Asianet Suvarna News Asianet Suvarna News

Kiccha Sudeep ಕೆಜಿಎಫ್ ನಿರ್ಮಾಪಕರ ಜೊತೆ ಕೈ ಜೋಡಿಸಿದ ಕಿಚ್ಚ; ಕುತೂಹಲ ಹೆಚ್ಚಿಸಿದ ಫೋಟೋ

ಮತ್ತೊಂದು ಬಿಗ್ ಬಜೆಟ್‌ ಸಿನಿಮಾಗೆ ಹೊಂಬಾಳೆ ಜೊತೆ ಕೈ ಜೋಡಿಸಿದ ಕಿಚ್ಚ ಸುದೀಪ್. ಏನಿದು ವೈರಲ್ ಪೋಟೋ ಹಿಂದಿರುವ ಕಥೆ...
 

Kiccha Sudeep Karthik Gowda share new picture Hombale films creates suspense vcs
Author
First Published Oct 6, 2022, 3:50 PM IST

ಕನ್ನಡ ಚಿತ್ರರಂಗದಲ್ಲಿ ಬಜೆಟ್‌ ಲೆಕ್ಕ ಹಾಕದೆ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ಬೋದು ಅನ್ನೋದನ್ನ ರಾಜಕುಮಾರ್ ಮತ್ತು ಕೆಜಿಎಫ್ ಸಿನಿಮಾ ಮೂಲಕ ತೋರಿಸಿಕೊಟ್ಟಿದ್ದು ವಿಜಯ್ ಕಿರಗಂದೂರ್‌ ಅವರ ಹೊಂಬಾಳೆ ಫಿಲ್ಮ್ಸ್‌. ಬ್ಯಾಕ್ ಟು ಬ್ಯಾಕ್ ಹಿಸ್ಟ್‌ ಸಿನಿಮಾಗಳನ್ನು ಕೊಟ್ಟು ಕೋಟಿ ಕೋಟಿಯಲ್ಲಿ ಕಲೆಕ್ಷನ್ ಮಾಡುತ್ತಿರುವ ಹೊಂಬಾಳೆ ತಂಡ ಇದೀಗ ಕಿಚ್ಚ ಸುದೀಪ್‌ ಜೊತೆ ಕೈ ಜೋಡಿಸಿದ್ದಾರೆ.

ಹೌದು! ಹೊಂಬಾಳೆ ಫಿಲ್ಮ್ಸ್‌ನ ನಿರ್ಮಾಪಕರಲ್ಲಿ ಒಬ್ಬರಾಗಿರುವ ಕಾರ್ತಿಕ್ ಗೌಡ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಬ್ಬಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 'ಹೊಸ ಆರಂಭ' ಎಂದು ಕಾರ್ತಿಕ್‌ ಬರೆದುಕೊಂಡು ಸುದೀಪ್‌ರನ್ನು ಟ್ಯಾಗ್ ಮಾಡಿದ್ದಾರೆ. ಕಾರ್ತಿಕ್‌ರನ್ನು ಸುದೀಪ್‌ ಹಿಂದಿನಿಂದ ತಬ್ಬಿಕೊಂಡು ಕಣ್ಣು ಹೊಡೆಯುತ್ತಿದ್ದಾರೆ. ಹೀಗಾಗಿ ಏನೋ ಇಂಟ್ರೆಸ್ಟಿಂಗ್ ವಿಚಾರ ಕುಕ್ ಅಗುತ್ತಿದೆ ಅನ್ನೋದು ನೆಟ್ಟಿಗರ ಮಾತು. 

Kantara Review: ಕಾಂತಾರ ಒಂದು ವಿಶಿಷ್ಟ ಅನುಭೂತಿ

ಹೊಂಬಾಳೆ ಮ್ಯಾಜಿಕ್‌ ಮಾಡಿರುವ ಚಿತ್ರಗಳು:

2014ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆ 'ನಿನ್ನಿಂದಲೇ' ಸಿನಿಮಾ ಮೂಲಕ ನಿರ್ಮಾಣ ಸಂಸ್ಥೆ ಆರಂಭವಾಗಿತ್ತು. 2015ರಲ್ಲಿ ಯಶ್ ನಟನೆಯ 'ಮಾಸ್ಟರ್ ಪೀಸ್', 2017ರಲ್ಲಿ ಪುನೀತ್ 'ರಾಜಕುಮಾರ' ಸಿನಿಮಾ, 2018ರಲ್ಲಿ ಕೆಜಿಎಫ್‌ ಚಾಪ್ಟರ್ 1 ಸಿನಿಮಾ, 2021ರಲ್ಲಿ ಪುನೀತ್ 'ಯುವರತ್ನ' ಸಿನಿಮಾ, ಯಶ್ 'ಕೆಜಿಎಫ್ ಚಾಪ್ಟರ್ 2', ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ನಿರ್ಮಾಣ ಮಾಡಿದ್ದಾರೆ. 

