ಆಸ್ಪತ್ರೆಗೆ ದಾಖಲಾಗಿರುವ ನಟಿ ಮಾಳವಿಕಾ. ದಯವಿಟ್ಟು ಮೈಗ್ರೇನ್‌ನಿಂದ ಎಚ್ಚೆತ್ತುಕೊಳ್ಳಿ ಎಂದು ಮನವಿ ಮಾಡಿಕೊಂಡ ನಟಿ.  

ಚಿಕ್ಕವಯಸ್ಸಿನಲ್ಲೇ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಮಾಳವಿಕಾ ಅವಿನಾಶ್ ಲಾ ಪದವೀಧರೆ. ನಾಯಕಿಯಾಗಿ ಮಲಯಾಳಂ ಸಿನಿಮಾದಲ್ಲಿ ಅಭಿನಯಿಸಿ ಆನಂತರ ಕನ್ನಡದಲ್ಲಿ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ತಮ್ಮದೇ ಚಾಪು ಮೂಡಿಸಿ ಕನ್ನಡಿಗರ ಮನೆ ಮಗಳಾಗಿದ್ದಾರೆ. ಕೆಜಿಎಫ್ ನಂತರ ಪ್ಯಾನ್ ಇಂಡಿಯಾ ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ. ರಿಯಾಲಿಟಿ ಶೋ ಜಡ್ಜ್‌ ಆಗಿ ಮಿಂಚುತ್ತಿದ್ದ ನಟಿ ಮಾಳವಿಕಾ ಅವಿನಾಶ್‌ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಹಾಕುವ ಮೂಲಕ ಅಭಿಮಾನಿಗಳಿಗೆ ಅಪ್ಡೇಟ್ ನೀಡಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಮಾಳವಿಕಾ ಅವಿನಾಶ್ ತಮಗೆ ಮೈಗ್ರೇನ್‌ ಆಗಿ ಆಸ್ಪತ್ರೆಗೆ ದಾಖಲಾಗಿರುವ ಫೋಟೋ ಹಂಚಿಕೊಂಡಿದ್ದಾರೆ. ಆಸ್ಪತ್ರೆ ಬೆಡ್‌ ಮೇಲೆ ಮಲಗಿರುವ ಸೆಲ್ಫಿ ಹಂಚಿಕೊಂಡಿದ್ದಾರೆ. ಮಾಳವಿಕಾ ಮುಖ ಬದಲಾಗಿದೆ ನಾರ್ಮಲ್‌ ಆಗಿಲ್ಲ. 'ಮೈಗ್ರೇನ್‌ನ ಯಾರೂ ಲಘುವಾಗಿ ತೆಗೆದುಕೊಳ್ಳಬೇಡಿ. ಎಲ್ಲಾ ಮತ್ತು ವಿವಿಧ ಪಾನಡೋಲ್‌ಗಳು, ನೆಪ್ರೊಸಿಮ್, ಸಾಂಪ್ರದಾಯಿಕ ಔಷಧ ಇತ್ಯಾದಿಗಳನ್ನು ಪಾಪಿಂಗ್ ಮಾಡುತ್ತಿರಿ. ಕೇವಲ ತಲೆನೋವು ಮಾತ್ರವಲ್ಲ. ಅಥವಾ ನೀವು ನನ್ನಂತೆಯೇ ಆಸ್ಪತ್ರೆಯಲ್ಲಿ ಕೊನೆಗೊಳ್ಳುತ್ತೀರಿ' ಎಂದು ಮಾಳವಿಕಾ ಬರೆದುಕೊಂಡಿದ್ದಾರೆ. 

