ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪಠಾಣ್ ಸಿನಿಮಾ ನೋಡಿಲ್ಲ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. 

ಅಭಿನಯ ಕಿಚ್ಚ ಸುದೀಪ್ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರಲ್ಲಿ ಒಬ್ಬರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಿಚ್ಚ ಇತ್ತೀಚೆಗೆ ಪಠಾಣ್ ಸಿನಿಮಾ ವಿಚಾರವಾಗಿ ನೀಡಿದ ಹೇಳಿಕೆ ವೈರಲ್ ಆಗಿದೆ. ಖಾಸಗಿ ವಾಹಿನಿಯ ಸಂವಾದದಲ್ಲಿ ಭಾಗಿಯಾಗಿದ್ದ ಕಿಚ್ಚ ಪಠಾಣ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಅಷ್ಟೆಯಲ್ಲ ಸ್ಟಾರ್ ನಟ ಯಾರು ಎನ್ನುವ ಪ್ರಶ್ನೆಗೆ ಸುದೀಪ್ ನೀಡಿದ ಉತ್ತರಕ್ಕೆ ಹಿಂದಿ ಮಂದಿ ದಂಗ್ ಆಗಿದ್ದಾರೆ. ನಿರೂಪಕಿಯೊಬ್ಬರು ಕಿಚ್ಚ ಸುದೀಪ್ ಅವರಿಗೆ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ನೋಡಿದ್ದಾರಾ? ಮತ್ತು ಸದ್ಯ ಅತ್ಯಂತ ದೊಡ್ಡ ಸ್ಟಾರ್ ಅಥವಾ ಶ್ರೇಷ್ಠ ನಟ ಯಾರು ಎಂದು ಭಾವಿಸುತ್ತೀರಿ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಕಿಚ್ಚ ಸರಿಯಾಗಿ ತಿರುಗೇಟು ನೀಡಿದ್ದಾರೆ. ಕಿಚ್ಚನ ಉತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ನಿರೂಪಕಿಯ ಪ್ರಶ್ನೆಯಿಂದ ಕೊಂಚ ಗರಂ ಆದ ಕಿಚ್ಚ ನಾನು ಪಠಾಣ್ ನೋಡಿಲ್ಲ, ನನಗೆ ನಾನೇ ಸ್ಟಾರ್ ಎಂದು ಹೇಳಿದರು. 'ಮೇಡಂ ನಾನು ಸ್ಟಾರ್ ಆಗಿ ನಾನು ನಾನೇ ದೊಡ್ಡ ಸ್ಟಾರ್ ಎಂದು ಹೇಳುತ್ತೀನಿ. ನನ್ನ ಬಗ್ಗೆ ನಾನ್ಯಾಕೆ ಹೇಳಬಾರದು. ನಾನು ನನ್ನ ಜೀವನದ ಸ್ಟಾರ್ ಮತ್ತು ನಾನು ಇತರ ನಟರನ್ನು ಗೌರವಿಸುತ್ತೇನೆ' ಎಂದು ಹೇಳಿದರು. ತನ್ನನ್ನು ತಾನು ಕಿಚ್ಚ ಯಾವತ್ತೂ ಸ್ಟಾರ್ ಅಲ್ಲ, ಗ್ರೇಟ್ ಅಲ್ಲ ಎಂದು ಹೇಳಿಕೊಂಡಿಲ್ಲ. ಸಂವಾದದಲ್ಲೂ ಕೂಡ ಕಿಚ್ಚ ತನ್ನನ್ನು ತಾನು ಹೊಗಳಿಕೊಂಡರು.