ಸದ್ಯಕ್ಕೆ ಲಿಸ್ಟ್‌ನಲ್ಲಿ ಜಗ್ಗೇಶ್‌ ನಟನೆಯ 'ರಾಘವೇಂದ್ರ ಸ್ಟೋರ್ಸ್‌, ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ತೆಲುಗು ಸಿನಿಮಾ 'ಸಲಾರ್', ಪೃಥ್ವಿರಾಜ್‌ ಸುಕುಮಾರನ್‌ ಮಲಯಾಳಂ ಸಿನಿಮಾ ಟೈಸನ್,  ಡಾಕ್ಟರ್ ಸೂರಿ ನಿರ್ದೇಶನ ಮಾಡುತ್ತಿರುವ ಭಗೀರಾ ಸಿನಿಮಾ, ರಕ್ಷಿತ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ರಿಚರ್ಡ್‌ ಆಂಟೋನಿ ಮತ್ತು ಮಲಯಾಳಂ ಪವನ್‌ ಕುಮಾರ್ ಅವರ 'ಧೂಮ್' ಸಿನಿಮಾ ನಿರ್ಮಾಣಕ್ಕೆ ಸಹಿ ಮಾಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Karthik Gowda (@karthik_krg)

ಕಾಂತಾರ ಟ್ರೆಂಡಿಂಗ್:

ನಟ ಪುನೀತ್‌ ರಾಜ್‌ಕುಮಾರ್‌, ದೈವ ನರ್ತಕರು ಮತ್ತು ಅವರ ಕುಟುಂಬಗಳಿಗೆ ನಮ್ಮ ‘ಕಾಂತಾರ’ ಚಿತ್ರವನ್ನು ಅರ್ಪಿಸುತ್ತೇನೆ ಎಂದು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹೇಳಿದ್ದಾರೆ. ಒಂದೂವರೆ ವರ್ಷದ ಶ್ರಮದ ಪ್ರತಿಫಲ ಈ ‘ಕಾಂತಾರ’ ಸಿನಿಮಾ. ಪ್ರೇಕ್ಷಕರ ಮೆಚ್ಚುಗೆಯಿಂದ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ ಎಂದು ತಿಳಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಜೊತೆ ಕೀರ್ತಿ ಸುರೇಶ್ ಸಿನಿಮಾ; ಡೈರೆಕ್ಟರ್ ಇವರೇ

ಶನಿವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಅದ್ಭುತವಾದ ಪಯಣ. ಈ ಕತೆ ಹುಟ್ಟಿದಾಗ ನನ್ನ ಪತ್ನಿ ಪ್ರಗತಿ ಶೆಟ್ಟಿ ಗರ್ಭಿಣಿ ಆಗಿದ್ದರು. ಪ್ರಗತಿಗೆ ಹೆರಿಗೆ ಆಗಿ ಆರು ತಿಂಗಳು ಆಗಿದೆ. ಆ ಮಗು ಚೆನ್ನಾಗಿದೆ. ನನ್ನ ಸಿನಿಮಾ ಮಗು ಶುಕ್ರವಾರ ಚಿತ್ರಮಂದಿರಕ್ಕೆ ಬಂದಿದೆ. ಈ ಮಗು ಕೂಡ ಆರೋಗ್ಯವಾಗಿದೆ. ಜನ ಪ್ರೀತಿಸುತಿದ್ದಾರೆ. ಸ್ಥಳೀಯ ಸಂಸ್ಕೃತಿಯನ್ನು ಪ್ರಾಮಾಣಿಕವಾಗಿ ಹೇಳುವ ಪ್ರಯತ್ನ ಇದು ಎಂದರು.

ಸಿನಿಮಾ ಬಿಡುಗಡೆ ಆದ ಎರಡನೇ ದಿನಕ್ಕೆ 100 ಶೋಗಳು ಹೆಚ್ಚಾಗಿವೆ. ಇನ್ನೂ 25 ಶೋ ಹೆಚ್ಚಾಗಲಿವೆ. ಕ್ಯಾಲಿಫೋರ್ನಿಯಾದ ಚಿತ್ರಮಂದಿರವೊಂದರಲ್ಲಿ ಒಂದೇ ದಿನ 8 ಶೋ ಪ್ರದರ್ಶನ ಕಾಣುತ್ತಿದೆ. ಇದು ಕನ್ನಡ ಸಿನಿಮಾದ ದಾಖಲೆ. ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಅವರ ಕೆಲಸಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಒಳ್ಳೆಯ ಚಿತ್ರವನ್ನು ಜನ ಗೆಲ್ಲಿಸುತ್ತಾರೆಂಬುದಕ್ಕೆ ಕಾಂತಾರ ಚಿತ್ರವೇ ಸಾಕ್ಷಿ ಎಂದು ಹೇಳಿದರು.ಚಿತ್ರದಲ್ಲಿ ನಟಿಸಿರುವ ನಾಯಕಿ ಸಪ್ತಮಿ ಗೌಡ, ಅಚ್ಯುತ್‌ಕುಮಾರ್‌, ಪ್ರಮೋದ್‌ ಶೆಟ್ಟಿ. ಶೈನ್‌ ಶೆಟ್ಟಿ, ವಸ್ತ್ರ ವಿನ್ಯಾಸಕಿ ಪ್ರಗತಿ ಶೆಟ್ಟಿ, ಛಾಯಾಗ್ರಹಕ ಅರವಿಂದ್‌ ಕಶ್ಯಪ್‌ ಅವರು ಹಾಜರಿದ್ದು ಚಿತ್ರದ ಬಗ್ಗೆ ಮಾತನಾಡಿದರು.

Follow Us:
Download App:
  • android
  • ios