Asianet Suvarna News Asianet Suvarna News

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಾರಥ್ಯ ವಹಿಸಿದ ಭಾ.ಮ.ಹರೀಶ್‌!

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಶನಿವಾರ ತಡರಾತ್ರಿ ಆಯ್ಕೆಯಾಗಿದ್ದ ಭಾ.ಮ.ಹರೀಶ್‌ ಅವರು ಭಾನುವಾರ ಅಧಿಕಾರ ಸ್ವೀಕಾರ ಮಾಡಿದರು.

karnataka film chamber of commerce producer ba ma harish as new president gvd
Author
Bangalore, First Published May 30, 2022, 3:05 AM IST

ಬೆಂಗಳೂರು (ಮೇ.30): ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಶನಿವಾರ ತಡರಾತ್ರಿ ಆಯ್ಕೆಯಾಗಿದ್ದ ಭಾ.ಮ.ಹರೀಶ್‌ ಅವರು ಭಾನುವಾರ ಅಧಿಕಾರ ಸ್ವೀಕಾರ ಮಾಡಿದರು. ಹಿಂದಿನ ಅಧ್ಯಕ್ಷ ಜೈರಾಜ್‌ ಅವರು ಹೂವಿನ ಗುಚ್ಛ ನೀಡಿ ಸ್ವಾಗತಿಸುವ ಮೂಲಕ ಹರೀಶ್‌ ಅವರಿಗೆ ಅಧಿಕಾರ ಹಸ್ತಾಂತರ ಮಾಡಿ, ಶುಭ ಕೋರಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹರೀಶ್‌, ‘ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಿರುವ ಸಮಸ್ಯೆಗಳಿಗೆ ಅದಷ್ಟುಬೇಗ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನನ್ನ ತಂಡ ಕೆಲಸ ಮಾಡಲಿದೆ. ಕನ್ನಡ ಚಿತ್ರಗಳಿಗೆ ಯಾವುದೇ ಸಮಸ್ಯೆ ಆಗದ ರೀತಿ ನೋಡಿಕೊಳ್ಳುತ್ತೇವೆ’ ಎಂದು ಹೇಳಿದರು.

‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬೇರೆ ಬೇರೆ ಹುದ್ದೆಗಳನ್ನು ನಿಭಾಯಿಸಿದ್ದೇನೆ. ಮೊದಲ ಬಾರಿಗೆ ಅಧ್ಯಕ್ಷನಾಗಿ ಆಯ್ಕೆ ಆಗಿದ್ದೇನೆ. ಇದು ನನ್ನ ಒಬ್ಬನ ಗೆಲುವಲ್ಲ. ಇಡೀ ನನ್ನ ತಂಡದ ಗೆಲುವು. ಗೆಲುವಿಗಾಗಿ ನಮ್ಮ ಇಡೀ ತಂಡ ಬಹಳಷ್ಟುಶ್ರಮಿಸಿದೆ’ ಎಂದರು. ‘ಕ್ರೀಡಾ ಮನೋಭಾವನೆಯಿಂದ ಚುನಾವಣೆ ಎದುರಿಸಿದ್ದೇವೆ. ನಮಗೆ ಯಾರ ಮೇಲೆ ದ್ವೇಷ, ಅಸೂಯೇ ಇಲ್ಲ. ಇಡೀ ಉದ್ಯಮ ಒಗ್ಗಟ್ಟಾಗಿ ಹೋಗಬೇಕು ಎಂಬುವುದು ನಮ್ಮ ಉದ್ದೇಶ. ಹಿರಿಯರ ಜತೆ ಕುಳಿತು ಚಿತ್ರರಂಗದ ಅಭಿವೃದ್ಧಿಗೆ ಆಗಬೇಕಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಶ್ರಮಿಸುತ್ತೇನೆ’ ಎಂದು ಹೇಳಿದರು. ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಜೈ ಜಗದೀಶ್‌, ಶಿಲ್ಪಾ ಶ್ರೀನಿವಾಸ್‌, ಟಿ.ಪಿ.ಸಿದ್ಧರಾಜು, ಸುಂದರ್‌ರಾಜ್‌, ಕುಶಾಲ್‌ ಸೇರಿದಂತೆ ಪ್ರಮುಖರು ಹಾಜರಿದ್ದರು.

