Asianet Suvarna News Asianet Suvarna News

ಬಿಗ್ ಬಾಸ್ ಫಿನಾಲೆಯಲ್ಲಿ ಭಾವುಕರಾದ ಕಿಚ್ಚ, ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಯೆ ಕಾಣಿಕೆ!

ಕಿಚ್ಚ ಸುದೀಪ್ ತೆರೆ ಮೇಲೆ ಭಾವುಕರಾಗಿದ್ದು, ಕಣ್ಣೀರಿಟ್ಟಿದ್ದು ನಾವೆಲ್ಲ ನೋಡಿದ್ದೇವೆ. ಆದರೆ ಬಿಗ್ ಬಾಸ್ ಫಿನಾಲೆಯ ಭಾವುಕ ಕ್ಷಣದಲ್ಲಿ ಸುದೀಪ್ ಕಣ್ಣ ಹನಿಗಳು ಹಲವು ಅರ್ಥವ ಹೇಳಿತ್ತು.  
 

kiccha sudeep gets emotional on bigg boss kannada grand finale stage after recalling Journey VT ckm
Author
First Published Dec 31, 2022, 11:07 PM IST

ಬೆಂಗಳೂರು(ಡಿ.31): ಬಿಗ್ ಬಾಸ್ ರಿಯಾಲಿಟಿ ಶೋ 9ನೇ ಆವೃತ್ತಿಗೆ ಅದ್ಧೂರಿಯಾಗಿ ತೆರೆ ಬಿದ್ದಿದೆ. ರೂಪೇಶ್ ಶೆಟ್ಟಿ ಚಾಂಪಿಯನ್ ಕಿರೀಟ್ ಮುಡಿಗೇರಿಸಿಕೊಂಡಿದ್ದಾರೆ. ಆದರೆ ಈ ವೇದಿಕೆಯಲ್ಲಿ ಕಿಚ್ಚ ಸುದೀಪ್ ಭಾವುಕರಾಗಿ ಕಣ್ಮೀರಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಬಿಗ್ ಬಾಸ್ 9ನೇ ಆವೃತ್ತಿ ರಿಯಾಲಿಟಿ ಶೋನಲ್ಲಿ ನಟ ರೂಪೇಶ್ ಶೆಟ್ಟಿ ಗೆಲುವಿನ ನಗೆ ಬೀರಿದ್ದಾರೆ. ರೂಪೇಶ್ ರಾಜಣ್ಣ, ರಾಕೇಶ್ ಅಡಿಗ ನಡುವಿನ ತೀವ್ರ ಪೈಪೋಟಿ ನಡುವೆ ರೂಪೇಶ್ ಶೆಟ್ಟಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಅತೀ ಹೆಚ್ಚಿನ ಬೆಂಬಲ, ಬಿಗ್ ಬಾಸ್ ಶೋದಲ್ಲಿ ಅತ್ಯುತ್ತಮ ಮನರಂಜನೆಯ ಆಟದ ಮೂಲಕ ಕನ್ನಡಿಗ ಮನಗೆದ್ದ ರಾಕೇಶ್ ಶೆಟ್ಟಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಆದರೆ ಇದೇ ವೇದಿಕೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ಅಭಿಯನ ಚಕ್ರವರ್ತಿ ಕಿಚ್ಚ ಸುದೀಪ್ ಭಾವುಕರಾಗಿದ್ದಾರೆ. ಒಂದು ಕ್ಷಣ ಮಾತು ನಿಲ್ಲಿಸಿ ಕಣ್ಣ ಹನಿಗಳ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಸ್ವತಃ ಕಿಚ್ಚ ಸುದೀಪ್ ಅವರ ವಿಟಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ನೋಡುತ್ತಿದ್ದಂತೆ ಸುದೀಪ್ ಭಾವುಕರಾಗಿದ್ದಾರೆ. ವಿಟಿ ಬಳಿಕ ಭಾವುಕ ಕ್ಷಣದೊಂದಿಗೆ ಕಿಚ್ಚ ಸುದೀಪ್ ಮಾತನಾಡಿದರು. ಬಿಗ್‌ಬಾಸ್ ಶೋನಲ್ಲಿ ಈ ಸ್ಥಾನ ನೀಡಿದ್ದಕೆ ಮೊದಲನೇಯದಾಗಿ ಧನ್ಯವಾದ. ಇಂತಹ ಅದ್ಬತ ವೇದಿಕೆ ಕೊಟ್ಟಿದ್ದಕ್ಕೆ ಧನ್ಯವಾದ. ಮೊದಲ ಬಾರಿಗೆ ನಾನು ಪಾತ್ರವಲ್ಲದ ಸುದೀಪ್ ಆಗಿರುವದಕ್ಕೆ ಅನಂತ ಧನ್ಯವಾದ. ಒಂದು ಪಯಣ ಆರಂಭಿಸುವಾಗ ಚಿಕ್ಕ ಕನಸು ಇಟ್ಟುಕೊಂಡು ಹೊರಡುತ್ತೇವೆ. ಆದರೆ ಎತ್ತರಕ್ಕೆ ಬೆಳೆಯುತ್ತಿದ್ದಂತೆ ದಾರಿ ಸಣ್ಣದಾಗುತ್ತದೆ, ಎಲ್ಲವೂ ಸಂಕುಚಿತಗೊಳ್ಳುತ್ತದೆ. ಎಲ್ಲವೂ ಸರಿಯಾಗಿರಬೇಕು, ಎಲ್ಲವೂ ಅಚ್ಚುಕಟ್ಟಾಗಿರಬೇಕು, ಆದರೆ ಎಲ್ಲೋ ಒಂದು ಕಡೆ ಬೆಳಗ್ಗೆಏಳುವಾಗಿ ಸಾಮಾನ್ಯ ಮನುಷ್ಯನಾಗಿ ಎದ್ದೇಳಬೇಕು ಅನ್ನೋ ಆಸೆಯಾಗುತ್ತದೆ. ಎಲ್ಲರಿದೂ ಧನ್ಯವಾದ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

