ನಿರ್ದೇಶಕ ಸಿಂಪಲ್‌ ಸುನಿ 'ದೇವರು ರುಜು ಮಾಡಿದನು' ಚಿತ್ರದಲ್ಲಿ ಕೀರ್ತಿ ಕೃಷ್ಣ, ದಿವಿತಾ ರೈ

ಸಂಗೀತವೇ ಉಸಿರು ಎಂದು ಜೀವಿಸುವ ಇಬ್ಬರು ನಾಯಕಿಯರು ಹಾಗೂ ಸಂಗೀತ ಇಷ್ಟವಿಲ್ಲದಿದ್ದರೂ ಅದನ್ನು ಪ್ರೀತಿಸುವ ನಾಯಕ. ಈ ಬಗೆಯಲ್ಲಿ ಸೊಗಸಾದ ಸಂಗೀತದ ಕಥೆ ಜೊತೆಗೆ ರಕ್ತ ಚರಿತ್ರೆಯನ್ನು ಹೇಳುತ್ತಿದ್ದೇನೆ ಎಂದು ನಿರ್ದೇಶಕ ಸಿಂಪಲ್‌ ಸುನಿ ಹೇಳಿದರು.

Keerthi Krishna and Divita Rai in Simple Suni Devaru Ruju Madidanu gvd

ನಿರ್ದೇಶಕ ಸಿಂಪಲ್‌ ಸುನಿ ನಿರ್ದೇಶನದ ಹೊಸ ಸಿನಿಮಾ ‘ದೇವರು ರುಜು ಮಾಡಿದನು’ ಸೆಟ್ಟೇರಿದೆ. ವಿರಾಜ್‌ ಈ ಚಿತ್ರದ ನಾಯಕ. ದಿವಿತಾ ಹಾಗೂ ಕೀರ್ತಿ ಕೃಷ್ಣ ನಾಯಕಿಯರು. ಕೀರ್ತಿ ಮಾತನಾಡಿ, ‘ಚಿಕ್ಕವಯಸ್ಸಿಂದ ಸುನಿ ಸಿನಿಮಾ ನೋಡಿ ಬೆಳೆದವಳು. ಅವರ ಸಿಂಪಲ್ಲಾಗಿ ಒಂದು ಲವ್‌ ಸ್ಟೋರಿ ಸಿನಿಮಾ ಬಂದಾಗ ಹತ್ತು ಹನ್ನೊಂದು ವರ್ಷದವಳಿದ್ದೆ. ಆಗ ಕಥೆ ಅರ್ಥ ಆಗಿರಲಿಲ್ಲ. ಹಾಡು ಬಹಳ ಇಷ್ಟವಾಗಿತ್ತು. 

ಹತ್ತು ವರ್ಷದ ನಂತರ ಅವರ ಮೂಲಕವೇ ಲಾಂಚ್ ಆಗುತ್ತಿರುವುದು ಖುಷಿ ಕೊಟ್ಟಿದೆ. ಸಿನಿಮಾದಲ್ಲಿ ಶ್ರಾವ್ಯಾ ಎಂಬ ಹಳ್ಳಿಯ ಮುಗ್ಧ ಸಂಗೀತ ಕಲಾವಿದೆಯ ಪಾತ್ರ ನನ್ನದು’ ಎಂದರು. ದಿವಿತಾ ರೈ ಗೋವಾದ ಮಾಡರ್ನ್‌ ಹಾಡುಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಸಿಂಪಲ್‌ ಸುನಿ, ‘ಸಂಗೀತವೇ ಉಸಿರು ಎಂದು ಜೀವಿಸುವ ಇಬ್ಬರು ನಾಯಕಿಯರು ಹಾಗೂ ಸಂಗೀತ ಇಷ್ಟವಿಲ್ಲದಿದ್ದರೂ ಅದನ್ನು ಪ್ರೀತಿಸುವ ನಾಯಕ. 

ನಾನು ತುಂಬಾ ಭಾವುಕ.. ಸಮಂತಾಗಿಂತ ಮೊದಲು ಶಾಲೆಯಲ್ಲಿ ಒಬ್ಬ ಹುಡುಗಿಯನ್ನು ಇಷ್ಟಪಟ್ಟಿದ್ದೆ ಎಂದ ನಾಗ ಚೈತನ್ಯ!

