ಅಣ್ಣಾವ್ರ ಹಾಡಿದ್ರೆ ಮಾತ್ರ ಊಟ ಮಾಡೋದು; ವಿಶೇಷಚೇತನ ಮಗನನ್ನು ನೆನೆದು ಕಣ್ಣೀರಿಟ್ಟ ಮಾಳವಿಕಾ
ಜೋಡಿ ನಂ 1 ಮತ್ತು ಡಿಕೆಡಿ ಮಹಾಸಂಗಮ ಕಾರ್ಯಕ್ರಮದಲ್ಲಿ ತಮ್ಮ ವಿಶೇಷ ಚೇತನ ಮಗನನ್ನು ನೆನೆದು ಕಣ್ಣೀರಿಟ್ಟ ನಟಿ ಮಾಳವಿಕಾ.
100ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ಮಿಂಚಿರುವ ಮಾಳವಿಕಾ ಅವಿನಾಶ್ ಮೊದಲ ಬಾರಿಗೆ ಕಪಲ್ ರಿಯಾಲಿಟಿ ಶೋಗೆ ಜಡ್ಜ್ ಆಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೋಡಿ ನಂ 1 ರಿಯಾಲಿಟಿ ಶೋನಲ್ಲಿ ನೆನಪಿರಲಿ ಪ್ರೇಮ್ ಜೊತೆ ತೀರ್ಪುಗಾರರ ಸ್ಥಾನಕ್ಕೆ ನ್ಯಾಯ ಕೊಡುತ್ತಿದ್ದಾರೆ. ಗಣೇಶ ಹಬ್ಬದ ಪ್ರಯುಕ್ತ ನಡೆದ ಮಹಾ ಸಂಗಮದಲ್ಲಿ ಪುತ್ರನನ್ನು ನೆನೆದು ಭಾವುಕರಾಗಿದ್ದಾರೆ.
ಜೋಡಿ ನಂ 1 ಸ್ಪರ್ಧಿಗಳು ಮತ್ತು ಡಿಕೆಡಿ ಸ್ಪರ್ಧಿಗೆ ಒಟ್ಟಿಗೆ ಸೇರಿಕೊಂಡು ನೃತ್ಯ ಮಾಡಿದ್ದಾರೆ. ಡಿಕೆಡಿ ತಂಡದಲ್ಲಿ ವಿಶೇಷಚೇತನ ಸ್ಪರ್ಧಿ ಸಹನಾ. ಆಕೆ ಬದುಕಿ ಬೆಳೆದಿರುವ ಹಾದಿ ಬಗ್ಗೆ ಕೇಳಿ ಮಾಳವಿಕಾ ಅವಿನಾಶ್ ಭಾವುಕರಾಗಿದ್ದಾರೆ. 'ಬಹಳ ಚಿಕ್ಕ ವಯಸ್ಸಿನಲ್ಲಿ ಮಾತು ಬರುತ್ತಿರಲಿಲ್ಲ ನಡೆಯುವುದಕ್ಕೆ ಆಗುತ್ತಿರಲಿಲ್ಲ ಬದುಕಿನಲ್ಲಿ ಬರವಸೆ ಕಳೆದುಕೊಳ್ಳದೆ ಗೆದ್ದು ನಿಂತಿರುವ ಪ್ರತಿಭೆ. ಆಕೆ ಡ್ಯಾನ್ಸ್ ಮಾಡಲೇ ಬೇಕು ಎಂದು ಅವರ ತಂದೆ ತಾಯಿ ತಯಾರಿ ಮಾಡಿ ಈ ವೇದಿಕೆ ಮೇಲೆ ನಿಲ್ಲಿಸಿದ್ದಾರೆ' ಎಂದು ನಿರೂಪಕಿ ಅನುಶ್ರೀ ಹೇಳುತ್ತಾರೆ.
