ಹೈದಾರಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರೀಕರಣ ಆರಂಭಗೊಂಡಿದೆ. ಸ್ಟಾರ್‌ ಸಿನಿಮಾ ಶೂಟಿಂಗ್‌ ಆರಂಭವಾಗಿದ್ದರಿಂದ ಚಿತ್ರರಂಗದಲ್ಲಿ ಒಂಥರಾ ಸಂಚಲನ ಉಂಟಾಗಿದೆ. ಅನೇಕ ನಿರ್ಮಾಪಕರು ತಮ್ಮ ಮುಂದಿನ ನಡೆಗಳ ಕಡೆಗೆ ಆಲೋಚನೆ ಶುರು ಮಾಡಿದ್ದಾರೆ.

4 ಸರ್ಕಾರಿ ಶಾಲೆ ದತ್ತು ಪಡೆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್!

ಪೂಜೆ ಮಾಡಿ ಚಿತ್ರೀಕರಣ ಶುರು

ಪೂಜೆ ಮೂಲಕ ಚಿತ್ರೀಕರಣ ಆರಂಭಿಸಲಾಗಿದೆ. ಸುದೀಪ್‌ ಪಾತ್ರದ ಬಹುತೇಕ ದೃಶ್ಯಗಳನ್ನು ಇಲ್ಲಿ ನಿರ್ಮಿಸಲಾಗಿರುವ ಸೆಟ್‌ನಲ್ಲೇ ಶೂಟಿಂಗ್‌ ಮಾಡುವುದು ನಿರ್ದೇಶಕ ಅನೂಪ್‌ ಭಂಡಾರಿ ನಿರ್ಣಯ.

ನಿರ್ಮಾಪಕ ಜಾಕ್‌ ಮಂಜು ಕೂಡ ಚಿತ್ರೀಕರಣಕ್ಕೆ ಬೇಕಾದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳ ಕಡೆ ಗಮನ ಕೊಟ್ಟಿದ್ದು, ಚಿತ್ರೀಕರಣ ನಿಲ್ಲಿಸುವುದರಿಂದ ಭಾರೀ ನಷ್ಟಆಗುವ ಕಾರಣಕ್ಕೆ ಧೈರ್ಯದಿಂದ ಶೂಟಿಂಗ್‌ ಮಾಡಲು ಮುಂದಾಗಿದ್ದಾರೆ.

ಬಾಲ್ಯದ ಎಡಿಟೆಡ್ ಫೋಟೋ ನೋಡಿ ವಾವ್ ಎಂದ ಕಿಚ್ಚ..!

ಸುದೀಪ್‌ ಟ್ವೀಟ್‌

‘ಫ್ಯಾಂಟಮ್‌’ ಚಿತ್ರಕ್ಕೆ ಶೂಟಿಂಗ್‌ ಶುರುವಾಗಿದೆ. ಎಲ್ಲರು ಉತ್ಸಾಹದಿಂದ ಕೆಲಸ ಮಾಡಲಿದ್ದೇವೆ. ಎಲ್ಲರ ಸುರಕ್ಷತೆಯೂ ಮುಖ್ಯ. ಹೀಗಾಗಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡೇ ಚಿತ್ರೀಕರಣಕ್ಕೆ ಮುಂದಾಗಿದ್ದೇವೆ. ತಂಡದಲ್ಲಿ ಶಕ್ತಿ ಮತ್ತು ಉತ್ಸಾಹ ಕಾಣುತ್ತಿದೆ.

 

- ಇದು ಸುದೀಪ್‌ ಅಭಿಪ್ರಾಯ. ಟ್ವೀಟರ್‌ನಲ್ಲಿ ಚಿತ್ರೀಕರಣ ಆರಂಭಿಸಿರುವ ಫೋಟೋ ಜತೆ ಈ ಮಾತುಗಳನ್ನು ಅವರು ಹೇಳಿಕೊಂಡಿದ್ದಾರೆ.

ರಂಗಿತರಂಗ ಟೀಮ್‌

‘ಫ್ಯಾಂಟಮ್‌’ನಲ್ಲಿ ‘ರಂಗಿತರಂಗ’ ಮಾಯೆ ಎದ್ದು ಕಾಣುತ್ತಿದೆ. ಯಾಕೆಂದರೆ ನಿರ್ದೇಶಕರಾಗಿ ಅನೂಪ್‌ ಭಂಡಾರಿ, ಪ್ರಮುಖ ಪಾತ್ರದಲ್ಲಿ ನಿರೂಪ್‌ ಭಂಡಾರಿ, ಛಾಯಾಗ್ರಾಹಕರಾಗಿ ವಿಲಿಯಮ್‌ ಡೇವಿಡ್‌, ಸಂಗೀತ ನಿರ್ದೇಶಕರಾಗಿ ಅಜನೀಶ್‌ ಲೋಕನಾಥ್‌ ಮತ್ತೊಮ್ಮೆ ಇಲ್ಲಿ ಜತೆಯಾಗಿದ್ದಾರೆ. ಸುದೀಪ್‌ ಅವರಿಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್‌ ಕಾಣಿಸಿಕೊಳ್ಳುತ್ತಿದ್ದಾರೆ.

ತಡವಾಗಿಯಾದರೂ ಈಗಷ್ಟೆಶೂಟಿಂಗ್‌ ಆರಂಭಗೊಂಡಿದೆ. ಎಷ್ಟುದಿನ ಇಲ್ಲಿ ನಡೆಯುತ್ತದೆ ಎಂಬುದು ಹೇಳಲಾಗದು. ಚಿತ್ರದ ಬಹುತೇಕ ಚಿತ್ರೀಕರಣ ಈ ಹಂತದಲ್ಲಿ ಮುಗಿಸಲಿದ್ದೇವೆ. - ಜಾಕ್‌ ಮಂಜು ನಿರ್ಮಾಪಕ