ಸಖತ್ ದುಬಾರಿ ಕಣ್ಣಮ್ಮ ನೀನು....; ಅನುಷಾ ರೈ ಶಾಪಿಂಗ್ ನೋಡಿ ಫ್ಯಾನ್ಸ್ ಶಾಕ್
ಅನುಷಾ ರೈ ಶಾಪಿಂಗ್ ಫೋಟೋಗಳನ್ನು ನೋಡಿ ಶಾಕ್ ಆದ ನೆಟ್ಟಿಗರು. ಹಣ ಎಲ್ಲಿಂದ ಬರುತ್ತೆ ಎಂದ ನೆಟ್ಟಿಗರು....

ಸ್ಯಾಂಡಲ್‌ವುಡ್ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಅನುಷಾ ರೈ ಇದೀಗ ವಿದೇಶ ಪ್ರವಾಸದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ ಶಾಪಿಂಗ್ ಕೂಡ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅನುಷಾ ರೈ ಸ್ಟೈಲಿಂಗ್ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲದೆ ಅನುಷಾ ಧರಿಸುವುದು ದುಬಾರಿ ಬಟ್ಟೆಗಳು ಅನ್ನೋದು ಕನ್ಫರ್ಮ್ ಆಯ್ತು.
ಇದೀಗ ಅನುಷಾ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಅಲ್ಲಿ ಮಾಡಿರುವ ಶಾಪಿಂಗ್ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.
'ಸದಾ ವಿಶೇಷವಾಗಿರಬೇಕು' ಎಂದು ಅನುಷಾ ರೈ ಬರೆದುಕೊಂಡಿದ್ದಾರೆ. ಇದಕ್ಕೆ ಪಿಂಕ್ ಬಣ್ಣ, ಬರ್ಬರಿ ಬ್ರಾಂಡ್ ಮತ್ತು ಬಿಗ್ ಬಾಸ್ ಟ್ಯಾಗ್‌ಗಳನ್ನು ಬಳಸಿದ್ದಾರೆ.
ಪದೇ ಪದೇ ಯಾವ ಬ್ರ್ಯಾಂಡ್ ಧರಿಸಿರುವುದು ಎಂದು ಫ್ಯಾನ್ಸ್ ಕೇಳುವುದಕ್ಕೆ ಅನುಷಾ ರೈ ಇತ್ತೀಚಿಗೆ ತಮ್ಮ ಔಟ್‌ಫಿಟ್ ಬಗ್ಗೆ ಮಾಹಿತಿ ನೀಡುತ್ತಾರೆ.
ಅಬ್ಬಬ್ಬ, ಧೈರ್ಯಂ ಸರ್ವತ್ರ ಸಾಧನಂ, ಪೆಂಟಗನ್ ಮತ್ತು ಖಡಕ್ ಸಿನಿಮಾಗಳಲ್ಲಿ ಅನುಷಾ ನಟಿಸಿದ್ದಾರೆ. ಕಡಿಮೆ ಸಿನಿಮಾ ಮಾಡಿದ್ದರೂ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.