ಶೀರ್ಷಿಕೆ ಹಳೇದು, ಕತೆ ಮಾತ್ರ ಹೊಸದು ಎನ್ನುವುದು ಈ ಚಿತ್ರದ ವಿಶೇಷ. ರಂಗಭೂಮಿ ಕಲಾವಿದ ವಿನಯ್‌ ಶಾಸ್ತ್ರಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರ. ಶಾಮ್‌ ಅನ್ನೂರ್‌ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೀಗ ಚಿತ್ರತಂಡ ಟೈಟಲ್‌ ಹಾಗೂ ಪೋಸ್ಟರ್‌ ಲಾಂಚ್‌ ಮಾಡಿದೆ. ನಟ ಯಶ್‌, ಇತ್ತೀಚೆಗೆ ಚಿತ್ರದ ಟೈಟಲ್‌ ಹಾಗೂ ಪೋಸ್ಟರ್‌ ಲಾಂಚ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದ ಟೈಟಲ್‌ಗೂ ಮೆಚ್ಚುಗೆ ಹೇಳಿದರು.

ಸುಪ್ರೀಂ ಹೀರೋ ಶಶಿಕುಮಾರ್ ಪುತ್ರನ 'ಸೀತಾಯಣ' ಸಖತ್ತಾಗಿದೆ!

‘ರಘು ದಿಕ್ಷೀತ್‌ ಸಂಗೀತ ಸಂಯೋಜನೆ ಜತೆಗೆ ಚಿತ್ರದ ಪ್ರಮುಖ ಪಾತ್ರವೊಂದರಲ್ಲೂ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ರಾಜೇಶ್‌ ನಟರಂಗ ಫೋಟೋಗ್ರಾಫರ್‌. ಚೈತ್ರಾ ಆಚಾರ್‌ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ವಿನಯ್‌ ಶಾಸ್ತ್ರಿ.

ಚಿತ್ರರಂಗಕ್ಕೂ ಕೊರೋನಾ ಬಿಸಿ; ಸದ್ಯಕ್ಕಿಲ್ಲ ಸ್ಟಾರ್ ಸಿನಿಮಾಗಳ ರಿಲೀಸ್!