ಮಾಳವಿಕಾ ಮಾತು:
'ಎಲ್ಲಾ ಮಕ್ಕಳು ದೇವರ ಮಕ್ಕಳೇ. ಹೀಗೆ ಹುಟ್ಟ ಬೇಕು ಅಂತ ಯಾವ ಮಗುನೂ ಹುಟ್ಟುವುದಿಲ್ಲ. ಇಂಥದೇ ಮನೆಯಲ್ಲಿ ಹುಟ್ಟಬೇಕು ಅಂತ ಹುಟ್ಟುವುದಿಲ್ಲ. ಇದೆಲ್ಲಾ ದೇವರ ಪ್ರಸಾದ ಅಂತ ಸ್ವೀಕಾರ ಮಾಡ್ತೀವಿ. ಇದರಲ್ಲಿ ವಿಶೇಷ ಏನಪ್ಪ ಅಂದ್ರೆ ಈ ಮಗುವಿನಲ್ಲಿರುವ ಪ್ರತಿಭೆ. ಭಗವಂತ ಯಾವುದನ್ನೋ ಕಿತ್ಕೊಂಡು ಇನ್ನೇನೋ ಕೊಡ್ತಾನೆ. ಅಪ್ಪ ಅಮ್ಮ ಅದೇ ಸಮಾಧಾನ ಅಂದುಕೊಳ್ಳುತ್ತೀನಿ. ಈ ಮಗುವಿನ ಕೇಳಿಸುವುದಿಲ್ಲ ಅಂದ್ರಿ ಅಲ್ವಾ? ನನ್ನ ಮಗನಿಗೆ ಕೇಳಿಸುತ್ತೆ ಆದರೆ ಮಾತನಾಡುವುದಕ್ಕೆ ಅಗೋಲ್ಲ. ನಡಿಗೆನೂ ಬಂದಿಲ್ಲ ಹೆಚ್ಚೇನೂ ಬಂದಿಲ್ಲ ಆದರೆ ಬರ್ತಾ ಇದೆ'
'ಜೋಡಿ ನಂ 1' ವೇದಿಕೆಯಲ್ಲಿ ಮಗಳಿಗೆ ನಾಮಕರಣ ಮಾಡಿದ ಕಾಮಿಡಿ ಕಿಲಾಡಿಗಳು!
'ಶಿವರಾಜ್‌ಕುಮಾರ್ ಮತ್ತು ಅರ್ಜುನ್ ಜನ್ಯ ಇದ್ದಾರಲ್ಲ ಇವರು ಮಹಾನುಭಾವರು. ಇವರೆಲ್ಲಾ ನಮ್ಮನ್ನ ರಂಜಿಸೋದು ದೊಡ್ಡ ವಿಷಯ ಏನಲ್ಲ ನನ್ನ ಮಗನ ತರದ ಮಕ್ಕಳನ್ನ ಜೀವನದಲ್ಲಿ ಇವರು ಪ್ರವೇಶ ಮಾಡಿದ್ದಾರೆ. ಈ ವಿಚಾರ ಅವರಿಗೆ ಗೊತ್ತಿಲ್ಲ. ಮಗನಿಗೆ 6 ಅಥವಾ 8ನೇ ತಿಂಗಳಿಗೆ ಸಂಗೀತದ ಅಭಿರುಚಿ ಬಂತು. ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯ ಬಗ್ಗೆ ಬಹಳ ಅಭಿರುಚಿ ಇದೆ. ಅದರ ಜೊತೆಗೆ ಭಕ್ತಿ ಸಂಗೀತ ಕೂಡ. ಸಾಮಾನ್ಯವಾಗಿ ಸಂಜೆ 6 ಗಂಟೆ ಮೇಲೆ ನಾನು ಎಲ್ಲೂ ಇರುವುದಿಲ್ಲ ರಾತ್ರಿ 8.30 ಆದರೂ ಮನೆಯಲ್ಲಿ ಇರಬೇಕು ಆ ಕೊನೆಯ ಊಟ ಆದರೂ ಕೊಡಬೇಕು ಅಂತ. ಆ ರಾತ್ರಿ 8.30 ಇವರೆಲ್ಲಾ ನನ್ನ ಬದುಕಿನಲ್ಲಿ ಇರುತ್ತಾರೆ. ಅವನಿಗೆ ಊಟ ಮಾಡಿಸಲು ನಮಗೆ ಬೇರೆ ಮಾರ್ಗವಿಲ್ಲ ಚೋಟಾ ಭೀಮ್ ಅಥವಾ ಟಾಮ್ ಆಂಡ್ ಜರಿ ಅರ್ಥ ಆಗುವುದಿಲ್ಲ ಅವನಿಗೆ, ಅರ್ಥ ಆಗುವುದು ಸಂಗೀತ ಮಾತ್ರ. ಅಪ್ಪಾಜಿ ಅವರು ಹೋಗಿ ಯಾವ ಕಾಲ ಆಯ್ತು ಆದರೆ ನಮ್ಮ ಮನೆಯಲ್ಲಿ ಪ್ರತಿನಿತ್ಯಾ ಪ್ರತ್ಯಕ್ಷ ಅಗುತ್ತಾರೆ. ನಾಲ್ಕೈದು ಗ್ಯಾಜೆಟ್‌ನಲ್ಲಿ ಅವರದ್ದೆ ಹಾಡು. ಅವನಿಗೆ ಹಾಡಿನಲ್ಲಿ ಭಕ್ತಿ ಇರಬೇಕು. ಅರ್ಜುನ್ ಜನ್ಯ ಅವರು ನನಗೆ ಪರಿಚಯ ಅಗಿದ್ದೇ ನನ್ನ ಮಗನಿಂದ. ಕೆಲವರಗೆ ಗೊತ್ತಿದ್ದು ಪ್ರೀತಿ ತೋರಿಸುತ್ತಾರೆ ಆದರೆ ನಮ್ಮ ಮನೆಯಲ್ಲಿ ಅವರಿಗೆ ಗೊತ್ತಿಲ್ಲದೆ ಪ್ರೀತಿ ತೋರಿಸುತ್ತಾರೆ.'
Malavika Avinash ಹುಟ್ಟುಹಬ್ಬಕ್ಕೆ ಕೇಕ್ ಜತೆ ಸರ್ಪ್ರೈಸ್ ಕೊಟ್ಟ ಸುಧಾರಾಣಿ ಮತ್ತು ಶ್ರುತಿ!
ಅರ್ಜುನ್ ಜನ್ಯ ಮಾತು:
ಮಾಳವಿಕಾ ಅವಿನಾಶ್ ತಮ್ಮ ಪುತ್ರನಿಗೆ ಡಾ.ರಾಜ್‌ಕುಮಾರ್ ಮತ್ತು ಶಿವರಾಜ್‌ಕುಮಾರ್ ಅವರ ಹಾಡನ್ನು ತೋರಿಸಿ ಊಟ ಮಾಡಿಸುತ್ತಿರುವ ವಿಡಿಯೋವನ್ನು ವೇದಿಕೆ ಮೇಲೆ ಪ್ರಸಾರ ಮಾಡಲಾಗಿತ್ತು. ಇದನ್ನು ನೋಡಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಭಾವುಕರಾಗುತ್ತಾರೆ. 