Asianet Suvarna News Asianet Suvarna News

3 ದಿನಗಳಿಂದ ಬಂಡೀಪುರದಲ್ಲಿ ಕುಟುಂಬದ ಜೊತೆ ಸಫಾರಿ ಮಾಡುತ್ತಿರುವ ಯಶ್!

ನಾನು ಸುಮ್ಮನೆ ಕುಳಿತಿಲ್ಲ, ಮುಂದಿನ ಚಿತ್ರದ ಸ್ಕಿ್ರಪ್‌್ಟಕೂಡ ಸಿದ್ಧವಾಗಿದೆ.  3 ದಿನಗಳಿಂದ ಬಂಡೀಪುರದಲ್ಲಿ ಕುಟುಂಬದ ಜತೆ ಸಫಾರಿ

KGF Yash spends time with family in Bandipur forest vcs
Author
First Published Jun 22, 2023, 10:33 AM IST

ನಾನು ಬಾಲಿವುಡ್‌ಗೆ ಹೋಗಿಲ್ಲ, ಆದಷ್ಟುಬೇಗ ಹೊಸ ಸಿನಿಮಾದ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ನಟ ಯಶ್‌ ಹೇಳಿದರು.

ಕುಟುಂಬ ಸಮೇತ ನಂಜನಗೂಡು ನಂಜುಂಡೇಶ್ವರನ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಶೀಘ್ರದಲ್ಲೇ ನನ್ನ ಮುಂದಿನ ಚಿತ್ರ ಅನೌನ್ಸ್‌ ಮಾಡುವೆ. ದೇವರ ಸನ್ನಿಧಿಯಲ್ಲಿದ್ದೇನೆ ಸುಖಾ ಸುಮ್ಮನೆ ತೇಲಿಸುವ ಮಾತುಗಳನ್ನು ಆಡುವುದಿಲ್ಲ. ಜನರು ದುಡ್ಡು ಕೊಟ್ಟು ಸಿನಿಮಾ ನೋಡುತ್ತಾರೆ. ಅವರು ಕೊಡುವ ದುಡ್ಡಿಗೆ ನ್ಯಾಯ ಒದಗಿಸುವಂತೆ ಚಿತ್ರ ಮಾಡಬೇಕು. ನಾನು ಒಂದು ಕ್ಷಣವನ್ನೂ ವ್ಯರ್ಥ ಮಾಡುತ್ತಿಲ್ಲ, ನಿರಂತರವಾಗಿ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದೇನೆ. ಸಿನಿಮಾದ ಸ್ಕಿ್ರಪ್‌್ಟಕೂಡ ಸಿದ್ಧವಾಗಿದೆ ಎಂದರು.

ಇದೇ ವೇಳೆ ನಾನು ಬಾಲಿವುಡ್‌ಗೆ ಹೋಗಿದ್ದೇನೆಂಬ ಹೇಳಿಕೆಗಳು ಬರುತ್ತಿದೆ. ಅದೆಲ್ಲ ಸುಳ್ಳು, ನಾನು ಬಾಲಿವುಡ್‌ಗೆ ಹೋಗಿಲ್ಲ, ಬದಲಾಗಿ ನಾನು ಇರುವ ಕಡೆಗೆ ಅವರನ್ನು ಕರೆಸಿಕೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಹೊಸ ರೇಂಜ್ ರೋವರ್‌ನಲ್ಲಿ ತೆರಳಿ ನಂಜನಗೂಡಿನ ಶ್ರೀಕಂಠೇಶ್ವರ ದರ್ಶನ ಪಡೆದ ರಾಕಿಂಗ್ ಸ್ಟಾರ್ ದಂಪತಿ

