ಒಂದು ಗಂಟೆ ನಿಂತು, 700ಕ್ಕೂ ಅಧಿಕ ಅಭಿಮಾನಿಗಳಿಗೆ ಸೆಲ್ಫಿ ನೀಡಿದ ಯಶ್!
ರಾಕಿಂಗ್ ಸ್ಟಾರ್ ಯಶ್ ಎಂದಿಗೂ ಅಭಿಮಾನಿಗಳಿಗೆ ಮೋಸ ಮಾಡೋದಿಲ್ಲ. ಅದು ಸಿನಿಮಾವೇ ಇರಲಿ. ರಿಯಲ್ ಲೈಫ್ ಅಲ್ಲೇ ಇರಲಿ. ಭಾನುವಾರ ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಯಶ್, ಅಂದಾಜು ಒಂದು ಗಂಟೆಗಳ ಕಾಲ ನಿಂತು 700ಕ್ಕೂ ಅಧಿಕ ಅಭಿಮಾನಿಗಳ ಸೆಲ್ಫಿಗೆ ಪೋಸ್ ನೀಡಿದ್ದಾರೆ.
ಬೆಂಗಳೂರು (ಡಿ.18): ಒಂದು ಚಿತ್ರ ಹಿಟ್ ಆದರೆ ಸಾಕು ನಾಯಕನೇ ಆಗಲಿ, ನಾಯಕಿಯೇ ಆಗಲಿ 'ಸ್ಟಾರ್' ಎಂಬ ಪಟ್ಟ ತೆಲೆಗೇರಿಬಿಡುತ್ತದೆ. ಸಾಮಾನ್ಯ ಅಭಿಮಾನಿಗಳ ಕೈಗೆ ಅವರೆಲ್ಲಾ ಸಿಗೋದೆ ಇಲ್ಲ. ಸಮಯ ಇದ್ರೆ ಮಾತ್ರ ಸೆಲ್ಫಿ, ಇಲ್ಲ ಅಂದ್ರೆ ಎಲ್ರಿಗೂ ಒಂದು ಹಾಯ್ ಹೇಳಿ ಎದ್ದಿಹೋಗುವ ಜಾಯಮಾನ ಹೆಚ್ಚಿನ ಸ್ಟಾರ್‌ಗಳದ್ದು. ಆದರೆ, ಇದಕ್ಕೆ ಅಪವಾದ ಎಂಬಂತೆ ಇರುವುದು ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ ಸರಣಿಯ ಎರಡೂ ಚಿತ್ರಗಳ ಯಶಸ್ಸಿನೊಂದಿಗೆ ಯಶ್ ಈಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಎಲ್ಲಿಯೇ ಹೋದರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಯುವಕರ ದಂಡೇ ಇರುತ್ತದೆ. ಅಭಿಮಾನಿಗಳ ಜೊತೆ ಸಮಾನ್ಯ ವ್ಯಕ್ತಿಯಾಗಿಯೇ ಬೆರೆಯುವ ಯಶ್‌ನ ತಾಳ್ಮೆಯ ಬಗ್ಗೆ ಈಗ ಟ್ವಿಟರ್ ಮೆಚ್ಚಿಕೊಂಡಿದೆ. ಅದಕ್ಕೆ ಕಾರಣ, ಅಂದಾಜು 1 ಗಂಟೆಗೂ ಹೆಚ್ಚುಕಾಲ ಸ್ಟೇಜ್‌ನ ಮೇಲೆ ನಿಂತು. 700ಕ್ಕೂ ಅಧಿಕ ಫ್ಯಾನ್ಸ್‌ಗಳಿಗೆ ವೈಯಕ್ತಿಕ ಸೆಲ್ಫಿ ನೀಡುವ ಮೂಲಕ ರಾಕಿ ಭಾಯ್ ತಮ್ಮ ಸೌಮ್ಯ ರೂಪ ತೋರಿದ್ದಾರೆ.
