Asianet Suvarna News Asianet Suvarna News

SIIMA 2022; ಪ್ರತಿ ಅವಾರ್ಡ್ ಕಾರ್ಯಕ್ರಮ ಕರ್ನಾಟಕಕ್ಕೆ ಬರೋ ಹಾಗೆ ಆಗಿದೆ, ಎಲ್ಲರೂ ಬರ್ತಾರೆ- ಯಶ್

ಬೆಂಗಳೂರಿನಲ್ಲಿ ಪ್ರತಿಷ್ಠಿತ ಸೈಮಾ 2022 (SIIMA) ಪ್ರಶಸ್ತಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ.  ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಸೈಮಾ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್, ತಮಿಳು ಸ್ಟಾರ್ ಕಮಲ್ ಹಾಸನ್, ಟಾಲಿವುಡ್ ಹೀರೋ ಅಲ್ಲು ಅರ್ಜುನ್ ಸೈಮಾ 2022ನಲ್ಲಿ ವಿಶೇಷ ಅತಿಥಿಗಳಾಗಿ ಭಾಗಿಯಾಗಿದ್ದರು.

KGf star yash speaks about SIIMA 2022 and His next film sgk
Author
First Published Sep 11, 2022, 10:28 AM IST

ಬೆಂಗಳೂರಿನಲ್ಲಿ ಪ್ರತಿಷ್ಠಿತ ಸೈಮಾ 2022 (SIIMA) ಪ್ರಶಸ್ತಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಸೆಪ್ಟಂಬರ್ 10, 11ರಂದು ಬೆಂಗಳೂರಿನಲ್ಲಿ ಸೈಮಾ ನಡೆಯಲಿದ್ದು ದಕ್ಷಿಣ ಭಾರತದ ಅನೇಕ ಕಲಾವಿದರು ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ.  ಬೆಂಗಳೂರಿನ ಪ್ಯಾಲೇಸ್ ​ಗ್ರೌಂಡ್ ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ.  ಕಳೆದ ವರ್ಷ ನಿಧನ ಹೊಂದಿದ ಪುನೀತ್​ ರಾಜ್​ಕುಮಾರ್ ಅವರ ನೆನಪಿನಲ್ಲಿ ಸೈಮಾ ಕಾರ್ಯಕ್ರಮವನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ.  

ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಸೈಮಾ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್, ತಮಿಳು ಸ್ಟಾರ್ ಕಮಲ್ ಹಾಸನ್, ಟಾಲಿವುಡ್ ಹೀರೋ ಅಲ್ಲು ಅರ್ಜುನ್ ಸೈಮಾ 2022ನಲ್ಲಿ ವಿಶೇಷ ಅತಿಥಿಗಳಾಗಿ ಭಾಗಿಯಾಗಿದ್ದರು. ವಿವಿಧ ಭಾಷೆಯ ಸ್ಟಾರ್ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. 

ಕೆಜಿಎಫ್ 2 ಸಿನಿಮಾ ಮೂಲಕ ಇಡೀ ಭಾರತೀಯ ಸಿನಿಮಾರಂಗವನ್ನು ಸ್ಯಾಂಡಲ್ ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ ಯಶ್ ಸೈಮಾದ ಸೆಂಟರ್ ಆಫ್ ದಿ ಅಟ್ರ್ಯಾಕ್ಷನ್ ಆಗಿದ್ದರು. ರಾಕಿಂಗ್ ದಂಪತಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಸೈಮಾಗೆ ಪತ್ನಿ ರಾಧಿಕಾ ಜೊತೆ ಬಂದ ಯಶ್ ಮಾಧ್ಯಮದ ಜೊತೆ ಮಾತನಾಡಿ, ಪ್ರತಿ ಅವಾರ್ಡ್ ಕಾರ್ಯಕ್ರಮ ಕರ್ನಾಟಕಕ್ಕೆ ಬರೋ ಹಾಗೆ ಆಗಿದೆ. ಎಲ್ಲರೂ ಬರ್ತಾರೆ ಎಂದು ಹೇಳಿದರು.  

