Asianet Suvarna News Asianet Suvarna News

ಬೆಂಗಳೂರಲ್ಲಿ ಯಶ್ ರಾಕಿಂಗ್: ಸ್ಟೂಡೆಂಟ್ಸ್‌ಗೆ ಆ ಭರವಸೆ ಕೊಟ್ಟ ಕೆಜಿಎಫ್‌ ಸ್ಟಾರ್!

ರಾಕಿಂಗ್ ಸ್ಟಾರ್ ಯಶ್.. ಇಷ್ಟು ದಿನ ಎಲ್ಲಿದ್ರು ಈ ರಾಮಾಚಾರಿ..? ಯಶ್ ಕರ್ನಾಟಕದಲ್ಲಿ ಕಂಡು ಹತ್ತತ್ರ ಮೂರು ತಿಂಗಳಾಗಿದೆ. ಈಗ ಅದೇ ಹಳೇ ಲುಕ್ನಲ್ಲೇ ಯಶ್ ಮತ್ತೆ ಬಂದಿದ್ದಾರಲ್ಲಾ..? ಹೌದು ಯಶ್ ಇಷ್ಟು ದಿನ ಲಂಡನ್ನಲ್ಲಿದ್ರು. 
 

kgf actor yash reveals the secret behind his success gvd
Author
First Published Nov 24, 2023, 8:57 PM IST

ರಾಕಿಂಗ್ ಸ್ಟಾರ್ ಯಶ್.. ಇಷ್ಟು ದಿನ ಎಲ್ಲಿದ್ರು ಈ ರಾಮಾಚಾರಿ..? ಯಶ್ ಕರ್ನಾಟಕದಲ್ಲಿ ಕಂಡು ಹತ್ತತ್ರ ಮೂರು ತಿಂಗಳಾಗಿದೆ. ಈಗ ಅದೇ ಹಳೇ ಲುಕ್ನಲ್ಲೇ ಯಶ್ ಮತ್ತೆ ಬಂದಿದ್ದಾರಲ್ಲಾ..? ಹೌದು ಯಶ್ ಇಷ್ಟು ದಿನ ಲಂಡನ್ನಲ್ಲಿದ್ರು. ಈಗ ಲಂಡನ್ನಿಂದ ಬಂದಿರೋ ರಾಕಿ ಬೆಂಗಳೂರಿನಲ್ಲಿ ರಾಕಿಂಗ್ ಮಾಡಿದ್ದಾರೆ. ನ್ಯಾಷನಲ್ ಸ್ಟಾರ್ ಯಶ್ ನಿನ್ನೆಯಷ್ಟೆ ಲಂಡನ್ನಿಂದ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇವತ್ತು ಡೈರೆಕ್ಟ್ ಆಗಿ ಕಾಲೇಜ್ ಸ್ಟೂಡೆಂಟ್ಸ್ನ ಭೇಟಿ ಆಗಿದ್ದಾರೆ. ಈ ಮಾಸ್ಟರ್ ಮೀಸ್ ಹುಡುಗನ ನೋಡಿ ವಿಧ್ಯಾರ್ಥಿಗಳೆಲ್ಲಾ ಶಿಳ್ಳೆ ಚಪ್ಪಾಳೆ ಹೊಡೆದು ರಾಕಿ ರಾಕಿ ಎಂದು ಕೂಗು ಗ್ರ್ಯಾಂಗ್ ವೆಲ್ಕಮ್ ಕೊಟ್ಟಿದ್ದಾರೆ. 

