ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದಂತೆ ಕನ್ನಡ ಫಿಲ್ಮ್ ಚೇಂಬರ್‌ಗೆ (Karnataka Film Chamber)ಹೈಕೋರ್ಟ್ (HighCourt) ತಡೆ ನೀಡಿದೆ. ಸಂಘದ ಬೈಲಾ ಪ್ರಕಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯದಿರುವುದರಿಂದ ಯಾವುದೇ ಶಾಸನಾತ್ಮಕ ಹಾಗೂ ಆರ್ಥಿಕ ತೀರ್ಮಾನಗಳನ್ನು ತೆಗೆದುಕೊಳ್ಳದಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಲಾಗಿದೆ.

ವಾಣಿಜ್ಯ ಮಂಡಳಿಗೆ ಜೂನ್ 28ರಂದು ನಡೆದ ಚುನಾವಣೆಯಲ್ಲಿ (Karnataka film chamber election) ಹಲವು ರೀತಿಯ ಅಕ್ರಮಗಳು ನಡೆದಿವೆ ಎಂದು ಸಾ.ರಾ.ಗೋವಿಂದು (Sa Ra Govind), ಬಿ.ಕೆ.ಜಯಸಿಂಹ ಮುಸುರಿ, ರಮೇಶ್ ಕಶ್ಯಪ್, ಕೆ.ಎಂ.ವೀರೇಶ್ ಅವರು ಸಹಕಾರ ಸಂಘಗಳ ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ವಿಚಾರಣೆ ನಡೆಸಿರುವ ಜಿಲ್ಲಾ ನೋಂದಣಿ ಅಧಿಕಾರಿಗಳು ಸದರಿ ದೂರಿನ ಅರ್ಜಿ ಇತ್ಯರ್ಥ ಆಗುವವರೆಗೂ ಹಾಗೂ ಮುಂದಿನ ನಿರ್ದೇಶನದವರೆಗೆ ವಾಣಿಜ್ಯ ಮಂಡಳಿಗೆ ಸಂಬಂಧಿಸಿದಂತೆ ಯಾವುದೇ ಶಾಸನಾತ್ಮಕ ಹಾಗೂ ಆರ್ಥಿಕ ತೀರ್ಮಾನಗಳನ್ನು ಕೈಗೊಳ್ಳುವಂತಿಲ್ಲ ಎಂದು ಮಂಡಳಿಗೆ ಮಧ್ಯಂತರ ನಿರ್ದೇಶನ ಜಾರಿ ಮಾಡಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಾರಥ್ಯ ವಹಿಸಿದ ಭಾ.ಮ.ಹರೀಶ್!
ಜೂ.28ರಂದು ನಡೆದ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಸಂರಕ್ಷಿಸಡಬೇಕು. ವಿಡಿಯೋ, ಸಿಸಿಟಿವಿ ದೃಶ್ಯಗಳು, ಚುನಾವಣೆ ಬ್ಯಾಲೆಟ್ ಪೇಪರ್ ಹೀಗೆ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ದಾಖಲೆ, ಮಾಹಿತಿಗಳನ್ನು ಸಂರಕ್ಷಿಸಿಡಲು ಆದೇಶಿಸಲಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ; ಬಾಮಾ ಹರೀಶ್, ಸಾರಾ ಗೋವಿಂದ್ ಮಾತು!
ನಮ್ಮ ಕೆಲಸಕ್ಕೇನೂ ತೊಂದರೆಯಿಲ್ಲ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಈ ಮಧ್ಯಂತರ ಆದೇಶದಿಂದ ನಮಗೆ ಕೆಲಸಕ್ಕೆ ಏನೂ ಸಮಸ್ಯೆ ಆಗಲ್ಲ ಎಂದಿದ್ದಾರೆ. 'ಈ ಮಧ್ಯಂತರ ಆದೇಶದಿಂದ ನಮಗೆ ಕೆಲಸಕ್ಕೆ ಏನೂ ಸಮಸ್ಯೆ ಆಗಲ್ಲ ಆದರೆ, ಹೊಸದಾಗಿ ಸದಸ್ಯರಾಗಲು ಬರುವ ನಿರ್ಮಾಪಕರಿಗೆ ಹಾಗೂ ಶೀರ್ಷಿಕೆಗಳಿಗೆ ಅನುಮತಿ ನೀಡುವುದು ಸೇರಿದಂತೆ ಹಲವು ರೀತಿಯ ತೊಂದರೆಗಳು ಆಗುತ್ತವೆ. ಹೀಗಾಗಿ ನಾವು ಕೂಡ ಕಾನೂನಿನ ಮೊರೆ ಹೋಗುತ್ತೇವೆ. ಉಳಿದಂತೆ ಜಿಲ್ಲಾ ನೋಂದಣಿ ಅಧಿಕಾರಿಗಳು ಅದೇಶ ನೀಡಿರುವಂತೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಯಾವುದೇ ರೀತಿಯ ತನಿಖೆ, ವಿಚಾರಣೆ ಬೇಕಾದರೂ ನಡೆಯಲಿ' ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಹೇಳಿದ್ದಾರೆ.