ನಾವು ಯಾವಾಗಲು ಹೊರಗೆ ಹೋಗ್ತಾ ಇದ್ವಿ

'ಯಾವಾಗಲು ನಾವು ಹೊರಗಡೆ ಹೋಗ್ತಾ ಇದ್ವಿ, ಇಲ್ಲಿಗೆ ಬರಬೇಕು ಎನ್ನುವ ಆಸೆ ಇತ್ತು. ಇವತ್ತು ಸೈಮಾ ಅವರು ಬಂದಿದ್ದಾರೆ. ನಮ್ಮ ಪ್ರಕಾರ ಎಲ್ಲರೂ ಬರ್ತಾರೆ. ಪ್ರತಿ ಅವಾರ್ಡ್ ಕಾರ್ಯಕ್ರಮ ಕರ್ನಾಟಕಕ್ಕೆ ಬರೋ ಹಾಗೆ ಆಗಿದೆ. ಎ್ಲಲರೂ ಬರ್ತಾರೆ' ಎಂದು ಹೇಳಿದರು.  

ನಂಬರ್ 1 ನಟ ಯಶ್; 'ಕೆಜಿಎಫ್' ಸ್ಟಾರ್ ಬಗ್ಗೆ ಬಾಲಿವುಡ್ ನಟ ಶಾಹಿದ್ ಕಪೂರ್ ಹೇಳಿದ್ದು ಹೀಗೆ

ಪುನೀತ್ ರಾಜ್ ಕುಮಾರ್ ಬಗ್ಗೆ ಯಶ್ ಮಾತು 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಗ್ಗೆ ಮಾತನಾಡಿದ ಯಶ್, 'ಅಪ್ಪು ಸರ್ ಗೆ ನಾವು ಇಡೀ ಕರ್ನಾಟಕ ಬೇರ ಬೇರೆ ರೀತಿ ಗೌರವ ಸಲ್ಲಿಸಿದ್ದೇವೆ. ಅವರ ನೆನಪನಲ್ಲಿ ಸೈಮಾ ಮಾಡುತ್ತಿರುದು ತುಂಬಾ ಖುಷಿ ಇದೆ. ಆದರೆ ಇದಕ್ಕಿಂತ ಅವರು ಇದ್ದಿದ್ದರೆ ಆ ಖುಷಿ ಇನ್ನು ಜಾಸ್ತಿ ಇರುತ್ತಿತ್ತು' ಎಂದು ಹೇಳಿದರು.  

ರಾಮ ಮಂದಿರ ನಿರ್ಮಾಣಕ್ಕೆ ಯಶ್ 50 ಕೋಟಿ ರೂ. ದೇಣಿಗೆ; ವೈರಲ್ ಸುದ್ದಿಯ ಅಸಲಿಯತ್ತೇನು?

ಕೆಜಿಎಫ್ 3 ಬಗ್ಗೆ ಯಶ್ ರಿಯಾಕ್ಷನ್ 

ಇನ್ನು KGF 3 ಅಪ್ ಡೇಟ್ ಕೇಳಿದ್ದಕ್ಕೆ ರಾಕಿಂಗ್ ಸ್ಟಾರ್ ಯಶ್ ಇನ್ನು ಸಮಯ ಇದೆ ಎಂದರು.  ಏನೇ ಮಾಡಿದ್ರು ಸರಿಯಾಗಿ ಮಾಡಬೇಕು, ಬರೋ ಟೈಂನಲ್ಲಿ ಸರಿಯಾಗಿ ಬರ್ತೀನಿ ಎಂದು ಹೇಳಿದರು. 

 ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ಸಿನಿಮಾಗಳು ಸೈಮಾ ಅಡಿಯಲ್ಲಿ ಬರುತ್ತವೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ-ನಟಿ ಸೇರಿ ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ಭಾಷೆಯಲ್ಲಿ ಸುಮಾರು 19 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಅತ್ಯುತ್ತಮ ಕನ್ನಡ ನಟ ಪ್ರಶಸ್ತಿ ಪುನೀತ್ ರಾಜ್ ಕುಮಾರ್ ಅವರಿಗೆ ನೀಡಿ ಗೊರವಿಸಲಾಗಿದೆ. ನಟಿ ಪ್ರಶಸ್ತಿ ಆಶಿಕಾ ರಂಗನಾಥ್ ಪಾಲಾಗಿದೆ. 

 

Follow Us:
Download App:
  • android
  • ios