ಇನ್ನೂ ಪಠಾಣ್ ಸಿನಿಮಾ ನೋಡಿದ್ದೀರಾ ಎಂದು ಕೇಳಿದ್ದಕ್ಕೆ, 'ನಾನು ಇನ್ನೂ ಪಠಾಣ್ ನೋಡಿಲ್ಲ. ಆದರೆ ಸದ್ಯದಲ್ಲೇ ನೋಡುತ್ತೇನೆ. ನಾನು ಕನ್ನಡ ಸಿನಿಮಾ ನೋಡುವುದರಲ್ಲೇ ಬ್ಯುಸಿಯಾಗಿದ್ದೀನಿ. ಕನ್ನಡದಲ್ಲಿ ದೊಡ್ಡ ಪಟ್ಟಿಯೇ ಇದೆ. ಅದನ್ನೆಲ್ಲವನ್ನು ಮುಗಿಸಿ ಪಠಾಣ್‌ ನೋಡಲು ಬರ್ತೀನಿ' ಎಂದು ಹೇಳಿದರು.

'ಬಿಲ್ಲಾ ರಂಗ ಬಾಷಾ' ಆಗಿ ಬರ್ತಿದ್ದಾರೆ ಕಿಚ್ಚ; ಯಾವಾಗ ಚಿತ್ರೀಕರಣ?

 ಕಿಚ್ಚ ಸುದೀಪ್ ಹೇಳಿಕೆ ಅನೇಕ ವಿಚಾರಕ್ಕೆ ವೈರಲ್ ಆಗುತ್ತಿದೆ. ಪಠಾಣ್ ಸಿನಿಮಾ ಬಹಿಷ್ಕಾರಕ್ಕೆ ಕರೆ ಕೊಟ್ಟಿದ್ದವರು ಕಿಚ್ಚನ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸುದೀಪ್ ಕೂಡ ಪಠಾಣ್ ನೋಡದೆ ತಿರಸ್ಕರಿದ್ದಾರೆ ಎಂದು ಹೇಳುತ್ತಿದ್ದಾರೆ. ಶಾರುಖ್ ಅಭಿಮಾನಿಗಳು ಕಿಚ್ಚನನ್ನು ಸಂಘಿ, RSS ಬೆಂಬಲಿಗ ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಸಂಘಿ ವೈಬ್ಸ್ ಜಾಸ್ತಿ ಇದೆ ಎಂದು ಹೇಳಿದ್ದಾರೆ. 

KCC ಬೆನ್ನಲ್ಲೇ ಕ್ರಿಕೆಟಿಗ ಶಿಖರ್ ಧವನ್ ಭೇಟಿಯಾದ ಕಿಚ್ಚ ಸುದೀಪ್; ಕಿಂಗ್ ಕೊಹ್ಲಿ ಭೇಟಿ ಯಾವಾಗ ಎಂದ ಫ್ಯಾನ್ಸ್

ಇನ್ನು ಕೆಲವರು ಕಾಮೆಂಟ್ ಮಾಡಿ ಗ್ರೇಟ್ ಉತ್ತರ, ಕಿಚ್ಚ ಸುದೀಪ್ ಪ್ರತಿಕ್ರಿಯೆಗೆ ನನ್ನ ನಮನ ಎಂದು ಹೇಳಿದ್ದಾರೆ. ಸುದೀಪ್ ಸದ್ಯ ಕ್ರಿಕೆಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ ಫೈನಲ್ ಪ್ರವೇಶಿಸಿದೆ. ಫೈನಲ್ ಪಂದ್ಯಕ್ಕಾಗಿ ಕಿಚ್ಚ ಅಂಡ್ ಟೀಂ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ ಕ್ರಿಕೆಟ್ ನಲ್ಲಿ ಬ್ಯುಸಿಯಾಗಿರುವ ಕಿಚ್ಚ ಮುಗಿಯುತ್ತಿದ್ದಂತೆ ಮತ್ತೆ ಸಿನಿಮಾಗಳ ಕಡೆ ಗಮನ ಹರಿಸಲಿದ್ದಾರೆ. ಸದ್ಯ ಕೇಳಿ ಬರುತ್ತಿವ ಮಾಹಿತಿ ಪ್ರಕಾರ ಕಿಚ್ಚ ಬಿಲ್ಲಾ ರಂಗ ಬಾಷಾ ಆಗಿ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾಗೆ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯದಲ್ಲೇ ಬಿಲ್ಲಾ ರಂಗ ಬಾಷಾ ಪ್ರಾರಂಭವಾಲಿದೆ ಎನ್ನಲಾಗಿದೆ.