Asianet Suvarna News Asianet Suvarna News

ತುಂಬಾ ಸ್ಟ್ರಾಂಗ್ ಲೇಡಿ; ಅನಾರೋಗ್ಯದಿಂದ ಬಳಲುತ್ತಿರುವ ಸಮಂತಾ ಬಗ್ಗೆ ಕಿಚ್ಚ ಸುದೀಪ್ ರಿಯಾಕ್ಷನ್

ಅನಾರೋಗ್ಯದಿಂದ ಬಳಲುತ್ತಿರುವ ನಟಿ ಸಮಂತಾ ಅವರ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. 

Kiccha Sudeep about Samantha Health and shooting experience of Eega sgk
Author
First Published Jan 4, 2023, 10:38 AM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇತ್ತೀಚಿಗಷ್ಟೆ ಬಿಗ್ ಬಾಸ್ ಕನ್ನಡ ಸೀಸನ್ 9 ಮುಗಿಸಿದ್ದಾರೆ. ಮೊದಲ ಸೀಸನ್‌ನಿಂದ 9ನೇ ಸೀಸನ್ ವರೆಗೂ ಯಶಸ್ವಿಯಾಗಿ  ನಡೆಸಿಕೊಟ್ಟಿರುವ ಕಿಚ್ಚ ಸುದೀಪ್ ಅವರನ್ನು ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಸುದೀಪ್ ನಿರೂಪಣೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.  ಸದ್ಯ ಅಭಿಮಾನಿಗಳಿಗೆ ಕಿಚ್ಚನ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ. ವಿಕ್ರಾಂತ್ ರೋಣ ಸಿನಿಮಾ ಬಳಿಕ ಸುದೀಪ್ ಮುಂದಿನ ಸಿನಿಮಾ ಇನ್ನೂ ಘೋಷಣೆ ಮಾಡಿಲ್ಲ. ಹಾಗಾಗಿ ಕಿಚ್ಚನ ಹೊಸ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಈ ನಡುವೆ ಸುದೀಪ್ ಟಾಲಿವುಡ್ ಸ್ಟಾರ್ ಸಮಂತಾ ಅವರ ಬಗ್ಗೆ ಮಾತನಾಡಿದ್ದಾರೆ. ಅವರ ಅನಾರೋಗ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಅಂದಹಾಗೆ ಸಮಂತಾ ಮತ್ತು ಸುದೀಪ್ ಇಬ್ಬರೂ ರಾಜಮೌಳಿ ಅವರ ಈಗ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಬಳಿಕ ಸುದೀಪ್ ಮತ್ತು ಸಮಂತಾ ಮತ್ತೆ ಒಟ್ಟಿಗೆ ನಟಿಸಿಲ್ಲ. ಇದೀಗ ಅನೇಕ ವರ್ಷಗಳ ಬಳಿಕ ಕಿಚ್ಚ, ಸಮಂತಾ ಬಗ್ಗೆ ಮಾತನಾಡಿದ್ದಾರೆ. ತಮಿಳು ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸುದೀಪ್ ಈಗ ಸಿನಿಮಾದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಂದಹಾಗೆ ಸಮಂತಾ ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಸ್ಯಾಮ್ ವಿಶ್ರಾಂತಿಯಲ್ಲಿದ್ದಾರೆ. ಈಗ ಸುಂದರಿಗೆ ಕಿಚ್ಚ ಶುಭಹಾರೈಸಿದರು. 

ಸಮಂತಾ ಸ್ಟ್ರಾಂಗ್ ಲೇಡಿ ಎಂದ ಕಿಚ್ಚ

'ಸಮಂತಾ ತುಂಬಾ ಸ್ಟ್ರಾಂಗ್ ಲೇಡಿ. ಖಂಡಿತವಾಗಿಯೂ ತಮ್ಮ ಸಮಸ್ಯೆಗಳ ವಿರುದ್ಧ ಹೋರಾಡುತ್ತಾರೆ ಮತ್ತಷ್ಟು ಸ್ಟ್ರಾಂಗ್ ಆಗಿ ಹೊರಬರುತ್ತಾರೆ. ಅವರು ಹೋರಾಟಗಾರ್ತಿ ಹಾಗಾಗಿಯೇ ಇಂದು ಅವರು ಇಷ್ಟು ದೊಡ್ಡ ಸ್ಥಾನದಲ್ಲಿದ್ದಾರೆ' ಎಂದು ಸುದೀಪ್ ಹೇಳಿದರು. 

