ಕಿಚ್ಚ ಸುದೀಪ್ ಅವರ ಬಾಲ್ಯದ ಫೋಟೋವನ್ನು ನೋಡಿರಬಹುದು.. ಆದರೆ ಕಿಚ್ಚ ಅವರ ಈಗಿನ ಫೋಟೋ ಜೊತೆ ಹಳೆಯ ಫೋಟೋ ನೋಡಿದ್ದೀರಾ..? ಇಂತಹದೊಂದು ಫೋಟೋ ನಟ ಸುದೀಪ್ ಕೈಗೆ ಸಿಕ್ಕಿದೆ. ಫೋಟೋ ನೋಡಿ ವಾವ್ ಎಂದಿದ್ದಾರೆ ಕಿಚ್ಚ.

ಕಿಚ್ಚ ಅವರ ಬಾಲ್ಯದ ಫ್ಯಾಮಿಲಿ ಫೋಟೋ ಸಾಮಾನ್ಯವಾಗಿ ಎಲ್ಲರೂ ನೋಡಿರಬಹುದು. ಸ್ವತಃ ಕಿಚ್ಚ ಅವರೇ ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಾರೆ. ಆದರೆ ಈ ಫೋಟೋ ಸ್ವಲ್ಪ ವಿಶೇಷ.

ಶಿವರಾಜ್‌ಕುಮಾರ್ ಕಂಚಿನ ಪ್ರತಿಮೆಯಂತ ಪೋಸ್ಟರ್‌ ಬಿಡುಗಡೆ ಮಾಡಿದ ಕಿಚ್ಚ!

ಕುಳಿತುಕೊಂಡಿರುವ ಪುಟ್ಟ ಸುದೀಪ್ ಕೈಯಲ್ಲಿ ಈಗಿನ ಸುದೀಪ್ ಫೋಟೋ. ಪುಟ್ಟ ಸುದೀಪ್ ಸಮೀಪ ನಿಂತು ಪೋಸ್ ಕೊಟ್ಟ ಕಿಚ್ಚ. ಇದು ಎಡಿಟೆಡ್ ಫೋಟೋ ಆದ್ರೂ ಬಲ್ಯದ ಮತ್ತು ಈಗಿನ ಫೋಟೋ ಜೊತೆಯಾಗಿ ಕಾಣಿಸಿರುವುದು ಇನ್ನೂ ಚೆನ್ನಾಗಿ ಕಾಣಿಸುತ್ತದೆ.

ಫೋಟೋವನ್ನು ಟ್ವೀಟ್ ಮಾಡಿರುವ ಸುದೀಪ್, ಯಾರೋ ಇದನ್ನು ಮಾಡಿದ್ದಾರೆ. ಜಸ್ಟ್ ವಾವ್.. ಅದು ಯಾರೇ ಆಗಿದ್ದರೂ ಥ್ಯಾಂಕ್ಸ್' ಎಂದು ಬರೆದಿದ್ದಾರೆ. ಇದಕ್ಕೆ ರೀಟ್ವೀಟ್ ಮಾಡಿದ ಕಾರ್ತಿಕ್ ಕೆ. ಎಲ್ ಎಂಬಾತ ಫೋಟೋ ತಾನೇ ಎಡಿಟ್ ಮಾಡಿದ್ದಾಗಿ ಬರೆದಿದ್ದಾನೆ. ಅಂತೂ ಫೋಟೋ ಮಾತ್ರ ಚೆನ್ನಾಗಿ ಮೂಡಿ ಬಂದಿದೆ.

#NewsIN100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"