ಈ ಬಗೆಯಲ್ಲಿ ಸೊಗಸಾದ ಸಂಗೀತದ ಕಥೆ ಜೊತೆಗೆ ರಕ್ತ ಚರಿತ್ರೆಯನ್ನು ಹೇಳುತ್ತಿದ್ದೇನೆ’ ಎಂದು ಹೇಳಿದರು. ನಾಯಕ ವಿರಾಜ್‌, ‘ಚಿಕ್ಕವನಿದ್ದಾಗಲೇ ನಟನೆಯ ಅಮಲೇರಿಸಿಕೊಂಡಿದ್ದೆ. ಪ್ರೇಕ್ಷಕರ ಚಪ್ಪಾಳೆ ಎಲ್ಲಕ್ಕಿಂತ ಹೆಚ್ಚಿನ ತೃಪ್ತಿ ಕೊಡುತ್ತಿತ್ತು. ಇದೀಗ ನಟನಾಗಿ ಮತ್ತೊಂದು ಹಂತಕ್ಕೇರಿರುವುದು ಖುಷಿ ಕೊಟ್ಟಿದೆ’ ಎಂದರು. ಗೋವಿಂದ್ ರಾಜ್ ಸಿಟಿ ಈ ಚಿತ್ರದ ನಿರ್ಮಾಪಕರು.

ಇದೊಂದು ಮ್ಯೂಸಿಕಲ್‌ ಲವ್‌ ಸ್ಟೋರಿ: ‘ದೇವರು ರುಜು ಮಾಡಿದನು’ ಎಂಬುದು ಕುವೆಂಪು ಅವರ ಕವಿತೆ ಸಾಲು. ಈ ಆ ಸಾಲನ್ನೇ ಶೀರ್ಷಿಕೆ ಮಾಡಿಕೊಂಡು ನಿರ್ದೇಶಕ ಸಿಂಪಲ್‌ ಸುನಿ ಹೊಸ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ರಂಗಭೂಮಿ ಪ್ರತಿಭೆ ವಿರಾಟ್‌ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಸಿಂಪಲ್ ಸುನಿ, ‘ಇದೊಂದು ಮ್ಯೂಸಿಕಲ್‌ ಲವ್‌ ಸ್ಟೋರಿ. ನಾಯಕಿ ಕುವೆಂಪು ಅವರ ಅಭಿಮಾನಿಯಾಗಿರುತ್ತಾಳೆ. ಅವರ ಕವಿತೆಗಳನ್ನು ಹೇಳುತ್ತಿರುತ್ತಾಳೆ. ದೇವರು ರುಜು ಮಾಡಿದನು ಎಂಬ ಕುವೆಂಪು ಕವಿತೆಯ ಒಳಾರ್ಥ ಬಹಳ ಕಾಡುವಂತಿದೆ. 

ಹೆಣ್ಣು ಮದುವೆಯ ಬಳಿಕ ನಾಯಕಿಯಾಗಬಾರದೇಕೇ: ನಟಿ ಶ್ವೇತಾ ಶ್ರೀವಾತ್ಸವ್ ಪ್ರಶ್ನೆ!

ನಾವಂದುಕೊಂಡ ಹಾಗೆ ಏನೂ ಆಗಲ್ಲ. ದೇವರು ಆಲ್‌ರೆಡಿ ಸ್ಕ್ರಿಪ್ಟ್‌ ಮಾಡಿರುತ್ತಾನೆ. ನಮಗೆ ಗೊತ್ತಿಲ್ಲದೇ ನಾವು ಅದರಲ್ಲಿ ನಟಿಸುತ್ತಿರುತ್ತೇವೆ. ನಾವೇನು ಬದಲಾವಣೆ ಮಾಡಲು ಹೊರಟರೂ ದೇವರ ನಿರ್ಧಾರವನ್ನು ಬದಲಿಸಲಾಗುವುದಿಲ್ಲ ಎಂಬ ಸೂಕ್ಷ್ಮ ಹೊಳಹು ಈ ಸಾಲುಗಳಲ್ಲಿದೆ. ಅದೇ ನಮ್ಮ ಕಥೆಯ ಒನ್‌ಲೈನ್‌ ಕೂಡ ಆಗಿರುತ್ತದೆ’ ಎನ್ನುತ್ತಾರೆ. ಗ್ರೀನ್‌ ಹೌಸ್‌ನ ಮಾಲೀಕ ಗೋವಿಂದರಾಜ್‌ ಈ ಸಿನಿಮಾದ ನಿರ್ಮಾಪಕರು. ನಾಯಕ ವಿರಾಜ್‌ ಇವರ ಪುತ್ರ. ಗ್ರೀನ್‌ಹೌಸ್‌ ಮೂವೀಸ್‌ ಹೆಸರಲ್ಲೇ ಅವರು ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. 

Latest Videos
Follow Us:
Download App:
  • android
  • ios