ಈಗ ಸಿನಿಮಾದಲ್ಲಿ ಸಮಂತಾ ಜೊತೆ 45-50 ದಿನಗಳು ಕೆಲಸ ಮಾಡಿರುವ ಅನುಭವವನ್ನು ಹಂಚಿಕೊಂಡರು. ಈಗ ಸಿನಿಮಾ ತೆಲುಗು ಮತ್ತು ತಮಿಳು ಎರಡೂ ಭಾಷೆಯಲ್ಲಿ ತಯಾರಾದ ಸಿನಿಮಾ.  ಆದರೆ ಆಗ ತಮಿಲು ಮತ್ತು ತೆಲುಗು ಎರಡೂ ಬರುತ್ತಿರಲಿಲ್ಲ ಎಂದು ಸುದೀಪ್ ಒಪ್ಪಿಕೊಂಡಿದ್ದಾರೆ. ತೆಲುಗು ಮತ್ತು ತಮಿಳು ಸಹಾಯಕ ನಿರ್ದೇಶಕರ ಜೊತೆ ಹೆಚ್ಚು ಚರ್ಚೆ ಮಾಡುತ್ತಿದ್ದೆ. ಸಂಭಾಷೆ ಅರ್ಥವಾಗದಿದ್ದರೆ ಸಹಾಯಕ ನಿರ್ದೇಶಕರನ್ನು ಕೇಳುತ್ತಿದ್ದೆ. ಹೆಚ್ಚು ಅವರ ಜೊತೆಯೇ ಮಾತುಕತೆ ಇತ್ತು. ಸಮಂತಾ ಜೊತೆ ಹೆಚ್ಚು ಮಾತುಕತೆ ಇರಲಿಲ್ಲ. ಹಾಗಾಗಿ ಇಂದಿಗೂ ಸಮಂತಾ ಜೊತೆ ಸಂಪರ್ಕದಲ್ಲಿ ಇಲ್ಲ' ಎಂದು ಸುದೀಪ್ ಹೇಳಿದ್ದಾರೆ. 

ಅನಾರೋಗ್ಯದ ಬಳಿಕ ಅಭಿಮಾನಿಗಳ ಜೊತೆ ಸಮಂತಾ ಮೊದಲ ಸಂವಾದ; ಟ್ರೋಲಿಗರಿಗೆ ಖಡಕ್ ತಿರುಗೇಟು ಕೊಟ್ಟ ಸ್ಯಾಮ್

ನಟಿ ವರಲಕ್ಷ್ಮಿ ನನಗೆ ಬೆಸ್ಟ್ ಫ್ರೆಂಡ್ 

ತಮಿಳು ನಟಿ ವರಲಕ್ಷ್ಮಿ ಶರತ್ ಕುಮಾರ್ ಮತ್ತು ಸುದೀಪ್ ಇಬ್ಬರೂ ಉತ್ತಮ ಸ್ನೇಹಿತರು. ಇಬ್ಬರೂ ಒಟ್ಟಿಗೆ ಸಿನಿಮಾ ಕೂಡ ಮಾಡಿದ್ದಾರೆ. ಇತ್ತೀಚಿಗಷ್ಟೆ ವರಲಕ್ಷ್ಮಿ ಮತ್ತು ಸಮಂತಾ ಇಬ್ಬರೂ ಯಶೋದಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆಗ ವರಲಕ್ಷ್ಮಿ ಅವರು ಸಮಂತಾ ಜೊತೆ ಸುದೀಪ್ ಬಗ್ಗೆ ಮಾತನಾಡಿದ್ದಾರೆ. ಆಗ ಸಮಂತಾ ಕುತೂಹಲದಿಂದ ಸುದೀಪ್ ಬಗ್ಗೆ ಕೇಳಿದ್ದಾರೆ.  ಸಹ ನಟರ ಜೊತೆ ಚಾಟ್ ಮಾಡುತ್ತೀರಾ ಎಂದು ಕೇಳಿದ್ದಾರೆ. ಸುದೀಪ್ ಬೆಸ್ಟ್ ಫ್ರೆಂಡ್ ಎಂದು ಸಮಂತಾಗೆ ಹೇಳಿದರು ವರಲಕ್ಷ್ಮಿ. ಈ ಘಟನೆಯನ್ನು ಜೋರಾಗಿ ನಗುತ್ತಾ ಸುದೀಪ್ ಬಳಿ ಹೇಳಿಕೊಂಡಿದ್ದಾರೆ ವರಲಕ್ಷ್ಮಿ. ಭಾಷೆಯ ಸಮಸ್ಯೆ ಕೂಡ ಸಮಂತಾ ಜೊತೆ ಮಾತನಾಡದ ಹಾಗೆ ಆಯಿತು ಎಂದು ಸುದೀಪ್ ವಿವರಿಸಿದ್ದಾರೆ. 

Shaakuntalam; ಅನಾರೋಗ್ಯದ ನಡುವೆಯೂ ಶಾಕುಂತಲೆಯಾಗಿ ಎಂಟ್ರಿ ಕೊಡ್ತಿದ್ದಾರೆ ಸಮಂತಾ; ರಿಲೀಸ್ ಡೇಟ್ ಬಹಿರಂಗ

ಸುದೀಪ್ ಸದ್ಯ ಮುಂದಿನ ಸಿನಿಮಾದ ತಯಾರಿಯಲ್ಲಿದ್ದಾರೆ. ಆದರೆ ಯಾವ ಸಿನಿಮಾ ಎನ್ನುವುದು ಇನ್ನು ಬಹಿರಂಗವಾಗಿಲ್ಲ. ಕಿಚ್ಚನ ಮುಂದಿನ ಸಿನಿಮಾಗೆ ಯಾರು ಆಕ್ಷನ್ ಕಟ್ ಹೇಳುತ್ತಾರೆ, ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಎಂದು ಕಾದು ನೋಡಬೇಕು. 

Follow Us:
Download App:
  • android
  • ios