುರಿಗೆ ಭೇಟಿ ಆದಾಗ ದರ್ಶನ್ ಚೆನ್ನಾಗೇ ಮಾತನಾಡಿದ್ರೂ ಇಬ್ಬರ ಕುಟುಂಬದ ನಡುವೆ ಒಡನಾಟ ತಪ್ಪಿ ಹೋಗಿತ್ತು. ಕಳೆದ ವರ್ಷ ದರ್ಶನ್ ಕೊಲೆ ಆರೋಪ ಹೊತ್ತು ಜೈಲು ಸೇರಿದ ಮೇಲೆ ಅವರ ಕುಟುಂಬದ ಜೊತೆಗೆ ಸಿನಿರಂಗದವರ ಒಡನಾಟ ತಪ್ಪೇ ಹೋಗಿದೆ.

ಸದ್ಯ ಡ್ಯಾಡ್ ಮೂವಿ ಶೂಟಿಂಗ್​ನಲ್ಲಿದ್ದ ವೇಳೆ ವಿನೀಶ್ ಆಕಸ್ಮಾತ್ ಆಗಿ ಶಿವಣ್ಣನನ್ನ ಭೇಟಿ ಮಾಡಿದ್ದಾರೆ. ಶಿವಣ್ಣ ಕೂಡ ವಿನೀಶ್ ಜೊತೆ ಆತ್ಮೀಯವಾಗಿ ಮಾತನಾಡಿ ಬೀಳ್ಕೊಟ್ಟಿದ್ದಾರೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..