ಅಣ್ಣಾವ್ರ ಹಾಡಿದ್ರೆ ಮಾತ್ರ ಊಟ ಮಾಡೋದು; ವಿಶೇಷಚೇತನ ಮಗನನ್ನು ನೆನೆದು ಕಣ್ಣೀರಿಟ್ಟ ಮಾಳವಿಕಾ

'ಆದಷ್ಟು ಬೇಗ ಚೇತರಿಸಿಕೊಳ್ಳಿ. ನಿಮ್ಮನ್ನು ತೆರೆ ಮೇಲೆ ಮತ್ತೆ ನೋಡಬೇಕು. ಗುಣ ಮುಖರಾಗಿ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಾಳವಿಕಾ ಅಭಿನಯಿಸಿದ್ದಾರೆ. 2014ರಲ್ಲಿ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಸಿನಿಮಾದಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಮಾಳವಿಕಾ ಹೆಚ್ಚಿನಗೆ ಸ್ಟ್ರಿಕ್ಟ್‌ ಮಾಮ್ ಪಾತ್ರದಲ್ಲಿ ಮಿಂಚುವುದು ಹೆಚ್ಚಾಯ್ತು. ಇದಾದ ಮೇಲೆ ಮುಕುಂದಾ ಮುರಾರಿ, ಶಿವಲಿಂಗಾ, ಭೈರಾಗಿ ಆನಂತರ ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2ರಲ್ಲಿ ಅಭಿನಯಿಸಿದ್ದಾರೆ. 

ಮೈಗ್ರೇನ್ ಯಾಕಾಗಿ ಉಂಟಾಗುತ್ತದೆ?
ಪರಿಸರ (Environment), ಆಹಾರ (Food) ಮತ್ತು ಮಾನಸಿಕ ಸ್ಥಿತಿಗಳು (Mental) ಮೈಗ್ರೇನ್ ಗೆ ಕಾರಣ. ವಾತಾವರಣದಲ್ಲಾಗುವ ಬದಲಾವಣೆ, ಮೋಡದ ವಾತಾವರಣ, ಯಾವುದಾದರೂ ಪರಿಮಳ, ಅತಿಯಾದ ಬೆಳಕು (Light), ಗಲಾಟೆ (Sound), ಬಿಸಿಲು ಮೈಗ್ರೇನ್ ಗೆ ಕಾರಣವಾಗಬಲ್ಲವು. ಮೈಗ್ರೇನ್ ಸಮಸ್ಯೆ ಇರುವವರು ಆಹಾರದ ವಿಚಾರದಲ್ಲಿ ಭಾರೀ ಎಚ್ಚರಿಕೆಯಿಂದ ಇರಬೇಕು. ಹಳೆಯ ಬೆಣ್ಣೆ, ಬ್ರೆಡ್, ಇಡ್ಲಿ, ದೋಸೆ, ಮೊಸರುಗಳಲ್ಲಿರುವ ಯೀಸ್ಟ್, ಕಾಫಿ ಮತ್ತು ಚಾಕೋಲೇಟ್, ಪ್ಯಾಕೇಜ್ಡ್ ಆಹಾರದಲ್ಲಿರುವ ನೈಟ್ರೇಟ್‌ನಿಂದಲೂ ಮೈಗ್ರೇನ್ ತಲೆನೋವು ಬರಬಹುದು. ಇದರೊಂದಿಗೆ ಒತ್ತಡ (Stress), ಹಾರ್ಮೋನ್ ಬದಲಾವಣೆಯಿಂದಲೂ (Hormone Change) ಮೈಗ್ರೇನ್ ಸಾಮಾನ್ಯ. 

ಎಷ್ಟು ಸಿಂಪಲ್ ಇವ್ರು! ರಾಗಿ ಮುದ್ದೆ ಪಾರ್ಟಿ ಮಾಡಿದ ಸುಧಾರಾಣಿ, ಶ್ರುತಿ ಮತ್ತು ಮಾಳವಿಕಾ!

ಮೈಗೀನ್ ಮಹಿಳೆಯರಲ್ಲಿ (Women) ಹೆಚ್ಚು
"ಮಹಿಳೆಯರಲ್ಲಿ, ಮುಟ್ಟಿನ (Menstruation) ಸಮಯದಲ್ಲಿ ಮೈಗ್ರೇನ್‌ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ರಾಯಶಃ ಹಾರ್ಮೋನ್ ಮಟ್ಟಗಳಲ್ಲಿ (ಈಸ್ಟ್ರೊಜೆನ್) ಕುಸಿತದಿಂದಾಗಿ. 2/3 ಪ್ರಕರಣಗಳಲ್ಲಿ, ಋತುಬಂಧದ ಸಮಯದಲ್ಲಿ ಮೈಗ್ರೇನ್ ಕಡಿಮೆಯಾಗುತ್ತದೆ. ಆದರೆ ಕೆಲವು ರೋಗಿಗಳಲ್ಲಿ, ಇದು ಋತುಬಂಧದ ನಂತರ ಪ್ರಾರಂಭವಾಗುತ್ತದೆ. ಪುರುಷರಿಗೆ ಹೋಲಿಕೆ ಮಾಡಿದರೆ ಮೈಗ್ರೆನ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.