Karnataka Film Chamber Of Commerce: ಬೇಡಿಕೆಗಳಿಗೆ ಸಮ್ಮತಿಸಿದ ಸಿಎಂಗೆ ಚಿತ್ರರಂಗದಿಂದ ಧನ್ಯವಾದ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 2022-23ನೇ ಸಾಲಿನ ಅಧ್ಯಕ್ಷ, ಉಪಾಧ್ಯಕ್ಷ, ಪದಾಧಿಕಾರಿಗಳ ಸ್ಥಾನಕ್ಕೆ ಶನಿವಾರ ವಾಣಿಜ್ಯ ಮಂಡಳಿಯ ಬಳಿಯ ಗಂಗರಾಜು ಕಲ್ಯಾಣ ಮಂಟಪ ಆವರಣದಲ್ಲಿ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕರಾದ ಸಾ.ರಾ. ಗೋವಿಂದು ಹಾಗೂ ಭಾ.ಮ. ಹರೀಶ್‌ ಸ್ಪರ್ಧಿಸಿದ್ದರು. ಶನಿವಾರ ಮಧ್ಯಾಹ್ನ 2 ಗಂಟೆಗೆ ಶುರುವಾದ ಮತದಾನ ಸಂಜೆ 6 ಗಂಟೆವರೆಗೂ ನಡೆಯಿತು. ಕಳೆದ ವರ್ಷ ಜೈರಾಜ್‌ ಅವರು ಅಧ್ಯಕ್ಷರಾಗಿದ್ದರು. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಅಕಾಂಕ್ಷಿಗಳು ಸ್ಪರ್ಧಿಸಿದ್ದರಿಂದ ಕಳೆದ ಬಾರಿಗಿಂತಲೂ ಈ ಬಾರಿ ಚುನಾವಣೆಯ ಕಾವು ಜೋರಾಗಿತ್ತು. ಇಬ್ಬರ ನಡುವೆ ಪ್ರಬಲ ಸ್ಪರ್ಧೆ ನಡೆಯಿತು.

Karnataka Film Chamber Of Commerce: ಫಿಲಂ ಚೇಂಬರ್‌ ಚುನಾವಣೆಗೆ ಆಗ್ರಹಿಸಿ ಪ್ರತಿಭಟನೆ

ಸಾ.ರಾ.ಗೋವಿಂದು ಅವರ ಬೆಂಬಲಿತ ಅಭ್ಯರ್ಥಿಗಳಾಗಿ ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ಕರಿಸುಬ್ಬು, ವಿತರಕರ ವಲಯದಿಂದ ಪಿ.ಎಸ್‌. ಜ್ಞಾನೇಶ್ವರ್‌ ಐತಾಳ್‌, ಪ್ರದರ್ಶಕರ ವಲಯದಿಂದ ಜಿ.ಪಿ. ಕುಮಾರ್‌ ಸ್ಪರ್ಧಿಸಿದ್ದರು. ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ಕೆ.ಎಂ. ವೀರೇಶ್‌, ವಿತರಕರ ವಲಯದಿಂದ ಎಂ.ಎನ್‌. ಕುಮಾರ್‌, ಪ್ರದರ್ಶಕರ ವಲಯದಿಂದ ಎಲ್‌.ಸಿ. ಕುಶಾಲ್‌ ಹಾಗೂ ಗೌರವ ಖಜಾಂಚಿ ಸ್ಥಾನಕ್ಕೆ ಬಿ.ಕೆ.ಜಯಸಿಂಹ ಮುಸುರಿ ಅವರು ಸ್ಪರ್ಧಿಸಿದ್ದರು. ಅದೇ ರೀತಿ ಭಾ.ಮ.ಹರೀಶ್‌ ಅವರ ಬೆಂಬಲಿತ ಅಭ್ಯರ್ಥಿಗಳಾಗಿ ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ಜೈ ಜಗದೀಶ್‌, ವಿತರಕರ ವಲಯದಿಂದ ಶಿಲ್ಪಾ ಶ್ರೀನಿವಾಸ್‌ ಹೆಚ್‌.ಸಿ, ಪ್ರದರ್ಶಕರ ವಲಯದಿಂದ ರಂಗಪ್ಪ ಕೆ.ಓ, ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ಹಿರಿಯ ನಟ ಸುಂದರ್‌ ರಾಜ್‌, ವಿತರಕರ ವಲಯದಿಂದ ಪಾರ್ಥಸಾರಥಿ ಕೆ ಹಾಗೂ ಗೌರವ ಖಜಾಂಚಿ ಸ್ಥಾನಕ್ಕೆ ನಿರ್ಮಾಪಕ ಟಿ.ಪಿ. ಸಿದ್ಧರಾಜು ಸ್ಪರ್ಧಿಸಿದ್ದರು.

Follow Us:
Download App:
  • android
  • ios