ಹೊಂಬಾಳೆ ಫಿಲ್ಮ್ಸ್ ಜೊತೆ ಕೀರ್ತಿ ಸುರೇಶ್ ಸಿನಿಮಾ; ಡೈರೆಕ್ಟರ್ ಇವರೇ
ಮಿಳಿನ ಖ್ಯಾತ ನಟಿ, ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಕನ್ನಡದ ಹೊಂಬಾಳೆ ಫಿಲ್ಮ್ಸ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ (Hombale Films) ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ವಿಜಯ್ ಕಿರಗಂದೂರು ಒಡೆತನದ ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದೆ. ಕೆಜಿಎಫ್ ಸಿನಿಮಾ ಮೂಲಕ ದೇಶ-ವಿದೇಶಗಳಲ್ಲಿ ಖ್ಯಾತಿಗಳಿಸಿರುವ ಹೊಂಬಾಳೆ ಫಿಲ್ಮ್ಸ್ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾ ಸ್ಟಾರ್‌ಗಳ ಜೊತೆಯೂ ಸಿನಿಮಾ ಮಾಡುತ್ತಿದೆ. ಕೆಜಿಎಫ್ (KGF) ಮೂಲಕ ದೇಶದ ಗಮನ ಸೆಳೆದಿರುವ ಹೊಂಬಾಳೆ ಫಿಲ್ಮ್ಸ್ ಸಿನಿಮಾಗಳ ಮೇಲೆ ನಿರೀಕ್ಷೆ ಕೂಡ ದುಪ್ಪಟ್ಟಾಗಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಹೊಂಬಾಳೆ ಫಿಲ್ಮ್ಸ್ ಸಿನಿಮಾ ಮಾಡುತ್ತಿದೆ. ಇದೀಗ ಹೊಂಬಾಳೆ ಮತ್ತೊಂದು ವಿಚಾರ ಕೇಳಿಬರುತ್ತಿದೆ. ತಮಿಳಿನ ಖ್ಯಾತ ನಟಿ, ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಕನ್ನಡದ ಹೊಂಬಾಳೆ ಫಿಲ್ಮ್ಸ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯ ಸಿನಿಮಾ ಜೊತೆಗೆ ಕೀರ್ತಿ ಸುರೇಶ್ ಕನ್ನಡಕ್ಕೆ ಎಂಟ್ರಿ ಕೊಡ್ತಿದ್ದಾರೆ ಎನ್ನುವ ಸುದ್ದಿ ಕಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಅಂದಹಾಗೆ ಕೀರ್ತಿ ಸುರೇಶ್ ಗೆ ತಮಿಳಿನ ಖ್ಯಾತ ನಿರ್ದೇಶಕಿ ಸುಧಾ ಕೊಂಗಾರ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೆ ಹೊಂಬಾಳೆ ಫಿಲ್ಮ್ಸ್ ತಮಿಳಿನ ನಿರ್ದೇಶಕಿ, ಸೂರರೈ ಪೊಟ್ರು ಖ್ಯಾತಿಯ ಸುಧಾ ಜೊತೆ ಸಿನಿಮಾ ಅನೌನ್ಸ್ ಮಾಡಿದೆ. ಆದರೆ ಯಾವ ಸಿನಿಮಾ, ಸುಧಾ ಕೊಂಗಾರ ಸಿನಿಮಾಗೆ ಯಾರು ಹೀರೋ ಎನ್ನುವ ವಿಚಾರ ಬಹಿರಂಗವಾಗಿರಲಿಲ್ಲ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸುಧಾ ಸಿನಿಮಾಗೆ ಕೀರ್ತಿ ನಾಯಕಿ ಎನ್ನಲಾಗುತ್ತಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಹಾಗೂ ತನ್ನ ನಿರ್ದೇಶನದ ಸಿನಿಮಾ ಹೀರೋ ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕಿ ಇಬ್ಬರು ಒಟ್ಟಿಗೆ ಹೊಂಬಾಳೆ ಫಿಲ್ಮ್ಸ್ ನಲ್ಲಿ ಸಿನಿಮಾ ಮಾಡುತ್ತಿರುವುದು ಸಿನಿ ಅಭಿಮಾನಿಗಳಿಗೆ ದೊಡ್ಡ ಹಬ್ಬವೇ ಆಗಲಿದೆ.
ಹೊಂಬಾಳೆ ಫಿಲ್ಮ್ಸ್ ಜೊತೆ ಫಹಾದ್ ಸಿನಿಮಾ; ಪುನೀತ್ ಮಾಡಬೇಕಿದ್ದ ದ್ವಿತ್ವಗೆ ಹೀರೋ ಆಗ್ತಾರಾ ಮಲಯಾಳಂ ಸ್ಟಾರ್?
ಅಂದಹಾಗೆ ಸುಧಾ ಕೊಂಗಾರ ಅವರ ಮುಂದಿನ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಂತೆ. ಹಾಗಾಗಿ ಸುಧಾ ಸಿನಿಮಾಗೆ ಕೀರ್ತಿ ಉತ್ತಮ ಆಯ್ಕೆ ಎಂದು ನಿರ್ಧರಿಸಿ ಮಹಾನಟಿಯನ್ನು ಆಯ್ಕೆ ಮಾಡಲಾಗಿದೆಯಂತೆ. ಮಹಾನಟಿ ಸಿನಿಮಾದಲ್ಲಿ ಅದ್ಭುತ ನಟನೆಗೆ ಕೀರ್ತಿ ರಾಷ್ರ್ಟ ಪ್ರಶಸ್ತಿ ಪಡೆದಿದ್ದರು. ಇದೀಗ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸದ್ಯದಲ್ಲೇ ಅಧಿಕೃತ ಮಾಹಿತಿ ಬಹಿರಂಗ ಪಡಿಸುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಕಾಯಲೇ ಬೇಕು.
ಹೊಂಬಾಳೆ ಜೊತೆ ಮಾನುಷಿ ಚಿಲ್ಲರ್ ಸಿನಿಮಾ; ಪೃಥ್ವಿರಾಜ್‌ಗೆ ಜೋಡಿಯಾಗ್ತಾರಾ ವಿಶ್ವ ಸುಂದರಿ?
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಾಲು ಸಾಲು ಸಿನಿಮಾಗಳು ಮೂಡಿಬರುತ್ತಿವೆ. ರಿಷಬ್ ಶೆಟ್ಟಿ ಅವರ ಕಾಂತಾರ, ಜಗ್ಗೇಶ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್‌ನ ರಾಘವೇಂದ್ರ ಸ್ಟೋರ್, ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಅವರ ಸಲಾರ್, ಶ್ರೀಮುರಳಿ ಅವರ ಜೊತೆ ಬಘೀರ, ಪೃಥ್ವಿರಾಜ್ ಜೊತೆ ಟೈಸನ್, ರಕ್ಷಿತ್ ಶೆಟ್ಟಿ ಜೊತೆ ರಿಚರ್ಡ್ ಆಟಂನಿ, ಪವನ್ ಕುಮಾರ್ ಜೊತೆ ದ್ವಿತ್ವ ಹಾಗೂ ಸುಧಾ ಕೊಂಗಾರ ಜೊತೆ ಸಿನಿಮಾ. ಈ ಎಲ್ಲಾ ಸಿನಿಮಾಗಳು ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಾಗಿದ್ದು ಯಾವಾಗ ರಿಲೀಸ್ ಆಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.