ತನ್ನ ನೆಚ್ಚಿನ ನಟನನ್ನು ನೋಡಬೇಕು, ಆತ ಹೋಗುತ್ತಿರುವಾಗ ತೆಗೆದುಕೊಂಡ ಚಿತ್ರದಲ್ಲಿ ತನ್ನ ಮುಖವಿದ್ದರೂ ಸಾಕು ಎಂದುಕೊಳ್ಳುವ ಸಾಕಷ್ಟು ಅಭಿಮಾನಿಗಳಿದ್ದಾರೆ. ಅಂಥದ್ದರ ನಡುವೆ ಯಶ್‌ರಂಥ ನಟನ ಪಕ್ಕ ನಿಂತು ಸೆಲ್ಫಿ ತೆಗೆದುಕೊಳ್ಳುವುದು ಸುಲಭದ ಮಾತಲ್ಲ. ಆದರೆ, ಅಭಿಮಾನಿಗಳ ಈ ಇಷ್ಟವನ್ನು ಪೂರೈಸುವ ಮೂಲಕ ರಾಕಿ ಭಾಯ್ ಸ್ಟಾರ್‌ಗಳಲ್ಲಿಯೇ ಸ್ಪೆಷಲ್ ಎನಿಸಿದ್ದಾರೆ.
ರಾಕಿ ಭಾಯ್ ಜೊತೆ ಫೋಟೋ ತೆಗೆಸಿಕೊಂಡಿರುವ ಅಭಿಮಾನಿಗಳು ಅದನ್ನು ಟ್ವಿಟರ್ ಸೇರಿದಂತೆ ಸೋಶಿಯಲ್ ಮಿಡಿಯಾಗಳಲ್ಲಿ ಹಾಕಿ ಖುಷಿ ಪಡುತ್ತಿದ್ದಾರೆ. ಅಂದಾಜು 700ಕ್ಕೂ ಅಧಿಕ ಅಭಿಮಾನಿಗಳ ಸೆಲ್ಫಿಗೆ ಒಂದು ಗಂಟೆಗೂ ಅಧಿಕ ಕಾಲ ತಾಳ್ಮೆಯಿಂದ ನಿಂತು ಪೋಸ್ ನೀಡಿದ್ದಾರೆ.
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿದಿದ್ದೇ ತಡ ಯಶ್ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು. ಕಾರ್ಯಕ್ರಮ ಮುಗಿದ ಬೆನ್ನಲ್ಲಿಯೇ, ಇಲ್ಲಿನ ಜನರೊಂದಿಗೆ ಯಶ್ ಗ್ರೂಪ್ ಸೆಲ್ಫಿ ತೆಗೆದುಕೊಳ್ಳಲಿದ್ದಾರೆ ಎಂದು ನಿರೂಪಕಿ ಘೋಷಣೆ ಮಾಡಿದ್ದರು. ಆದರೆ, ಇದಕ್ಕೆ ಯಶ್, ಹಾಗೆಲ್ಲ ಬೇಡ. ನಾನು ಫೋಟೋ ತೆಗೆಸಿಕೊಳ್ಳುತ್ತೇನೆ ಎಂದರು. ಎಲ್ಲರೊಂದಿಗೂ ನೀವು ಫೋಟೋ ತೆಗೆಸಿಕೊಳ್ಳುತ್ತೀರಾ ಎಂದು ನಿರೂಪಕರು ಕೇಳಿದ್ದಕ್ಕೆ, ಹೌದು, ನೀವು ಬೇಕಾದರೆ ಹೊರಡಿ. ಇದಕ್ಕೆ ಸ್ವಲ್ಪ ಸಮಯವಾಗುತ್ತದೆ ಎಂದು ಹೇಳಿದ್ದೇ, ಒಬ್ಬೊಬ್ಬ ಅಭಿಮಾನಿಗೂ ಯಶ್ ಸೆಲ್ಫಿಗೆ ಪೋಸ್ ನೀಡಲು ಆರಂಭಿಸಿದರು. ಕಾರ್ಯಕ್ರಮ ಮುಗಿದ ಬಳಿಕ ಅಂದಾಜು ಒಂದು ಗಂಟೆಗೂ ಅಧಿಕ ಕಾಲ ಯಶ್ ವೇದಿಕೆ ಮೇಲೆಯೇ ನಿಂತಿದ್ದರು. 700ಕ್ಕೂ ಅಧಿಕ ಫ್ಯಾನ್ಸ್‌ಗಳಿಗೆ ಪೋಟೋಗೆ ಪೋಸ್ ನೀಡಿ ಅಲ್ಲಿಂದ ತೆರಳಿದರು.
