ಎಷ್ಟು ಸಿಂಪಲ್ ಇವ್ರು! ರಾಗಿ ಮುದ್ದೆ ಪಾರ್ಟಿ ಮಾಡಿದ ಸುಧಾರಾಣಿ, ಶ್ರುತಿ ಮತ್ತು ಮಾಳವಿಕಾ!

ನಟಿ ಶ್ರುತಿ ರಾಗಿ ಮುದ್ದೆ ಮಾಡಿ ತಮ್ಮ ಮನೆಯಲ್ಲಿ ಸ್ನೇಹಿತರ ಜೊತೆ ಎಂಜಾಯ್ ಮಾಡಿದ್ದಾರೆ. 
 

Sudharani Shruthi Malavikaa share Ragi mudde party video vcs

ಕನ್ನಡ ಚಿತ್ರರಂಗದ ಮೂವರು ಬೆಸ್ಟ್‌ ಫ್ರೆಂಡ್ಸ್‌ ಅಂದ್ರೆ ಶ್ರುತಿ, ಸುಧಾರಾಣಿ ಹಾಗೂ ಮಾಳವಿಕಾ ಅವಿನಾಶ್. ಯಾರದ್ದೇ ಬರ್ತಡೇ ಇರಲಿ, ಹಬ್ಬವಿರಲ್ಲಿ, ಶುಭಾ ಸಮಾರಂಭವಿರಲಿ ಅಥವಾ ಒಬ್ಬ ಕಲಾವಿದ ಕಷ್ಟದಲ್ಲಿದ್ದರೂ ಮೂವರು ಒಟ್ಟಾಗಿ ನಿಲ್ಲುತ್ತಾರೆ. ಈ ಮೂವರು ಬೆಸ್ಟ್‌ ಫ್ರೆಂಡ್ಸ್ ಆಗಾಗ ಸಣ್ಣ ಪುಟ್ಟ ಪಾರ್ಟಿ ಮಾಡುತ್ತಲೇ ಇರುತ್ತಾರೆ. ಇದೀಗ ರಾಗಿ ಮುದ್ದಿ ಪಾರ್ಟಿ ಕೂಡ ಮಾಡಿದ್ದಾರೆ. 

ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ  ಸುಧಾರಾಣಿ, ಶ್ರುತಿ, ಮಾಳವಿಕ

ಮೊನ್ನೆ ನಟಿ ಶ್ರುತಿ ಮನೆಯಲ್ಲಿ ರಾಗಿ ಮುದ್ದೆ ತಯಾರಿಸಿದ್ದಾರೆ. ಸುಧಾರಾಣಿ ಹಾಗೂ ಮಾಳವಿಕಾ ಸಖತ್ ಎಂಜಾಯ್ ಮಾಡಿದ್ದಾರೆ. ಶ್ರುತಿ ಮನೆಯಲ್ಲಿ ಮುದ್ದೆ ಹೇಗೆ ತಯಾರಿಸುತ್ತಾರೆಂದು ಸುಧಾರಾಣಿ ವಿಡಿಯೋ ಹಂಚಿಕೊಂಡಿದ್ದಾರೆ. 'ರಾಗಿ ಮುದ್ದೆ ಪಾರ್ಟಿ' ಎಂದು ಬರೆದುಕೊಂಡಿದ್ದಾರೆ. ಪುತ್ರಿ ಗೌರಿ, ಸುಮನಾ ಕಿತ್ತೂರ್, ನಿರ್ದೇಶಕ ಪನ್ನಗಾಭರಣ ಸೇರಿದಂತೆ ಅನೇಕರು ಮುದ್ದಿ ಸವಿಯಬೇಕು ಎನ್ನುವ ಆಸೆ ವ್ಯಕ್ತ ಪಡಿಸಿದ್ದಾರೆ. 

Sudharani Shruthi Malavikaa share Ragi mudde party video vcs

ಕೆಲವು ದಿನಗಳ ಹಿಂದೆ ಮೂವರು ಒಂದು ಮದುವೆ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡು, ಮೆಹಂದಿ ಹಾಕಿಸಿಕೊಂಡಿದ್ದಾರೆ. ಮಾಳವಿಕಾ ಸೆಲ್ಫಿ ಹಂಚಿಕೊಂಡಿದ್ದಾರೆ. ಈ ಹಿಂದೆ ಹಿರಿಯ ನಟಿ ಲೀಲಾವತಿ ಅವರನ್ನು ಮೂವರು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಾರೆ. ಲೀಲಾವತಿ ಅವರ ಜೊತೆ ಹಳೆ ಗೀತೆಗಳನ್ನು ಹಾಡಿ ನಟಿಮಣಿಯರಿಗೆ ದಿನ ಕಳೆದಿದ್ದಾರೆ.

 

Latest Videos
Follow Us:
Download App:
  • android
  • ios