ನಂಜನಗೂಡಲ್ಲಿ ಯಶ್‌ ಕುಟುಂಬದಿಂದ ಪೂಜೆ

3 ದಿನಗಳಿಂದ ಬಂಡೀಪುರದಲ್ಲಿ ಕುಟುಂಬದ ಜತೆ ಸಫಾರಿ

ಚಲನಚಿತ್ರ ನಟ ಯಶ್‌ ಮತ್ತು ನಟಿ ರಾಧಿಕಾ ಪಂಡಿತ್‌ ತಮ್ಮ ಕುಟುಂಬ ಸಮೇತರಾಗಿ ಶ್ರೀಕಂಠೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಕಳೆದ ಮೂರು ದಿನಗಳಿಂದ ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ನಡೆಸಿದ ದಂಪತಿ ಬುಧವಾರ ತಮ್ಮ ಇಬ್ಬರು ಮಕ್ಕಳೊಂದಿಗೆ ಶ್ರೀಕಂಠೇಶ್ವರನ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ವತಿಯಿಂದ ಅವರಿಗೆ ಶೇಷವಸ್ತ್ರ, ಫಲತಾಂಬೂಲಗಳನ್ನು ನೀಡಿ ಗೌರವಿಸಲಾಯಿತು.

ನಂತರ ಸುದ್ದಿಗಾರರೊಂದಿಗೆ ನಟ ಯಶ್‌ ಮಾತನಾಡಿ, ಶ್ರೀಕಂಠೇಶ್ವರ ನಮ್ಮ ಮನೆ ದೇವರು ಆಗಾಗ ಈ ದೇವಾಲಯಕ್ಕೆ ಬರುತ್ತೇವೆ. ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದಾಗಿ ದೇವಾಲಯಕ್ಕೆ ಬರಲು ಸಾಧ್ಯವಾಗಿರಲಿಲ್ಲ, ಈಗ ಕಳೆದ ಮೂರು ದಿನಗಳಿಂದ ಮೈಸೂರಿನ ಭಾಗದಲ್ಲೇ ಪ್ರವಾಸದಲ್ಲಿದ್ದ ಕಾರಣ ದೇವಾಲಯಕ್ಕೆ ಬಂದಿದ್ದೇನೆ. ಯಾವುದೇ ವಿಶೇಷ ಹರಕೆ ಇರಲಿಲ್ಲ ಎಂದರು.

ಗೋವಾದಲ್ಲಿ ಶುರುವಾದ ಲವ್ ಇಲ್ಲಿಯವರೆಗೆ: ಅಪ್ಪ-ಅಮ್ಮನ ಪ್ರೀತಿ ವಿಚಾರ ಬಿಚ್ಚಿಟ್ಟು ರಾಧಿಕಾ ಪಂಡಿತ್ ವಿಶ್

ಮೈಸೂರು ಭಾಗದ ಪ್ರವಾಸ ತುಂಬಾ ಚೆನ್ನಾಗಿತ್ತು. ನನ್ನ ಮಕ್ಕಳಿಗೆ ಕಾಡಿನ ಪ್ರವಾಸದ ಮೊದಲ ಅನುಭವ ಆಯ್ತು. ಮಕ್ಕಳು ಸಫಾರಿಯನ್ನು ತುಂಬಾ ಆನಂದಿಸಿದರು. ಕಾಡಿನಲ್ಲಿ ಜಿಂಕೆ, ಕರಡಿ, ಆನೆ ಎಲ್ಲ ಕಂಡವು. ಆದರೆ ಹುಲಿ ಕಾಣಸದಿದ್ದುದು ಬೇಜಾರ್‌ ಆಯ್ತು. ಬುಧವಾರ ಕೂಡ ಸಫಾರಿ ಮಾಡಬೇಕಿತ್ತು, ಆದರೆ ಮಳೆ ಕಾರಣದಿಂದ ಸಫಾರಿಗೆ ಹೋಗದೆ ದೇವರ ದರ್ಶನಕ್ಕೆ ಬಂದಿದ್ದೇವೆ ಎಂದರು.

Latest Videos
Follow Us:
Download App:
  • android
  • ios