Popular Indian Stars; ಅತ್ಯಂತ ಜನಪ್ರಿಯ ಸ್ಟಾರ್‌ಗಳ ಪಟ್ಟಿಯಲ್ಲಿ ಧನುಷ್ ನಂ.1; ಯಶ್‌ಗೆ ಎಷ್ಟನೆ ಸ್ಥಾನ?
'ಆತನ ಅಭಿಮಾನಿಗಳು ಅವರೊಂದಿಗೆ ಚಿತ್ರ ತೆಗೆದುಕೊಳ್ಳಲು ಬಯಸಿದ್ದರು. ಭಾರತೀಯ ಚಿತ್ರರಂಗದ ಆಲ್‌ಟೈಮ್ ಸೂಪರ್ ಹಿಟ್ ಸಿನಿಮಾದ ಸೂಪರ್ ಸ್ಟಾರ್ ಚಿತ್ರಗಳಿಗೆ ಪೋಸ್ ನೀಡಿದರು. ಬರೀ ಕೆಲವು ಸೆಲ್ಫಿಗೆ ಮಾತ್ರವಲ್ಲ. ಬರೋಬ್ಬರಿ 700ಕ್ಕೂ ಅಧಿಕ ಚಿತ್ರಗಳನ್ನು ಅವರು ಅಭಿಮಾನಿಗಳೊಂದಿಗೆ ತೆಗೆದುಕೊಂಡರು. ಯಶ್ ಬಾಸ್ ನಿಜಕ್ಕೂ ಜನರ ಸೂಪರ್ ಸ್ಟಾರ್' ಎಂದು ಯಕ್ಷ್ ಎನ್ನುವ ಅಭಿಮಾನಿ ಬರೆದಿದ್ದಾರೆ.
ಈ ವರ್ಷದ ಕನ್ನಡದ ಜನಪ್ರಿಯ ಸ್ಟಾರ್ ಯಾರು?: ಸಮೀಕ್ಷೆ ಏನ್ ಹೇಳುತ್ತೆ?
ಒಂದು ಗಂಟೆಗೂ ಅಧಿಕ ಕಾಲ ನಿಂತಿದ್ದರೂ, ಒಮ್ಮೆಯೂ ಅಭಿಮಾನಿಗಳ ಕುರಿತು ಅಸಹನೆ ತೋರಲಿಲ್ಲ.ಅಭಿಮಾನಿಗಳು ತಮ್ಮ ನೆಚ್ಚಿನ ಸೂಪರ್ ಸ್ಟಾರ್ ಉಪಸ್ಥಿತಿಯನ್ನು ಡ್ಯಾನ್ಸ್ ಮಾಡುವ ಮೂಲಕ ಆಚರಣೆ ಮಾಡಿದ ವಿಡಿಯೋಗಳು ಕೂಡ ವೈರಲ್ ಆಗಿವೆ. ಅನೇಕ ಟ್ವೀಟ್‌ಗಳಲ್ಲಿ ಉಳಿದೆಲ್ಲಾ ಸೂಪರ್‌ಸ್ಟಾರ್‌ಗಿಂತ ಯಶ್ ಹೇಗೆ ಭಿನ್ನ, ಅವರ ಫ್ಯಾನ್ ಫಾಲೋವಿಂಗ್ ಹೇಗಿದೆ ಎನ್ನುವುದು ಇದರಿಂದ ಗೊತ್ತಾಗಿದೆ.