ಬಿ.ಜಿ.ಎಸ್ ಉತ್ಸವ 2023 ಕಾರ್ಯಕ್ರಮದಲ್ಲಿ ರಾಕಿ ಭಾಗಿ ಆಗಿದ್ದಾರೆ. ಯಶ್19 ಸಿನಿಮಾ ಅನೌನ್ಸ್ ಆಗ್ಲಿ ಅನ್ನೋದು ರಾಖಿಯ ಕೋಟಿ ಅಭಿಮಾನಿಗಳ ಕೋಟಿ ಆಸೆ. ಅದ್ರೆ ಅದಕ್ಕಿನ್ನೂ ಕಾಲ ಟೈಂ ಕೂಡಿ ಬಂದಿಲ್ಲ. ಹೀಗಂತ ಯಶ್ ಕಳೆದ ಎರಡು ವರ್ಷದಿಂದ ಹೇಳ್ತಾನೆ ಇದ್ದಾರೆ. ಕಾಲೇಜ್ ಸ್ಟೂಡೆಂಟ್ಸ್ ಮುಂದೆ ಬಂದಿದ್ದ ಯಶ್ ಈಗ ತನ್ನ 19ನೇ ಸಿನಿಮಾ ಬಗ್ಗೆ ಹಳೇ ಕ್ಯಾಸೇಟ್ಅನ್ನೇ ಹಾಕಿದ್ದಾರೆ. ಅನ್ನ ಬಡಿಸಬೇಕು ಅಂದ್ರೆ ಸರಿಯಾಗಿ ಅನ್ನ ಬೆಂದಿರಬೇಕು. ನಾನು ಸಿನಿಮಾ ಅನೌನ್ಸ್ ಮಾಡ್ತೀನಿ ಅಂತ ಹೇಳೇ ಇಲ್ಲ ಅಂದಿದ್ದಾರೆ. ಯಶ್ ಸಿನಿಮಾ ಅನೌನ್ಸ್ ಮಾಡೇ ಮಾಡ್ತಾರೆ. 

ಆದ್ರೆ ಫ್ಯಾನ್ಸ್ ಆ ಸಿನಿಮಾಗಾಗಿ ತಾಳ್ಮೆಯಿಂದ ಕಾಯ್ಬೇಕು ಅಷ್ಟೆ. ಅನ್ನ ಬೆಂದ ಮೇಲೆ ಬಡಿಸಬೇಕು ಅಂತ ಯಶ್ ಹೇಳಿದ ಮಾತನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ಯಶ್ ಅನ್ನವರನ್ನ ರೆಡಿ ಮಾಡ್ತಿರೋದು ನಿಜ ಅನ್ನೋದು ಗೊತ್ತಾಗುತ್ತೆ. ಅಂದ್ರೆ ಭರ್ಜರಿ ಬಾಡೂಟದ ಜೊತೆಗೆ ಯಶ್ ಬರ್ತಾರೆ ಅನ್ನೋದು ಕನ್ಫರ್ಮ್. ಕೆಂಗೇರಿಯ ಬಿಜಿಎಸ್ ಕ್ಯಾಂಪಸ್ ನಲ್ಲಿ ವಿಧ್ಯಾರ್ಥಿಗಳ ಮುಂದೆ ಬಂದ ರಾಕಿ ವಿದ್ಯಾರ್ಥಿಗಳಿಗೆ ಸಕ್ಸಸ್ ಕಿವಿಮಾತು ಹೇಳಿದ್ರು. ನಿಮ್ಮ ಸುತ್ತ ಇರೋ ಸಮಾಜದಲ್ಲಿ ತುಳಿಯುವವರು ಇರುತ್ತಾರೆ. ಅವರೆನ್ನೆಲ್ಲ ಗೆದ್ದರೇ ಗೆಲುವು ಸಿಗುತ್ತೆ ಅಂದ್ರು. ಯಶ್ ಈಗ ಬೆಂಗಳೂರಿಗೆ ಬಂದಿದ್ದಾರೆ. ಇನ್ನೊಂದು ವಾರ ಯಶ್ ಇಲ್ಲೇ ಇರಲಿದ್ದಾರೆ. ಆ ನಂತರ ಮತ್ತೆ ವಿದೇಶಕ್ಕೆ ಹಾರಲಿದ್ದು ಯಸ್19 ಅನೌನ್ಸ್ ಕೆಲಸದಲ್ಲಿ ಬ್ಯುಸಿಯಾಗಲಿದ್ದಾರೆ. ಇದೇ ಕ್ರಿಸ್ಮಸ್ ಹಬ್ಬಕ್ಕೆ ಯಶ್ 19 ಸಿನಿಮಾ ಅನೌನ್ಸ್ ಆಗುತ್ತೆ ಅನ್ನೋ ನಿರೀಕ್ಷೆ ಇದೆ. 

Follow Us:
Download App:
  • android
  • ios