 

 

ಬಿಗ್ ಬಾಸ್ ಟ್ರೋಫಿ ಗೆದ್ದ ರೂಪೇಶ್ ಶೆಟ್ಟಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

2ನೇ ಬಾರಿಗೆ ಕರಾವಳಿ ಪ್ರತಿಭಗೆ ಬಿಗ್ ಬಾಸ್ ಪ್ರಶಸ್ತಿ ಒಲಿದು ಬಂದಿರುವುದು ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದ ಜನರ ಸಂಭ್ರಮ ಹೆಚ್ಚಾಗಿದೆ. 7ನೇ ಆವೃತ್ತಿಯಲ್ಲಿ ಶೈನ್ ಶೆಟ್ಟಿ ಗೆಲುವಿನ ನಗೆ ಬೀರಿದ್ದರೆ, ಈ ಬಾರಿ ರೂಪೇಶ್ ಶೆಟ್ಟಿ ಚಾಂಪಿಯನ್ ಆಗಿದ್ದಾರೆ. ಆದರೆ ರೂಪೇಶ್ ಶೆಟ್ಟಿ ಆಟದ ನಡುವೆ ತಾನು ಗಡಿನಾಡ ಕನ್ನಡಿಗ ಅನ್ನೋ ಹೇಳಿಕೆಗೆ ಭಾರಿ ಪರ ವಿರೋಧಗಳು ವ್ಯಕ್ತವಾಗಿತ್ತು.  ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಕರಾವಳಿಯ ಯುವಕ ರೂಪೇಶ್‌ ಶೆಟ್ಟಿ‘ನಾನು ಗಡಿನಾಡ ಕನ್ನಡಿಗ’ ಎಂದು ನೀಡಿದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಕೆಲವರು ಸಾಮಾಜಿಕ ತಾಣಗಳಲ್ಲಿ ಪರೋಕ್ಷವಾಗಿ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ರೂಪೇಶ್‌ ಪೋಷಕರು ಮಂಗಳೂರು ಪೊಲೀಸರಿಗೆ ದೂರು ನೀಡಿದ್ದರು.

ಬಿಗ್‌ಬಾಸ್‌ನಲ್ಲಿ ಕನ್ನಡ ರಾಜ್ಯೋತ್ಸವದ ದಿನ ಮಾತನಾಡುತ್ತಾ ರೂಪೇಶ್‌, ‘ನಾನು ಹುಟ್ಟಿದ್ದು ಮಂಗಳೂರಿನಿಂದ 30 ಕಿ.ಮೀ ದೂರದ ಕೇರಳದ ಕಾಸರಗೋಡಿನಲ್ಲಿ. ನಾವು ಗಡಿನಾಡ ಕನ್ನಡಿಗರು’ ಎಂದಿದ್ದರು. ತುಳುನಾಡಿನಲ್ಲಿ ಹೆಸರು ಗಳಿಸಿ ಇದೀಗ ಗಡಿನಾಡ ಕನ್ನಡಿಗ ಅಂತ ಹೇಳಿರುವುದು ಅಸಮಾಧಾನಕ್ಕೆ ಕಾರಣವಾಗಿತ್ತು. ಹಲವು ತುಳುವರು ರೂಪೇಶ್‌ ಬೆಂಬಲಕ್ಕೆ ನಿಂತರೂ ಮತ್ತೆ ಕೆಲವರು ರೂಪೇಶ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ರೂಪೇಶ್‌ ಪೋಷಕರಿಗೂ ಕೆಲವರು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಮಂಗಳೂರು ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ಗೆ ದೂರು ನೀಡಿದ್ದರು.

ಬೀದಿಯಲ್ಲಿ ನಿಂತು ಕನ್ನಡ ಕೆಲಸ ಮಾಡುವೆ; ಕಪ್ ಗೆದ್ದಿಲ್ಲ ಜನರನ್ನು ಗೆದ್ದಿರುವೆ: ಬಿಗ್ ಬಾಸ್ ರೂಪೇಶ್ ರಾಜಣ್ಣ.

Follow Us:
Download App:
  • android
  • ios