'ಈ ವಿಡಿಯೋ ನೋಡಿ ನನಗೆ ಅನಿಸುತ್ತಿರುವುದು ಒಂದೇ ನಾನು ಅಲ್ಲೇ ಹೋಗಿ ಅವರ ಎದುರು ನಿಂತುಕೊಂಡು ಹಾಡಬೇಕು ಎಂದು. ಮನಸ್ಸಾರೆ ಹೇಳುತ್ತಿರುವ ನಾನು ನಿಮ್ಮ ತಮ್ಮ ಅಂದುಕೊಳ್ಳಿ. ಎಲ್ಲೋ ಮಾಡಿದ ಹಾಡು ಇವತ್ತು ಅವರ ಮನಸ್ಸಿಗೆ ಹತ್ತಿರವಾಗಿ ಅಂದ್ರೆ ಅದು ನನ್ನ ಜವಾಬ್ದಾರಿಯಾಗಿ ಅಲ್ಲಿಗೆ ಬಂದು ಹಾಡುವೆ. ಅವರು ವಿಶೇಷ ಚೇತನ ಮಗುವಾಗಿ ನನಗೆ ಕಾಣಿಸಿಲ್ಲ ಸುಬ್ರಹ್ಮಣ್ಯ ಸ್ವಾಮಿ ಸರಸ್ವತಿ ಮಡಿಲಲ್ಲಿ ಕುಳಿತು ಅಂಜನೇಯನ ನೋಡಿಕೊಂಡು ಆರಾಧನೆ ಮಾಡುತ್ತಿದ್ದಾರೆ ಅನಿಸುತ್ತದೆ. ಅವರಲ್ಲಿ ದೈವ ಕಾಣಿಸುತ್ತದೆ'
ಶಿವಣ್ಣ ಮಾತು:
'ಕಲಾವಿದನಾಗಿ ನಾವು ಪುಣ್ಯ ಮಾಡಿದ್ದೀವಿ. ಅಪ್ಪಾಜಿ ಅಭಿಮಾನಿಗಳಲ್ಲಿ ದೇವರನ್ನು ಕಂಡರು ಅದಿಕ್ಕೆ ಅಭಿಮಾನಿ ದೇವರುಗಳು ಎಂದು ಹೇಳುವುದು. ಈಗ ಆ ಮಗುವನ್ನು ಅಭಿಮಾನಿ ಅಂತ ಹೇಳುವುದಾ? ದೇವರು ಅಂತ ಹೇಳುವುದಾ? ಮಕ್ಕಳು ದೇವರ ಸಮಾ ಅಲ್ವಾ? ಒಂದು ಸಣ್ಣ ಉದಾಹರಣೆ ಹೇಳಬೇಕು ಅಂದ್ರೆ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ಶ್ರೀನಿವಾಸನನ್ನು ಮಲಗಿಸುವುದಕ್ಕೆ ಬಾಬಜೀ ಹಾಡುತ್ತಾರೆ. ಈ ವಿಡಿಯೋ ನೋಡಿದ ಮೇಲೆ ಹೇಳಬೇಕು ಆಂದ್ರೆ ಮಾಳವಿಕಾ ಅವರ ಮಗು ಶ್ರೀನಿವಾಸ ಆ ದೇವರು ಮಗುವಲ್ಲಿ ಇನ್ನೊಂದು ದೇವರನ್ನು ಕಾಣುತ್ತಿದೆ. ಈ ಮಗುವಿನ ಬಗ್ಗೆ ನನಗೆ ಗೊತ್ತಿತ್ತು ಇದರ ಬಗ್ಗೆ ಜಾಸ್ತಿ ಕೇಳುವುದಕ್ಕೆ ಹೋಗಲ್ಲ ಏಕೆಂದರೆ ಜಾಸ್ತಿ ನೋವಿರುವವರಿಗೆ ನೋವು ಕೊಡಬಾರದು. ಆ ಮಗು ಸಂತೋಷವಾಗಿದೆ ಅಂದ್ರೆ ನಾವು ಮಾಡಿರುವ ಸಣ್ಣ ಸೇವೆ. ಮಗುವಿನ ಕಣ್ಣಿಗೆ ನಾವು ಬಿದ್ದಿರುವುದಕ್ಕೆ ನಮ್ಮ ಭಾಗ್ಯ ಅದು'